ವಿಶಾಲ ಗಾಣಿಗ ಕೊಲೆ ಪ್ರಕರಣ ; ಕಡೆಗೂ ಮುಂಬೈ ಮೂಲದ ಸುಪಾರಿ ಕಿಲ್ಲರ್ ಸೆರೆ ! ನೇಪಾಳ ಗಡಿಯಲ್ಲಿ ಅಡಗಿದ್ದ ಹಂತಕನ ಸೆರೆಹಿಡಿದ ಬ್ರಹ್ಮಾವರ ಪೊಲೀಸರು 

09-07-22 10:07 pm       udupi Correspondent   ಕ್ರೈಂ

ಕರಾವಳಿಯಲ್ಲಿ ಭಾರೀ ಸಂಚಲನ ಎಬ್ಬಿಸಿದ್ದ ಬ್ರಹ್ಮಾವರ ಬಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ನಡೆದಿದ್ದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ನೇತೃತ್ವದ ಪೊಲೀಸರು ಪ್ರಮುಖ ಸುಪಾರಿ ಕಿಲ್ಲರ್‌ನನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. 

ಉಡುಪಿ, ಜುಲೈ 9 : ಕರಾವಳಿಯಲ್ಲಿ ಭಾರೀ ಸಂಚಲನ ಎಬ್ಬಿಸಿದ್ದ ಬ್ರಹ್ಮಾವರ ಬಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ನಡೆದಿದ್ದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ನೇತೃತ್ವದ ಪೊಲೀಸರು ಪ್ರಮುಖ ಸುಪಾರಿ ಕಿಲ್ಲರ್‌ನನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. 

2021ರ ಜುಲೈ 2 ರಂದು ಉಪ್ಪಿನಕೋಟೆ ಬಳಿಯಲ್ಲಿರುವ ಮಿಲನ್ ರೆಸಿಡೆನ್ಶಿಯಲ್ಲಿ ವಿಶಾಲಾ ಗಾಣಿಗ ಎಂಬ ಮಹಿಳೆ ಒಬ್ಬಂಟಿಯಾಗಿದ್ದ ವೇಳೆ ಭೀಕರವಾಗಿ ಕೊಲೆಗೈದು ಕುತ್ತಿಗೆಯಲ್ಲಿದ್ದ ಮಂಗಳ ಸೂತ್ರ, ಹಾಗೂ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ದರೋಡೆಗೈದ ಕೃತ್ಯ ನಡೆದಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಒಂದೇ ವಾರದಲ್ಲಿ ಗಂಡನೇ ಕೊಲೆ ಆರೋಪಿ ಅನ್ನುವುದನ್ನು ಬಯಲು ಮಾಡಿದ್ದರು. ವಿದೇಶದಿಂದ ಆಗಮಿಸಿದ್ದ ವಿಶಾಲ ಗಾಣಿಗ ಅವರ ಪತಿ ರಾಮಕೃಷ್ಣ ಗಾಣಿಗ ಅವರನ್ನು ಮತ್ತು ಕೃತ್ಯದಲ್ಲಿ ಭಾಗಿಯಾಗಿದ್ದ ಉತ್ತರ ಪ್ರದೇಶ ಮೂಲದ ಸುಪಾರಿ ಹಂತಕ ಸ್ವಾಮಿನಾಥ ನಿಶಾದನನ್ನು ಕೂಡ ಪೊಲೀಸರು ಅರೆಸ್ಟ್ ಮಾಡಿದ್ದರು. ಆದರೆ ಸುಪಾರಿ ಪಡೆದಿದ್ದ ಇನ್ನೊಬ್ಬ ಹಂತಕ ಎಸ್ಕೇಪ್ ಆಗಿದ್ದ. ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಮುಂಬೈ ಮೂಲದ ಸುಪಾರಿ ಹಂತಕ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು ಎಂಬಾತನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

Udupi Murder: ಬ್ರಹ್ಮಾವರದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು;  ದುಬೈನಿಂದಲೇ ಸುಪಾರಿ ಕೊಟ್ಟನಾ ಗಂಡ? | Udupi murder brahmavar vishala ganiga  murder case heading towards new twists ...

ರಾಮಕೃಷ್ಣ ಗಾಣಿಗ ವಿದೇಶದಲ್ಲಿ ಇದ್ದುಕೊಂಡೇ ತನ್ನ ಪತ್ನಿಯ ಕೊಲೆಗೆ ಸುಪಾರಿ ನೀಡಿದ್ದ. ತನಗೆ ಪರಿಚಿತನಾಗಿರುವ ಉತ್ತರ ಪ್ರದೇಶ ಮೂಲದ ಹಂತಕರಾದ ಸ್ವಾಮಿನಾಥ ನಿಶಾದ ಹಾಗೂ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು ಎಂಬವರಿಗೆ ಕೊಲೆ ಮಾಡಲು ಕಾಂಟ್ರಾಕ್ಟ್ ನೀಡಿದ್ದ. ವಿಶಾಲ ತನ್ನ ಮನೆಯಲ್ಲಿ ಒಬ್ಬಂಟಿಯಾಗಿರುವ ಮಾಹಿತಿ ಪಡೆದು ಪಾರ್ಸೆಲ್‌ ನೆಪದಲ್ಲಿ ಸುಪಾರಿ ಕಿಲ್ಲರ್‌ಗಳನ್ನು ಮನೆಗೆ ಕಳುಹಿಸಿ ಕೊಲೆ ಮಾಡಿಸಿದ್ದ ಎನ್ನೋದು ಬೆಳಕಿಗೆ ಬಂದಿತ್ತು. 

ಪ್ರಕರಣಕ್ಕೆ ಸಂಬಂಧಿಸಿ ಬ್ರಹ್ಮಾವರ ಪೊಲೀಸರು ಇಬ್ಬರ ವಿರುದ್ದ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದರೆ ಮತ್ತೋರ್ವ ಆರೋಪಿ ರೋಹಿತ್ ರಾಣಾ ಒಂದು ವರ್ಷದಿಂದಲೂ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಇದೇ ವೇಳೆ, ರಾಣಾ ಪ್ರತಾಪ್ ಕಾಣೆಯಾದ ಕುರಿತು ಆತನ ಪೋಷಕರು ಮುಂಬೈನ ಗಾಮ್‌ ದೇವಿ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ವೃತ್ತ ನಿರೀಕ್ಷಕ ಅನಂತಪದ್ಮನಾಭ ನೇತೃತ್ವದ ಪೊಲೀಸ್ ಉಪನಿರೀಕ್ಷಕರಾದ ಗುರುನಾಥ ಹಾದಿಮನಿ, ಸಿಬ್ಬಂದಿಯವರಾದ ವೆಂಕಟರಮಣ ದೇವಾಡಿಗ, ರಾಘವೇಂದ್ರ, ಪ್ರವೀಣ್ ಶೆಟ್ಟಿಗಾರ್ ಅವರನ್ನು ಒಳಗೊಂಡ ವಿಶೇಷ ತಂಡವು ಆರೋಪಿ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ತಲೆಮರೆಸಿಕೊಂಡಿರುವುದನ್ನು ತಿಳಿದು ಕಾರ್ಯಾಚರಣೆ ನಡೆಸಿದ್ದರು. 

ಆರೋಪಿ ಪತ್ತೆಗಾಗಿ ಒಂದು ವರ್ಷದಿಂದ ಬ್ರಹ್ಮಾವರ ವೃತ್ತದ ಕೋಟ, ಬ್ರಹ್ಮಾವರ, ಹಿರಿಯಡ್ಕ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಮಹಾರಾಷ್ಟ್ರ, ಗೋವಾ ಹಾಗೂ ಉತ್ತರ ಪ್ರದೇಶ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿ ಹುಡುಕಾಟ ನಡೆಸಿದ್ದರು. ಕೊಲೆ ಕೃತ್ಯದ ಬಳಿಕ ಆರೋಪಿ ರೋಹಿತ್ ರಾಣಾ ತನ್ನ ಸ್ವಂತ ಮನೆ ಮಹಾರಾಷ್ಟ್ರವನ್ನು ಬಿಟ್ಟು ನೇಪಾಳ ಗಡಿಯಲ್ಲಿನ ಮಹಾರಾಜ್ ಗಂಜ್ ಪರಿಸರದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

Police arrested one more accused in the murder case of Vishala Ganiga.The arrested accused is a contract killer, Rohith Rana Prathap Nishad alias Sonu (21) from Gorakhpur in Uttar Pradesh. The accused is basically from Mumbai but was absconding after the murder.His parents had filed a missing complaint at Gramdevi police station in Mumbai. Kota, Brahmavar and Hiriyadka police officers had visited Maharashtra, Goa, and Uttar Pradesh.