ಅಪ್ರಾಪ್ತ ಮಗಳನ್ನೇ ಅತ್ಯಾಚಾರ ; ಆರೋಪಿ ತಂದೆಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್ 

26-07-22 08:48 pm       Mangalore Correspondent   ಕ್ರೈಂ

ಅಪ್ರಾಪ್ತ ಮಗಳನ್ನೇ ಅತ್ಯಾಚಾರಗೈದ ಪ್ರಕರಣದಲ್ಲಿ ಆರೋಪಿ ತಂದೆಗೆ ಮಂಗಳೂರಿನ ತ್ವರಿತ ಗತಿ ಪೋಕ್ಸೋ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ನೀಡಿದೆ. 

ಮಂಗಳೂರು, ಜುಲೈ 26 : ಅಪ್ರಾಪ್ತ ಮಗಳನ್ನೇ ಅತ್ಯಾಚಾರಗೈದ ಪ್ರಕರಣದಲ್ಲಿ ಆರೋಪಿ ತಂದೆಗೆ ಮಂಗಳೂರಿನ ತ್ವರಿತ ಗತಿ ಪೋಕ್ಸೋ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ನೀಡಿದೆ. 

2020ರ ಮಾರ್ಚ್ ತಿಂಗಳಲ್ಲಿ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಅಪ್ರಾಪ್ತ ಬಾಲಕಿಯನ್ನು ಆಕೆಯ   ತಂದೆಯೇ ಅತ್ಯಾಚಾರವೆಸಗಿದ್ದ.‌ ಆರೋಪಿ ಅಬ್ದುಲ್ ಅಜೀಜ್ ಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು 20 ವರ್ಷ  ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 

ಪ್ರಕರಣದಲ್ಲಿ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ತನಿಖೆ ನಡೆಸಿ, ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 
ಸರಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಪೊಲೀಸರ ಪರವಾಗಿ ವಾದಿಸಿದ್ದರು.  

ವಿಟ್ಲ ಠಾಣಾ ಕೋರ್ಟ್ ಮಾನಿಟರಿಂಗ್ ಸೆಲ್ ಅಧಿಕಾರಿ ಸಿಬ್ಬಂದಿ ಪ್ರಕರಣದ ವಿಚಾರಣಾ ಹಂತಗಳನ್ನು ಫಾಲೋ ಅಪ್ ಮಾಡಿದ್ದರು. ಇದರಿಂದಾಗಿ ತ್ವರಿತ ಗತಿಯಲ್ಲಿ ಆರೋಪಿಗೆ ಶಿಕ್ಷೆ ಆಗುವಂತಾಗಿದೆ ಎಂದು ಎಸ್ಪಿ ಋಷಿಕೇಶ್ ಭಗವಾನ್ ತಿಳಿಸಿದ್ದಾರೆ.

A stepfather has reportedly raped his nine-year-old daughter in Pavoor of Ullal police station limits.The Konaje station police have arrested Ashwath (25), in this connection. The family had migrated from outside the district and were staying at Pavoor. The mother of the child was living with Ashwath after her husband died.As the woman was admitted to a hospital for delivery, only the girl and the man were in the house. The man raped the girl and the matter came to light when the girl was admitted to hospital due to severe bleeding.