ಬ್ರೇಕಿಂಗ್ ನ್ಯೂಸ್
05-09-20 05:33 pm Headline Karnataka News Network ಕ್ರೈಂ
ಮುಂಬೈ, ಸೆಪ್ಟೆಂಬರ್ 5: ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ಡ್ರಗ್ಸ್ ನಂಟು ಕೂಡ ತಗ್ಲಾಕ್ಕೊಂಡಿದೆ. ಡ್ರಗ್ಸ್ ಪ್ರಕರಣದಲ್ಲಿ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಸಹೋದರನನ್ನು ಅಧಿಕಾರಿಗಳು ಬಂಧಿಸಿದ್ದು ಸುಶಾಂತ್ ಕೂಡ ಡ್ರಗ್ಸ್ ಒಡನಾಟದಲ್ಲಿದ್ದರೇ ಅನುಮಾನ ಹುಟ್ಟಿಸಿದೆ.
ಸುಶಾಂತ್ ಸಿಂಗ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳನ್ನು ಕಲೆ ಹಾಕುವ ಕಾರ್ಯದಲ್ಲಿ ಸಿಬಿಐ ಅಧಿಕಾರಿಗಳು ಮಗ್ನರಾಗಿದ್ದರೆ, ಇತ್ತ ರಿಯಾ ಡ್ರಗ್ಸ್ ನಂಟಿನ ಬಗ್ಗೆ ತನಿಖೆ ನಡೆಸಲು ಎನ್‍ಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ. ರಿಯಾ ನಿವಾಸದ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ರಿಯಾ ಸಹೋದರ ಶೋವಿಕ್ ನನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಎನ್‍ಸಿಬಿ ಅಧಿಕಾರಿಗಳು ನಿನ್ನೆ ನಟಿ ರಿಯಾ, ಆಕೆಯ ಸಹೋದರ ಶೋವಿಕ್ ಮತ್ತು ಸುಶಾಂತ್ ಸಿಂಗ್ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ ನಿವಾಸದ ಮೇಲೆ ದಾಳಿ ನಡೆಸಿದ್ದರು. ಸುಮಾರು ನಾಲ್ಕೈದು ಗಂಟೆಗಳ ಶೋಧ ನಡೆಸಿದ ಅಧಿಕಾರಿಗಳ ತಂಡ ಬಳಿಕ ರಿಯಾ ಸಹೋದರ ಶೋವಿಕ್ ಹಾಗೂ ಮ್ಯಾನೇಜರ್ ಸ್ಯಾಮುಯೆಲ್‍ನನ್ನು ಬಂಧಿಸಿದ್ದರು. ಡ್ರಗ್ಸ್ ವಿಚಾರದಲ್ಲಿ ಅಧಿಕಾರಿಗಳ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲು ವಿಫಲರಾದ ಕಾರಣಕ್ಕೆ ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈಗಾಗಲೇ ಡ್ರಗ್ ಡೀಲರ್ ಮಿಲಾತ್ರಾ, ಬಾಸಿತ್‍ನನ್ನು ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎನ್‍ಸಿಬಿ ಡೈರೆಕ್ಟರ್ ಎಂಕೆ ಜೈನ್, ರಿಯಾ ಸಹೋದರ ಶೋವಿಕ್ ನೀಡಿದ ಮಾಹಿತಿಯಂತೆ ಸ್ಯಾಮುವೆಲ್ ಡ್ರಗ್ಸ್ ಸಂಗ್ರಹಿಸಿರುವ ಬಗ್ಗೆ ತಿಳಿದುಬಂತು ಎಂದು ತಿಳಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಸ್ಯಾಮುಯೆಲ್‍ನನ್ನು ಸುಶಾಂತ್ ಸಿಂಗ್ ಮನೆಯಲ್ಲಿ ಮ್ಯಾನೇಜರ್ ಆಗಿ ರಿಯಾ ನೇಮಕ ಮಾಡಿದ್ದಳು. ಆಕೆಯಾ ಕಾರಣದಿಂದಲೇ ಸುಶಾಂತ್ ಡ್ರಗ್ಸ್ ಸೇವನೆ ಆರಂಭಿಸಿದ್ದ ಎಂಬ ಸಂಶಯ ಹುಟ್ಟಿಕೊಂಡಿದೆ.
21-01-26 01:31 pm
HK News Desk
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
ಬಾರ್ ಲೈಸನ್ಸ್ ನೀಡಲು 1.5 ಕೋಟಿ ಲಂಚ ; 25 ಲಕ್ಷ ರೂ....
20-01-26 02:15 pm
ರಾಸಲೀಲೆಯ ಬಿರುಗಾಳಿ ಬೆನ್ನಲ್ಲೇ ರಾಮಚಂದ್ರ ರಾವ್ ತಲ...
20-01-26 12:20 pm
ಮೈಸೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಸುಗಮ ಬಸ್...
20-01-26 12:18 pm
22-01-26 11:26 am
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೇರಳ, ಕರ್ನಾಟಕ, ತಮ...
21-01-26 11:10 am
KSRTC Hikes Kasaragod Mangaluru: ಕುಂಬಳೆ ಟೋಲ್...
20-01-26 07:04 pm
ಬಸ್ಸಿನಲ್ಲಿ ಲೈಂಗಿಕ ಕಿರುಕುಳ ಎಂದು ವಿಡಿಯೋ ; ನೊಂದು...
19-01-26 11:03 pm
A.R. Rahmans Communal Bias: ‘ಕಮ್ಯುನಲ್ ಕಾರಣಕ್ಕ...
18-01-26 08:20 pm
21-01-26 10:55 pm
Mangalore Correspondent
ಸ್ವಚ್ಛತೆ, ತ್ಯಾಜ್ಯಮುಕ್ತ ಗ್ರಾಮ, ಪರಿಸರ ಸ್ನೇಹಿ ಆಡ...
21-01-26 06:18 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸಿಕ್ಕಿದ ಏಳು ಅಸ್ಥಿಪಂಜರಗ...
21-01-26 11:53 am
158 ವರ್ಷಗಳ ಇತಿಹಾಸವುಳ್ಳ ದೇಶದ ಮೊದಲ ಮಂಗಳೂರು ಟೈಲ್...
20-01-26 10:59 pm
ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ನಿಂದ ಟ್ರಾಫಿಕ್ ಸಮ...
20-01-26 10:33 pm
21-01-26 09:35 pm
HK News Desk
Actor Kicha Sudeep, Fraud: ನಟ ಕಿಚ್ಚ ಸುದೀಪ್, ಮ...
20-01-26 07:51 pm
ಸಿಎಂ ಕ್ಲಾಸ್ ಬೆನ್ನಲ್ಲೇ ಅಲರ್ಟ್ ಆದ ಬೆಂಗಳೂರು ಖಾಕಿ...
20-01-26 05:01 pm
100ಕ್ಕೂ ಹೆಚ್ಚು ಜನರನ್ನು ಹನಿಟ್ರ್ಯಾಪ್ ಬಲೆಗೆ ಬೀಳ...
19-01-26 10:20 pm
ಹುಣಸೂರು ಸ್ಕೈ ಗೋಲ್ಡ್ ಜುವೆಲ್ಲರಿ ದರೋಡೆ ; ಬಿಹಾರ ಮ...
19-01-26 04:16 pm