ಲೈಂಗಿಕ ಕಿರುಕುಳ ಪ್ರಕರಣ ; ಆರೋಪಿ ವಕೀಲನಿಗೆ ನಾಲ್ಕು ದಿನಗಳ ಪೊಲೀಸ್ ಕಸ್ಟಡಿ  

21-12-21 05:30 pm       Mangalore Correspondent   ಕ್ರೈಂ

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೀಡಾಗಿರುವ ವಕೀಲ ಕೆ.ಎಸ್.ಎನ್. ರಾಜೇಶ್ ಅವರನ್ನು ಇಂದು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.

Photo credits : Headline Karnataka

ಮಂಗಳೂರು, ಡಿ.21 : ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೀಡಾಗಿರುವ ವಕೀಲ ಕೆ.ಎಸ್.ಎನ್. ರಾಜೇಶ್ ಅವರನ್ನು ಇಂದು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಮಂಗಳೂರಿನ ಜೆಎಂಎಫ್ ಕೋರ್ಟಿನಲ್ಲಿ ಆರೋಪಿಯನ್ನು ಏಳು ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ಅಶ್ವಿನಿ ಕೋರೆ, ನಾಲ್ಕು ದಿನಗಳ ಕಸ್ಟಡಿಗೆ ಒಪ್ಪಿಸಿ ಆದೇಶ ಮಾಡಿದ್ದಾರೆ. ಜಾಮೀನು ಅರ್ಜಿ ಸಲ್ಲಿಸಿದ್ದ ಹಿರಿಯ ವಕೀಲ ಎಸ್.ಪಿ.ಚೆಂಗಪ್ಪ ಅವರ ಜೂನಿಯರ್ ಅಶ್ಫಾಕ್ ಬಜ್ಪೆ ಆರೋಪಿ ವಕೀಲನ ಪರವಾಗಿ ಇಂದು ವಾದ ಮಂಡಿಸಿದ್ದರು.

ಇಂಟರ್ನ್ ಶಿಪ್ ಉದ್ದೇಶದಿಂದ ತನ್ನ ಕಚೇರಿಗೆ ಬಂದಿದ್ದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವಕೀಲ ಕೆಎಸ್ಎನ್ ರಾಜೇಶ್ ವಿರುದ್ಧ ಅ.18ರಂದು ಪ್ರಕರಣ ದಾಖಲಾಗಿತ್ತು. ಎರಡು ತಿಂಗಳಿಂದ ತಲೆಮರೆಸಿಕೊಂಡಿದ್ದ ರಾಜೇಶ್, ಸೋಮವಾರ ಸಂಜೆ ಮಂಗಳೂರಿನ ಕೋರ್ಟಿಗೆ ಶರಣಾಗಿದ್ದರು. ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ ; ಲೋಕಾಯುಕ್ತ ವಿಶೇಷ ಸರಕಾರಿ ಅಭಿಯೋಜಕರ ವಿರುದ್ಧ ಎಫ್ಐಆರ್ ! 

ವಕೀಲನ ಪ್ರಕರಣ ಮುಚ್ಚಿ ಹಾಕಲು ಯತ್ನ ; ಮಹಿಳಾ ಎಸ್ಐ ಸೇರಿ ಇಬ್ಬರು ಸಸ್ಪೆಂಡ್, ಸಂತ್ರಸ್ತ ಯುವತಿಗೆ ಬೆದರಿಸಿದ್ದ ಮಹಿಳೆ ಬಂಧನ

ಲೈಂಗಿಕ ಕಿರುಕುಳ ಆರೋಪ ; ಬಾರ್ ಕೌನ್ಸಿಲ್‌ನಿಂದ ವಕೀಲ ಕೆಎಸ್ಎನ್ ರಾಜೇಶ್ ಗೆ ಅಮಾನತು ಶಿಕ್ಷೆ ! ವಕಾಲತು ಹಕ್ಕನ್ನೇ ಕಳಕೊಂಡ ವಕೀಲ !!

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ; ಆರೋಪಿ ವಕೀಲನ ಅಜ್ಞಾತ ಸ್ಥಳಕ್ಕೆ ಬಿಟ್ಟು ಬಂದಿದ್ದ ವ್ಯಕ್ತಿಯ ಬಂಧನ

ಲೈಂಗಿಕ ಕಿರುಕುಳ ಪ್ರಕರಣ ; ಆರೋಪಿ ವಕೀಲನ ನಿರೀಕ್ಷಣಾ ಜಾಮೀನು ಅರ್ಜಿ ವಜಾ, ವಕೀಲನಿಗೆ ಬಂಧನ ಭೀತಿ !

ಲೈಂಗಿಕ ಕಿರುಕುಳ ; ತಲೆಮರೆಸಿಕೊಂಡ ವಕೀಲ ಕೆ.ಎಸ್.ಎನ್ ರಾಜೇಶ್ ಪತ್ತೆಗೆ ದೇಶಾದ್ಯಂತ ಲುಕೌಟ್ ನೋಟೀಸ್ !

ಲೈಂಗಿಕ ಕಿರುಕುಳ ಪ್ರಕರಣ ; ಆರೋಪಿ ವಕೀಲ ಕೆಎಸ್ಎನ್ ರಾಜೇಶ್ ಮಂಗಳೂರಿನ ಕೋರ್ಟಿಗೆ ಶರಣು !

ಲೈಂಗಿಕ ಕಿರುಕುಳ ಪ್ರಕರಣ ; ಕೋರ್ಟಿಗೆ ಶರಣಾದ ವಕೀಲನಿಗೆ ಜೈಲು, ಜೈಲೂಟ ತಪ್ಪಿಸಿದ ವಕೀಲರು! ನಾಳೆ ಜಾಮೀನು ಅರ್ಜಿ ವಿಚಾರಣೆ

Lawyer K S N Rajesh, who is accused in the case of sexual harassment of law student is sent to four days of police custody by the court. The police had sought seven days of police custody of the accused in the third JMFC court of the city. However, Justice Ashwini Kore allowed to take the accused to four days of police custody.