ಬ್ರೇಕಿಂಗ್ ನ್ಯೂಸ್
04-01-22 11:45 am HK Desk news ಕ್ರೈಂ
ಮುಂಬೈ, ಜ.4 : ಮುಸ್ಲಿಮ್ ಮಹಿಳೆಯರನ್ನು ಹರಾಜಿಗಿಟ್ಟ ಬುಲ್ಲಿ ಬಾಯ್ ಏಪ್ ಪ್ರಕರಣದಲ್ಲಿ ಮುಂಬೈ ಸೈಬರ್ ಪೊಲೀಸರು ಶಂಕಿತ ವ್ಯಕ್ತಿಯೊಬ್ಬನನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಬುಲ್ಲಿ ಬಾಯ್ ಏಪ್ ಫಾಲೋ ಮಾಡುತ್ತಿದ್ದ ಐವರಲ್ಲಿ ಈತನೂ ಒಬ್ಬನಾಗಿದ್ದು, ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದು ಮುಂಬೈಗೆ ಒಯ್ದಿದ್ದಾರೆ.
ನಾಲ್ಕು ದಿನಗಳ ಹಿಂದೆ ದೆಹಲಿಯಲ್ಲಿ ಬುಲ್ಲಿ ಬಾಯ್ ಏಪ್ ಪ್ರಕರಣ ಮೊದಲು ಬೆಳಕಿಗೆ ಬಂದಿತ್ತು. ಮುಸ್ಲಿಮ್ ಮಹಿಳೆಯರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಿಂದ ಕದ್ದು ಅದನ್ನು ಬುಲ್ಲಿ ಬಾಯ್ ಏಪ್ ನಲ್ಲಿ ಅಪ್ಲೋಡ್ ಮಾಡಿ ಹರಾಜಿಗಿಡಲಾಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದೇಶಾದ್ಯಂತ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ದೆಹಲಿ ಮತ್ತು ಮುಂಬೈ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ತನಿಖೆ ಕೈಗೆತ್ತಿಕೊಂಡಿದ್ದರು.
ಈ ಬಗ್ಗೆ ದೆಹಲಿ ಪೊಲೀಸರು ಗಿಟ್ ಹಬ್ ಡೆವಲಪರ್ ಮತ್ತು ಟ್ವಿಟರ್ ಇಂಡಿಯಾ ಬಳಿಯಿಂದ ಮಾಹಿತಿ ಕೇಳಿತ್ತು. ಗಿಟ್ ಹಬ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬುಲ್ಲಿ ಬಾಯ್ ಏಪ್ ಅನ್ನು ವಿಷಯ ತಿಳಿಯುತ್ತಲೇ ಬ್ಲಾಕ್ ಮಾಡಲಾಗಿದೆ. ಅಲ್ಲದೆ ಹಿಂಸೆಯನ್ನು ಪ್ರಚೋದಿಸುವ, ಕಿರುಕುಳ, ತಾರತಮ್ಯ ಹರಡುವ ರೀತಿ ಯಾವುದೇ ಕಂಟೆಂಟ್ ಇರದಂತೆ ಕಂಪನಿಯಿಂದ ಪ್ರತ್ಯೇಕ ನೀತಿಯನ್ನು ಹೊಂದಲಾಗಿದೆ ಎಂದು ಹೇಳಿದೆ.
ಸೋಶಿಯಲ್ ಮೀಡಿಯಾ ಸಾಫ್ಟ್ ವೇರ್ ಡೆವಲಪರ್ ಸಂಸ್ಥೆಯಾಗಿರುವ ಗಿಟ್ ಹಬ್, ಭಾರತೀಯ ಕಾನೂನಿನಡಿ ಪ್ರಕರಣದಲ್ಲಿ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದೆ. ಇದೇ ವೇಳೆ, ಬುಲ್ಲಿ ಬಾಯ್ ಏಪ್ ಬಗ್ಗೆ ಮೊದಲು ಟ್ವೀಟ್ ಮಾಡಿರುವವರು, ಫಾಲೋ ಮಾಡುತ್ತಿರುವವರ ಬಗ್ಗೆ ಟ್ವಿಟರ್ ಸಂಸ್ಥೆಯಿಂದ ಮಾಹಿತಿ ಕೇಳಿದೆ.
ಮುಸ್ಲಿಂ ಮಹಿಳೆಯರ ಹರಾಜು ; ಬುಲ್ಲಿ ಬಾಯ್ ಬಗ್ಗೆ ಟ್ವಿಟರ್ ಬಳಿ ಮಾಹಿತಿ ಕೇಳಿದ ದೆಹಲಿ ಪೊಲೀಸರು
ಮುಸ್ಲಿಂ ಮಹಿಳೆಯರ ಫೋಟೋ ಕದ್ದು ಸಾರ್ವಜನಿಕ ಹರಾಜಿಗಿಟ್ಟ GitHub ; ದೆಹಲಿಯಲ್ಲಿ ಕಿಡಿ ಎಬ್ಬಿಸಿದ ಸೋಶಿಯಲ್ ಮೀಡಿಯಾ !
Mumbai police detained a suspect accused in Bulli Bai app case from Bengaluru. He is being taken to Mumbai. He is one of the five followers of Bulli Bai. He is likely to be arrested.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
09-09-25 11:48 am
Mangalore Correspondent
Gopadi Beach Drowning, Kundapura: ಕುಂದಾಪುರ ;...
08-09-25 12:08 pm
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm