ಬ್ರೇಕಿಂಗ್ ನ್ಯೂಸ್
10-11-23 07:51 pm HK News Desk ಕರ್ನಾಟಕ
ಕಲಬುರಗಿ, ನ.10: ಎಫ್‌ಡಿಎ ಪರೀಕ್ಷೆ ಅಕ್ರಮದ ಕಿಂಗ್ ಪಿನ್ ಎನ್ನಲಾದ ಆರ್.ಡಿ ಪಾಟೀಲ್ಕೊನೆಗೂ ಪೊಲೀಸರಿಗೆ ಸೆರೆಯಾಗಿದ್ದಾನೆ. ಕಳೆದ 12 ದಿನಗಳಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಪಾಟೀಲನನ್ನು ಮಹರಾಷ್ಟ್ರ ಗಡಿ ಭಾಗದಲ್ಲಿ ಕಲಬುರಗಿ ಜಿಲ್ಲೆಯ ವಿಶೇಷ ಪೊಲೀಸ್ ತಂಡ ಅರೆಸ್ಟ್ ಮಾಡಿದೆ.
ನವೆಂಬರ್ 6 ರಂದು ಕಲಬುರಗಿ ನಗರದ ವರ್ಧಾ ಲೇಔಟ್‌ನ ಮಹಾಲಕ್ಷ್ಮಿ ಅಪಾರ್ಟ್ಮೆಂಟ್ ನಲ್ಲಿ ಅಡಗಿಕೊಂಡಿದ್ದ ಪಾಟೀಲ್, ಪೊಲೀಸರು ತನ್ನ ಹಿಂದೆ ಬಿದ್ದಿದ್ದಾರೆ ಎಂದು ತಿಳಿಯುತ್ತಲೇ ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದ. ಇದರಿಂದ ಪೊಲೀಸರು ತೀವ್ರ ಮುಜುಗರ ಅನುಭವಿಸಿದ್ದರು. ಆತನ ಬಂಧನಕ್ಕಾಗಿಯೇ ನಾಲ್ವರು ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ದಿನದಿಂದ ದಿನಕ್ಕೆ ತನ್ನ ಅಡಗುತಾಣ ಬದಲಿಸುತ್ತಿದ್ದರಿಂದ ಪಾಟೀಲ್ ಪತ್ತೆ ಸವಾಲಾಗಿತ್ತು.
ಆರೋಪಿಗೆ ಮನೆ ನೀಡಿದ್ದವರೂ ಬಂಧನ
ಈ ನಡುವೆ, ಆರ್.ಡಿ ಪಾಟೀಲ್ ಅಡಗಿಕೊಳ್ಳಲು ಮನೆ ನೀಡಿದ್ದ ಆರೋಪದಲ್ಲಿ ಆ ಮನೆಯ ಮಾಲೀಕರನ್ನು ಪೊಲೀಸರು ಬಂಧಿಸಿದ್ದರು. ಮಹಾಲಕ್ಷ್ಮಿ ಅಪಾರ್ಟ್ಮೆಂಟ್ ಫ್ಲ್ಯಾಟ್ ಮಾಲೀಕ ನವೆಂಬರ್ 5 ರಂದು ಆರೋಪಿಗೆ ತನ್ನ ಮನೆಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿದ್ದ. ಮಾರನೇ ದಿನ ಪೊಲೀಸರು ಬೆನ್ನು ಬಿದ್ದ ಮಾಹಿತಿ ಪಡೆದು ಅಪಾರ್ಟ್ಮೆಂಟ್ ಹಿಂಬದಿಯ ಕಂಪೌಂಡ್ ಜಿಗಿದು ಪರಾರಿಯಾಗಿದ್ದ. ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ತನಿಖೆಯಲ್ಲಿ ಆರ್.ಡಿ.ಪಾಟೀಲ್ನಿಂದ ಹತ್ತು ಸಾವಿರ ರೂ. ಅಡ್ವಾನ್ಸ್ ಪಡೆದು ಮನೆ ನೀಡಿದ್ದು ಪತ್ತೆಯಾಗಿತ್ತು. ತನ್ನ ಹೆಸರನ್ನು ಪಾಟೀಲ್ ಬಸವರಾಜ ಅಂತ ಸುಳ್ಳು ಹೇಳಿದ್ದನಂತೆ. ಇದಕ್ಕಾಗಿ ಫ್ಲಾಟ್ ಮಾಲೀಕ ಶಂಕರ ಗೌಡ ಮತ್ತು ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದರು.
ಅ.29ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಸಲಾಗಿದ್ದ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಆದರೆ ಕಲಬುರಗಿಯಲ್ಲಿ ಕೆಲವು ಅಭ್ಯರ್ಥಿಗಳು ಬ್ಲೂಟೂತ್ ಬಳಸಿ ಉತ್ತರಗಳನ್ನು ಬರೆದು ಕೊಠಡಿ ಪರಿವೀಕ್ಷಕರ ಕೈಗೆ ಸಿಕ್ಕಿಬಿದ್ದಿದ್ದರು. ಬಳಿಕ ಹಲವರ ಬಂಧನ ಆಗುತ್ತಲೇ ಪರೀಕ್ಷಾ ಅಕ್ರಮದ ಮತ್ತೊಂದು ಜಾಲ ಹೊರಬಂದಿತ್ತು. ಜಾಲದ ಪ್ರಮುಖ ರೂವಾರಿ ಆರ್.ಡಿ. ಪಾಟೀಲ್ ಎಂಬುದು ತಿಳಿದುಬಂದಿತ್ತು. ಈತ 2021ರಲ್ಲಿ ಬಯಲಾಗಿದ್ದ ಪಿಎಸ್ಐ ಹಗರಣದ ಆರೋಪಿಯೂ ಆಗಿದ್ದು, ಕೆಲವು ತಿಂಗಳಿಂದ ಜಾಮೀನಿನ ಮೇಲೆ ಹೊರಗಿದ್ದ. ಇದೇ ಸಂದರ್ಭದಲ್ಲಿ ಎಫ್ ಡಿಎ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದವರಿಂದ ಹಣ ಪಡೆದು ಬ್ಲೂಟೂತ್ ಕೊಟ್ಟು ಮತ್ತೊಂದು ಅಕ್ರಮಕ್ಕೆ ಮುಂದಾಗಿದ್ದ. ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಮುಖಂಡನಾಗಿ ಗುರುತಿಸಿದ್ದರಿಂದ ಆರ್.ಡಿ ಪಾಟೀಲ್ ಬಂಧನ ಆಗುವುದು ರಾಜ್ಯ ಸರ್ಕಾರಕ್ಕೆ ಮುಜುಗರ ತಪ್ಪಿಸಲು ಅಗತ್ಯವಾಗಿತ್ತು.
R D Patil, the alleged kingpin of the FDA exam scam, has finally been arrested by the police. Patil, who had been on the run for the past 12 days, was arrested by a special police team from Kalaburagi district on the Maharashtra border.
25-02-25 10:30 pm
Bangalore Correspondent
Belagavi Accident, Kumbh Mela: ಬಸ್ ಗೆ ಡಿಕ್ಕಿ...
24-02-25 01:36 pm
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
25-02-25 09:34 pm
Mangalore Correspondent
Bantwal accident, Mangalore: ಚಾಲಕಿಯ ಧಾವಂತಕ್ಕೆ...
25-02-25 02:34 pm
Puttur doctor, C Section, Mangalore: ಸಿಸೇರಿಯನ...
25-02-25 12:24 pm
Puttur News, Dr Anil Baipadithaya, hospital:...
24-02-25 02:50 pm
Mangalore accident, Surathkal, Raichur: ಸುರತ್...
23-02-25 03:20 pm
25-02-25 08:10 pm
Mangalore Correspondent
Mangalore, Kotekar bank robbery, Bhaskar Belc...
25-02-25 05:18 pm
Kerala Murder, Crime, Affan: ತಿರುವನಂತಪುರ ; ಒಂ...
25-02-25 01:37 pm
Delhi crime, Wife Murder: ತ್ರಿವೇಣಿ ಸಂಗಮದಲ್ಲಿ...
24-02-25 10:51 pm
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm