ಬ್ರೇಕಿಂಗ್ ನ್ಯೂಸ್
25-11-26 02:11 pm HK News Staffer ಕರ್ನಾಟಕ
ಬೆಂಗಳೂರು, ನ.25 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕೊನೆಗೂ ಸಿಸಿಬಿ ಪೊಲೀಸರು ಕೃಪಾ ಆಳ್ವ ಮೊಬೈಲನ್ನು ವಶಕ್ಕೆ ಪಡೆದಿದ್ದಾರೆ. ತನಿಖಾಧಿಕಾರಿ ಎಸಿಪಿ ರವಿ ನೇತೃತ್ವದಲ್ಲಿ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.
ಸ್ಟಿಂಗ್ ವಿಡಿಯೋ ಚಿತ್ರೀಕರಣದ ವೇಳೆ ಇದೇ ಮೊಬೈಲ್ ಬಳಸಲಾಗಿತ್ತು ಎನ್ನಲಾಗಿದೆ. ವಿಚಾರಣೆ ಸಂದರ್ಭದಲ್ಲಿ ಮೊಬೈಲ್ ಹಸ್ತಾಂತರಿಸುವಂತೆ ಪೊಲೀಸರು ಕೃಪಾ ಆಳ್ವಾಗೆ ಹಲವು ಬಾರಿ ಸೂಚನೆ ನೀಡಿದ್ದರು. ಆದರೆ ಕೃಪಾ ಮೊಬೈಲ್ ನೀಡಿರಲಿಲ್ಲ. ಇದೀಗ ಮೊಬೈಲ್ ಪೊಲೀಸರ ವಶಕ್ಕೆ ಬಂದಿರುವುದರಿಂದ ಪ್ರಕರಣದ ತನಿಖೆಗೆ ಮಹತ್ವದ ತಿರುವು ಸಿಕ್ಕಿದೆ.
ಮೊಬೈಲ್, ಧ್ವನಿ ಮಾದರಿ ಎಫ್ಎಸ್ಎಲ್ಗೆ
ಕೃಪಾ ಆಳ್ವಾ ನೀಡಿರುವ ಮೊಬೈಲ್ನಲ್ಲಿದ್ದ ಹಲವು ಫೈಲ್ಗಳನ್ನು ಅಳಿಸಲಾಗಿದೆ ಎಂಬ ಅನುಮಾನ ಪೊಲೀಸರಿಗಿದೆ. ಹೀಗಾಗಿ ಮೊಬೈಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಿದ್ದಾರೆ. ಇನ್ನೊಂದೆಡೆ, ಕೃಪಾ ಆಳ್ವಾ ಅವರ ಧ್ವನಿ ಮಾದರಿಯನ್ನೂ ಪೊಲೀಸರು ಸಂಗ್ರಹಿಸಿದ್ದಾರೆ. ಸ್ಟಿಂಗ್ ವಿಡಿಯೋದಲ್ಲಿರುವ ಧ್ವನಿಯೊಂದಿಗೆ ಅದನ್ನು ಹೋಲಿಕೆ ಮಾಡಲು ನಿರ್ಧರಿಸಿದ್ದಾರೆ.
2023ರ ಫೆಬ್ರವರಿಯಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾದ ಸ್ಟಿಂಗ್ ವಿಡಿಯೋ 2026ರ ಸೆಪ್ಟೆಂಬರ್ನಲ್ಲಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಆಗಿತ್ತು. ವಿಡಿಯೋದಲ್ಲಿ ಕೃಪಾ ಆಳ್ವಾ ಹಾಗೂ ಖಾಸಗಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ ಕಾಣಿಸಿಕೊಂಡಿದ್ದರು. ಹೀಗಾಗಿ ಸ್ಟಿಂಗ್ ಆಪರೇಷನ್ ಹಿಂದಿನ ಷಡ್ಯಂತ್ರದಲ್ಲಿ ಇವರ ಪಾತ್ರವಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ವಿವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಕೃಪಾ ಆಳ್ವಾ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿತ್ತು.
ಆದರೆ, ವಿಚಾರಣೆ ವೇಳೆ ತಾವು ನಿರಪರಾಧಿ ಎಂದು ಹೇಳಿಕೊಂಡಿರುವ ಕೃಪಾ ಆಳ್ವಾ, ಸ್ಟಿಂಗ್ ವಿಡಿಯೋ ವಿಚಾರವಾಗಿ ರಾಕೇಶ್ ಶೆಟ್ಟಿ ಅವರೇ ತಮ್ಮನ್ನು ಸಂಪರ್ಕಿಸಿದ್ದರು ಎಂದು ತಿಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಈಗಾಗಲೇ ಮೂರು ಬಾರಿ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಇದೀಗ ಮೊಬೈಲ್ನಲ್ಲಿರುವ ಡಿಜಿಟಲ್ ಸಾಕ್ಷ್ಯಗಳು ಮತ್ತು ಧ್ವನಿ ಮಾದರಿಯ ಎಫ್ಎಸ್ಎಲ್ ವರದಿ ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.
25-11-26 02:11 pm
HK News Staffer
ಯೋಗಿಶ್ ಗೌಡ ಕೊಲೆ ಪ್ರಕರಣ ; ಕಾಂಗ್ರೆಸ್ ಶಾಸಕ ವಿನಯ...
25-11-26 02:10 pm
ಹಾಸನ ಜಿಲ್ಲಾಧಿಕಾರಿ ಬಗ್ಗೆ ಲಂಚದ ಆರೋಪ ; ಕೇಂದ್ರ ಸಚ...
24-11-26 08:43 pm
ಬಿಸ್ಲೆರಿ ನೀರಿನಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ ;...
23-11-26 09:23 pm
ಸ್ಟಿಂಗ್ ಹೆಸರಿನಲ್ಲಿ ಬ್ಲ್ಯಾಕ್ ಮೇಲ್, ಜನಪ್ರತಿನಿಧಿ...
23-11-26 12:02 pm
25-11-26 11:53 am
HK News Staffer
Alwyn Joel Noronha, Mangalore: ಉದ್ಯಮಿ ಆಲ್ವಿನ್...
24-11-26 09:44 pm
ಮುಂಬೈ ನೌಕಾನೆಲೆಯಿಂದ ಮಾಹಿತಿ ಸೋರಿಕೆ ; 90 ರಹಸ್ಯ ವ...
24-11-26 08:45 pm
ಮಾಜಿ ಸಿಎಂ ಸ್ಟಾಲಿನ್ ಸೋಲಿಸಿದ್ದ ನಾಯಕನಿಗೆ ಭಾವಪೂರ್...
21-11-26 11:44 am
ಜಾಗತಿಕ ಜನಸಂಖ್ಯೆಯಲ್ಲಿ ಇಸ್ಲಾಂ ಪಾರಮ್ಯ ; 2035ಕ್ಕೆ...
20-11-26 12:58 pm
24-11-26 06:46 pm
HK News Staffer
ಕದ್ರಿ ಯುದ್ಧ ಸ್ಮಾರಕದ ಬಳಿಯ ಯುದ್ಧ ಟ್ಯಾಂಕ್ ಮೇಲೆ ಹ...
24-11-26 10:51 am
ವಾಕಿಂಗ್ ಮಾಡ್ತಿದ್ದವರಿಂದ ವಸೂಲಿ ಪ್ರಕರಣ, ಘಟ್ಟದ ಮೇ...
24-11-26 10:49 am
ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶ ಜಾರಿಯಾಗದ ಹಿ...
24-11-26 09:45 am
ಮಂಗಳೂರು ಕಮಿಷನರೇಟ್ ; ರಾತ್ರಿ ವಹಿವಾಟು ನಿರ್ಬಂಧ ಸಡ...
23-11-26 09:25 pm
25-11-26 01:30 pm
HK News Staffer
ಕಾಪು ಬೀಚ್ ನಲ್ಲಿ ಸಮುದ್ರದ ಅಲೆಗಳಿಗೆ ಸಿಲುಕಿದ ದಾವಣ...
23-11-26 02:24 pm
ತಲೆ ಕಡಿದು ಧ್ವನಿ ಅಡಗಿಸಬಹುದು, ನ್ಯಾಯದ ಧ್ವನಿಯನ್ನಲ...
23-11-26 11:59 am
ಸತ್ತಿದ್ದಾಳೆ ಎಂದ ಮಹಿಳೆ 7 ವರ್ಷಗಳ ಬಳಿಕ ಪ್ರತ್ಯಕ್ಷ...
21-11-26 04:41 pm
ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕ...
21-11-26 12:41 pm