implementation of punyakoti adoption scheme, allowing adoption of cows for rs.11,000.

">

ಪುಣ್ಯಕೋಟಿ ದತ್ತು ಯೋಜನೆ ಜಾರಿ, 11 ಸಾವಿರ ರೂ.ಗೆ ಗೋವುಗಳನ್ನು ದತ್ತು ಪಡೆಯಲು ಅವಕಾಶ

04-03-22 07:04 pm       Bengaluru Correspondent   ಕರ್ನಾಟಕ

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಗೋವುಗಳ ಸಂತತಿ ಉಳಿಸುವ ಸಲುವಾಗಿ ಪುಣ್ಯಕೋಟಿ ದತ್ತು ಯೋಜನೆಯನ್ನು ಆರಂಭಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರು, ಮಾ.4:ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಗೋವುಗಳ ಸಂತತಿ ಉಳಿಸುವ ಸಲುವಾಗಿ ಪುಣ್ಯಕೋಟಿ ದತ್ತು ಯೋಜನೆಯನ್ನು ಆರಂಭಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

2022-23ನೇ ಸಾಲಿನ ಬಜೆಟ್ ಭಾಷಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಈ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಗೋವುಗಳ ಸಂರಕ್ಷಣೆಗಾಗಿ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ. ಖಾಸಗಿ ಸಂಸ್ಥೆಗಳು ಅಥವಾ ಯಾವುದೇ ವ್ಯಕ್ತಿ 11 ಸಾವಿರ ರೂ.ಗೆ ವಾರ್ಷಿಕವಾಗಿ ಗೋವುಗಳನ್ನು ದತ್ತು ಪಡೆಯಲು ಅವಕಾಶ ಮಾಡಲಾಗಿದೆ. ಗೋವುಗಳ ರಕ್ಷಣೆಗೆ ಬಿಜೆಪಿ ಸರಕಾರ ಆದ್ಯತೆ ನೀಡಿದ್ದು, ಅದೇ ಉದ್ದೇಶದಲ್ಲಿ ಕಳೆದ ವರ್ಷ ಗೋಹತ್ಯಾ ನಿಷೇಧ ವಿಧೇಯಕ ಜಾರಿಗೆ ತರಲಾಗಿತ್ತು.

Budget 2019: Government to set up Rashtriya Kamdhenu Aayog, Rs 750 crore  allocated

ಅದರಂತೆ, ರಾಜ್ಯದಲ್ಲಿರುವ ಗೋಶಾಲೆಗಳ ಸಂಖ್ಯೆಯನ್ನು 31ರಿಂದ 50ಕ್ಕೇರಿಸಲಾಗುವುದು. ಅದಕ್ಕಾಗಿ 50 ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ರಾಜ್ಯದಲ್ಲಿ ಗೋವುಗಳ ತಳಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕೆಎಂಎಫ್ ಮಂಡಳಿಯಿಂದ ಎರಡು ಸಾವಿರ ಗೋವಿನ ತಳಿಗಳನ್ನು ರೈತರಿಗೆ ವಿತರಿಸಲಾಗುವುದು ಎಂದು ಹೇಳಿದ್ದಾರೆ.

3ರಿಂದ 6 ತಿಂಗಳ ಒಳಗಿನ ಕುರಿ, ಮೇಕೆಗಳು ಮೃತಪಟ್ಟರೆ, ಅನುಗ್ರಹ ಕೊಡುಗೆ ಯೋಜನೆಯಡಿ ಅವುಗಳಿಗೆ ನೀಡಲಾಗುವ ಪರಿಹಾರ ಮೊತ್ತವನ್ನು 2500 ರೂ.ನಿಂದ 3500 ರೂ.ಗೆ ಏರಿಸಲಾಗುವುದು. ಅಲ್ಲದೆ, ಕುರಿಗಾಹಿಗಳು ಮೃತಪಟ್ಟರೆ ಅವರ ಕುಟುಂಬಗಳನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಲು 5 ಲಕ್ಷ ವಿಮಾ ಯೋಜನೆ ಆರಂಭಿಸಲಾಗುವುದು. ಕುರಿದೊಡ್ಡೆ ನಿರ್ಮಾಣಕ್ಕಾಗಿ 5 ಲಕ್ಷ ಸಹಾಯಧನ ನೀಡಲಾಗುವುದು ಎಂದಿದ್ದಾರೆ.

implementation of punyakoti adoption scheme, allowing adoption of cows for rs.11,000.