Breaking: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಕೊರೊನಾ ಸೋಂಕು ದೃಢ

29-09-20 11:10 pm       Headline Karnataka News Network   ದೇಶ - ವಿದೇಶ

ಉಪರಾಷ್ಟ್ರಪತಿ ವೆಂಕಯ್ಯನಾಯ್ಡುಗೆ ಕರೋನ ಸೋಂಕು ದೃಢವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನವದೆಹಲಿ, ಸೆ.29: ದೇಶದಲ್ಲಿ ಕೊರೊನಾ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು, ಇದೀಗ ಉಪರಾಷ್ಟ್ರಪತಿ ವೆಂಕಯ್ಯನಾಯ್ಡುಗೆ ಕರೋನ ಸೋಂಕು ದೃಢವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಇಂದು ಕೋವಿಡ್​​ ಪರೀಕ್ಷೆಗೆ ಒಳಪಟ್ಟಾಗ ಅವರಿಗೆ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಸದ್ಯ ವೆಂಕಯ್ಯನಾಯ್ಡು ಅವರು ಕೊರೊನಾ ಲಕ್ಷಣ ರಹಿತರಾಗಿದ್ದು ಆರೋಗ್ಯವಾಗಿದ್ದಾರೆ. ವೈದ್ಯರು ಹೋಮ್​ ಕ್ವಾರಂಟೀನ್​ನಲ್ಲಿರುವಂತೆ ಸಲಹೆ ನೀಡಿದ್ದಾರೆ. ಇನ್ನು ವೆಂಕಯ್ಯ ಅವರ ಪತ್ನಿ ಉಷಾ ನಾಯ್ಡು ಅವರಿಗೂ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ವರದಿಯಲ್ಲಿ ನೆಗೆಟಿವ್ ಎಂದು​ ಬಂದಿದೆ. ಸದ್ಯ ಉಪ ರಾಷ್ಟ್ರಪತಿಗಳು ಹೋಮ್​ ಕ್ವಾರಂಟೀನ್​ನಲ್ಲಿದ್ದಾರೆ ಎಂದು ಕಾರ್ಯಾಲಯ ಮಾಹಿತಿ ನೀಡಿದೆ.