ಕೋವಿಡ್ ನಿಂದ ಚೇತರಿಸಿಕೊಂಡವರ ಪ್ರಮಾಣ ಶೇ. 83.70 ನಷ್ಟು ಏರಿಕೆ !!

03-10-20 10:51 am       Headline Karnataka News Network   ದೇಶ - ವಿದೇಶ

ದೇಶದಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರ ಪ್ರಮಾಣ ಶೇ. 83.70ಕ್ಕೆ ಏರಿಕೆಯಾಗಿದ್ದು , ಸಕ್ರೀಯ ಪ್ರಕರಣಗಳು ಶೇ.14.74ನಷ್ಟಿವೆ

ನವ ದೆಹಲಿ, ಅಕ್ಟೋಬರ್. 03: ದೇಶದಲ್ಲಿ  ಕೊರೊನ  ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಿದೆ ಎನ್ನುವ ಮಾಹಿತಿ ಒಂದು ಕಡೆಯಾದರೆ. ದೇಶದಾದ್ಯಂತ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರ ಪ್ರಮಾಣ ಶೇ 83.70ಕ್ಕೆ ತಲುಪಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ ಪ್ರಕಾರ ಇಲ್ಲಿವರೆಗೂ 53,52,078 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, 9,42,217 ಸಕ್ರಿಯ ಪ್ರಕಾರಗಳಿವೆ. 99,773 ಜನರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ 24 ಗಂಟೆ ಅವಧಿಯಲ್ಲಿ, 8793 ಕೊರೊನ ಪ್ರಕರಣಗಳು ದೃಢ ಪಟ್ಟರೆ,125 ಮಂದಿ ಸಾವಿಗೀಡಾಗಿದ್ದಾರೆ.