ಗುಡ್ ನ್ಯೂಸ್ ; ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಇಳಿಕೆ

20-10-20 11:49 am       Headline Karnataka News Network   ದೇಶ - ವಿದೇಶ

ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಭಾರೀ ಕುಸಿತವಾಗಿದೆ. ಕಳೆದ ಮೂರು ತಿಂಗಳಿನಲ್ಲಿ ಅತಿ ಕಡಿಮೆ ಸೋಂಕು ದೃಢಪಟ್ಟದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ನವದೆಹಲಿ, ಅಕ್ಟೋಬರ್ 19: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಭಾರೀ ಕುಸಿತವಾಗಿದೆ. ಕಳೆದ 24 ಗಂಟೆಯಲ್ಲಿ 46,791 ಮಂದಿಗೆ ಸೋಂಕು ಬಂದಿದೆ.

ಕಳೆದ ಮೂರು ತಿಂಗಳಿನಲ್ಲಿ ಅತಿ ಕಡಿಮೆ ಸೋಂಕು ದೃಢಪಟ್ಟದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಸೋಮವಾರ ಒಂದೇ ದಿನ 587 ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ ಒಂದೇ ದಿನ 69,721 ಮಂದಿ ಗುಣಮುಖರಾಗಿದ್ದಾರೆ.

ದೇಶದಲ್ಲಿ ಒಟ್ಟು 75,97,064 ಮಂದಿಗೆ ಸೋಂಕು ಬಂದಿದೆ. ಈ ಪೈಕಿ 67,33,329 ಮಂದಿ ಚೇತರಿಕೆಯಾಗಿದ್ದರೆ 7,48,538 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಕೊರೊನಾದಿಂದ 1,15,197 ಮಂದಿ ಸಾವನ್ನಪ್ಪಿದ್ದಾರೆ.

The average daily positivity rate of Covid-19 infection has declined week on week over last five weeks to 6.1% during the last week (Oct 14-19), from 9.2% during September 16-22.