ಬ್ರೇಕಿಂಗ್ ನ್ಯೂಸ್
28-10-20 03:21 pm Headline Karnataka News Network ದೇಶ - ವಿದೇಶ
ಲಂಡನ್, ಅಕ್ಟೋಬರ್.28 : ಬ್ರಿಟನ್ ರಾಣಿಯ ಅರಮನೆಯಲ್ಲಿ ಮನೆ ಕೆಲಸ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಆರಂಭಿಕ ವೇತನ ಬರೋಬ್ಬರಿ 18.5 ಲಕ್ಷ ರೂ. ನಿಗದಿಪಡಿಸಲಾಗಿದೆ.
ಬ್ರಿಟನ್ ರಾಯಲ್ ಕುಟುಂಬ ತಮ್ಮ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ವಿಂಡ್ಸರ್ ಕ್ಯಾಸ್ಟ್ಲೆಯಲ್ಲಿ ಅಂತಿಮ ಸಂದರ್ಶನ ನಡೆಸಲಾಗುತ್ತದೆ. ಈ ಕೆಲಸಕ್ಕೆ ಆಯ್ಕೆಯಾದ ವ್ಯಕ್ತಿಗೆ ಅರಮನೆಯ ಒಳಾಂಗಣ ಹಾಗೂ ವಸ್ತುಗಳನ್ನ ನೋಡಿಕೊಳ್ಳುವುದರ ಜೊತೆಗೆ ಅರಮನೆಯ ಸ್ವಚ್ಚತೆಯ ಜವಾಬ್ದಾರಿಯನ್ನೂ ನೀಡಲಾಗುತ್ತದೆ.
ಇದೊಂದು ಪರ್ಮನೆಂಟ್ ಕೆಲಸವಾಗಿದ್ದು ಮೊದಲ 13 ತಿಂಗಳು ತರಬೇತಿ ಅವಧಿಯಾಗಿ ಇರಲಿದೆ. ಬಳಿಕ ಅವರು ಪೂರ್ಣ ಪ್ರಮಾಣದ ಸಿಬ್ಬಂದಿಯಾಗಿ ನೇಮಕವಾಗುತ್ತಾರೆ. ಆರಂಭದಲ್ಲಿ 19,140 ಪೌಂಡ್ ಅಂದರೆ 18.5 ಲಕ್ಷ ರೂ. ವೇತನ ನಿಗದಿಪಡಿಸಲಾಗಿದ್ದು ಉಳಿದುಕೊಳ್ಳಲು ವಾಸ್ತವ್ಯದ ವ್ಯವಸ್ಥೆ ಇರಲಿದೆ. ಅಲ್ಲದೇ ಪ್ಯಾಲೆಸ್ ನಿಂದ ಭೋಜನ ವ್ಯವಸ್ಥೆ ಕೂಡ ಇರುತ್ತದೆ.
ಬಕಿಂಗ್ ಹ್ಯಾಮ್ ಪ್ಯಾಲೇಸ್ ಸೇರಿದಂತೆ ರಾಣಿ ಉಳಿದುಕೊಳ್ಳುವ ಅರಮನೆಗಳಲ್ಲಿ ಕೆಲಸದ ಜೊತೆಗೆ ವಾರ್ಷಿಕ 33 ರಜೆ ಸೌಲಭ್ಯ ಇರುತ್ತದೆ. ಕೆಲಸಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಗ್ಲೀಷ್ ಹಾಗೂ ಗಣಿತದ ಜ್ಞಾನ ಹೊಂದಿರಬೇಕು ಮತ್ತು ಮನೆಗೆಲಸದಲ್ಲಿ ಅರ್ಹತೆ ಹೊಂದಿರಬೇಕು ಎಂದು ಹೇಳಲಾಗಿದೆ.
UK royal family is looking for a housekeeping assistant to manage the interiors among other things at Windsor Castle and is offering £19,140.09 starting salary.
30-08-25 04:51 pm
Bangalore Correspondent
Kalaburagi ACP, Arrest: ರಿಯಲ್ ಎಸ್ಟೇಟ್ ಉದ್ಯಮಿಗ...
29-08-25 10:51 pm
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
30-08-25 06:44 pm
HK News Desk
Siddaramaiah, 1991 Election: 1991ರ ಚುನಾವಣೆಯಲ್...
29-08-25 05:20 pm
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
30-08-25 04:23 pm
Mangalore Correspondent
Golden Era of AI Business: YatiCorp Offers As...
30-08-25 04:11 pm
ಕೊಲ್ಲೂರಿಗೆ ಬಂದು ನದಿಗೆ ಸ್ನಾನಕ್ಕಿಳಿದಿದ್ದ ಬೆಂಗಳೂ...
30-08-25 12:55 pm
Mangalore Talapady, Speaker Khader Orders Pro...
30-08-25 11:55 am
Mangalore NSUI, FIR: ಗಣೇಶೋತ್ಸವಕ್ಕೆ ಕಾಂಗ್ರೆಸ್...
29-08-25 10:54 pm
30-08-25 03:22 pm
Mangalore Correspondent
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm