ಪುಲ್ವಾಮದಲ್ಲಿ ಎನ್ಕೌಂಟರ್ ; ಓರ್ವ ಉಗ್ರನ ಹತ್ಯೆ, ಇಬ್ಬರು ವಶಕ್ಕೆ

06-11-20 12:02 pm       Headline Karnataka News Network   ದೇಶ - ವಿದೇಶ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆ ಪಾಂಪೋರ್'ನಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಿದೆ.

ಪುಲ್ವಾಮ, ನವೆಂಬರ್ 06: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಪಾಂಪೋರ್' ಎಂಬಲ್ಲಿ ಭಾರತೀಯ ಸೇನಾಪಡೆಯ ಕಾರ್ಯಾಚರಣೆಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ. 

ದಕ್ಷಿಣ ಕಾಶ್ಮೀರದ ಪಾಂಪೋರ್'ನ ಲಾಲ್ಪೊರಾ ಎಂಬ ಗ್ರಾಮದಲ್ಲಿ ಉಗ್ರರು ಅಡಗಿ ಕುಳಿತಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಉಗ್ರರು ಭದ್ರತಾ ಪಡೆಗಳ ಮೇಲೆ ಪ್ರತಿದಾಳಿ ನಡೆಸಿದ್ದವು. ಇಂದು ಬೆಳಿಗ್ಗೆ ಕೂಡ ಕಾರ್ಯಾಚರಣೆ ಮುಂದವರೆದಿತ್ತು. ಈ ವೇಳೆ ಇಬ್ಬರು ಉಗ್ರರು ಗಾಯಗೊಂಡು ಭದ್ರತಾ ಪಡೆಗಳ ವಶವಾಗಿದ್ದು ಒಬ್ಬಾತ ಹತನಾಗಿದ್ದಾನೆ. 

ಇತರೇ ಉಗ್ರರು ತಪ್ಪಿಸಿಕೊಳ್ಳಲು ಯತ್ನಿಸಿದ್ದು ಪ್ರಸ್ತುತ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

At least one unidentified terrorist was killed during an ongoing encounter with security forces in Jammu and Kashmir on Friday.