ಬ್ರೇಕಿಂಗ್ ನ್ಯೂಸ್
08-01-21 05:12 pm Headline Karnataka News Network ದೇಶ - ವಿದೇಶ
ದುಬೈ, ಜ.8 : ಕುಂದಾಪುರ ಮೂಲದ ದುಬೈ ಉದ್ಯಮಿ, ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್ ಮಾಲೀಕ ವಕ್ವಾಡಿ ಪ್ರವೀಣ್ ಶೆಟ್ಟಿ ಅವರಿಗೆ ದುಬೈನಲ್ಲಿ ಕೊರೊನಾ ಸಂದರ್ಭದಲ್ಲಿ ಸಲ್ಲಿಸಿರುವ ಅಪೂರ್ವ ಸೇವೆಗಾಗಿ ಅಲ್ಲಿನ ಸರಕಾರ ಹತ್ತು ವರ್ಷಗಳ ಅವಧಿಗೆ ಗೋಲ್ಡನ್ ವೀಸಾ ನೀಡಿ ಗೌರವಿಸಿದೆ.

ದುಬೈನಲ್ಲಿ ಫಾರ್ಚೂನ್ ಸಮೂಹದ ಏಳು ಹೊಟೇಲ್ ಗಳು ಕಾರ್ಯಾಚರಿಸುತ್ತಿದೆ. ಈ ನಡುವೆ, ಕಳೆದ ಅಕ್ಟೋಬರ್ ತಿಂಗಳಲ್ಲಿ ಮತ್ತೊಂದು ಫೋರ್ ಸ್ಟಾರ್ ಹೊಟೇಲ್ ಒಂದನ್ನು ಆರಂಭಿಸಲಾಗಿದೆ. ಈ ಹೊಟೇಲಿಗೆ ದುಬೈ ಸರಕಾರದ ಟೂರಿಸಂ ಇಲಾಖೆಯ (ಡೈರೆಕ್ಟರ್ ಜರ್ನಲ್ ಆಫ್ ಡಿಟಿಸಿಎಂ) ಡಿಜಿಎಂ ಹೆಲಾಲ್ ಸಯೀದ್ ಅಲ್ ಮರ್ರಿ ಭೇಟಿ ನೀಡಿದ್ದು, ಹೊಟೇಲ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಭಾರತೀಯ ಮೂಲದವರ ಸ್ಟಾರ್ ಹೊಟೇಲ್ ಗಳಿಗೆ ಅಲ್ಲಿನ ಶೇಖ್ ಗಳು ಭೇಟಿಗೆ ಬರುವುದಿಲ್ಲ. ಆದರೆ, ಕೊರೊನಾ ಬಿಕ್ಕಟ್ಟಿನ ಮಧ್ಯೆ ಸ್ಟಾರ್ ಹೊಟೇಲ್ ಆರಂಭಿಸಿ, ಸಾವಿರಾರು ಜನರಿಗೆ ಉದ್ಯೋಗ ನೀಡಿದ ವಿಚಾರದಲ್ಲಿ ಅಲ್ಲಿನ ಸರಕಾರದಿಂದ ಮೆಚ್ಚುಗೆ ವ್ಯಕ್ತವಾಗಿದೆ.


ಇದಕ್ಕಾಗಿ ಹೊಟೇಲಿಗೆ ಆಗಮಿಸಿ, ಎಲ್ಲ ವ್ಯವಸ್ಥೆಗಳನ್ನು ನೋಡಿದ್ದಲ್ಲದೆ, ಮಾಲೀಕ ಪ್ರವೀಣ್ ಶೆಟ್ಟಿ ಅವರಿಗೆ ಅಪೂರ್ವ ಉಡುಗೊರೆ ನೀಡಿದ್ದಾರೆ.

ಕೊರೊನಾದಂತಹ ಸವಾಲಿನ ನಡುವೆಯೇ ಇಂತಹದ್ದೊಂದು ಭವ್ಯವಾದ ಹೊಟೇಲ್ ನಿರ್ಮಾಣ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಯೀದ್ ಅಲ್ ಮರ್ರಿ, ದುಬೈಯಲ್ಲಿ ಯಾವುದೇ ಸಹಕಾರ ಬೇಕಾದರೂ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಇದರ ಜೊತೆಗೆ ಫಾರ್ಚೂನ್ ಗ್ರೂಪ್ ಸಂಸ್ಥೆಯ ಪ್ರತಿಯೊಬ್ಬರಿಗೂ ಉಚಿತ ಕೋವಿಡ್ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಅವರ ಸಹಕಾರಕ್ಕೆ ಆಭಾರಿಯಾಗಿದ್ದೇವೆ ಎಂಬುದಾಗಿ ದುಬೈನಲ್ಲಿರುವ ಫಾರ್ಚೂನ್ ಫ್ಲಾಜಾ ಹೊಟೇಲ್ ಮ್ಯಾನೇಜರ್ ಹರೀಶ್ ಶೆಟ್ಟಿ 'ಹೆಡ್ ಲೈನ್ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.
NRI entrepreneur Praveen Kumar Shetty of Fortune Groups of hotel receives 10-year golden visa from Dubai govt by his Excellency Helal Saeed Al Marri the Director-General of DTCM, Dubai
30-04-26 08:16 pm
HK News Staffer
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
29-04-26 11:18 pm
HK News Staffer
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
30-04-26 04:30 pm
HK News Staffer
ಪ್ರೀ ವೆಡ್ಡಿಂಗ್ ಶೂಟ್ ಗೆ ವಧುವನ್ನು ಕರೆತರಲು ಹೋಗುತ...
30-04-26 12:31 pm
ರಾಜ್ಯದಲ್ಲಿ ನಕಲಿ ಪಿಎಚ್ಡಿ ಬಾಂಬ್; 400ಕ್ಕೂ ಹೆಚ್ಚ...
30-04-26 10:45 am
ವಾಹನ ಪಾರ್ಕ್ ಮಾಡುವಾಗ ವಿದ್ಯುತ್ ವೈರ್ ಬಿದ್ದು 17...
30-04-26 10:14 am
ಗಾಂಜಾ ಪ್ರಕರಣದಲ್ಲಿ ಹಣ ಕೇಳಿದ್ದಕ್ಕೆ ಬಿಎಸ್ಸಿ ವಿದ...
29-04-26 11:10 pm