ಬ್ರೇಕಿಂಗ್ ನ್ಯೂಸ್
10-02-21 05:08 pm Headline Karnataka News Network ದೇಶ - ವಿದೇಶ
ನವದೆಹಲಿ, ಫೆ.10: ಸಾಮಾನ್ಯವಾಗಿ ಯುವತಿಯರು ಮದುವೆಯಾಗಲು 18 ವರ್ಷ ಪೂರ್ತಿಯಾಗಿರಬೇಕು ಎಂಬ ಕಾನೂನಿದೆ. ಆದರೆ, ಮುಸ್ಲಿಂ ಯುವತಿಯರು 18 ವರ್ಷ ಆಗದೇ ಇದ್ದರೂ, ತನ್ನಿಚ್ಛೆ ಬಂದವನನ್ನು ವರಿಸಬಹುದಂತೆ. ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಪ್ರಕಾರ, ಪ್ರೌಢಾವಸ್ಥೆಗೆ ಬರುವ ಯುವತಿಯರು ತನ್ನ ವರನನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಹೊಂದಿದ್ದಾಳೆ ಎಂಬ ವಾದವನ್ನು ಪಂಜಾಬ್ ಮತ್ತು ಹರ್ಯಾಣದ ಹೈಕೋರ್ಟ್ ಪುರಸ್ಕರಿಸಿದೆ.
ಮುಸ್ಲಿಮರ ಮದುವೆ ಮತ್ತು ಆ ಕುರಿತು ವಿವಿಧ ನ್ಯಾಯಾಲಯಗಳು ನೀಡಿರುವ ತೀರ್ಪಿನ ಆಧಾರದಲ್ಲಿ ಪಂಜಾಬ್ ಹೈಕೋರ್ಟ್ ಈ ತೀರ್ಪು ನೀಡಿದ್ದು, ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಪ್ರಕಾರ 15 ವರ್ಷದಲ್ಲಿ ಯುವತಿ ಪ್ರೌಢಾವಸ್ಥೆಗೆ ಬಂದಿದ್ದರೆ ಆಕೆ ತನ್ನ ವರನನ್ನು ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯ ಹೊಂದಿರುತ್ತಾಳೆ ಎಂದಿದೆ.
ಸರ್ ದಿನ್ ಶಾ ಫರ್ದುಂಜಿ ಮುಲ್ಲಾ ಎಂಬವರು ಬರೆದಿರುವ ಪ್ರಿನ್ಸಿಪಲ್ಸ್ ಆಫ್ ಮಹಮ್ಮಡನ್ ಲಾ ಎನ್ನುವ ಪುಸ್ತಕದಲ್ಲಿ 195ನೇ ಆರ್ಟಿಕಲ್ ಪ್ರಕಾರ, ಪ್ರೌಢಾವಸ್ಥೆಗೆ ಬರುವ ಯಾವುದೇ ಮುಸ್ಲಿಂ ವ್ಯಕ್ತಿ ತನ್ನ ವರ ಅಥವಾ ವಧುವನ್ನು ಆರಿಸಿಕೊಳ್ಳಲು ಸ್ವಾತಂತ್ರ್ಯ ಹೊಂದಿರುತ್ತಾನೆ. ತನ್ನ ಹೆತ್ತವರ ವಿರೋಧ ಇದ್ದರೂ, ಪ್ರೌಢಾವಸ್ಥೆಗೆ ಬಂದಿರುವ ವ್ಯಕ್ತಿಗೆ ಈ ಬಗ್ಗೆ ನಿರ್ಧರಿಸಲು ಹಕ್ಕು ಇರುತ್ತದೆ. ಪ್ರೌಢಾವಸ್ಥೆಗೆ ನಿಶ್ಚಿತ ವಯಸ್ಸು ಎಂಬುದನ್ನು ಹೇಳಲಾಗದಿದ್ದರೂ, 15 ವರ್ಷದಲ್ಲಿ ಸಾಮಾನ್ಯರು ಪ್ರೌಢರಾಗುತ್ತಾರೆ ಎಂದು ಪುಸ್ತಕದಲ್ಲಿ ಹೇಳಿರುವುದಾಗಿ ಕೋರ್ಟ್ ಉಲ್ಲೇಖ ಮಾಡಿದೆ.
ಇತ್ತೀಚೆಗೆ ಮದುವೆಯಾಗಿದ್ದ ಪಂಜಾಬಿನ ಮುಸ್ಲಿಂ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಜಸ್ಟಿಸ್ ಅಲ್ಕಾ ಸರೀನ್, ಮುಸ್ಲಿಂ ಲಾ ಬೋರ್ಡ್ ಪ್ರಕಾರ ತೀರ್ಪು ನೀಡಿದ್ದಾರೆ. 36 ವರ್ಷದ ಪುರುಷ ಮತ್ತು 17 ವರ್ಷದ ಯುವತಿ ಕಳೆದ ಜನವರಿ 21ರಂದು ಹೆತ್ತವರ ವಿರೋಧದ ಮಧ್ಯೆ ಮದುವೆಯಾಗಿದ್ದರು. ಆಬಳಿಕ ತಮಗೆ ರಕ್ಷಣೆ ನೀಡುವಂತೆ ದಂಪತಿ ಕೋರ್ಟಿಗೆ ಮನವಿ ಮಾಡಿದ್ದರು. ಮುಸ್ಲಿಂ ಪರ್ಸನಲ್ ಲಾ ಪ್ರಕಾರ, ಪ್ರೌಢನಾಗಿರುವ ಮುಸ್ಲಿಂ ಯುವತಿ ಅಥವಾ ಯುವಕ ಹೆತ್ತವರ ವಿರೋಧ ಇದ್ದರೂ, ಯಾರನ್ನು ಬೇಕಾದ್ರೂ ಮದುವೆಯಾಗಲು ಅವಕಾಶ ಇದೆ ಎಂದು ದಂಪತಿ ಪರವಾಗಿ ವಾದಿಸಿದ್ದರು. ಅಲ್ಲದೆ, ಮಕ್ಕಳ ಮದುವೆ ಬಗ್ಗೆ ವಿರೋಧ ಇದ್ದರೂ, ಅವರ ಹಕ್ಕನ್ನು ನಿರಾಕರಿಸುವಂತಿಲ್ಲ ಎಂದು ಹೇಳಿದ್ದರು.
ಭಾರತೀಯ ಸಂವಿಧಾನಕ್ಕೆ ವಿರುದ್ಧ !
ಈ ರೀತಿಯ ತೀರ್ಪು ಮಾತ್ರ ಭಾರತೀಯ ಸಮಾಜದಲ್ಲಿ ವೈರುಧ್ಯಕ್ಕೆ ಕಾರಣವಾಗುವ ಸಾಧ್ಯತೆಯಿದೆ. 18 ವರ್ಷದ ಒಳಗಿನವರನ್ನು ಮದುವೆಯಾಗುವುದು ಭಾರತೀಯ ಕಾನೂನು ಪ್ರಕಾರ ತಪ್ಪು. ಭಾರತದ ಸಂವಿಧಾನದಡಿ ಹಕ್ಕುಗಳನ್ನು ಅನುಭವಿಸುವ ನಾಗರಿಕರು, ಅದೇ ಕಾನೂನು ಪಾಲನೆ ಮಾಡಬೇಕಲ್ಲದೆ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಪ್ರಕಾರ ನಡೆದುಕೊಳ್ಳುವಂತಿಲ್ಲ. ಅಪ್ರಾಪ್ತರನ್ನು ಮದುವೆಯಾಗುವುದು, ಅವರ ಜೊತೆ ಸಂಸಾರ ನಡೆಸುವುದು, ಅವರನ್ನು ತಮ್ಮ ಕಾಮತೃಷೆಗೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಹಾಗಿದ್ದರೂ, ಮೇಲಿನ ಪ್ರಕರಣದಲ್ಲಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಕಾನೂನಿನ ಪ್ರಕಾರ ಕೋರ್ಟ್ ತೀರ್ಪು ನೀಡಿದೆ.
The Punjab and Haryana High Court has ruled that a Muslim girl below 18 years of age and has attained puberty is at liberty to marry anyone as per Muslim Personal Law. The decision came after the High court relied on literature of Muslims marriages and judgements of various courts.
03-09-25 01:36 pm
HK News Desk
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
Sowjanya Case, Dharmasthala: ಸೌಜನ್ಯಾ ಪ್ರಕರಣ ;...
02-09-25 08:37 pm
ಮಕ್ಕಳ ಕಳ್ಳರು ಹೀಗೂ ಮಾಡುತ್ತಾರೆ..! ಶಾಲಾ ವಾಹನ ಎಂದ...
02-09-25 08:00 pm
Ranya Rao: ಚಿನ್ನ ಸ್ಮಗ್ಲರ್ ರನ್ಯಾ ರಾವ್ ಗೆ ಮತ್ತೆ...
02-09-25 06:22 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
03-09-25 11:53 am
HK News Desk
ಧರ್ಮಸ್ಥಳ ಪ್ರಕರಣ ಮತ್ತೆ ತಿರುವು ; ಹತ್ಯೆಗೀಡಾದವರ ಸ...
02-09-25 10:26 pm
Mangalore Mukka Accident: ಮುಕ್ಕ ಜಂಕ್ಷನ್ನಲ್ಲಿ...
02-09-25 04:44 pm
Bribe Puttur, Tahsildar Absconding, Lokayukta...
02-09-25 02:17 pm
ಮಗನಿಗೆ ಇಲ್ಲ ಉದ್ಯೋಗ ; ಮುಂಬೈನಿಂದ ಉಡುಪಿಗೆ ಬಂದು ಆ...
02-09-25 01:05 pm
02-09-25 07:09 pm
Mangalore Correspondent
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm