ಬ್ರೇಕಿಂಗ್ ನ್ಯೂಸ್
11-02-21 10:43 am Headline Karnataka News Network ದೇಶ - ವಿದೇಶ
ಸಿಡ್ನಿ, ಫೆ.11: ರಿಕ್ಟರ್ ಮಾಪಕದಲ್ಲಿ 7.7ರಷ್ಟು ತೀವ್ರತೆ ಹೊಂದಿದ್ದ ಭೀಕರ ಭೂಕಂಪ ದಕ್ಷಿಣ ಫೆಸಿಫಿಕ್‌ನಲ್ಲಿ ಗುರುವಾರ ಸಂಭವಿಸಿದ್ದು, ಈ ಪ್ರದೇಶದ ದ್ವೀಪ ರಾಷ್ಟ್ರಗಳಿಗೆ ಸುನಾಮಿ ಭೀತಿ ಎದುರಾಗಿದೆ.
ಗುರುವಾರ ಮಧ್ಯರಾತ್ರಿ ವೇಳೆ (ಸ್ಥಳೀಯ ಕಾಲಮಾನದ ಪ್ರಕಾರ ಬುಧವಾರ ಮಧ್ಯಾಹ್ನ 13.20ಕ್ಕೆ) ನ್ಯೂ ಕಲೆಡೋನಿಯಾದಿಂದ 415 ಕಿಲೋಮೀಟರ್ ಪೂರ್ವದಲ್ಲಿ 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ.
ಅಮೆರಿಕ ಸರ್ಕಾರದ ಎನ್‌ಡಬ್ಲ್ಯುಎಸ್ ಪೆಸಿಫಿಕ್ ಸುನಾಮಿ ಮುನ್ನೆಚ್ಚರಿಕೆ ಕೇಂದ್ರ, "ಅಪಾಯಕಾರಿ ಸುನಾಮಿ ಅಲೆಗಳು ಕಡಲ ತೀರವನ್ನು ಅಪ್ಪಳಿಸಲಿವೆ" ಎಂದು ಎಚ್ಚರಿಕೆ ನೀಡಿದೆ.
ಫ್ಯುಜಿ, ನ್ಯೂಝಿಲೆಂಡ್ ಮತ್ತು ವನೂತು ಪ್ರದೇಶಗಳಲ್ಲಿ ಸಾಮಾನ್ಯ ತೆರೆ ಮಟ್ಟಕ್ಕಿಂತ 0.3 ಮೀಟರ್‌ನಿಂದ ಒಂದು ಮೀಟರ್ ಅಧಿಕ ಎತ್ತರದ ಅಲೆಗಳು ಅಪ್ಪಳಿಸಲಿವೆ ಎಂದು ಅಂದಾಜಿಸಿದೆ. ದ್ವೀಪರಾಷ್ಟ್ರ ಫ್ಯುಜಿಯ ಭೂಕಂಪ ಮಾಪನ ಇಲಾಖೆಯ ಟ್ವೀಟ್ ಪ್ರಕಾರ, ದೇಶಕ್ಕೆ 0.3 ಮೀಟರ್‌ಗಳ ಸುನಾಮಿ ಅಲೆಗಳು ಅಪ್ಪಳಿಸಿವೆ.
ಸುನಾಮಿ ಸೃಷ್ಟಿಯಾಗಿರುವುದನ್ನು ಆಸ್ಟ್ರೇಲಿಯನ್ ಬ್ಯೂರೊ ಆಫ್ ಮೆಟ್ರಾಲಜಿ ದೃಢಪಡಿಸಿದೆ. ಆಸ್ಟ್ರೇಲಿಯಾದಿಂದ 550 ಕಿಲೋಮೀಟರ್ ಪೂರ್ವಕ್ಕೆ ಇರುವ ಲಾರ್ಡ್ ಹೋವ್ ದ್ವೀಪದ ಮೇಲೆ ಸುನಾಮಿ ಅಪ್ಪಳಿಸಲಿದೆ ಎಂದು ಎಚ್ಚರಿಕೆ ನೀಡಿದೆ. ನ್ಯೂಝಿಲೆಂಡ್‌ನ ರಾಷ್ಟ್ರೀಯ ತುರ್ತು ನಿರ್ವಹಣೆ ಏಜೆನ್ಸಿ ಕೂಡಾ, ಕಡಲ ತೀರದ ಜನ ಸುರಕ್ಷಿತ ತಾಣಗಳಿಗೆ ಹೋಗುವಂತೆ ಸಲಹೆ ಮಾಡಿದೆ.
7.7-magnitude earthquake struck in the South Pacific on Thursday, generating a small tsunami that caused no damage to island nations in the region before authorities gave the all clear.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm