ಬ್ರೇಕಿಂಗ್ ನ್ಯೂಸ್
05-03-21 11:59 am Headline Karnataka News Network ದೇಶ - ವಿದೇಶ
ವಾಷಿಂಗ್ಟನ್,ಮಾ.05: ‘ಭಾರತೀಯ ಮೂಲದ ಅಮೆರಿಕನ್ನರು ಆಡಳಿತದ ಹುದ್ದೆಗಳನ್ನು ಅಲಂಕರಿಸಿ ಅಮೆರಿಕವನ್ನು ಮುನ್ನಡೆಸುತ್ತಿದ್ದಾರೆ’ ಎಂದು ಅಮೆರಿಕದ 46ನೇ ಅಧ್ಯಕ್ಷ ಜೋ ಬೈಡೆನ್ ಹರ್ಷ ವ್ಯಕ್ತಪಡಿಸಿದ್ದಾರೆ.
ಅಧ್ಯಕ್ಷರಾಗಿ ನಿಯುಕ್ತಿಗೊಂಡ 50 ದಿನಗಳಲ್ಲಿ 55 ಭಾರತೀಯ ಮೂಲದ ಅಮೆರಿಕನ್ ಪ್ರಜೆಗಳನ್ನು ಮಹತ್ವದ ಸ್ಥಾನಗಳಿಗೆ ನೇಮಿಸಿರುವ ಜೋ ಬೈಡೆನ್, ಭಾರತೀಯ ಮೂಲದ ಪ್ರಜೆಗಳು ಅಮೆರಿಕದ ಬೆಳವಣಿಗೆಯಲ್ಲಿ ಪಾಲ್ಗೊಳ್ಳುತ್ತಿರುವ ಪಾತ್ರದ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಮಂಗಳನ ಅಂಗಳಕ್ಕೆ ಪಾದಾರ್ಪಣೆ ಮಾಡಿರುವ ನಾಸಾ ಸಂಸ್ಥೆಯ ರೋವರ್ ನೌಕೆಯ ಬೆನ್ನೆಲುಬಾಗಿ ಭಾರತ ಮೂಲದ ಡಾ.ಸ್ವಾತಿ ಮೋಹನ್ ಈ ಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಕುರಿತು ನಾಸಾದ ತಂತ್ರಜ್ಞಾನಿಗಳ ಜತೆ ವರ್ಚುವಲ್ ಸಂವಾದ ನಡೆಸಿದ ಅವರು, ಭಾರತೀಯ ಮೂಲದವರನ್ನು ಶ್ಲಾಘಿಸಿದ್ದಾರೆ. ಅಲ್ಲದೇ, ಭಾರತೀಯ ಮೂಲದ ಅಮೆರಿಕನ್ನರು ದೇಶದ ಆಡಳಿತ ವ್ಯವಸ್ಥೆಯಲ್ಲಿ ಅಮೆರಿಕನ್ನರನ್ನು ಸಹ ಮೀರಿಸುತ್ತಿದ್ದಾರೆ’ ಎಂಬ ಅಭಿಪ್ರಾಯ ವ್ಯಪ್ತಪಡಿಸಿದ್ದಾರೆ.

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಅತಿದೊಡ್ಡ ಹಾಗೂ ಅತ್ಯಾಧುನಿಕ ವಾಹನ ‘ಪರ್ಸೆವೆರೆನ್ಸ್ ರೋವರ್’ ಮಂಗಳ ಗ್ರಹವನ್ನು ಸ್ಪರ್ಶಿಸಿದಾಗ ಆ ವಿವರವನ್ನು ಮೊದಲು ಖಚಿತಪಡಿಸಿದ್ದು ಭಾರತೀಯ ಮೂಲದ ವಿಜ್ಞಾನಿ ಡಾ. ಸ್ವಾತಿ ಮೋಹನ್. ಏಳು ತಿಂಗಳ ಬಾಹ್ಯಾಕಾಶ ಯಾನದ ಬಳಿಕ, ಗುರುವಾರ ಮಂಗಳನಲ್ಲಿಗೆ ನೌಕೆ ಕಾಲಿರಿಸಿದಾಗ ‘ರೋವರ್ ಮಂಗಳ ಗ್ರಹಕ್ಕೆ ತಲುಪಿದೆ. ಪ್ರಾಚೀನ ಜೀವಗಳ ಕುರುಹನ್ನು ಹುಡುಕಲು ತಯಾರಾಗಿದೆ’ ಎಂದು ವಿವರಣೆ ನೀಡಿದ್ದರು ಅವರು.
ಅತಿ ಕಠಿಣ ಎನಿಸಿಕೊಂಡಿರುವ ಮಂಗಳಯಾನವನ್ನು ಯಶಸ್ವಿಯಾಗಿಸಿದ ನಾಸಾ ವಿಜ್ಞಾನಿಗಳ ತಂಡದಲ್ಲಿದ್ದ ಭಾರತೀಯ ಮೂಲದ ಸದಸ್ಯೆ ಇವರು. ರೋವರ್ನ ಆ್ಯಟಿಟ್ಯೂಡ್ ಕಂಟ್ರೋಲ್ ಹಾಗೂ ಲ್ಯಾಂಡಿಂಗ್ ಸಿಸ್ಟಮ್ನ ಅಭಿವೃದ್ಧಿಯಲ್ಲಿ ಮುಂಚೂಣಿಯ ಪಾತ್ರ ವಹಿಸಿ, ನೌಕೆ ಮಂಗಳ ಗ್ರಹ ಸ್ಪರ್ಶಿಸುತ್ತಿದ್ದಂತೆ ಅದರ ವಿವರಣೆಯನ್ನು ನೀಡಿದ್ದರು.

ಕಾರ್ನೆಲ್ ಯುನಿವರ್ಸಿಟಿಯಲ್ಲಿ ಪದವಿ ಪಡೆದ ಡಾ. ಸ್ವಾತಿ, ಪರ್ಸೆವೆರೆನ್ಸ್ ಮಾರ್ಸ್ ಮಿಷನ್ನಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ನಾಸಾದ ಇತರ ಯೋಜನೆಗಳಲ್ಲಿಯೂ ಸ್ವಾತಿ ಪಾಲ್ಗೊಂಡಿದ್ದರು. ಶನಿ ಗ್ರಹಕ್ಕೆ ಬಾಹ್ಯಾಕಾಶ ಯಾನ ಕೈಗೊಂಡ ನಾಸಾದ ಕ್ಯಾಸ್ಸಿನಿ ಮಿಷನ್ ತಂಡದಲ್ಲೂ ಅವರು ಕಾರ್ಯನಿರ್ವಹಿಸಿದ್ದರು.
ಡಾ. ಸ್ವಾತಿ ಮೋಹನ್ ಬಾಲ್ಯದಲ್ಲೇ ಭಾರತದಿಂದ ಆಮೆರಿಕಾಕ್ಕೆ ತೆರಳಿದ್ದರು. ಅಮೆರಿಕಾದ ಉತ್ತರ ವರ್ಜೀನಿಯಾ-ವಾಷಿಂಗ್ಟನ್ ಡಿಸಿಯಲ್ಲಿ ಅವರು ತಮ್ಮ ಬಾಲ್ಯದ ದಿನಗಳನ್ನು ಕಳೆದರು. ತಮ್ಮ 9ನೇ ವಯಸ್ಸಿನಲ್ಲಿ ನೋಡಿದ ಅಮೆರಿಕಾದ ಸೈನ್ಸ್ ಫಿಕ್ಷನ್ ಸರಣಿ ‘ಸ್ಟಾರ್ ಟ್ರೆಕ್’ ಮೂಲಕ ವಿಜ್ಞಾನ, ಬಾಹ್ಯಾಕಾಶದ ಬಗ್ಗೆ ಆಸಕ್ತಿ ಮೂಡಿಸಿಕೊಂಡರು. ತಮ್ಮ 16ನೇ ವಯಸ್ಸಿನವರೆಗೆ ಶಿಶುವೈದ್ಯೆ ಆಗಬೇಕು ಅಂದುಕೊಂಡಿದ್ದ ಸ್ವಾತಿ ಮೋಹನ್, ಬಳಿಕ ಇಂಜಿನಿಯರ್ ಆಗಿ ಬಾಹ್ಯಾಕಾಶ ವಿಷಯದಲ್ಲಿ ಕೆಲಸ ಮಾಡಬೇಕು ಎಂದು ಆಸಕ್ತಿ ತೋರಿದರು.
Indian-Americans are taking over the country, US President Joe Biden said on Thursday, referring to the high number of people from the community getting a place in his administration.
04-12-25 05:36 pm
HK News Desk
Bagalakote Accident, Four Killed: ಬಾಗಲಕೋಟೆ ;...
03-12-25 03:01 pm
ಜೈಷ್-ಇ-ಮೊಹಮ್ಮದ್ ಹೆಸರಲ್ಲಿ ಬೆಂಗಳೂರು ಏರ್ಪೋರ್ಟ್,...
02-12-25 10:17 pm
ಸಂಪುಟ ಪುನಾರಚನೆಯಾದ್ರೆ ಮುನಿಯಪ್ಪ, ಮಹದೇವಪ್ಪ, ಪರಮೇ...
02-12-25 06:29 pm
ಕೃತಕ ಬುದ್ಧಿಮತ್ತೆ ಎಫೆಕ್ಟ್ ; ಭವಿಷ್ಯದಲ್ಲಿ ಜನರು ಕ...
01-12-25 10:59 pm
04-12-25 05:39 pm
HK News Desk
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
Jawaharlal Nehru, Babri Masjid, Sardar Patel,...
03-12-25 07:14 pm
ಅಮೆರಿಕದ ಡಾಲರ್ ಎದುರು ನೈಂಟಿ ಕ್ರಾಸ್ ಮಾಡಿದ ರೂಪಾಯಿ...
03-12-25 05:32 pm
05-12-25 12:24 pm
Mangalore Correspondent
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
Brother Sajith Joseph Ban, Mangalore Prayer:...
04-12-25 06:39 pm
ಅಜ್ಜನ ಕೈಹಿಡಿದು ಹೆದ್ದಾರಿ ದಾಟಿ ತಿಂಡಿಗೆ ಹೋಗಿದ್ದ...
04-12-25 12:38 pm
04-12-25 11:15 pm
Mangalore Correspondent
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm
ಬೆಂಗಳೂರು ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ; ರಕ್ತಚ...
04-12-25 04:18 pm
ಹೊಸ ವರ್ಷದ ಸಂಭ್ರಮಾಚರಣೆಗೆ ಡ್ರಗ್ಸ್ ಮಾರಾಟ ಮಾಡಲು ಸ...
03-12-25 01:41 pm
ಲೈಂಗಿಕ ಸಮಸ್ಯೆಗಳಿಗೆ ಆಯುರ್ವೇದ ಔಷಧ ನೆಪದಲ್ಲಿ ವಂಚನ...
02-12-25 10:48 pm