ಆಡುತ್ತಾ ಆಡುತ್ತಾ ಸರ್ಕಲ್​ ಇನ್ಸ್​ಪೆಕ್ಟರ್​ ಸಾವು ; ಕ್ಷಣಮಾತ್ರದಲ್ಲಿ ಹಾರಿಹೋದ ಪ್ರಾಣಪಕ್ಷಿ

24-03-21 10:58 am       Headline Karnataka News Network   ದೇಶ - ವಿದೇಶ

ಸರ್ಕಲ್​ ಇನ್ಸ್​ಪೆಕ್ಟರ್​ ಬ್ಯಾಡ್ಮಿಂಟನ್​ ಆಡುತ್ತಿದ್ದಾಗ ಹೃದಯಾಘಾತವಾಗಿ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಆಂಧ್ರಪ್ರದೇಶ,ಮಾ.24: ಸರ್ಕಲ್​ ಇನ್ಸ್​ಪೆಕ್ಟರ್​ ಬ್ಯಾಡ್ಮಿಂಟನ್​ ಆಡುತ್ತಿದ್ದಾಗ ಹೃದಯಾಘಾತವಾಗಿ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಶ್ಚಿಮ ಗೋದಾವರಿ ಜಿಲ್ಲೆಯ ನಿಡಮರು ಭುವನ್‌ಪಲ್ಲಿಯಲ್ಲಿ ನಡೆದಿದೆ.

ಗಣಪವರಂನ ಸಿಐ ದೆಗಲಾ ಪ್ರಸಾದ್ (42) ಮೃತರು. ಇವರು ಎಂದಿನಂತೆ ಕರ್ತವ್ಯ ಮುಗಿಸಿದ ನಂತರ ಭುವನಪಲ್ಲಿಗೆ ಬ್ಯಾಡ್ಮಿಂಟನ್ ಆಡಲು ಹೋಗಿದ್ದಾರೆ. ಈ ವೇಳೆ, ಆಟ ಆಡುತ್ತಿರುವಾಗಲೇ ಹೃದಯಾಘಾತ ಸಂಭವಿಸಿದೆ. ಕುಸಿದುಬಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ಸಿಐಗೆ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇನ್ನು ಪ್ರಸಾದ್​ ಸಾವಿಗೆ ಅನೇಕ ಗಣ್ಯರು, ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.

Circle inspector dies while playing badminton in Andhra Pradesh. The deceased has been identified as been Prasad (42).