ಬ್ರೇಕಿಂಗ್ ನ್ಯೂಸ್
08-08-20 10:05 am Headline Karnataka News Network ನ್ಯೂಸ್ View
ಔರಂಗಾಬಾದ್, ಆಗಸ್ಟ್ 08: ಕೊರೊನಾ ಎಂಬ ಮಾಹಾಮಾರಿ ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿದೆ. ಈ ಮಹಾಮಾರಿ ತಂದಿಟ್ಟ ಸಂಕಷ್ಟದ ಸ್ಥಿತಿ ಜೀವನದ ಪಾಠವನ್ನೂ ಕಲಿಸಿದೆ. ಲಾಕ್ ಡೌನ್ ಸಂದರ್ಭದಲ್ಲಿ ಜೀವನದ ಪ್ರತಿ ಹಂತದಲ್ಲಿ ಸಂಬಂಧಗಳ ಮಹತ್ವವನ್ನು ಮನವರಿಕೆ ಮಾಡಿಸಿದೆ. ಒಡನಾಟವನ್ನು ಹೆಚ್ಚಿಸಿದೆ. ಇನ್ನೊಂದು ಕಡೆ ಕೆಲ ಸಂಬಂಧಗಳ ಮುಖವಾಡವನ್ನೂ ಕಳಚಿಟ್ಟಿದೆ.
ಕೊರೊನಾ ಸೋಂಕು ತಗುಲಿದೆ ಎಂಬ ಕಾರಣಕ್ಕೆ ಕೆಲ ಅನ್ಯೋನ್ಯ ಸಂಬಂಧಗಳೇ ದೂರವಾಗಿದೆ. ಕೊರೊನಾ ಸೋಂಕು ತಗುಲಿದೆ ಎಂಬ ಕಾರಣಕ್ಕೆ ತನ್ನ ಹೆತ್ತ ತಾಯಿಯನ್ನೇ ಮಗನೊಬ್ಬ ಕಾಡಿಗೆ ಬಿಟ್ಟು ಬಂದ ಹೃದಯ ವಿದ್ರಾವಕ ಘಟನೆ ಔರಂಗಾಬಾದ್ ನಲ್ಲಿ ಬೆಳಕಿಗೆ ಬಂದಿದೆ. ಕೊರೊನಾ ಬಂದವರನ್ನು ಸುತ್ತಮುತ್ತಲಿನ ಜನರು ಶತ್ರುಗಳಂತೆ ನೋಡ್ತಿದ್ದಾರೆ .ಈ ಘಟನೆಯಲ್ಲಿ ಮಗನೇ ತನ್ನ ತಾಯಿಯನ್ನು ಶತ್ರುವಂತೆ ನೋಡಿದ್ದಾನೆ.

ಕೊರೊನಾ ಚಿಕಿತ್ಸೆಗೆ ಹೆಚ್ಚು ವೆಚ್ಚವಾಗುತ್ತದೆ ಎನ್ನುವ ಕಾರಣ ನೀಡಿ ಅನೇಕರು ಕೊರೊನಾ ಬಂದಿರುವುದನ್ನೇ ಮುಚ್ಚಿಡುತ್ತಿದ್ದಾರೆ. ಇದೇ ಕಾರಣಕ್ಕೆ ಚಿಕಿತ್ಸೆಗೆ ಹೆಚ್ಚು ವೆಚ್ಚವಾಗುತ್ತದೆ ಎಂದು
ತನ್ನ 90 ವರ್ಷದ ತಾಯಿಗೆ ಕೊರೊನಾ ಎಂಬುದು ಗೊತ್ತಾಗ್ತಿದ್ದಂತೆ ಮಗ ಆಕೆಯನ್ನು ಕಾಡಿನಲ್ಲಿ ಬಿಟ್ಟು ಬಂದಿದ್ದಾನೆ.
ಕಾಡಿನಲ್ಲಿ ವಯೋವೃದ್ಧೆ ಒದ್ದಾಡುತ್ತಿರುವುದು ಕಂಡು ಬಂದಿದೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವೃದ್ಧೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ವೃದ್ಡೆಗೆ ಕೊರೊನಾ ಇರೋ ವಿಷ್ಯ ಗೊತ್ತಾಗ್ತಿದ್ದಂತೆ ಮನೆಯವರು ವೃದ್ಧೆಯನ್ನು ಮನೆಯಲ್ಲಿ ಇಟ್ಟುಕೊಳ್ಳಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾಯಿಯನ್ನು ಬೆಡ್ ಶೀಟ್ ನಲ್ಲಿ ಸುತ್ತಿ ಕಾಡಿನಲ್ಲಿ ಮಗ ಬಿಟ್ಟು ಹೋಗಿರುವುದು ಮನುಷ್ಯನ ಮಾನವೀಯ ಗುಣವನ್ನೇ ಅಣಕಿಸಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವೃದ್ಧೆಯ ಕುಟುಂಬಸ್ಥರ ಹುಡುಕಾಟ ಶುರು ಮಾಡಿದ್ದಾರೆ.
10-12-25 09:40 pm
HK News Desk
ಬೆಂಗಳೂರಿನಲ್ಲಿ ರಸ್ತೆ ಅಪಘಾತ ; ಆರು ತಿಂಗಳ ಹಿಂದಷ್ಟ...
10-12-25 05:37 pm
ಅಧಿಕಾರ ಹಂಚಿಕೆ ಬಗ್ಗೆ ಗೊಂದಲ ; ಯಾರೂ ಆ ಬಗ್ಗೆ ಮಾತನ...
10-12-25 12:58 pm
ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ; ಹೊಟೇಲುಗಳ ಸಂಘ...
09-12-25 08:56 pm
ಶಾಲಾ ಬಸ್ಸಿನಡಿಗೆ ಬಿದ್ದು ಎಂಟು ವರ್ಷದ ಬಾಲಕಿ ದುರಂತ...
09-12-25 08:53 pm
10-12-25 01:17 pm
HK News Desk
ಮಾಜಿ ಸಿಜೆಐ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿ...
09-12-25 11:03 pm
Goa Fire Accident, 23 dead: ಗೋವಾದ ನೈಟ್ಕ್ಲಬ್...
07-12-25 02:04 pm
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
10-12-25 08:45 pm
Mangalore Correspondent
“Board Exams Made Easier: AI Shikshak Breaks...
10-12-25 06:01 pm
Mangalore Accident, Gowjee Events owner Death...
10-12-25 04:00 pm
Mangalore, Builder Encroaches Bejai Canal: ಬಿ...
09-12-25 07:30 pm
ರಿಷಬ್ ಶೆಟ್ಟಿ ತೊಡೆಯ ಮೇಲೆ ಮಲಗಿದ ದೈವ ! ಹರಕೆ ನೇಮದ...
09-12-25 05:21 pm
10-12-25 10:14 pm
Udupi Correspondent
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am
ಗಡಿಭಾಗ ತಲಪಾಡಿಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ; ಎರ...
08-12-25 09:29 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲ ; ಸ...
06-12-25 09:52 pm