ಬ್ರೇಕಿಂಗ್ ನ್ಯೂಸ್
20-12-20 06:06 pm Political News Correspondant ನ್ಯೂಸ್ View
ಬೆಂಗಳೂರು, ಡಿ.20: ರಾಜ್ಯದಲ್ಲಿ ರಾಜಕೀಯ ಧ್ರುವೀಕರಣಕ್ಕೆ ವೇದಿಕೆ ಸಜ್ಜಾಗಿದೆ. ಮೇಲ್ನೋಟಕ್ಕೆ ಬಿಜೆಪಿ - ಜೆಡಿಎಸ್ ವಿಲೀನ ಎಂಬ ವದಂತಿ ಹರಡುತ್ತಿದ್ದರೂ, ಜೆಡಿಎಸ್ ಪಕ್ಷವನ್ನು ಎನ್ ಡಿಎ ಮೈತ್ರಿಕೂಟಕ್ಕೆ ತರಲು ಬಿಜೆಪಿ ಹೈಕಮಾಂಡ್ ತಂತ್ರಗಾರಿಕೆ ನಡೆಸಿದೆ ಅನ್ನುವುದು ಸತ್ಯ. ಕಳೆದ ಹಲವು ದಿನಗಳಿಂದ ಈ ಬಗ್ಗೆ ಊಹಾಪೋಹ ಕೇಳಿಬರುತ್ತಿದ್ದರೂ, ಇಂಥ ಆಫರ್ ಬಂದಿರುವುದು ಸತ್ಯ ಎಂಬುದನ್ನು ಸ್ವತಃ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಈಗ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಬಗ್ಗೆ ಏನೇ ಆಕ್ಷೇಪ, ಕ್ಲೀಷೆಗಳಿದ್ದರೂ, ಅದನ್ನು ಸಂಪೂರ್ಣ ಬದಿಗಿಟ್ಟು ಬಿಜೆಪಿಯಾಗಲೀ, ಕಾಂಗ್ರೆಸ್ ಆಗಲೀ ಏಕಾಂಗಿಯಾಗಿ ಅಧಿಕಾರಕ್ಕೇರುವುದು ಕಷ್ಟ ಎನ್ನುವಂಥ ಸ್ಥಿತಿ ಇದೆ. ಇತ್ತೀಚಿನ ಪ್ರತಿ ಚುನಾವಣೆಗಳಲ್ಲೂ ಜೆಡಿಎಸ್ ಕಿಂಗ್ ಮೇಕರ್ ಆಗಿ ಮೂಡಿಬರುತ್ತಿರುವುದರಿಂದ ಕರ್ನಾಟಕದ ಪಾಲಿಗೆ ಜೆಡಿಎಸ್ ಪ್ರಾಬಲ್ಯವನ್ನು ನಿರಾಕರಿಸುವ ಹಾಗಿಲ್ಲ. ಆದರೆ, ಜೆಡಿಎಸ್ ಪಕ್ಷವನ್ನೇ ಬಿಜೆಪಿಯೊಳಗೆ ತಂದರೆ ಅಥವಾ ಎನ್ ಡಿಎ ಮೈತ್ರಿಕೂಟದೊಳಗೆ ತಂದಲ್ಲಿ ಅಧಿಕಾರ ನಿಶ್ಚಿತ ಎನ್ನುವ ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಇಂಥದ್ದೊಂದು ದಾಳವನ್ನು ಎಸೆದಿದೆ ಎನ್ನಲಾಗುತ್ತಿದೆ.
ಆದರೆ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಸಾಧಾರಣ ಮನುಷ್ಯ ಅಲ್ಲ. ರಾಷ್ಟ್ರೀಯ ಪಕ್ಷದಲ್ಲಿ ವಿಲೀನವಾದರೆ ತಮಗೆ ಸ್ವತಂತ್ರ ಅಸ್ತಿತ್ವವೇ ಇಲ್ಲ ಎನ್ನುವುದನ್ನು ಅರಿಯದವರೂ ಅಲ್ಲ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ, ದೇವೇಗೌಡರು 50 ವರ್ಷಗಳಿಂದ ಪಕ್ಷ ಕಟ್ಟಿಕೊಂಡು ಬಂದಿದ್ದಾರೆ. ಯಾವುದೇ ಸಂದರ್ಭದಲ್ಲೂ ಯಾವುದೇ ರಾಷ್ಟ್ರೀಯ ಪಕ್ಷಗಳ ಜೊತೆಗೆ ವಿಲೀನ ಮಾಡುವ ಪ್ರಸ್ತಾಪ ನಮ್ಮ ಮುಂದಿಲ್ಲ. ಹಾಗೆಂದು ಭವಿಷ್ಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದನ್ನು ನಿರಾಕರಿಸುವುದಿಲ್ಲ ಎನ್ನುವ ಮೂಲಕ ಚುನಾವಣಾ ಪೂರ್ವ ಮೈತ್ರಿ ಸಾಧ್ಯತೆಯ ಸುಳಿವು ನೀಡಿದ್ದಾರೆ.
ಬಿಜೆಪಿಗೆ ಮೈತ್ರಿ ಅಗತ್ಯವೇನು ?
ಸದ್ಯಕ್ಕೆ ಕರ್ನಾಟಕದ ಬಿಜೆಪಿ ಪಾಲಿಗೆ ಯಡಿಯೂರಪ್ಪ ಒಬ್ಬರೇ ನಾಯಕರು. ಯಡಿಯೂರಪ್ಪ ಹೊರತುಪಡಿಸಿ ಸರಿಸಮಾನ ನಾಯಕರು ಪಕ್ಷದಲ್ಲಿ ಇಲ್ಲ. ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಇಲ್ಲದೆ ಬಿಜೆಪಿ ಎಷ್ಟು ಸ್ಥಾನ ಪಡೆಯಬಹುದು ಎಂಬ ಆತಂಕವೂ ಇದೆ. ಇನ್ನೊಂದ್ಕಡೆ, ವಯಸ್ಸಿನ ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಇಳಿಸಲೇಬೇಕಾದ ಅನಿವಾರ್ಯತೆಯಲ್ಲಿ ಹೈಕಮಾಂಡ್ ಇದೆ. ಆದರೆ, ಯಡಿಯೂರಪ್ಪ ಅವರನ್ನು ಇಳಿಸುವುದು ಮಾತ್ರ ಸಾಧ್ಯವಾಗುತ್ತಿಲ್ಲ. ಈ ನಡುವೆ, ಕಳೆದ ತಿಂಗಳು ಸಿಎಂ ಬದಲಾವಣೆಯ ವಿಚಾರ ಬಂದಾಗ ಯಡಿಯೂರಪ್ಪ ರಾಜಕೀಯ ನಡೆ ಉರುಳಿಸಿದ್ದರು. ಕುಮಾರಸ್ವಾಮಿ ಜೊತೆಗೆ ಹತ್ತಿರವಾಗಿರುವುದನ್ನು ಬಹಿರಂಗವಾಗಿ ತೋರಿಸುವ ಮೂಲಕ ಅಧಿಕಾರದಿಂದ ಕೆಳಗಿಳಿಸಿದರೆ, ಜೆಡಿಎಸ್ ಬೆಂಬಲ ಪಡೆಯಲು ಹಿಂದೆ ಮುಂದೆ ನೋಡಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದ್ದರು. ಆಬಳಿಕ ಕುಮಾರಸ್ವಾಮಿಯೂ ಬಿಜೆಪಿ ಬಗ್ಗೆ ಮೃದು ಧೋರಣೆ ತಳೆದಿದ್ದು, ಯಡಿಯೂರಪ್ಪ ಜೊತೆಗೆ ಹೊಂದಾಣಿಕೆ ಇರುವಂತೆ ತೋರಿಸಿಕೊಂಡಿದ್ದರು. ಪರಿಷತ್ತಿನ ಜಟಾಪಟಿ ಬಳಿಕವಂತೂ ಇವರೊಳಗಿನ ಮೈತ್ರಿ ಸ್ಪಷ್ಟವಾಗಿತ್ತು.
ಇವೆಲ್ಲವನ್ನು ದೂರದಿಂದಲೇ ಗಮನಿಸಿದ ಬಿಜೆಪಿ ಹೈಕಮಾಂಡ್, ಜೆಡಿಎಸ್ ಪಕ್ಷದ ಜೊತೆಗಿನ ಮೈತ್ರಿಯನ್ನು ಬಲಪಡಿಸಲು ಮುಂದಾಗಿದೆ ಎನ್ನಲಾಗುತ್ತಿದೆ. ಕುಮಾರಸ್ವಾಮಿಗೆ ಮಹತ್ವದ ಸ್ಥಾನದ ಆಫರ್ ನೀಡಿ, ಯಡಿಯೂರಪ್ಪ ಅವರಿಗೇ ಛೂಬಾಣ ಬಿಡಲು ಪ್ಲಾನ್ ಹಾಕಿದೆ. ಜೆಡಿಎಸ್, ಎನ್ ಡಿಎ ಕೂಟಕ್ಕೆ ಸೇರ್ಪಡೆಯಾಗುವುದನ್ನು ಖಚಿತಪಡಿಸಿದರೆ, ಯಡಿಯೂರಪ್ಪ ಅವರನ್ನು ಇಳಿಸಿದರೂ ಅಪಾಯ ಬರಲಿಕ್ಕಿಲ್ಲ ಎನ್ನುವ ಕುತಂತ್ರವೂ ಇಲ್ಲಿದೆ. ಮೈತ್ರಿಯ ಮತ್ತೊಂದು ಲಾಭದ ನಡೆ ಏನಂದ್ರೆ, ಕಾಂಗ್ರೆಸ್ ಅನ್ನು ರಾಜ್ಯದಲ್ಲಿ ಅಧಿಕಾರದಿಂದ ದೂರ ಇಡುವುದು. ಹೇಗೂ ಸಿದ್ದರಾಮಯ್ಯ ಜೊತೆ ಬಹಿರಂಗವಾಗೇ ಸಂಘರ್ಷಕ್ಕಿಳಿದಿರುವ ಕುಮಾರಸ್ವಾಮಿಯನ್ನು ಹತ್ತಿರಕ್ಕೆ ಸೆಳೆದುಕೊಂಡು ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದಲ್ಲಿ ಮೂಲೆಗೆ ತಳ್ಳುವ ಹಿಡನ್ ಪ್ಲಾನ್ ಕೂಡ ಚಾಣಕ್ಯ ನಡೆಯಲ್ಲಿದೆ.
ಇಡೀ ದೇಶದಲ್ಲಿ ಕಾಂಗ್ರೆಸ್ ಮುಕ್ತ ಎಂದು ಹೇಳಿಕೊಂಡು ಬಂದಿದ್ದ ಬಿಜೆಪಿ ರಾಷ್ಟ್ರೀಯ ನಾಯಕರು, ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಬಲ್ಲ ದೊಡ್ಡ ರಾಜ್ಯ ಕರ್ನಾಟಕ ಮಾತ್ರ ಎನ್ನುವುದನ್ನು ಗಮನಿಸಿದ್ದಾರೆ. ಆದರೆ, ಜೆಡಿಎಸ್ ಬೆಂಬಲದಿಂದ ಮಾತ್ರ ಕಾಂಗ್ರೆಸ್ ಅಧಿಕಾರಕ್ಕೇರಬಲ್ಲದು ಎನ್ನುವ ಕಾರಣ ಆ ಪಕ್ಷವನ್ನೇ ತಮ್ಮ ತೆಕ್ಕೆಗೆ ಸೆಳೆಯಲು ಬಿಜೆಪಿ ರಾಷ್ಟ್ರೀಯ ನಾಯಕರು ಮುಂದಾಗಿದ್ದಾರೆ. ಈ ಪ್ರಸ್ತಾಪಕ್ಕೆ ಸಕಾರಾತ್ಮಕವಾಗಿಯೇ ಜೆಡಿಎಸ್ ನಾಯಕರು ಕೂಡ ಸ್ಪಂದಿಸಿದ್ದಾರೆ. ಆದ್ರೂ ಈ ವಿಚಾರವನ್ನು ಸುಲಭದಲ್ಲಿ ಒಪ್ಪಿಕೊಳ್ಳುವ ಮಂದಿ ಜೆಡಿಎಸ್ ವರಿಷ್ಠರಲ್ಲ. ಸಿಎಂ ಸ್ಥಾನಕ್ಕೇ ಕಣ್ಣಿಡುವ ಆಸಾಮಿಗಳು ಆಗಿರುವುದರಿಂದ ಕೊಡು-ಕೊಳ್ಳುವಿಕೆ ಬಗ್ಗೆ ಒಪ್ಪಂದ ಮಾಡಿಕೊಂಡೇ ಹೆಜ್ಜೆ ಇಡಬಹುದು.
ಕಳೆದ ವಾರ ಕುಮಾರಸ್ವಾಮಿ ಹುಟ್ಟುಹಬ್ಬದ ದಿನದಂದೇ ಇಂಥ ಅನುಮಾನ ರಾಜಕೀಯ ವಲಯದಲ್ಲಿ ಕಾಡಿತ್ತು. ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಸ್ವತಃ ಪ್ರಧಾನಿ ಮೋದಿಯವರು ಟ್ವೀಟ್ ಮಾಡಿ, ಶುಭ ಹಾರೈಸಿದ್ದರು. ಜೆಡಿಎಸ್ ಜೊತೆಗಿನ ಮೈತ್ರಿಯನ್ನು ಬಿಜೆಪಿ ಬಲಗೊಳಿಸುವ ಸೂಚನೆ ಇದೆಂದೇ ವ್ಯಾಖ್ಯಾನ ಮಾಡಲಾಗಿತ್ತು. ಈ ನಡುವೆ, ಮಾಧ್ಯಮ ಒಂದಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ, ಕುಮಾರಸ್ವಾಮಿಯವರು ಮೋದಿ ಮಾತನ್ನು ಕೇಳುತ್ತಿದ್ದರೇ ಈ ಮೊದಲೇ ದೊಡ್ಡ ಹುದ್ದೆಯಲ್ಲಿ ಇರುತ್ತಿದ್ದರು. ಪಕ್ಷದ ಭವಿಷ್ಯದ ದೃಷ್ಟಿಯಿಂದ ಕೊನೆಗೂ ಉತ್ತಮ ಹೆಜ್ಜೆ ಇಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇವೆಲ್ಲ ನೋಡಿದರೆ, ಕಾಂಗ್ರೆಸ್ ಜೊತೆಗಿನ ಸಖ್ಯವನ್ನು ಶಾಶ್ವತವಾಗೇ ಕಡಿದುಕೊಂಡು ಬಿಜೆಪಿಯನ್ನು ಅಪ್ಪಿಕೊಳ್ಳಲು ಜೆಡಿಎಸ್ ತಯಾರಿ ನಡೆಸುತ್ತಿದೆಯೇ ಅನ್ನುವ ಅನುಮಾನ ಕೇಳಿಬಂದಿದೆ. ಇಂಥ ಮೈತ್ರಿ ಸಾಧ್ಯವಾದರೆ, ಕರ್ನಾಟಕದ ರಾಜಕೀಯದ ಪಾಲಿಗೆ ಅದೊಂದು ದೊಡ್ಡ ಮಟ್ಟದ ಬೆಳವಣಿಗೆ ಅನ್ನೋದಂತೂ ಸತ್ಯ.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm