ಬ್ರೇಕಿಂಗ್ ನ್ಯೂಸ್
27-01-21 05:42 pm Mangalore Correspondent ನ್ಯೂಸ್ View
ಮಂಗಳೂರು, ಜ.27: ಮಂಗಳೂರಿನ ಹಿಂದು ಸಂಘಟನೆ ಮುಖಂಡ ಶರಣ್ ಪಂಪ್ವೆಲ್ ಬಗ್ಗೆ ಅವಹೇಳನ ಮಾಡಿ, ಫೇಸ್ಬುಕ್, ವಾಟ್ಸಪ್ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುವ ಬಗ್ಗೆ ಕದ್ರಿ ಠಾಣೆಗೆ ದೂರು ನೀಡಲಾಗಿದೆ. ದೂರು ಪರಿಶೀಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಂಗಳೂರು ನಗರದಲ್ಲಿ ಪತ್ತೆಯಾದ ವೇಶ್ಯಾವಾಟಿಕೆ ಪ್ರಕರಣಗಳಲ್ಲಿ ಶರಣ್ ಪಂಪ್ವೆಲ್ ಲಿಂಕ್ ಇದೆಯೆಂದು ಸುದ್ದಿ ಹಬ್ಬಿಸುತ್ತಿರುವ ಕೆಲವು ವಾಟ್ಸಪ್ ಮತ್ತು ಫೇಸ್ಬುಕ್ ಗ್ರೂಪ್ ಗಳ ಬಗ್ಗೆ ಸಂಘಟನೆ ಮುಖಂಡರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಕರಾವಳಿ ಮೀಡಿಯಾ, ಮಾರಿಪಳ್ಳ ಫ್ರೆಂಡ್ಸ್, ನಮ್ಮ ಸೂಡ, ಕರಾವಳಿ ನ್ಯೂಸ್ ಎನ್ನುವ ಹೆಸರಿನ ವಾಟ್ಸಾಪ್ ಗ್ರೂಪ್ ಗಳಲ್ಲಿ ತನ್ನ ಹೆಸರು ಕೆಡಿಸುವ ಉದ್ದೇಶದಿಂದ ಈ ಕೃತ್ಯ ಮಾಡುತ್ತಿದ್ದಾರೆಂದು ಶರಣ್ ಪಂಪ್ವೆಲ್ ದೂರಿನಲ್ಲಿ ತಿಳಿಸಿದ್ದಾರೆ.
ಕದ್ರಿ ಠಾಣೆಗೆ ಈ ರೀತಿಯ ದೂರು ಕೊಟ್ಟು ಒಂದು ವಾರ ಕಳೆದಿದೆ. ಮಾಯಾ ಗ್ಯಾಂಗ್ ಪ್ರಕರಣದಲ್ಲಿ ಸ್ವಲ್ಪ ಬಿಝಿ ಇದ್ದೇವೆ. ನಿಮ್ಮ ಕೇಸನ್ನು ಪರಿಶೀಲಿಸಿ, ಎಫ್ಐಆರ್ ಮಾಡುತ್ತೇವೆ ಎಂದು ಶರಣ್ ಪಂಪ್ವೆಲ್ ಮತ್ತು ತಂಡವನ್ನು ಪೊಲೀಸರು ಕಳಿಸಿದ್ದಾರೆ. ಕದ್ರಿ ಪೊಲೀಸರಲ್ಲಿ ಈ ಬಗ್ಗೆ ಕೇಳಿದ್ರೆ, ನಾವು ಆ ಪ್ರಕರಣದ ಬಗ್ಗೆ ಈಗಷ್ಟೇ ತನಿಖೆ ಆರಂಭಿಸಿದ್ದೇವೆ. ಐಟಿ ಆಕ್ಟ್ 66 ಪ್ರಕಾರ ಕೇಸು ದಾಖಲಿಸುತ್ತೇವೆ. ಇದೆಲ್ಲಾ ಟೆಕ್ನಿಕಲ್ ಇಶ್ಯು ಆಗಿರುತ್ತದೆ. ಇಂಥ ಪ್ರಕರಣದಲ್ಲಿ ಎಫ್ಐಆರ್ ಮಾಡಲು ದೂರಿನ ಆಧಾರದಲ್ಲಿ ಜಾಲತಾಣದ ಪೋಸ್ಟ್ ಗಳನ್ನು ಪರಿಶೀಲನೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕದ್ರಿ ಠಾಣಾಧಿಕಾರಿಯಾಗಿರುವ ಸವಿತ್ರತೇಜ, ಸೈಬರ್ ಆಕ್ಟ್ ವಿಚಾರದಲ್ಲಿ ಎಕ್ಸ್ ಪರ್ಟ್ ಆಗಿರುವ ವ್ಯಕ್ತಿ ಎನ್ನಲಾಗುತ್ತದೆ. ಮೇಲಧಿಕಾರಿಗಳ ಸಪೋರ್ಟ್ ಇದ್ದರೆ ಯಾವುದೇ ಪ್ರಕರಣವನ್ನು ಸೈಲಂಟಾಗಿಯೇ ಹಿಂದೆ ಬಿದ್ದು ಹೊರಗೆ ತರಬಲ್ಲ ಚಾಣಾಕ್ಷ. ಅಂಥದ್ರಲ್ಲಿ ಶರಣ್ ಪಂಪ್ವೆಲ್ ಬಗೆಗಿನ ಕೇಸ್ ಯಾಕೆ ಇನ್ನೂ ಮೂವ್ ಆಗಿಲ್ಲ ಅನ್ನೋ ಪ್ರಶ್ನೆ ಸಹಜ. ಯಾಕಂದ್ರೆ, ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದಲ್ಲಿ ಮುಂಚೂಣಿ ನಾಯಕನಾಗಿರುವ ಶರಣ್ ಪಂಪ್ವೆಲ್ ಬಗ್ಗೆ ಸಾಕಷ್ಟು ಮಂದಿ ಆಗದವರಿದ್ದಾರೆ. ಮುಸ್ಲಿಂ ಗ್ರೂಪ್ ಆಗಿರಬಹುದು, ಹಿಂದು ಸಂಘಟನೆಯಲ್ಲೇ ಇದ್ದು ದೂರವಿರುವ ಮಂದಿ ಆಗಿರಬಹುದು. ನಾಯಕನೊಬ್ಬನ ಹೆಸರು ಕೆಡಿಸಲು ಇಂಥ ಸೋಶಿಯಲ್ ಮೀಡಿಯಾ ಸೂಕ್ತ ವೇದಿಕೆಯೆಂದು ನಂಬ್ಕೊಂಡು ಇಲ್ಲದ ವಿಚಾರವನ್ನು ಯಾರಿಂದಲೋ ಬರೆದು ಹಾಕಿಸುತ್ತಾರೆ. ಅನೈತಿಕ ಚಟುವಟಿಕೆ ಪ್ರಕರಣಕ್ಕೆ ಲಿಂಕ್ ಮಾಡಿ, ಯಾರಲ್ಲೋ ಸುದ್ದಿ ಪೋಸ್ಟ್ ಮಾಡಿಸುತ್ತಾರೆ. ಜಾಲತಾಣದ ಪವರ್ ಏನೆಂದು ಗೊತ್ತಿಲ್ಲದ ಮಂದಿ ಇದನ್ನು ಫಾರ್ವರ್ಡ್ ಮಾಡಿ ಇನ್ನು ಸಿಕ್ಕಿಬಿದ್ದರೆ ಕಂಬಿ ಎಣಿಸುವ ಪರಿಸ್ಥಿತಿ.
ಇಂಥ ಪ್ರಕರಣದಲ್ಲಿ ಸುಲಭದಲ್ಲಿ ನೈಜ ಆರೋಪಿಗಳು ಸಿಕ್ಕಿಬೀಳಲ್ಲ. ಸಿಕ್ಕಿದರೂ, ಯಾರೋ ಒಬ್ಬ ಅಮಾಯಕ ಸಿಕ್ಕಿಬಿದ್ದು ಹಿಂದಿನ ಖಳನಾಯಕ ಹಿಡನ್ ಆಗಿಯೇ ಇದ್ದುಬಿಡುತ್ತಾನೆ. ಬಂಟ್ವಾಳ ಮತ್ತು ಅತ್ತಾವರದಲ್ಲಿ ವೇಶ್ಯಾವಾಟಿಕೆ ಪ್ರಕರಣದಲ್ಲಿ ಆರೋಪಿಗಳು ಸಿಕ್ಕಿಬಿದ್ದಾಗ, ಅವುಗಳ ಸುದ್ದಿಯ ಲಿಂಕ್ ಇಟ್ಟುಕೊಂಡು ವಾಟ್ಸಪ್ ನಲ್ಲಿ ಮಾತ್ರ ಶರಣ್ ಪಂಪ್ವೆಲ್ ಮಾಡ್ತಿರೋ ದಂಧೆಯೆಂದು ಹೇಳಿ ಮೂವ್ ಮಾಡಿದ್ದು ಕಂಡಬಂದಿತ್ತು. ಹೀಗೆ ಸೃಷ್ಟಿಯಾಗುವ ಈ ವಾಟ್ಸಪ್ ಲಿಂಕ್ ಎಲ್ಲಿ ಆರಂಭಗೊಳ್ಳುತ್ತೆ ಅನ್ನುವುದನ್ನು ಪತ್ತೆ ಮಾಡಲು ಪೊಲೀಸರಿಗೂ ಸುಲಭದಲ್ಲಿ ಸಾಧ್ಯವಾಗಲ್ಲ. ಆದರೆ, ಇಂಥ ಲಿಂಕ್ ಫಾರ್ವರ್ಡ್ ಮಾಡಿದ ಕಾರಣಕ್ಕೇ ಅಂಥವರನ್ನು ಪೊಲೀಸರು ಬಂಧಿಸಬಹುದು. ಐಟಿ ಆಕ್ಟ್ ಅಡಿ ಪೊಲೀಸರು ಪ್ರಕರಣ ದಾಖಲಿಸಿದರೆ, ಮೂರು ವರ್ಷ ಶಿಕ್ಷೆ ಮತ್ತು ಐದು ಲಕ್ಷ ದಂಡ ವಿಧಿಸಲು ಅವಕಾಶ ಇರುತ್ತದೆ. ಲಿಂಕ್ ಸ್ಕ್ರೀನ್ ಶಾಟ್ ಆಧರಿಸಿ, ಅಂಥವರನ್ನು ಅರೆಸ್ಟ್ ಮಾಡುವುದು ಪೊಲೀಸರಿಗೆ ಕಷ್ಟದ ಕೆಲಸವೇನೂ ಅಲ್ಲ. ಆದರೆ, ಇಂಥ ಲಿಂಕುಗಳ ಮೂಲ ಪುರುಷನನ್ನು ಹಿಡಿಯೋಕೆ ಕಂಪ್ಯೂಟರ್ ಜಗತ್ತಿನ ಒಳಹೊಕ್ಕು ಸಾಕ್ಷಿಸಹಿತ ಹಿಡಿಯಬಲ್ಲ ಚಾಣಾಕ್ಷರೇ ಬೇಕು. ಸದ್ಯಕ್ಕೆ ಮಂಗಳೂರು ಪೊಲೀಸ್ ಇಲಾಖೆಯಲ್ಲಿ ಆ ಮಟ್ಟಿನ ನಿಷ್ಣಾತರು ಕಡಿಮೆ ಇದ್ದಾರೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಅವಹೇಳನ ಮಾಡುವುದು, ಹಿಂದು ದೇವತೆಗಳನ್ನು ನಿಂದಿಸುವಂಥ ಸೈಬರ್ ಅಪರಾಧಗಳನ್ನು ಪತ್ತೆ ಮಾಡುವ ಕಾರ್ಯದಲ್ಲಿ ನಮ್ಮ ಪೊಲೀಸ್ ಇಲಾಖೆ ಇನ್ನೂ ಎಕ್ಸ್ ಪರ್ಟ್ ಆಗಿಲ್ಲ. ಕಳೆದ ಬಾರಿ ಕಟೀಲು ದೇವರ ನಿಂದನೆ, ಮಂಗಳೂರು ಮುಸ್ಲಿಂ ಪೇಜ್ ನಲ್ಲಿ ಹಿಂದು ದೇವರ ಅವಹೇಳನದ ಪೋಸ್ಟ್ ಮಾಡಿದಾಗಲೂ ಮಂಗಳೂರಿನ ಪೊಲೀಸರಿಗೆ ಅದರ ಹಿಂದಿರುವ ಹರಾಮಿಗಳನ್ನು ಪತ್ತೆ ಮಾಡುವುದು ಸಾಧ್ಯವಾಗಿರಲಿಲ್ಲ. ಇದೇ ನೆಪ ಇಟ್ಟುಕೊಂಡು ಈಗ ಕೆಲವರು ನಾಯಕರ ತೇಜೋವಧೆಗೆ ಸೋಶಿಯಲ್ ಮೀಡಿಯಾವನ್ನು ಬಳಸ್ಕೊಂಡಿದ್ದಾರೆ. ಆದರೆ, ಪೊಲೀಸರು ಶ್ರಮ ಹಾಕಿದರೆ ಯಾವುದೂ ಅಸಾಧ್ಯವಲ್ಲ ಬಿಡಿ.
Mangalore VHP regional secretary Sharan Pumpwell has filed a complaint about false allegations made on social media stating of him having connections with Prostitution rackets that was busted in Mangalore and Bantwal.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm