ಬ್ರೇಕಿಂಗ್ ನ್ಯೂಸ್
24-03-21 12:15 pm By Srinath Bhalle ನ್ಯೂಸ್ View
ನೀವು ನಿಮ್ಮ ಜೀವನದಲ್ಲಿ form ಕಳೆದುಕೊಂಡಿದ್ದೀರಾ? ಇಷ್ಟಕ್ಕೂ ಈ form ಅಂದ್ರೇನು ಅಂತ ಅರ್ಥೈಸಿಕೊಂಡು ಆ ನಂತರ ಕಳೆದುಕೊಳ್ಳೋದು ಅಂದ್ರೇನು? ಮತ್ತೆ ಅದನ್ನು ವಾಪಸ್ ಪಡೆಯೋದು ಅಂದ್ರೇನು ಅಂತ ನೋಡೋಣ. form ಅನ್ನೋದನ್ನು ಸಾಮಾನ್ಯವಾಗಿ ಕ್ರೀಡಾಕ್ಷೇತ್ರದಲ್ಲಿ ಕೇಳಿದ್ದೇವೆ.
ಅತ್ಯುತ್ತಮ ಪ್ರದರ್ಶನ ನೀಡುತ್ತಲೇ ಬರುವ ಒಬ್ಬ ಕ್ರೀಡಾಪಟು ಇದ್ದಕ್ಕಿದ್ದ ಹಾಗೆ ಸನ್ನಿ ಅಥವಾ ಸ್ಟ್ರೋಕ್ ಹೊಡೆದವರಂತೆ, ತಮ್ಮ ಕೆಲಸವನ್ನೇ ಮರೆತವರಂತೆ ಆಡುತ್ತಾರೆ.
ಒಂದು ಪುಟ್ಟ ಕಥೆಯನ್ನು ನೋಡೋಣ. ಬಹಳ ಹಿಂದೆ ಚಂದಮಾಮ ಕಥೆಯಲ್ಲಿ ಓದಿದ ಒಂದು ಕಥೆ. ಒಬ್ಬ ಮಣ್ಣಿನ ಬೊಂಬೆಯನ್ನು ಮಾಡುವ ಕರಕುಶಲಕಾರ ತನ್ನ ಕೆಲಸದಲ್ಲಿ ಶ್ರೇಷ್ಠನಾಗಿರುತ್ತಾನೆ. ತನ್ನದೇ ಒಂದು ಅಂಗಡಿಯನ್ನೂ ಇಟ್ಟುಕೊಂಡಿರುತ್ತಾನೆ. ಚೆಂದದ ಬೊಂಬೆ ತಯಾರಿಸುವವನೆಂದು ಹೆಸರು ಮಾಡಿದ್ದರಿಂದ ವ್ಯಾಪಾರವೂ ಚೆನ್ನಾಗಿ ಆಗುತ್ತಿತ್ತು. ಹೀಗಿರುವಾಗ ಅವನ ಅಂಗಡಿಯ ಎದುರಿಗೆ ಮತ್ತೋರ್ವ ಕರಕುಶಲಕರ್ಮಿ ಅಂಗಡಿ ತೆರೆಯುತ್ತಾನೆ.
ಹೊಸಬನೂ ಬೊಂಬೆ ತಯಾರಿಸುವವನೇ ಆಗಿರುವುದರಿಂದ ಅಲ್ಲೊಂದು ಸ್ಪರ್ಧೆ ಏರ್ಪಾಡಾಯ್ತು. ಹೊಸಬನ ಅಂಗಡಿ ಅಂತಾಗಿ ಜನರು ಅಲ್ಲಿಗೆ ಹೋಗಲಾರಂಭಿಸಿದ್ದರಿಂದ ಈ ಹಳಬನ ವ್ಯಾಪಾರ ಕಡಿಮೆಯಾಯ್ತು. ದಿನೇ ದಿನೇ ಅವನ ಕೆಲಸದಲ್ಲಿ ಶ್ರದ್ದೆ ಕಡಿಮೆಯಾಗಿ, ಅದು ಅವನು ತಯಾರಿಸುವ ಬೊಂಬೆಗಳ ಗುಣಮಟ್ಟದ ಮೇಲೂ ಪ್ರಭಾವ ಬೀರತೊಡಗಿತು. ಅರ್ಥಾತ್ ಆ ಕರಕುಶಲಕಾರ ತನ್ನ form ಕಳೆದುಕೊಂಡಿದ್ದ.
ಕ್ರಿಕೆಟ್ ಜಗತ್ತಿನಲ್ಲಿ ಈ form ಕಳೆದುಕೊಳ್ಳುವ ಆಟಗಾರರು ಬಹಳ. ಒಂದಾದ ನಂತರ ಮತ್ತೊಂದು ಆಟದಲ್ಲಿ ತಮ್ಮ ಬ್ಯಾಟಿನಿಂದ ಐವತ್ತು ಅಥವಾ ನೂರು ಸಿಡಿಸುವ ಬ್ಯಾಟ್ಸ್ಮನ್ ಇದ್ದಕ್ಕಿದ್ದ ಹಾಗೆ ಹತ್ತು ರನ್ ಗಳಿಸಲೂ ಒದ್ದಾಡುವಂತೆ ಆಗಬಹುದು. ಬಹಳ ಚೆನ್ನಾಗಿ ಆಡುತ್ತಿದ್ದ ಅಮರನಾಥ್, ವರ್ಲ್ಡ್ ಕಪ್ ಆಟದ ನಂತರ, ತಮ್ಮ form ಕಳೆದುಕೊಂಡು ಮೂರು ಬಾರಿ ಸೊನ್ನೆ, ನಂತರ ಒಂದು ರನ್, ಆನಂತರ ಎರಡು ಸೊನ್ನೆಗಳನ್ನು ಗಳಿಸುವ ಮೂಲಕ ತಮ್ಮ form ಕಳೆದುಕೊಂಡಿರುವುದನ್ನು ಸಾಬೀತುಪಡಿಸಿ ತಂಡದಲ್ಲಿ ಸ್ಥಾನವನ್ನೂ ಕಳೆದುಕೊಂಡಿದ್ದರು.
ಇನ್ನು ಬೌಲರ್ ವಿಷಯಕ್ಕೆ ಬಂದರೆ, ಆಡಿದ ಮೊದಲ ಮ್ಯಾಚ್'ನ ಎರಡೂ ಇನ್ನಿಂಗ್ಸ್' ಗಳಲ್ಲಿ ತಲಾ ಎಂಟು ವಿಕೆಟ್ ಪಡೆದು, ಇಂದಿಗೂ ಮೊದಲ ಟೆಸ್ಟ್'ನಲ್ಲೇ ಇಂಥಾ ಸಾಧನೆಗೈದು ಮೈಲಿಗಲ್ಲು ಸ್ಥಾಪಿಸಿ, ಆ ನಂತರ ಕ್ರಮೇಣ ಪ್ರಭಾವವೂ ಕಡಿಮೆಯಾದಂತಾಗಿ ಮರೆಯಾದವರು ನರೇಂದ್ರ ಹಿರ್ವಾನಿ. ಇಲ್ಲಿನ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಎರಡು ವಿಚಾರಗಳು ಎದ್ದು ಕಾಣುತ್ತದೆ.
ಬೊಂಬೆ ತಯಾರಿಸುವ ವ್ಯಕ್ತಿ, ತನ್ನ ಗಮನವನ್ನು ತನ್ನ ಸ್ಪರ್ಧಾಳುವಿನ ಕಡೆ ಹರಿಸಿ ತನ್ನ ಕೆಲಸದ ಕಡೆ ಗಮನವನ್ನೂ ಹರಿಸಲಿಲ್ಲ ಎಂದ ಮೇಲೆ ತನ್ನ ಕೌಶಲ್ಯವನ್ನು ತೀಕ್ಷ್ಣಗೊಳಿಸಿಕೊಳ್ಳುವ ವಿಷಯವೇ ಬರುವುದಿಲ್ಲ ಅಲ್ಲವೇ? ಇದೇ ವಿಚಾರವನ್ನು ಕ್ರಿಕೆಟ್ ವಿಚಾರದಲ್ಲಿ ತೆಗೆದುಕೊಂಡರೆ ಹಲವೊಮ್ಮೆ, ಹೇಗಿದ್ರೂ ಟೀಮಿನಲ್ಲಿ ನನ್ನ ಸ್ಥಾನ ಗ್ಯಾರಂಟಿ, ಹಾಗಾಗಿ ನೆಟ್ ಪ್ರಾಕ್ಟೀಸ್ ತನಗೇಕೆ ಬೇಕು ಎಂಬ ಹುಂಬತನ ಇರಬಹುದು, ಅಥವಾ ಪಿಚ್ ಯಾವ ರೀತಿ ತಯಾರು ಮಾಡಿರುತ್ತಾರೋ ಅಂತಹ ಪಿಚ್'ನಲ್ಲಿ ಆಟವಾಡಿ ಅಭ್ಯಾಸವಿಲ್ಲದೆ ಇರಬಹುದು, ಹೀಗೆ ಕಾರಣ ಏನೇ ಇರಲಿ, ಒಟ್ಟಾರೆ ಆ ಸನ್ನಿವೇಶಗಳಿಗೆ ಅವರು ತಯಾರಾಗಿರುವುದಿಲ್ಲ.
form ಕಳೆದುಕೊಳ್ಳಲು ಇದೂ ಒಂದು ಕಾರಣ. ಆ ಸನ್ನಿವೇಶಗಳಲ್ಲಿ ಅವರಲ್ಲಿ ಸಾಮರ್ಥವಿದ್ದರೂ ವಿಶ್ವಾಸದ ಕೊರತೆ ಇರುತ್ತದೆ. ಕ್ರೀಡಾಪಟುಗಳಲ್ಲದ ನಮ್ಮ ಜೀವನದಲ್ಲಿ ಈ form ಕಳೆದುಕೊಳ್ಳುವುದು ಎಂದರೆ Mood Off ಆಗೋದು ಅಂತರ್ಥ.
ದಿನನಿತ್ಯದಲ್ಲಿ ನಾವು ಒಂದಷ್ಟು ಕೆಲಸಗಳನ್ನು ಮಾಡುತ್ತಾ ಸಾಗಿರುತ್ತೇವೆ. ಆ ಕೆಲಸದಲ್ಲಿ ನಾವು ನಿಪುಣರೂ ಆಗಿರುತ್ತೇವೆ. ನಮ್ಮ ನೈಪುಣ್ಯತೆ ಎಷ್ಟರಮಟ್ಟಿಗೆ ಇರುತ್ತದೆ ಎಂದರೆ, ನಿದ್ರೆಯಲ್ಲಿ ಮಲಗಿದ್ದಾಗ ಎಬ್ಬಿಸಿದರೂ ಅದರ ಬಗ್ಗೆ ಮಾತನಾಡಿದಾಗ ವಿಷಯವನ್ನು ಅರುಹಲು ಮನ ಸಿದ್ಧವಾಗಿರುತ್ತದೆ. ಅಷ್ಟೇ ಏಕೆ, ಕನಸಿನಲ್ಲಿ ಕೇಳಿದರೂ ಹೇಳುವಷ್ಟು. ಮಾಡಿದ್ದೇ ಕೆಲಸಗಳನ್ನು ದಿನನಿತ್ಯದಲ್ಲಿ ಮಾಡುವಾಗ, ಯಾವುದೋ ಒಂದು ಕ್ಷಣ ಬೇಸರ ಮೂಡಿ, ದೇಹಾದ್ಯಂತ ವ್ಯಾಪಿಸಿದಾಗ Mood Off ಆಗುತ್ತದೆ. ಮನಸ್ಸು ಎಲ್ಲೋ ಇರುತ್ತೆ. ಅದೇನು ಕೆಲಸ ಮಾಡುತ್ತಿರುತ್ತೇವೆಯೋ ಅದರ ಕಡೆ ಗಮನವೇ ಇರೋದಿಲ್ಲ.
ಟಿವಿ ನೋಡುತ್ತಾ ಕೂತಿದ್ದರೂ ಆ ಟಿವಿಯಲ್ಲಿ ಯಾವ ಕಾರ್ಯಕ್ರಮ ಮೂಡಿಬರುತ್ತಿದೆ ಎಂಬುದೂ ಗೊತ್ತಿರೋದಿಲ್ಲ. ನೆಟ್ಟ ನೋಟವೇ ಬೇರೆ, ತಲೆಯಲ್ಲಿ ಇರುವ ಆಲೋಚನೆಗಳೇ ಬೇರೆ. ಕೆಲವೊಮ್ಮೆ ಏನೂ ಕೆಲಸ ಮಾಡದೇ ಸುಮ್ಮನೆ ಕೂರುವಂತೆಯೂ ಆಗಬಹುದು. ಅರ್ಥಾತ್ ತಲೆಯಲ್ಲಿ ಒಂದು ರೀತಿ ಶೂನ್ಯತೆ ಆವರಿಸಿದಂತೆ. ನೀನು ಮಾಡುತ್ತಿರೋ ಅಡುಗೆಯಲ್ಲಿ ಈ ನಡುವೆ ಯಾಕೋ ರುಚಿಯೇ ಇರೋದಿಲ್ಲ ಯಾಕೆ? ಎಂಬುದು ಒಂದು ಸನ್ನಿವೇಶ.
ಇದರಲ್ಲಿ ನಿಮ್ಮ ತಪ್ಪು ಏನೂ ಇರಲಾರದವು ಆದರೆ ಮಾಡಿದ್ದೇ ಅಡುಗೆ ಮಾಡಿ, ಮಾಡಿದವರಿಗೂ ಬೇಸರ ಮೂಡಿರಬಹುದು ಅಥವಾ ತಿನ್ನುವವರಿಗೂ ಬೇಸರ ಮೂಡಿರಬಹುದು. ನಿಮ್ಮದೇ ಕೌಶಲ್ಯದಲ್ಲಿ ನೀವು ಸೋಲುತ್ತಿರಬಹುದು. ಇಂಥಾ ಸನ್ನಿವೇಶವನ್ನು ಹಲವಾರು ವಿಭಿನ್ನ ಸನ್ನಿವೇಶಗಳಲ್ಲೂ ಕಾಣಬಹುದು. ಒಂದೇ ರೀತಿಯ ಪಾತ್ರಗಳನ್ನು ಮಾಡುವ ನಾಯಕ ಅಥವಾ ನಾಯಕಿ. ದಿನಬೆಳಗಾದರೆ ಬರೀ ಪೊಲೀಸ್ ಧಿರಿಸಿನಲ್ಲೇ ಕಾಣಿಸಿಕೊಳ್ಳುವ ನಾಯಕನಿಗೆ ಆ ಪಾತ್ರ ಒಪ್ಪಬಹುದು ಆದರೆ ಜನ ಎಷ್ಟು ಬಾರಿ ನೋಡಿಯಾರು?
ತನಗೆ ಈ ಪಾತ್ರ ನೀರು ಕುಡಿದಂತೆ ಎಂಬ ಅಹಂಭಾವ ಇರಬಹುದು ಅಥವಾ ಥತ್! ಮತ್ತದೇ ಪಾತ್ರವೇ ಎಂಬ ನಿರಾಸಕ್ತಿಯೂ ಆಗಬಹುದು. ಕಚೇರಿಯಲ್ಲೂ ಒಂದೇ ಸಮನೆ ಒಂದೇ ರೀತಿ ಕೆಲಸ ಮಾಡುವಾಗ ನಿರಾಸಕ್ತಿ ಮೂಡಿ ತಪ್ಪುಗಳಾಗಬಹುದು ಅಥವಾ ದಿನದ ಎಂಟು ಘಂಟೆಯಲ್ಲಿ ಮಾಡಬಹುದಾದ ಕೆಲಸಗಳನ್ನು ನಾಲ್ಕೇ ಘಂಟೆಯಲ್ಲಿ ಮುಗಿಸಿಟ್ಟು ಸುಮ್ಮನೇ ಕೂರಬೇಕಾದ ಸನ್ನಿವೇಶವೂ ಎದುರಾಗಬಹುದು.
ದಿನನಿತ್ಯದಲ್ಲಿ ಅನ್ನ-ಮಜ್ಜಿಗೆ ತಿನ್ನುವುದು ಬೇಸರ ಮೂಡಿದಾಗ ಚೂರು ಉಪ್ಪಿನಕಾಯಿ ಸೇರಿಸಿ ತಿಂದರೆ ಹೇಗೆ? ಒಂದಷ್ಟು ಚಟ್ನಿಪುಡಿ ಸೇರಿಸಿದರೆ? ಮಾಡಿರುವ ಹುಳಿಯಲ್ಲಿನ ಒಂದಷ್ಟು ತರಕಾರಿ ಸೇರಿಸಿಕೊಂಡರೆ? ನಾನು ಹೇಳುತ್ತಿರುವುದು ಇಷ್ಟೇ. ಮಾಡುವ ಕೆಲಸವನ್ನೇ ಕೊಂಚ ಭಿನ್ನವಾಗಿ ಮಾಡುವುದು ಅಥವಾ ದಿನನಿತ್ಯದ ಕೆಲಸದಲ್ಲಿ ಕೊಂಚ ಬೇರೆ ಹವ್ಯಾಸ ಸೇರಿಸಿಕೊಳ್ಳುವುದು ಮಾಡಿದಾಗ ಮನಸ್ಸು ಸ್ವಲ್ಪ ಬೇರೆಡೆ ಹೊರಳುತ್ತದೆ. form ಕಳೆದುಕೊಳ್ಳುವುದು ಜೀವನದ ಅವಿಭಾಜ್ಯ ಅಂಗ.
ಮೂಡ್ ಆಫ್ ಆಗುವುದೂ ಸರ್ವೇ ಸಾಮಾನ್ಯ. ಮನಸ್ಸು ಕುಗ್ಗಲು ಹಲವಾರು ಕಾರಣಗಳಿವೆ. ಮನಸ್ಸು ಕುಗ್ಗಲು ನಮ್ಮಲ್ಲೇ ತೊಂದರೆ ಇರಬೇಕು ಅಂತೇನಿಲ್ಲ. ನಮ್ಮ ಪರಿಸರದಲ್ಲಿ ನಡೆಯುವ ವಿಚಾರಗಳು ಇದಕ್ಕೆ ಕಾರಣವಾಗಬಹುದು. ಮನೆಯಲ್ಲಿನ ಸಮಸ್ಯೆಗಳಿರಬಹುದು. ಆರೋಗ್ಯದ ಸಮಸ್ಯೆಗಳಿರಬಹುದು ಅಥವಾ ಬೇರಾವುದೂ ಆಗಿರಬಹುದು.
form ಕಳೆದುಕೊಂಡ ಆಟಗಾರ ಹೋಗ್ಲಿ ಬಿಡಿ ಅಂತ ಬಿಟ್ಟುಕೊಡ್ತಾರಾ? ಅಂತೆಯೇ ಮನಸ್ಸು ಕುಗ್ಗಿತು ಅಂತ ಬಿಟ್ಟುಕೊಡಬಾರದು. ಎಷ್ಟು ಸಾಧ್ಯವೋ ಅಷ್ಟು ಬೇಗ ಹೊರಬರಬೇಕು. ಹೀಗಾದಾಗ ದಿನನಿತ್ಯದ ಕೆಲಸದಲ್ಲಿ ಏನಾದರೂ ಸೇರಿಸಿಕೊಳ್ಳಬೇಕು, ಏನಾದರೂ ಬಿಡಲೇಬೇಕು. ಮಾಡಿದ್ದೇ ಕೆಲಸವಾದರೂ ವಿಭಿನ್ನವಾಗಿ ಮಾಡಬೇಕು. ಏಕತಾನತೆ ಕಳೆಯಲು ವೈವಿಧ್ಯತೆ ತರಬೇಕು. ಮೂಡ್ ಆಫ್ ಆದಾಗ ನೀವೇನು ಮಾಡುತ್ತೀರಿ?
26-12-24 05:11 pm
HK News Desk
Bangalore Case, Advocate Dhahina Bhanu, Fraud...
26-12-24 04:45 pm
MLA Munirathna Egg Attack: ಶಾಸಕ ಮುನಿರತ್ನ ಮೇಲೆ...
25-12-24 10:50 pm
Ct Ravi, Inspector Suspended: ಸಿಟಿ ರವಿ ಬಂಧನ ಪ...
25-12-24 10:10 pm
Kashmir Accident, karnataka soldiers killed:...
25-12-24 12:46 pm
25-12-24 04:21 pm
HK News Desk
Mohan Bhagwat: ಮೋಹನ್ ಭಾಗವತ್ ಸಂಘವನ್ನು ನಡೆಸುತ್ತ...
24-12-24 09:17 pm
ಕಾಸರಗೋಡಿನಲ್ಲಿ ಅಲ್ ಖೈದಾ ಉಗ್ರರ ಸ್ಲೀಪರ್ ಸೆಲ್ ರಚಿ...
23-12-24 05:23 pm
ರಾಮ ಮಂದಿರದಂತಹ ವಿವಾದಗಳನ್ನು ಎಲ್ಲೆಂದರಲ್ಲಿ ಹುಟ್ಟು...
20-12-24 05:01 pm
ಅಂಬೇಡ್ಕರ್ ಘೋಷಣೆ ಫ್ಯಾಶನ್ ಆಗಿಬಿಟ್ಟಿದೆ ಎಂದ ಅಮಿತ್...
19-12-24 05:40 pm
26-12-24 07:07 pm
Udupi Correspondent
Mangalore, Martyr Anoop Poojary, Mp Brijesh C...
26-12-24 11:57 am
DJ artist Sajanka, Mangalore, New Year Party:...
25-12-24 10:55 pm
MP Brijesh Chowta, Mangalore, Railway: ಕೊಂಕಣ...
25-12-24 05:24 pm
Mangalore Rohan Estate Mukka, Riverside Layou...
24-12-24 02:35 pm
26-12-24 07:41 pm
Bangalore Correspondent
Fake Gold Loan, Mangalore Samaja seva sahakar...
25-12-24 02:41 pm
ಸೈಬರ್ ವಂಚಕರ ನಕಲಿ ಷೇರು ಮಾರುಕಟ್ಟೆ ಜಾಲ ; ಕೇರಳದಲ್...
24-12-24 11:05 pm
Bangalore cyber fraud, Crime: ಬೆಂಗಳೂರಿನ ಸಾಫ್ಟ...
22-12-24 07:23 pm
Mangalore Police, Cyber Fraud: ಕಮಿಷನ್ ಆಸೆಗೆ ಬ...
22-12-24 04:44 pm