ಬ್ರೇಕಿಂಗ್ ನ್ಯೂಸ್
10-08-22 02:42 pm Source: Vijayakarnataka ಸಿನಿಮಾ
ಔಟ್ ಅಂಡ್ ಔಟ್ ಫ್ಯಾಮಿಲಿ ಕಮರ್ಶಿಯಲ್ ಸೀರಿಯಲ್‌ಗಳ ಮಧ್ಯೆ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದು ‘ಶನಿ’ (Shani) ಧಾರಾವಾಹಿ. ಶನಿದೇವನ ಚರಿತ್ರೆ ಕುರಿತಾದ ಕಥಾಹಂದರ ಹೊಂದಿದ್ದ ಪೌರಾಣಿಕ ಧಾರಾವಾಹಿ ‘ಶನಿ’. ಈ ಸೀರಿಯಲ್‌ನಲ್ಲಿ ಶನಿದೇವನ ಪಾತ್ರ ನಿಭಾಯಿಸಿದವರು ಸುನೀಲ್ (Sunil). ‘ಶನಿ’ ಸೀರಿಯಲ್ ಮುಗಿದ ನಂತರ ಕಿರುತೆರೆಯಿಂದ ಗ್ಯಾಪ್ ಪಡೆದಿದ್ದ ಸುನೀಲ್ ಇದೀಗ ಕಮ್ ಬ್ಯಾಕ್ ಮಾಡಿದ್ದಾರೆ.
ಹೌದು.. ‘ಶನಿ’ ಸೀರಿಯಲ್ ಖ್ಯಾತಿಯ ನಟ ಸುನೀಲ್ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಹೊಸ ಧಾರಾವಾಹಿಯಲ್ಲಿ ಸುನೀಲ್ ಅಭಿನಯಿಸಿದ್ದಾರೆ. ಆ ಹೊಸ ಸೀರಿಯಲ್ ಯಾವುದು ಅಂದ್ರಾ..?
ಕೆಂಡಸಂಪಿಗೆ (Kendasampige)
‘ಕೆಂಡಸಂಪಿಗೆ’ ಎಂಬ ಹೊಸ ಸೀರಿಯಲ್‌ನಲ್ಲಿ ಸುನೀಲ್ ಅಭಿನಯಿಸಿದ್ದಾರೆ. ಅತೀ ಶೀಘ್ರದಲ್ಲೇ ‘ಕೆಂಡಸಂಪಿಗೆ’ ಸೀರಿಯಲ್ (Kendasampige Serial) ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಸೀರಿಯಲ್‌ನಲ್ಲಿ ಅಕ್ಕ- ತಮ್ಮನ ನಡುವಿನ ಪ್ರೀತಿಯೇ ಹೈಲೈಟ್ ಅಗಿದ್ದು, ತಮ್ಮನ ಪಾತ್ರದಲ್ಲಿ ಸುನೀಲ್ ಅಭಿನಯಿಸಿದ್ದಾರೆ.
ಪ್ರೋಮೋ ಔಟ್
‘ಕೆಂಡಸಂಪಿಗೆ’ ಧಾರಾವಾಹಿಯ ಪ್ರೋಮೋ ಬಿಡುಗಡೆಯಾಗಿದ್ದು, ಸಖತ್ ರಫ್ ಅಂಡ್ ಟಫ್ ಪಾತ್ರದಲ್ಲಿ ಸುನೀಲ್ ಕಾಣಿಸಿಕೊಂಡಿದ್ದಾರೆ. ಸುನೀಲ್ ಅವರ ಪಂಚಿಂಗ್ ಡೈಲಾಗ್ ವೀಕ್ಷಕರಿಗೆ ಇಷ್ಟವಾಗಿದೆ.
ಪ್ರಸಾರ ಯಾವಾಗ?
ಆಗಸ್ಟ್ 22 ರಿಂದ ಸಂಜೆ 6:30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಕೆಂಡಸಂಪಿಗೆ’ ಪ್ರಸಾರವಾಗಲಿದೆ.
ದೀನಬಂಧು ಆಶ್ರಮದಲ್ಲಿ ಬೆಳೆದ ಹುಡುಗ ಸುನೀಲ್
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಪುತ್ರ ಜಯದೇವ್ ಅವರು ಚಾಮರಾಜನಗರದಲ್ಲಿ ನಡೆಸುತ್ತಿರುವ ದೀನಬಂಧು ಆಶ್ರಮದ ಹುಡುಗ ಸುನೀಲ್. ಇದೇ ಆಶ್ರಮದಲ್ಲೇ ಸುನೀಲ್ ವಿದ್ಯಾಭ್ಯಾಸ ಪಡೆದುಕೊಂಡಿದ್ದಾರೆ. ಚಿಕ್ಕವಯಸ್ಸಿನಿಂದಲೂ ನಟನೆಯಲ್ಲಿ ಸುನೀಲ್ ಅವರಿಗೆ ಅತೀವ ಆಸಕ್ತಿಯಿತ್ತು.
ಶನಿ ಸೀರಿಯಲ್‌ಗೆ ಸುನೀಲ್ ಆಯ್ಕೆ ಆಗಿದ್ದು ಹೇಗೆ?
ಯಕ್ಷಗಾನ ಕಲಿಯಲು ಉಡುಪಿಗೆ ಹೋಗಿದ್ದಾಗ, ಅಲ್ಲಿ ‘ಶನಿ’ ಸೀರಿಯಲ್ ಆಡಿಷನ್ ನಡೆಯುತ್ತಿತ್ತು. ಆಡಿಷನ್‌ನಲ್ಲಿ ಕಾಸ್ಟಿಂಗ್ ಡೈರೆಕ್ಟರ್ ನೀಡಿದ ಡೈಲಾಗ್‌ಅನ್ನ ಸುನೀಲ್ ಪರ್ಫೆಕ್ಟ್ ಆಗಿ ಹೇಳಿದರು. ಪರಿಣಾಮ, ‘ಶನಿ’ ಪಾತ್ರಕ್ಕೆ ಸುನೀಲ್ ಆಯ್ಕೆಯಾದರು.
ಅಸಲಿಗೆ, ‘ಶನಿ’ ಪಾತ್ರಕ್ಕಾಗಿ ಸುಮಾರು 500 ಮಂದಿಯನ್ನು ಆಡಿಷನ್ ಮಾಡಲಾಗಿತ್ತು. 500 ಮಂದಿ ಪೈಕಿ ಆಯ್ಕೆ ಆಗಿದ್ದು ಸುನೀಲ್. ‘ಶನಿ’ ಸೀರಿಯಲ್ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ‘ಕೆಂಡಸಂಪಿಗೆ’ ಸೀರಿಯಲ್ ಮೂಲಕ ಕಿರುತೆರೆ ವೀಕ್ಷಕರ ಮನೆ ಮನ ಗೆಲ್ಲಲು ಸುನೀಲ್ ಮರಳುತ್ತಿದ್ದಾರೆ.
Sunil Of Shani Serial Fame Makes Comeback With Kendasampige Serial.
03-01-25 02:02 pm
HK News Desk
KSRTC Bus Fare Hike; ಬಿಟ್ಟಿ ಭಾಗ್ಯ ಐಸಾ, "ಕೈ" ಕ...
02-01-25 11:03 pm
Chamarajanagar Hostel Death: ನ್ಯೂ ಇಯರ್ ಗೆ ವಿದ...
02-01-25 07:42 pm
ನ್ಯೂ ಇಯರ್ ದಿನವೇ ಬೆಂಗಳೂರಿನ ಯಮಹಾ ಬೈಕ್ ಶೋರೂಂನಲ್ಲ...
02-01-25 02:44 pm
ಹಾಸನ ; ಕೆರೆ ಬಳಿ ನ್ಯೂ ಇಯರ್ ಪಾರ್ಟಿ, ಮುಳುಗಿ ಇಬ್ಬ...
01-01-25 11:03 pm
03-01-25 06:22 pm
HK News Desk
ಅಮೆರಿಕದಲ್ಲಿ ಟ್ರಕ್ ನುಗ್ಗಿಸಿ ಭಯೋತ್ಪಾದಕ ಘಟನೆ ; ಐ...
03-01-25 11:57 am
ಸ್ವಿಜರ್ಲ್ಯಾಂಡಿನಲ್ಲಿ ಜನವರಿ 1ರಿಂದಲೇ ಬುರ್ಖಾ ನಿಷೇ...
02-01-25 06:20 pm
ಅಮೆರಿಕದಲ್ಲಿ ಭೀಕರ ಅಪಘಾತ ; ನ್ಯೂ ಇಯರ್ ಸಂಭ್ರಮದಲ್...
02-01-25 12:02 pm
ಯೆಮನ್ ದೇಶದಲ್ಲಿ ಕೇರಳ ಮೂಲದ ನರ್ಸ್ ಗೆ ಮರಣದಂಡನೆ ;...
01-01-25 08:21 pm
03-01-25 05:40 pm
Mangalore Correspondent
BJP, Pralhad Joshi, Mangalore: ರಾಹುಲ್ ಹೇಳಿದಂತ...
02-01-25 09:26 pm
Anil Lobo, MCC Bank, Robert Rosario, Mangalor...
02-01-25 03:16 pm
ರಾಜ್ಯದಲ್ಲಿ ತೆಂಗಿನಕಾಯಿ ಇಳುವರಿ ಕುಸಿತ ; ದರ ವಿಪರೀ...
02-01-25 02:09 pm
Veddavyas Kamath, Mangalore: ಡೆತ್ ನೋಟ್ ಬರೆದಿಟ...
01-01-25 10:16 pm
02-01-25 11:00 pm
HK News Desk
Mangalore crime, Kankandy Police: ಹಾಡಹಗಲೇ ಚೂರ...
02-01-25 10:12 pm
Bangalore crime, Job fraud: ಸರ್ಕಾರಿ ನೌಕರಿ ಆಸೆ...
31-12-24 11:32 am
Online Fraud, Stock Market, Mangalore: ಯೂಟ್ಯೂ...
29-12-24 10:50 pm
Mangalore online game suicide: ಜಾಬ್ ಆಫರ್ ಲಿಂಕ...
28-12-24 04:26 pm