ಬ್ರೇಕಿಂಗ್ ನ್ಯೂಸ್
10-09-22 01:01 pm Source: Vijayakarnataka ಸಿನಿಮಾ
ದಿಗಂತ್ ನಾಯಕರಾಗಿರುವ 'ಎಡಗೈಯೇ ಅಪಘಾತಕ್ಕೆ ಕಾರಣ' ಎಂಬ ಸಿನಿಮಾದ ಕುರಿತ ಇತ್ತೀಚಿನ ವಿವರಗಳು ಇಲ್ಲಿವೆ.
ಗಾಳಿಪಟ-2 ಸಿನಿಮಾದಲ್ಲಿನ ನಟನೆಯಿಂದ ದಿಗಂತ್ ಅವರ ಅಭಿಮಾನಿಗಳ ಬಳಗ ಮತ್ತಷ್ಟು ಹೆಚ್ಚಾಗಿದೆ. ಇದೇ ಖುಷಿಯಲ್ಲಿರುವ ದಿಗಂತ್ ಈಗ 'ಎಡಗೈಯೇ ಅಪಘಾತಕ್ಕೆ ಕಾರಣ' ಎನ್ನುವ ವಿಭಿನ್ನ ಕಂಟೆಂಟ್ ಇರುವ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದಾರೆ.
ಸಮರ್ಥ್ ಕಡ್ಕೋಳ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾವನ್ನು 'ಅಂಬಿ ನಿಂಗೆ ವಯಸ್ಸಾಯ್ತೋ' ಖ್ಯಾತಿಯ ಗುರುದತ್ ಗಾಣಿಗ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಸಮರ್ಥ್ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. 'ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ವಿಶೇಷವಾದ ಸಬ್ಜೆಕ್ಟ್ ಅನ್ನು ಹೊಂದಿದೆ. ಇಡೀ ಸಿನಿಮಾ ಒಂದೇ ಲೊಕೇಶನ್‌ನಲ್ಲಿ ನಡೆಯುತ್ತದೆ. ಯಲಹಂಕ ಬಳಿಯ ಲಕ್ಷುರಿ ಅಪಾರ್ಟ್‌ಮೆಂಟ್ ಒಂದರಲ್ಲಿ ಈ ಸಿನಿಮಾದ ಚಿತ್ರೀಕರಣ ಶುಕ್ರವಾರದಿಂದ ಆರಂಭವಾಗಿದೆ. ಶುಕ್ರವಾರವೇ ಮುಹೂರ್ತ ಕೂಡ ಮಾಡಿದ್ದೇವೆ. ಚಿತ್ರೀಕರಣದಲ್ಲಿ ನಟ ದಿಗಂತ್, ನಾಯಕಿ ಧನು ಹರ್ಷ ಸೇರಿದಂತೆ ಒಂದಷ್ಟು ಕಲಾವಿದರು ಭಾಗವಹಿಸಲಿದ್ದಾರೆ' ಎಂದಿದ್ದಾರೆ ನಿರ್ದೇಶಕ ಸಮರ್ಥ್ ಕಡ್ಕೋಳ್.
'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾದಲ್ಲಿ ನಾಯಕ, ನಾಯಕಿ ಜತೆಗೆ ಮತ್ತೊಂದು ಪ್ರಮುಖ ಪಾತ್ರವೊಂದಿದ್ದು, ಅದನ್ನು ಸ್ಯಾಂಡಲ್‌ವುಡ್ ನಟಿ ನಿಧಿ ಸುಬ್ಬಯ್ಯ ನಿರ್ವಹಿಸಲಿದ್ದಾರೆ. ಆ ಪಾತ್ರದ ಬಗೆಗಿನ ಹೆಚ್ಚಿನ ವಿವರವನ್ನು ಚಿತ್ರತಂಡ ಮುಂದಿನ ದಿನಗಳಲ್ಲಿ ನೀಡಲಿದೆ.

ಪ್ರಪಂಚದಲ್ಲಿರುವ ಎಡಚರ ಕಷ್ಟಗಳನ್ನು ಈ ಸಿನಿಮಾದಲ್ಲಿ ತೋರಿಸಲು ನಿರ್ದೇಶಕರು ಸಜ್ಜಾಗಿದ್ದಾರೆ. ವಿಶೇಷ ಎಂದರೆ ಅದಕ್ಕಾಗಿ ಅವರು ಸಾಕಷ್ಟು ರಿಸರ್ಚ್ ಕೂಡ ಮಾಡಿಕೊಂಡಿದ್ದಾರೆ. ನಾಯಕ ನಟ ದಿಗಂತ್ ಈ ಸಿನಿಮಾದಲ್ಲಿ ಎಡಚನಾಗಿ ನಟಿಸುತ್ತಿದ್ದಾರೆ. ಅಭಿಮನ್ಯು ಸದಾನಂದ್ ಈ ಸಿನಿಮಾಗೆ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ.
''ಎಡಗೈಯೇ ಅಪಘಾತಕ್ಕೆ ಕಾರಣ' ಕಂಟೆಂಟ್ ಓರಿಯೆಂಟೆಡ್ ಸಿನಿಮಾ. ದಿಗಂತ್ ತಮ್ಮ ಕರಿಯರ್‌ನಲ್ಲಿ ಇಂತಹದ್ದೊಂದು ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದು ಡಾರ್ಕ್ ಕಾಮಿಡಿ ಜಾನರ್‌ನಲ್ಲಿ ನಡೆಯುವಂತಹ ಚಿತ್ರವಾಗಿದೆ'' ಎಂದು ನಿರ್ದೇಶಕ ಸಮರ್ಥ್ ಕಡ್ಕೋಳ್ ತಿಳಿಸಿದ್ದಾರೆ.
'‘ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದ ಸಬ್ಜೆಕ್ಟ್ ವಿಶಿಷ್ಟವಾಗಿದೆ. ಜಗತ್ತಿನಲ್ಲಿ ಶೇ.10ರಷ್ಟು ಮಂದಿ ಎಡಚರಿರುತ್ತಾರೆ. ಅವರು ಸಿಕ್ಕಾಪಟ್ಟೆ ಬುದ್ಧಿವಂತರಾಗಿರುತ್ತಾರೆ. ನಿರ್ದೇಶಕ ಸಮರ್ಥ್ ಕಡಕೋಳ್ ಈ ಸಬ್ಜೆಕ್ಟ್‌ಗಾಗಿ ಸಿಕ್ಕಾಪಟ್ಟೆ ರಿಸರ್ಚ್ ಮಾಡಿದ್ದಾರೆ. ಈ ಸಿನಿಮಾದ ಕಥೆಯ ಜತೆಗೆ ಚಿತ್ರಕಥೆಯೂ ಫನ್ನಿಯಾಗಿ ಸಾಗುತ್ತದೆ. ಪ್ರತಿ ದೃಶ್ಯದಲ್ಲಿಯೂ ನಗು ಬರುವಂತೆ ನಿರ್ದೇಶಕರು ಬರೆದಿರುವ ಕಾರಣ ಒಪ್ಪಿಕೊಂಡೆ. ನಾನು ಹಾಸ್ಯವನ್ನು ಪ್ರಧಾನವಾಗಿಟ್ಟುಕೊಂಡು ನಟಿಸಿದ ಸಿನಿಮಾಗಳೆಲ್ಲವೂ ಹಿಟ್ ಆಗಿವೆ. ಇದು ಸಹ ಜನರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆಯಿದೆ’' ಎಂದಿದ್ದಾರೆ ನಟ ದಿಗಂತ್.
Diganth Starrer Kannada Movie Edagaiye Apaghatakke Karana Goes On Floors.
31-10-25 08:10 pm
HK News Desk
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
31-10-25 10:47 pm
Mangalore Correspondent
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
ಅನಧಿಕೃತ ಪಾರ್ಕಿಂಗ್ ವಿರುದ್ಧ ಮಂಗಳೂರು ಪೊಲೀಸರ ಕಾರ್...
31-10-25 09:00 pm
78 ಶೇ. ಜನರಿಗೆ ಎರಡು ವರ್ಷದಲ್ಲಿ 23 ಸಾವಿರ ಮಕ್ಕಳು,...
31-10-25 03:05 pm
ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm