ಬ್ರೇಕಿಂಗ್ ನ್ಯೂಸ್
13-10-22 01:50 pm Source: Vijayakarnataka ಸಿನಿಮಾ
ಸದ್ಯ ಎಲ್ಲ ಕಡೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರದ್ದೇ ಸದ್ದು. ಈ ವರ್ಷದ ಟ್ರೆಂಡಿಂಗ್ 'ರಾ ರಾ ರಕ್ಕಮ್ಮ..' ನೀಡಿದ ಮೇಲೆ 'ಗುರು ಶಿಷ್ಯರು' ಚಿತ್ರಕ್ಕಾಗಿ 'ಆಣೆ ಮಾಡಿ ಹೇಳುತೀನಿ..' ಕೊಟ್ಟಿದ್ದರು ಅಜನೀಶ್ ಲೋಕನಾಥ್. ಆನಂತರ ಅವರೀಗ 'ಕಾಂತಾರ' ಮೂಲಕ ಭರ್ಜರಿ ಸದ್ದು ಮಾಡುತ್ತಿದ್ದಾರೆ. ಇದೀಗ ಅಜನೀಶ್ ಲೋಕನಾಥ್ ಕಡೆಯಿಂದ ಒಂದು ಗುಡ್ ನ್ಯೂಸ್ ಕೂಡ ಕೇಳಿಬಂದಿದೆ. ಏನದು? ಅಜನೀಶ್ ಟಾಲಿವುಡ್‌ಗೆ ರೀ-ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ 'ಮೆಗಾ ಸ್ಟಾರ್' ಫ್ಯಾಮಿಲಿಯ ಸಾಯಿ ಧರಮ್ ತೇಜ್ ನಟನೆಯ ಹೊಸ ಸಿನಿಮಾಗೆ ಸಂಗೀತ ನೀಡಲಿದ್ದಾರೆ.
ಸಾಯಿ ಧರಮ್ ತೇಜ್ ಸಿನಿಮಾಗೆ ಅಜನೀಶ್ ಸಂಗೀತ
'ಮೆಗಾ ಸ್ಟಾರ್' ಚಿರಂಜೀವಿ ಅವರ ಸಹೋದರಿಯ ಮಗ ಸಾಯಿ ಧರಮ್ ತೇಜ್ ಅವರ 15ನೇ ಸಿನಿಮಾ ಸೆಟ್ಟೇರಿದ್ದು ಶೂಟಿಂಗ್ ಕೂಡ ಶುರುವಾಗಿದೆ. ಕಳೆದ ವರ್ಷ ಅಪಘಾತದಿಂದ ಗಾಯಗೊಂಡಿದ್ದ ಸಾಯಿ ಧರಮ್ ತೇಜ್, ಇದೀಗ ಪುನಃ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಈಗ ಅವರು ಹೊಸ ಸಿನಿಮಾವನ್ನು ಆರಂಭಿಸಿದ್ದಾರೆ. ಆ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿರುವುದು ವಿಶೇಷ. ಈ ಕುರಿತು ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಿದೆ. 'ನಮ್ಮ ತಂಡಕ್ಕೆ ಸ್ವಾಗತ ಸಹೋದರ ಅಜನೀಶ್ ಲೋಕನಾಥ್.. ಇನ್ನಷ್ಟು ಸಂಗೀತಮಯವಾಗಲಿ..' ಎಂದು ಸಾಯಿ ಧರಮ್ ತೇಜ್ ಹೇಳಿಕೊಂಡಿದ್ದಾರೆ.

ಈ ಸಿನಿಮಾಗೆ ಕಾರ್ತಿಕ್ ದಂಡು ನಿರ್ದೇಶನ ಮಾಡುತ್ತಿದ್ದು, 'ರಂಗಸ್ಥಲಂ', 'ಪುಷ್ಪ' ಖ್ಯಾತಿಯ ನಿರ್ದೇಶಕ ಸುಕುಮಾರ್ ಈ ಸಿನಿಮಾಗೆ ಸ್ಕ್ರಿಪ್ಟ್ ಬರೆದಿರುವುದು ವಿಶೇಷ. ಸದ್ಯಕ್ಕಿನ್ನೂ ಶೀರ್ಷಿಕೆ ನಿಗದಿಯಾಗಿಲ್ಲ. ಈ ಸಿನಿಮಾಕ್ಕೆ ಬಿವಿಎಸ್‌ಎನ್ ಪ್ರಸಾದ್ ಹಣ ಹಾಕುತ್ತಿದ್ದಾರೆ.

2009ರಲ್ಲೇ ಚಿತ್ರರಂಗ ಪ್ರವೇಶಿಸಿದ್ದ ಅಜನೀಶ್ ಲೋಕನಾಥ್‌ಗೆ ಬ್ರೇಕ್ ಸಿಕ್ಕಿದ್ದು 2014ರಲ್ಲಿ ತೆರೆಕಂಡ 'ಉಳಿದವರು ಕಂಡಂತೆ' ಚಿತ್ರದಿಂದ. ಆನಂತರ ಅವರು ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ನಂತರ 'ಕಿರಿಕ್ ಪಾರ್ಟಿ' ಸಿನಿಮಾಡ ಆಡಿಯೋ ಕೂಡ ಅದ್ಭುತ ಯಶಸ್ಸನ್ನು ಕಂಡಿತು. 'ಕಿರಿಕ್ ಪಾರ್ಟಿ' ಚಿತ್ರ ತೆಲುಗಿಗೆ ರಿಮೇಕ್ ಆದಾಗ ಅದಕ್ಕೂ ಅಜನೀಶ್ ಸಂಗೀತ ನೀಡಿದ್ದರು. ಆ ಮೂಲಕ ಅವರು ಟಾಲಿವುಡ್‌ಗೆ ಮೊದಲ ಬಾರಿಗೆ ಎಂಟ್ರಿ ನೀಡಿದ್ದರು. ನಂತರ ಬಂದ 'ನನ್ನು ದೊಚುಕುಂಡುವಟೆ' ಸಿನಿಮಾಕ್ಕೂ ಅಜನೀಶ್ ಸಂಗೀತ ನೀಡಿದ್ದರು. ಇದೀಗ ನಾಲ್ಕು ವರ್ಷಗಳ ನಂತರ ಮತ್ತೆ ತೆಲುಗಿಗೆ ರೀ-ಎಂಟ್ರಿ ನೀಡಿದ್ದಾರೆ ಅಜನೀಶ್.
ಸಖತ್ ಬ್ಯುಸಿ ಸಂಗೀತ ನಿರ್ದೇಶಕ
ಸದ್ಯ 'ಕಾಂತಾರ' ದೊಡ್ಡ ಯಶಸ್ಸು ಕಂಡಿದೆ. ಅಕ್ಟೋಬರ್ 28ರಂದು ತೆರೆಗೆ ಬರಲಿರುವ ಪುನೀತ್ ರಾಜ್‌ಕುಮಾರ್ ಅವರ ಬಹುನಿರೀಕ್ಷಿತ 'ಗಂಧದ ಗುಡಿ'ಗೂ ಕೂಡ ಅಜನೀಶ್ ಸಂಗೀತವಿದೆ. ನವೆಂಬರ್ 4ರಂದು ರಿಲೀಸ್ ಆಗಲಿರುವ 'ಬನಾರಸ್' ಹಾಡುಗಳಿಗೂ ಅಜನೀಶ್ ಸಂಗೀತ ಸಂಯೋಜಿಸಿದ್ದಾರೆ. ಆದಾದ ಮೇಲೆ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ', 'ಸ್ಪೂಕಿ ಕಾಲೇಜ್', 'ವಾಮನ', 'ಚಾಂಪಿಯನ್', 'ಕೈವ', 'ಹೊಯ್ಸಳ', 'ಯುಐ', 'ಬೆಲ್ ಬಾಟಂ 2', 'ಬಘೀರ', 'ರಿಚರ್ಡ್ ಆಂಟನಿ' ಇನ್ನೂ ಮುಂತಾದ ಸಿನಿಮಾಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಲಿದ್ದಾರೆ.
Kantara Music Director Ajaneesh Loknath Gets On Board For Sai Dharam Tejs New Movie.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm