ಬ್ರೇಕಿಂಗ್ ನ್ಯೂಸ್
04-03-23 02:52 pm Source: news18 ಸಿನಿಮಾ
ಮಂಚು ಮನೋಜ್ ಅವರ ಎರಡನೇ ವಿವಾಹ ಇದಾಗಿದ್ದು ಮದುವೆ ಸಮಾರಂಭ ಮಂಚು ನಿಲಯದಲ್ಲಿ ಅದ್ಧೂರಿಯಾಗಿ ನೆರವೇರಿತು. ಭೂಮಾ ಮೌನಿಕಾ ರೆಡ್ಡಿ ಮಂಚು ಮನೋಜ್ ಸಪ್ತಪದಿ ತುಳಿದಿದ್ದಾರೆ. ಮದುವೆ ಫೋಟೋಗಳು ಇದೀಗ ಸಖತ್ ವೈರಲ್ ಆಗುತ್ತಿವೆ. ಮಾರ್ಚ್ 3 ರಂದು ನಡೆದ ಅದ್ಧೂರಿ ಕಲ್ಯಾಣದಲ್ಲಿ ಮಂಚು ಮನೋಜ್- ಭೂಮಾ ಮೌನಿಕಾ ರೆಡ್ಡಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರಿಗೂ ಇದು 2ನೇ ಮದುವೆ ಆಗಿದೆ. ಇಬ್ಬರೂ ತಮ್ಮ ಜೀವನದಲ್ಲಿ ಏಳು ಹೆಜ್ಜೆ ಇಡುತ್ತಾ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದಾರೆ. ಮನೋಜ್ ಮತ್ತು ಮೌನಿಕಾಗೆ ಶುಭಾಷಯಗಳು ಹರಿದು ಬರ್ತಿವೆ.
ಭೂಮಾ ಮೌನಿಕಾ ರೆಡ್ಡಿ ದಿವಂಗತ ಭೂಮಾ ನಾಗಿರೆಡ್ಡಿ ಮತ್ತು ಶೋಭಾ ರೆಡ್ಡಿ ಅವರ 2ನೇ ಪುತ್ರಿಯಾಗಿದ್ದಾರೆ. ಮೌನಿಕಾಳನ್ನು ಪ್ರೀತಿಸುತ್ತಿದ್ದ ಮಂಚು ಮನೋಜ್ ಈಗ ಅವಳಿಗೆ ಮೂರು ಗಂಟು ಹಾಕಿದ್ದಾರೆ. ಈ ಜೋಡಿಗೆ ಅನೇಕ ಸಿನಿ ಮತ್ತು ರಾಜಕೀಯ ಗಣ್ಯರು ಶುಭ ಕೋರುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಮಂಚು ಮನೋಜ್ ಮದುವೆ ಸುದ್ದಿ ಟ್ರೆಂಡಿಂಗ್ ಆಗಿತ್ತು. ಮೋಹನ್ ಬಾಬು ಈ ಮದುವೆ ಬೇಡ, ಮದುವೆಗೆ ನಾನು ಬರೋದಿಲ್ಲ ಎನ್ನುತ್ತಿದ್ದಾರೆ ಎಂದು ಸುದ್ದಿ ಹರಡಿತ್ತು. ಆದ್ರೆ ಮಹನ್ ಬಾಬು ಅವರು ತಮ್ಮ ಕಿರಿಯ ಪುತ್ರ ಮನೋಜ್ ಮದುವೆಯನ್ನು ಬಹಳ ಅದ್ಧೂರಿಯಾಗೇ ಮಾಡಿದ್ದಾರೆ.
ಭೂಮಾ ಮೌನಿಕಾ ರೆಡ್ಡಿ ಟಿಡಿಪಿ ನಾಯಕಿ ಭೂಮಾ ನಾಗಿರೆಡ್ಡಿ ಅವರ ಮಗಳಾಗಿರುವುದರಿಂದ ಅವರನ್ನು ಸೊಸೆಯಾಗಿ ಸ್ವೀಕರಿಸಲು ಮೋಹನ್ ಬಾಬು ಒಪ್ಪಲಿಲ್ಲ ಎಂಬ ವರದಿಗಳು ಹರಡಿದ್ದವು. ಆದರೆ ಮನೋಜ್ ಮದುವೆಯ ಫೋಟೋಗಳೊಂದಿಗೆ ಆ ಸುದ್ದಿಗಳೆಲ್ಲವೂ ಸುಳ್ಳು ಎಂಬುದು ಸ್ಪಷ್ಟವಾಗಿದೆ. ಈ ಹಿಂದೆ 2015 ರಲ್ಲಿ ಹೈದರಾಬಾದ್ನ ಪ್ರಣತಿ ರೆಡ್ಡಿ ಅವರನ್ನು ಮದುವೆಯಾಗಿದ್ದ ಮಂಚು ಮನೋಜ್, 4 ವರ್ಷಗಳ ಕಾಲ ಒಟ್ಟಿಗೆ ಇದ್ದರು. ಬಳಿಕ 2019 ರಲ್ಲಿ ವಿಚ್ಛೇದನ ಪಡೆದರು. ವೈಯಕ್ತಿಕ ಕಾರಣಗಳಿಂದ ಮಂಚು ಮನೋಜ್ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದಾರೆ. ಇದೀಗ ಮೌನಿಕಾ ಜೊತೆ ಮಂಚು ಮನೋಜ್ ಹೊಸ ಬಾಂಧವ್ಯಕ್ಕೆ ಕಾಲಿಟ್ಟಿದ್ದಾರೆ.
ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಮನೋಜ್ 2ನೇ ಮದುವೆಗೆ ರೆಡಿಯಾಗುತ್ತಿರುವುದು ಭಾರೀ ಸುದ್ದಿಯಾಗಿತ್ತು. ಈ ಬಗ್ಗೆ ಅನೇಕ ವದಂತಿಗಳು ಹಬ್ಬಿದ್ದವು. ಆದರೆ ಅಂತಿಮವಾಗಿ ಮನೋಜ್-ಮೌನಿಕಾ ಮದುವೆಯ ಬಂಧದಿಂದ ಹೊಸ ಪ್ರಯಾಣವನ್ನು ಪ್ರಾರಂಭಿಸಿದ್ದು, ಅನೇಕರು ನವ ಜೋಡಿಗೆ ಶುಭಕೋರಿದ್ದಾರೆ.
Mohan Babu attended manchu manoj wedding with-bhuma mounika reddy.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm