ಬ್ರೇಕಿಂಗ್ ನ್ಯೂಸ್
18-07-23 02:22 pm Source: Vijayakarnataka ಸಿನಿಮಾ
ಹರೀಶ್ ಬಸವರಾಜ್
ಪ್ರತಿವರ್ಷ ಪ್ರಜ್ವಲ್ ದೇವರಾಜ್ ಕೈಯಲ್ಲಿ ಮೂರ್ನಾಲ್ಕು ಸಿನಿಮಾಗಳಿರುತ್ತವೆ. ಹಲವು ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಅವರು ಡಾರ್ಲಿಂಗ್ ಇದ್ದಂತೆ. ಇತ್ತೀಚೆಗೆ ನಡೆದ ಅವರ ಹುಟ್ಟುಹಬ್ಬದಂದು ಎರಡು ಸಿನಿಮಾ ಅನೌನ್ಸ್‌ಮೆಂಟ್ ಮತ್ತು ಎರಡು ಚಿತ್ರಗಳ ಫಸ್ಟ್ ಲುಕ್ ಬಿಡುಗಡೆಯಾಗಿದ್ದವು. ಈಗ ಪ್ರಜ್ವಲ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದು, ಅದನ್ನು ನೃತ್ಯ ನಿರ್ದೇಶಕ ಕಲೈ ಮಾಸ್ಟರ್ ನಿರ್ದೇಶನ ಮಾಡುತ್ತಿದ್ದಾರೆ.
ಮೊದಲ ಬಾರಿಗೆ ನಿರ್ದೇಶಕರಾದ ಕಲೈ ಮಾಸ್ಟರ್
ಚಿತ್ರರಂಗದಲ್ಲಿ ಈಗಾಗಲೇ ಹಲವು ನೃತ್ಯ ನಿರ್ದೇಶಕರು ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿ ಸಕ್ಸಸ್ ಆಗಿದ್ದು, ಈ ಸಾಲಿಗೆ ಸೇರಲು ಈಗ ಕಲೈ ಮಾಸ್ಟರ್ ಸಹ ಸಿದ್ಧರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ ಭಾಷೆಗಳಲ್ಲಿ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿರುವ ಅವರಿಗೆ ಇದು ಮೊದಲ ಪ್ರಯತ್ನವಾಗಿದ್ದು, ಈಗಾಗಲೇ ಅವರು 300ಕ್ಕೂ ಹೆಚ್ಚಿನ ಹಾಡುಗಳಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಎಲ್ಲಾ ಸ್ಟಾರ್‌ಗಳನ್ನು ಕುಣಿಸಿದ ಖ್ಯಾತಿ ಇವರಿಗಿದೆ.
ಇದು ನಗರ ಪ್ರದೇಶದ ಜನರ ಮತ್ತು ರೈತರ ಕಥೆ
'ನನ್ನ ಮೊದಲ ನಿರ್ದೇಶನದ ಸಿನಿಮಾ ಅಕ್ಟೋಬರ್‌ನಿಂದ ಆರಂಭವಾಗಲಿದೆ. ಇದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು, ಇದರಲ್ಲಿ ನಗರ ಪ್ರದೇಶದ ಜನರ ಮತ್ತು ರೈತರ ಕಥೆ ಹೇಳಲಿದ್ದೇನೆ. ಪ್ರಜ್ವಲ್ ಕಥೆ ಕೇಳಿ ಬಹಳ ಇಷ್ಟಪಟ್ಟು ಒಪ್ಪಿದ ಸಿನಿಮಾವಿದು. ಇದಕ್ಕೆ ತಕ್ಕಂತೆ ವರ್ಕ್‌ಶಾಪ್ ಮಾಡೋಣ ಎಂದೆಲ್ಲಾ ಹೇಳಿದ್ದಾರೆ’ ಎಂದು ಕಲೈ ಹೇಳಿದ್ದಾರೆ. ಪ್ರಜ್ವಲ್ ದೇವರಾಜ್ ನಟನೆಯ ‘ಗಣ’, ‘ಮಾಫಿಯಾ’ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದ್ದು, ಆ ಎಲ್ಲಾ ಸಿನಿಮಾಗಳಿಗಿಂತಲೂ ಈ ಚಿತ್ರ ಭಿನ್ನ ಎಂದು ಕಲೈ ತಿಳಿಸಿದ್ದಾರೆ. ಇದರಲ್ಲಿ ಪ್ರಜ್ವಲ್ ಲುಕ್ ಕೂಡ ಬದಲಾಗಲಿದ್ದು, ಅದಕ್ಕೆ ಸಂಬಂಧಪಟ್ಟಂತೆ ಚಿತ್ರತಂಡ ಕೆಲಸ ಮಾಡುತ್ತಿದೆ ಎನ್ನಲಾಗಿದೆ.
ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪ್ರಜ್ವಲ್
ನಟ ಪ್ರಜ್ವಲ್ ದೇವರಾಜ್ ಕೂಡ ಈಗ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಮುಂದಾಗಿದ್ದಾರೆ. ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾಗೆ 'ಜಾತರ' ಎಂದು ಟೈಟಲ್ ಇಡಲಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಲವ್ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಕಥೆ ಇರುವ ಇರುವ ಈ ಚಿತ್ರದಲ್ಲಿ ಪ್ರಜ್ವಲ್‌ಗೆ ವಿಭಿನ್ನ ಲುಕ್ ಇರಲಿದೆಯಂತೆ. ಹೈದರಾಬಾದ್ ಮೂಲದ ವರ್ಧಮಾನ್ ಫಿಲಂಸ್ ಹಾಗೂ ಲೋಟಸ್ ಎಂಟರ್‌ಟೇನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಗೋವರ್ಧನ್ ರೆಡ್ಡಿ ಅವರು 'ಜಾತರೆ' ಚಿತ್ರವನ್ನು ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ರಿಲೀಸ್‌ಗೆ 'ಗಣ' & 'ಮಾಫಿಯಾ'
ನಟ ಪ್ರಜ್ವಲ್ ದೇವರಾಜ್ ಅವರು ಹರಿಪ್ರಸಾದ್ ಜಕ್ಕ ಅವರ 'ಗಣ' ಚಿತ್ರದಲ್ಲಿ ನಟಿಸಿದ್ದು, ಈಚೆಗೆ ಅದರ ಟೀಸರ್ ರಿಲೀಸ್ ಆಗಿತ್ತು. ಜೊತೆಗೆ ಅತೀ ಶೀಘ್ರದಲ್ಲೇ 'ಗಣ' ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಹಾಗೆಯೇ 'ಮಮ್ಮಿ' ಲೋಹಿತ್ ನಿರ್ದೇಶನದ 'ಮಾಫಿಯಾ' ಚಿತ್ರದಲ್ಲೂ ಪ್ರಜ್ವಲ್ ದೇವರಾಜ್ ನಟಿಸಿದ್ದಾರೆ. ಅದು ಕೂಡ ರಿಲೀಸ್‌ಗೆ ಸಿದ್ಧವಾಗಿದೆ.
Prajwal Devaraj and dance master Kalai join hands for new project.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm