ಬ್ರೇಕಿಂಗ್ ನ್ಯೂಸ್
19-07-23 12:32 pm Source: Vijayakarnataka ಸಿನಿಮಾ
ನಾಗಶೇಖರ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾಗಳಲ್ಲಿ 'ಸಂಜು ವೆಡ್ಸ್ ಗೀತಾ' ಕೂಡ ಒಂದು. ಈಗ ಇದರ 2ನೇ ಭಾಗ ಆರಂಭವಾಗಲಿದ್ದು, ಶ್ರೀನಗರ ಕಿಟ್ಟಿ ಅವರೇ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ನಾಯಕಿಯಾಗಿ 'ಸ್ಯಾಂಡಲ್‌ವುಡ್ ಕ್ವೀನ್' ರಮ್ಯಾ ಬದಲು 'ಡಿಂಪಲ್ ಕ್ವೀನ್' ರಚಿತಾ ರಾಮ್ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ, ರಮ್ಯಾ 'ಸಂಜು ವೆಡ್ಸ್ ಗೀತಾ ಭಾಗ 2'ರಲ್ಲಿ ನಟಿಸುವುದಿಲ್ಲವೇ? ಈ ಬಗ್ಗೆ ನಿರ್ದೇಶಕ ನಾಗಶೇಖರ್ ಹೇಳಿದ್ದೇನು?
ನಟ ಶ್ರೀನಗರ ಕಿಟ್ಟಿ ಮತ್ತು 'ಸ್ಯಾಂಡಲ್‌ವುಡ್ ಕ್ವೀನ್' ರಮ್ಯಾ ನಟನೆಯ ‘ಸಂಜು ವೆಡ್ಸ್ ಗೀತಾ’ ಸಿನಿಮಾಗೆ ದಶಕ ಸಂದಿದ್ದರೂ ಅದು ಈಗಲೂ ಸಿನಿಪ್ರಿಯರ ಮನದಲ್ಲಿ ಹಚ್ಚಹಸಿರು. ನಾಗಶೇಖರ್ ನಿರ್ದೇಶನದ ಈ ಸೂಪರ್ ಹಿಟ್ ಸಿನಿಮಾ ಕನ್ನಡದ ಅದ್ಭುತ ಪ್ರೇಮಕಥೆಯ ಪಟ್ಟಿಗೆ ಸೇರಿದೆ. ಈಗ ಅವರು 'ಸಂಜು ವೆಡ್ಸ್ ಗೀತಾ 2' ಸಿನಿಮಾ ಅನೌನ್ಸ್ ಮಾಡಿದ್ದು, ಅದರಲ್ಲಿ ಈ ಬಾರಿ ನಟಿ ರಮ್ಯಾ ಬದಲು, ರಚಿತಾ ರಾಮ್ ನಾಯಕಿಯಾಗುವ ಸಾಧ್ಯತೆ ಇದೆ.
ಯುವ ದಂಪತಿಯ ಪ್ರೇಮ
‘ಸಂಜು ವೆಡ್ಸ್ ಗೀತಾ’ ಭಾಗ 1ರಲ್ಲಿ ನಾಯಕರಾಗಿದ್ದ ಶ್ರೀನಗರ ಕಿಟ್ಟಿ ಅವರು ‘ಸಂಜು ವೆಡ್ಸ್ ಗೀತಾ’ ಭಾಗ 2ರಲ್ಲಿಯೂ ಮುಂದುವರೆದಿದ್ದಾರೆ. ನಾಯಕಿ ಮಾತ್ರ ಬದಲಾಗಿದ್ದು, ನಿರ್ದೇಶಕರು ಈಗಾಗಲೇ ರಚಿತಾರಿಗೆ ಕಥೆ ಹೇಳಿದ್ದಾರೆ. ಆದರೆ ಅವರು ನಟಿಸುತ್ತಾರಾ, ಇಲ್ವಾ ಎಂಬ ಬಗ್ಗೆ ಶೀಘ್ರದಲ್ಲೇ ಅಧಿಕೃತ ಅನೌನ್ಸ್‌ಮೆಂಟ್ ಆಗಲಿದೆ. 'ರಚಿತಾ ರಾಮ್ ಇದರ ಕಥೆ ಇಷ್ಟಪಟ್ಟಿದ್ದಾರೆ. ಪ್ರತಿಯೊಬ್ಬರು ಇಷ್ಟಪಡುವಂತಹ ಪಾತ್ರ ಇದಾಗಲಿದೆ. ಇದರಲ್ಲಿ ಶ್ರೀನಗರ ಕಿಟ್ಟಿ ಯಥಾಸ್ಥಿತಿ ಮುಂದುವರೆದಿದ್ದಾರೆ. ಇದರ ಅರ್ಧ ಭಾಗವನ್ನು ಕರ್ನಾಟಕದ ಸುಂದರ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡುತ್ತೇವೆ. ಇನ್ನರ್ಧ ಭಾಗ ಸ್ವಿಟ್ಜರ್ಲೆಂಡ್‌ನಲ್ಲಿ ಚಿತ್ರೀಕರಣವಾಗಲಿದೆ. ಯುವ ದಂಪತಿಯ ಅದ್ಭುತ ಪ್ರೇಮಕಥೆಯನ್ನು ಈ ಚಿತ್ರದಲ್ಲಿ ಹೇಳಲಿದ್ದೇನೆ’ ಎಂದು ನಿರ್ದೇಶಕ ನಾಗಶೇಖರ್ ಹೇಳಿದ್ದಾರೆ.
ಸೂಪರ್ ಸ್ಟಾರ್ ನೀಡಿದ ಕಥೆ
'ಸಂಜು ವೆಡ್ಸ್ ಗೀತಾ' ಸಿನಿಮಾದ ಕಥೆಯನ್ನು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ನೀಡಿದ್ದರು. ಈಗ ಭಾಗ 2ರ ಕಥೆಯ ಒನ್‌ಲೈನ್ ಅನ್ನು ಕನ್ನಡದ ಸೂಪರ್ ಸ್ಟಾರ್ ಒಬ್ಬರು ನೀಡಿದ್ದಾರೆ ಎಂದು ನಾಗಶೇಖರ್ ತಿಳಿಸಿದ್ದಾರೆ. ‘ಅವರು ನೀಡಿದ ಐಡಿಯಾ ಆಧರಿಸಿ ನಾನು ಈ ಸಿನಿಮಾದ ಸಂಪೂರ್ಣ ಕಥೆ ಮಾಡಿದ್ದೇನೆ’ ಎಂದಿದ್ದಾರೆ ನಿರ್ದೇಶಕರು. ‘ಈ ಚಿತ್ರದಲ್ಲಿ ಅತಿಥಿ ಪಾತ್ರವೊಂದಿದ್ದು, ಅದನ್ನು ನಟಿ ರಮ್ಯಾರಿಂದಲೇ ಮಾಡಿಸಬೇಕು ಎಂದುಕೊಂಡಿದ್ದೇನೆ. ಅವರು ಇದಕ್ಕೆ ಒಪ್ಪಬೇಕಷ್ಟೆ’ ಎಂದು ವಿವರಿಸಿದ್ದಾರೆ ನಾಗಶೇಖರ್.
ಪ್ರಕಾಶ್ ರೈ, ರಮ್ಯಕೃಷ್ಣ ನಟನೆ
'ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲೂ ಒಂದು ಭಾವನಾತ್ಮಕ ಕಥೆಯನ್ನು ಪ್ರೇಕ್ಷಕರಿಗೆ ಹೇಳಲಿದ್ದೇನೆ. ಇದರ ಸಂಗೀತ, ಸಿನಿಮಾಟೋಗ್ರಫಿ ಇತ್ಯಾದಿಗಳು ಮೊದಲ ಸಿನಿಮಾಗಿಂತಲೂ ಅದ್ಧೂರಿಯಾಗಿರಲಿವೆ. ಪ್ರಕಾಶ್ ರೈ, ರಮ್ಯಕೃಷ್ಣ ಸೇರಿದಂತೆ ಹಲವು ಪ್ರಮುಖ ತಾರೆಯರು ಈ ಸಿನಿಮಾದಲ್ಲಿದ್ದು, ಈಗಾಗಲೇ ಇದರ ಹಾಡುಗಳ ಕಂಪೋಸಿಂಗ್ ಮುಗಿದಿದೆ. ಶ್ರೀಧರ್ ಸಂಭ್ರಮ್ ಸಂಗೀತ ನೀಡುತ್ತಿದ್ದು, ಆಗಸ್ಟ್ 15ರಂದು ಈ ಸಿನಿಮಾ ಲಾಂಚ್ ಮಾಡಿ, ಆಗಸ್ಟ್ 16ರಿಂದ ಚಿತ್ರೀಕರಣ ಆರಂಭಿಸಲಿದ್ದೇನೆ' ಎಂದು ನಿರ್ದೇಶಕ ನಾಗಶೇಖರ್.
ಅಂದಹಾಗೆ, 2011ರ ಏಪ್ರಿಲ್ 1ರಂದು 'ಸಂಜು ವೆಡ್ಸ್ ಗೀತಾ' ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದ ಚಿತ್ರದ ಹಾಡುಗಳು ದೊಡ್ಡಮಟ್ಟದಲ್ಲಿ ಸಕ್ಸಸ್ ಆಗಿದ್ದವು. ನಟಿ ರಮ್ಯಾ ಅವರಿಗೆ ರಾಜ್ಯ ಪ್ರಶಸ್ತಿ ನೀಡಲಾಗಿತ್ತು.
Rachita ram likely to be play female lead in Srinagar kitty and Nagashekars Sanju weds Geetha part 2.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm