KGF in Japan: 10 ದಿನಕ್ಕೆ 14000 ಟಿಕೆಟ್ ಮಾರಾಟ: ಜಪಾನ್ ಬಾಕ್ಸಾಫೀಸ್‌ನಲ್ಲಿ ರಾಕಿ ಅಬ್ಬರಿಸಿ ದೋಚಿದೆಷ್ಟು?

26-07-23 01:54 pm       Source: Filmy Beat   ಸಿನಿಮಾ

ಕನ್ನಡದ KGF ಸರಣಿ ಸಿನಿಮಾ ಜಪಾನ್ ದೇಶದಲ್ಲಿ ಸದ್ದು ಮಾಡ್ತಿದೆ. ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೀತಿದೆ. ಜುಲೈ 14ಕ್ಕೆ KGF ಚಾಪ್ಟರ್-1 ಹಾಗೂ ಚಾಪ್ಟರ್-2 ಜಪಾನ್ ಪ್ರೇಕ್ಷಕರ ಮುಂದೆ ಹೋಗಿತ್ತು.

ಕನ್ನಡದ KGF ಸರಣಿ ಸಿನಿಮಾ ಜಪಾನ್ ದೇಶದಲ್ಲಿ ಸದ್ದು ಮಾಡ್ತಿದೆ. ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೀತಿದೆ. ಜುಲೈ 14ಕ್ಕೆ KGF ಚಾಪ್ಟರ್-1 ಹಾಗೂ ಚಾಪ್ಟರ್-2 ಜಪಾನ್ ಪ್ರೇಕ್ಷಕರ ಮುಂದೆ ಹೋಗಿತ್ತು. ಸದ್ಯ ಸಿನಿಮಾ 12 ದಿನ ಪೂರೈಸಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. 2 ವೀಕೆಂಡ್‌ಗಳಲ್ಲಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು ಸಿನಿಮಾ ಕಲೆಕ್ಷನ್ ಹೆಚ್ಚಾಗಿದೆ.

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ KGF ಸಿನಿಮಾ 2018ರಲ್ಲಿ ತೆರೆಗಪ್ಪಳಿಸಿತ್ತು. ಕಳೆದ ವರ್ಷ ಸರಣಿಯ 2ನೇ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಬರೋಬ್ಬರಿ 1200 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು. ಕರ್ನಾಟಕ ಮಾತ್ರವಲ್ಲದೇ ಉತ್ತರ ಭಾರತದಲ್ಲೂ ಸಿನಿಮಾ ಸೂಪರ್ ಹಿಟ್ ಆಯಿತು. ಬಾಲಿವುಡ್ ನಟರೇ ಯಶ್ ಅಭಿಮಾನಿಗಳಾಗಿಬಿಟ್ಟಿದ್ದಾರೆ. ಸರಣಿಯ ಮತ್ತೊಂದು ಚಿತ್ರಕ್ಕಾಗಿ ಇಡೀ ಭಾರತೀಯ ಚಿತ್ರರಂಗ ಕಾಯುತ್ತಿದೆ. ಆದರೆ ಸದ್ಯಕ್ಕೆ ಅಂತಹ ಪ್ರಯತ್ನ ನಡೀತಿಲ್ಲ. ಆದರೆ ಸೂಪರ್ ಹಿಟ್ KGF ಸರಣಿ ಸಿನಿಮಾಗಳು ಜಪಾನ್ ದೇಶದಲ್ಲಿ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣ್ತಿವೆ.

ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಜಪಾನ್ ಬಾಕ್ಸಾಫೀಸ್‌ನಲ್ಲಿ 120 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇದರ ಬೆನ್ನಲ್ಲೇ ಕನ್ನಡದ 'KGF' ಹಾಗೂ ತೆಲುಗಿನ 'ರಂಗಸ್ಥಳಂ' ಒಟ್ಟಿಗೆ ಜಪಾನ್ ದೇಶದ ಬೆಳ್ಳಿತೆರೆಗಳ ಮೇಲೆ ಅಪ್ಪಳಿಸಿವೆ. ಮೂರು ಚಿತ್ರಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾ ನೋಡಿದವರೆಲ್ಲಾ ಮೆಚ್ಚಿ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

KGF Chapter 2: Here's how many crores Yash is earning for his latest  blockbuster | GQ India

1 ಕೋಟಿ ಗಳಿಕೆ ಕಂಡ KGF ಸರಣಿ

ತೆಲುಗಿನ RRR ಸಿನಿಮಾ ಜಪಾನ್ ದೇಶದಲ್ಲಿ 240ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಆದರೆ 90 ಸ್ಕ್ರೀನ್‌ಗಳಲ್ಲಿ KGF ಚಾಪ್ಟರ್-1 ಹಾಗೂ 85 ಸ್ಕ್ರೀನ್‌ಗಳಲ್ಲಿ ಚಾಪ್ಟರ್-2 ಆರ್ಭಟ ಶುರುವಾಗಿತ್ತು. 10 ದಿನಕ್ಕೆ ಅಂದಾಜು 20 ಮಿಲಿಯನ್ ಯೆನ್ ಕಲೆಕ್ಷನ್ ಆಗಿದೆಯಂತೆ. ಅಂದರೆ ಭಾರತದ ರೂಪಾಯಿಯಲ್ಲಿ ಅಂದಾಜು 1.16 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ಜಪಾನ್ ದೇಶದಲ್ಲಿ ರಿಲೀಸ್ ಆಗಿದೆ. ಕನ್ನಡ ಸಿನಿಮಾಗಳ ಬಗ್ಗೆ ಪರಿಚಯವೇ ಇಲ್ಲದ ಜಪಾನೀಯರು ಸಿನಿಮಾ ನೋಡಿ ಖುಷಿಯಾಗಿದ್ದಾರೆ.

ಒಟ್ಟು 14 ಸಾವಿರ ಟಿಕೆಟ್ ಮಾರಾಟ

12 ಕೋಟಿ ಜನ ಸಂಖ್ಯೆಯ ಪುಟ್ಟ ದೇಶ ಜಪಾನ್. ಅಲ್ಲಿ ಸಿನಿಮಾ ಥಿಯೇಟರ್‌ಗಳು ಚಿಕ್ಕದಾಗಿ ಇರುತ್ತದೆ. ಸಿನಿಮಾ ನೋಡುವವರ ಸಂಖ್ಯೆ ಕೂಡ ಕಡಿಮೆಯೇ ಇರುತ್ತದೆ. ಆದರೂ ಭಾರತದ ಕೆಲ ಸಿನಿಮಾಗಳಿಗೆ ಅಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಇದೀಗ KGF ಸರಣಿ ಸಿನಿಮಾಗಳನ್ನು ಕೂಡ ಪ್ರೇಕ್ಷಕರು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. 2 ಚಾಪ್ಟರ್ ಸೇರಿ ಈಗಾಗಲೇ 14 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿದೆ. ಪ್ರೇಕ್ಷಕರು ಸಲಾಂ ರಾಕಿ ಭಾಯ್ ಎಂದು ಜೈಕಾರ ಹಾಕುತ್ತಿದ್ದಾರೆ.

Fans of Kannada Star Yash Miffed as KGF: Chapter 2 Excluded From Oscar  Contention List - News18

ಜಪಾನ್‌ನಲ್ಲೂ ರಾಕಿ ಕ್ರೇಜ್

KGF ಸಿನಿಮಾ ನಿಜಕ್ಕೂ ಜಪಾನ್ ಪ್ರೇಕ್ಷಕರ ಮನಗೆದ್ದಿದೆ. ಚಿತ್ರದ ಸಾಂಗ್ಸ್, ಡೈಲಾಗ್ಸ್‌ನ ಅಲ್ಲಿನ ಪ್ರೇಕ್ಷಕರು ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿ ರಾಕಿಭಾಯ್ ಕ್ರೇಜ್ ಜೋರಾಗಿದೆ. ರಾಕಿಭಾಯ್ ರೀತಿ ದೊಡ್ಡ ಸುತ್ತಿಗೆ ಹಿಡಿದು ಅಭಿಮಾನಿಗಳು ಫೋಟೊ ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ರಾಕಿ, ಅಧೀರ ಲುಕ್ ಪೇಪರ್ ಮಾಸ್ಕ್‌ಗಳನ್ನು ಹಾಕಿಕೊಂಡು ಸಿನಿಮಾ ನೋಡಿ ಖುಷಿಪಡುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗ್ತಿದೆ.

KGF Chapter 2 Box Office Day 12 Collection: Yash's Film Takes Off Past ₹900  Crore, Remains Unaffected By Shahid Kapoor's Jersey

ಜಪಾನಿಯರ ಮನಗೆದ್ದ ವಾನರಂ

KGF ಸರಣಿ ಸಿನಿಮಾಗಳಲ್ಲಿ ಒಂದಕ್ಕಿಂತ ಒಂದು ಪಾತ್ರ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಪ್ರತಿಯೊಂದು ಪಾತ್ರವನ್ನು ಪ್ರಶಾಂತ್ ನೀಲ್ ವಿಭಿನ್ನವಾಗಿ ಡಿಸೈನ್ ಮಾಡಿದ್ದಾರೆ. ಜಪಾನ್ ಪ್ರೇಕ್ಷಕರಿಗೆ ರಾಕಿಭಾಯ್, ಅಧೀರ ರೀತಿಯಲ್ಲೇ ಸಾಯಿಕುಮಾರ್ ಸಹೋದರ ಅಯ್ಯಪ್ಪ ಮಾಡಿದ್ದ ವಾನರಂ ಪಾತ್ರ ಕೂಡ ಬಹಳ ಇಷ್ಟವಾಗಿದೆ. ವಾನರಂ ಲುಕ್ ಫೇಸ್‌ ಮಾಸ್ಕ್‌ಗಳು ಅಲ್ಲಿ ಸಖತ್ ಸದ್ದು ಮಾಡ್ತಿದೆ.

Yash starrer KGF series 10 days box office collections in Japan.