ಈ ಬಾರಿಯ ಐಪಿಎಲ್ ವೀಕ್ಷಣೆಗೆ ಸ್ಟೇಡಿಯಂನಲ್ಲಿ ಅವಕಾಶ ಇದೆಯೇ?

01-08-20 11:38 am       Headline Karnataka News Network   ಸಿನಿಮಾ

ಈ ಬಾರಿಯ ಐಪಿಎಲ್​ಗೆ ಸ್ಟೇಡಿಯಂನಲ್ಲಿ ವೀಕ್ಷಕರಿಗೆ ಅವಕಾಶ ನೀಡುವುದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ರೀತಿಯ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.

ಈ ಬಾರಿಯ ಐಪಿಎಲ್​ಗೆ ಸ್ಟೇಡಿಯಂನಲ್ಲಿ ವೀಕ್ಷಕರಿಗೆ ಅವಕಾಶ ನೀಡುವುದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ರೀತಿಯ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. 

ಮುಂದಿನ ತಿಂಗಳು ಸೆಪ್ಟೆಂಬರ್ 19ರಿಂದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದೆ. ಇದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸಕಲ ತಯಾರಿಯಲ್ಲಿ ತೊಡಗಿಕೊಂಡಿದೆ.

ನಾಳೆ ಆಗಸ್ಟ್ 2 ರಂದು ಬಿಸಿಸಿಐ ವೇಳಾಪಟ್ಟಿಯ ಅಂತಿಮ ರೂಪ, ಮತ್ತಿತರ ವ್ಯವಸ್ಥೆ ಕುರಿತು ಆಡಳಿತಾತ್ಮಕ ಸಭೆ ನಡೆಸಲಿದೆ. ಈ ಸಭೆಯಲ್ಲಿ ಐಪಿಎಲ್​ನ ಎಲ್ಲಾ ಫ್ರಾಂಚೈಸಿಗಳು ಟೂರ್ನಮೆಂಟ್​ನ ವಿಧಾನದ ಕುರಿತಾಗಿ ಸ್ಪಷ್ಟ ಚಿತ್ರಣವನ್ನು ದೊರೆಯಲಿದೆ ಎಂದು ತಿಳಿದು ಬಂದಿದೆ.

ಇನ್ನೂ ಈ ಬಾರಿಯ ಐಪಿಎಲ್​ಗೆ ಸ್ಟೇಡಿಯಂನಲ್ಲಿ ವೀಕ್ಷಕರಿಗೆ ಅವಕಾಶ ನೀಡುವುದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ರೀತಿಯ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.

ಆದರೆ ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಯುಎಇ ಸರ್ಕಾರ ಟೂರ್ನಮೆಂಟ್ ವೀಕ್ಷಿಸಲು ಶೇ.30ರಿಂದ 50ರಷ್ಟು ಅಭಿಮಾನಿಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕೊರೋನಾ ವೈರಸ್ ಕಾರಣದಿಂದ ಈಗ ಕ್ರಿಕೆಟ್ ಹಾಗೂ ಇನ್ನಿತರ ಪಂದ್ಯಗಳೆಲ್ಲ ಖಾಲಿ ಸ್ಟೇಡಿಯಂನಲ್ಲಿ ನಡೆಯುತ್ತಿವೆ. ಆದರೆ, ಐಪಿಎಲ್ ವೇಳೆ ಶೇ. 30ರಿಂದ ಶೇ. 50ರಷ್ಟು ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶಕ್ಕೆ ಅವಕಾಶ ನೀಡಲು ಪ್ರಯತ್ನಿಸುವುದಾಗಿ ಯುಎಇ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ಮುಬಾಶಿರ್ ಉಸ್ಮಾನಿ ಹೇಳಿದ್ದಾರೆ.

ಈ ಪ್ರತಿಷ್ಠಿತ ಕ್ರೀಡಾಕೂಟವನ್ನು ನಮ್ಮ ಜನರು ಅನುಭವಿಸಬೇಕೆಂದು ನಾವು ಖಂಡಿತವಾಗಿ ಬಯಸುತ್ತೇವೆ. ಆದರೆ ಇದು ಸಂಪೂರ್ಣವಾಗಿ ಸರ್ಕಾರದ ನಿರ್ಧಾರವಾಗಿದೆ. ಹೆಚ್ಚಿನ ಪಂದ್ಯಗಳಿಗೆ 30-50ಶೇಕಡಾದಷ್ಟು ಹಾಜರಾತೊಯಿರುತ್ತದೆ. ಇದಕ್ಕೆ ನಮ್ಮ ಸರ್ಕಾರದ ಅನುಮೋದನೆ ಪಡೆಯುವ ಭರವಸೆ ಇದೆ ಎಂಬುದು ಮುಬಾಶ್ಶಿರ್ ಉಸ್ಮಾನಿ ಮಾತು.

ಬಿಸಿಸಿಐ ಹಾಗೂ ಭಾರತ ಸರಕಾರದಿಂದ ಕೂಟಕ್ಕೆ ಅಂಕಿತ ಬಿದ್ದೊಡನೆ ನಾವು ನಮ್ಮ ಸರಕಾರವನ್ನು ಸಂಪರ್ಕಿಸಲಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಹಾಗೂ ಬಿಸಿಸಿಐ ಮಾರ್ಗಸೂಚಿಯನ್ನು ಮುಂದಿರಿಸಲಿದ್ದೇವೆ ಎಂದು ಉಸ್ಮಾನಿ ಹೇಳಿದ್ದಾರೆ.

ನಾಳೆ ನಡೆಯಲಿರುವ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಬಿಸಿಸಿಐನ ಹಿರಿಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದು, ವಿವಿಧ ಪಾಲುದಾರರೊಂದಿಗೆ ಮಾತನಾಡುವ ನಿರೀಕ್ಷೆಯಿದೆ.