ನೋಡಿ, ಇವೆಲ್ಲಾ ಸಂಧಿವಾತ ಗುಣಪಡಿಸುವ ಡ್ರಿಂಕ್ಸ್ ಎಂದೇ ಫೇಮಸ್!

20-05-23 06:37 pm       Source: Vijayakarnataka   ಡಾಕ್ಟರ್ಸ್ ನೋಟ್

ಮೂಳೆ ನೋವು, ಕೀಲು ನೋವು ಇವು ಆರ್ಥ್ರೈಟಿಸ್ ಅಥವಾ ಸಂಧಿವಾತ ಕಾಯಿಲೆಯ ಲಕ್ಷಣಗಳು. ಈ ಸಮಸ್ಯೆಗಳು ಒಂದು ವೇಳೆ ನಿಮಗೂ ಇದ್ದರೆ, ಈ ಕೆಳಗಿನ ಆರೋಗ್ಯಕ.

ವಯಸ್ಸಾದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ, ಈ ಸಂಧಿವಾತ ಸಮಸ್ಯೆ ಇಂದು ಯುವಜನರಲ್ಲಿ ಹೆಚ್ಚಾಗಿ ಕಾಡುತ್ತಿದೆ. 30 ವರ್ಷ ಆಸುಪಾಸಿನಲ್ಲಿ ಇಂದು ಯುವ ಜನರು ಸಂಧಿವಾತ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಇದನ್ನು ಗಮನಿಸಿದರೆ ನಮ್ಮ ಯುವ ಜನತೆ ಅಷ್ಟೊಂದು ದುರ್ಬಲ ಆಗಿದ್ದಾರಾ ಎನಿಸುತ್ತದೆ.

ಆದರೆ ವಯಸ್ಸಲ್ಲದ ವಯಸ್ಸಿನಲ್ಲಿ ಈ ರೀತಿಯ ತೊಂದರೆಗಳು ನಿಜಕ್ಕೂ ಆಶ್ಚರ್ಯ ಹುಟ್ಟಿಸುವುದು. ಅದೇನೇ ಇರಲಿ ಸಮಸ್ಯೆ ಬಂದಾಗ ಮೇಲೆ ಅದನ್ನು ಸರಿಪಡಿಸಿಕೊಳ್ಳುವ ಕಡೆಗೆ ಪ್ರಯತ್ನಿಸಬೇಕು. ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದುಕೊಳ್ಳಬೇಕು. ಹಾಗಾಗಿ ಈ ಕೆಳಗಿನ ಆರೋಗ್ಯಕರ ಪಾನೀಯಗಳನ್ನು ಸಂಧಿವಾತದ ರೋಗ ಲಕ್ಷಣ ಇರುವವರಿಗಾಗಿ ಸೂಚಿಸಲಾಗಿದೆ.

ದಿನಕ್ಕೆ ಒಂದು ಬಾರಿ ಚಹಾ ಕುಡಿಯಿರಿ!

Can tea give you hair loss? Study has an answer | Health News, Times Now

  • ಚಹಾ ಕುಡಿಯುವುದು ನಮಗೆಲ್ಲ ಹಿಂದಿನಿಂದ ಬೆಳೆದು ಬಂದ ಅಭ್ಯಾಸ. ನೀರಿನ ಹೊರತಾಗಿ ಮನುಷ್ಯ ಹೆಚ್ಚು ಇಷ್ಟಪಟ್ಟು ಕುಡಿಯುವುದು ಚಹಾ! ವಿವಿಧ ಅಧ್ಯಯನ ಗಳನ್ನು ನೋಡಿದರೆ ಇದರಲ್ಲಿ ಔಷಧಿಯ ಗುಣಲಕ್ಷಣ ಗಳು ಸಾಕಷ್ಟಿವೆ ಎಂದು ತಿಳಿದು ಬರುತ್ತದೆ.
  • ಗ್ರೀನ್ ಟೀ, ಬ್ಲಾಕ್ ಟೀ, ವೈಟ್ ಟೀ ಹೀಗೆ ಒಂದೊಂದು ಬಗೆಯ ಚಹಾಗಳು ತಮ್ಮಲ್ಲಿ ಆಂಟಿ ಆಕ್ಸಿಡೆಂಟ್ ರೂಪ ದಲ್ಲಿ ಪಾಲಿಫಿನಾಲ್ ಅಂಶಗಳನ್ನು ಒಳಗೊಂಡಿರುತ್ತವೆ.
  • ನಿಯಮಿತವಾಗಿ ಚಹಾ ಅಥವಾಗ್ರೀನ್ ಟೀ ಕುಡಿಯುವು ದರಿಂದ ದೇಹದಲ್ಲಿ ಸಾಕಷ್ಟು ಖನಿಜಾಂಶಗಳು ಸಮ ತೋಲನ ಕಾಯ್ದುಕೊಳ್ಳುತ್ತವೆ.
  • ಇದರಿಂದ ನಮ್ಮ ದೇಹಕ್ಕೆ ಹೆಚ್ಚಿನ ನೀರಿನ ಪ್ರಮಾಣ ಸಿಕ್ಕಂತಾಗುತ್ತದೆ ಮತ್ತು ನಿರ್ಜ ಲೀಕರಣ ಸಮಸ್ಯೆಯಿಂದ ದೂರಾಗಬಹುದು. ನಮ್ಮ ದೇಹದಿಂದ ವಿಷಕಾರಿ ಅಂಶ ಗಳನ್ನು ದೂರ ಮಾಡುವಲ್ಲಿ ಮತ್ತು ಉರಿಯುತ ಹಾಗೂ ಕೀಲುಗಳ ನೋವನ್ನು ಇದು ನಿವಾರಣೆ ಮಾಡುತ್ತದೆ.

ಕಾಫಿ

5 coffee recipes to keep you warm this winter | Lifestyle News,The Indian  Express

  • ಸಂಶೋಧನೆಗಳು ಈ ನಿಟ್ಟಿನಲ್ಲಿ ಕೂಡ ಕೆಲಸ ಮಾಡಿವೆ. ಏನೆಂದರೆ ಕಾಫಿ ಕುಡಿಯುವ ಜನರಿಗೂ ಕೂಡ ಅನೇಕ ವಿಧದಲ್ಲಿ ಇದರಿಂದ ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಎಂದು.
  • ಏಕೆಂದರೆ ಕಾಫಿ ಕೂಡ ತನ್ನಲ್ಲಿ ಅಪಾರ ಪ್ರಮಾಣದ ಆಂಟಿ ಆಕ್ಸಿಡೆಂಟ್ ರೂಪದಲ್ಲಿ ಪಾಲಿಫಿನಲ್ ಅಂಶ ಗಳನ್ನು ಒಳಗೊಂಡಿರುತ್ತದೆ. ಕಾಫಿ ಕುಡಿಯುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಫ್ರೀ ರಾಡಿಕಲ್ ಅಂಶಗಳ ನಿವಾರಣೆಯಾಗುತ್ತದೆ ಮತ್ತು ದೇಹದಿಂದ ವಿಷಕಾರಿ ಅಂಶಗಳು ದೂರವಾಗುತ್ತವೆ.
  • ಇದರಿಂದ ಮೂಳೆಗಳ ಹಾಗೂ ಕೀಲುಗಳ ಸಮಸ್ಯೆಗಳು ದೂರವಾಗುತ್ತವೆ ಎಂದು ತಿಳಿದುಬಂದಿದೆ.
  • ಸಂಧಿವಾತ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿ ರುವವರು ಪ್ರತಿದಿನ ಎರಡು ಕಪ್ ಕಾಫಿ ಕುಡಿಯುವುದ ರಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲದಂತೆ ತಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.

ಹಾಲು

Know how to make skimmed milk for your weight loss journey | HealthShots

  • ಚಿಕ್ಕ ವಯಸ್ಸಿನಿಂದ ಹಾಲು ಕುಡಿಯುತ್ತಾ ಬಂದರೆ ಮೂಳೆಗಳಿಗೆ ಸಿಗಬೇಕಾದ ಕ್ಯಾಲ್ಸಿಯಂ ಪ್ರಮಾಣ ಸಿಕ್ಕಂತೆ ಆಗುತ್ತದೆ. ಏಕೆಂದರೆ ಕ್ಯಾಲ್ಸಿಯಂ ಕೊರತೆಯಿಂದ ಕೂಡ ಕೀಲು ನೋವು ಹಾಗೂ ಆರ್ಥ್ರೈಟಿಸ್ ಬರಬಹುದು.
  • ಹಾಗಾಗಿ ಯಾರಿಗೆ ದುರ್ಬಲ ಮೂಳೆ ಸಮಸ್ಯೆ ಇರುತ್ತದೆ ಅಂತಹವರು ಪ್ರತಿ ದಿನ ಹಾಲು ಕುಡಿಯುವ ಅಭ್ಯಾಸ ಮಾಡಿ ಕೊಳ್ಳಬೇಕು.
  • ಇದರಿಂದ ಮೂಳೆಗಳಿಗೆ ತೊಂದರೆಯಾಗುವುದು ಅಥವಾ ಮೂಳೆ ಮುರಿದುಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ. ಬೆಳಗ್ಗೆ ಸಾಧ್ಯವಾಗದಿದ್ದರೆ ರಾತ್ರಿ ಮಲಗುವ ಮುಂಚೆ ಒಂದು ಲೋಟ ಹಾಲು ಕುಡಿದು ಮಲಗಿಕೊಳ್ಳಿ.​

ಹಣ್ಣು ತರಕಾರಿಗಳ ಜ್ಯೂಸ್

What to Know about Mixing Fruits and Vegetables in Juicing

  • ವಿವಿಧ ಬಗೆಯ ಹಣ್ಣು ಹಾಗೂ ತರಕಾರಿಗಳ ರಸ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಏಕೆಂದರೆ ಇವುಗಳಲ್ಲಿ ನಮ್ಮ ದೇಹಕ್ಕೆ ಸಿಗಬೇಕಾದ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಹಾಗೂ ಖನಿ ಜಾಂಶಗಳು ಲಭ್ಯವಾಗುತ್ತವೆ. ಇದರಿಂದ ಆರೋಗ್ಯಕರವಾದ ಜೀವನ ನಡೆಸಬಹುದು.
  • ಮುಖ್ಯವಾಗಿ ಮೂಳೆಗಳಿಗೆ ಸಹಕಾರಿಯಾದ ಜ್ಯೂಸ್ ಗಳು ಎಂದರೆ ಅದು ಕಿತ್ತಳೆ ಹಣ್ಣು, ಟೊಮೆಟೊ, ಅನಾನಸ್ ಕ್ಯಾರೆಟ್, ದ್ರಾಕ್ಷಿ ಹಣ್ಣು, ಚೆರ್ರಿ ಹಣ್ಣು, ಕ್ರಾನ್ಬೇರ್ರಿ ಹಣ್ಣುಗಳ ಜ್ಯೂಸ್.
  • ಇವುಗಳಿಗೆ ಸಕ್ಕರೆ ಹಾಕದೆ ಕುಡಿಯುವ ಅಭ್ಯಾಸ ಮಾಡಿ ಕೊಳ್ಳಿ. ಯಾಕೆಂದರೆ ಇವುಗಳಲ್ಲಿ ಸಾಕಷ್ಟು ಸಿಹಿ ಪ್ರಮಾಣ ಇರುವುದರಿಂದ ನಿಮ್ಮ ಆರೋಗ್ಯಕ್ಕೆ ಸಣ್ಣ ರೂಪದ ಅಡ್ಡ ಪರಿಣಾಮಗಳು ಎದುರಾಗಬಹುದು.

ಸರಿಯಾಗಿ ನೀರು ಕುಡಿಯಿರಿ

Why is Water so Important for the Body?

  • ನಮ್ಮ ದೇಹಕ್ಕೆ ನೀರು ಕೂಡ ತುಂಬಾ ಅವಶ್ಯಕತೆ ಇದೆ. ಏಕೆಂದರೆ ಇದು ನಮ್ಮ ದೇಹದಿಂದ ವಿಷಕಾರಿ ಅಂಶ ಗಳನ್ನು ಹೊರಹಾಕುವುದು ಮಾತ್ರವಲ್ಲದೆ ನಿರ್ಜಲೀಕ ರಣ ಸಮಸ್ಯೆಯಿಂದ ನಮ್ಮನ್ನು ಕಾಪಾಡುತ್ತದೆ. ಅಷ್ಟೇ ಅಲ್ಲದೆ ಮೂಳೆಗಳ ಉರಿಯುತ, ಕೀಲುಗಳ ನೋವು, ಹಾನಿಗೆ ಒಳಗಾದ ಕೀಲುಗಳು ಇತ್ಯಾದಿ ತೊಂದರೆಗಳನ್ನು ಇಲ್ಲವಾಗಿಸುತ್ತದೆ.
  • ಕೀಲುಗಳ ಭಾಗಕ್ಕೆ ಲೂಬ್ರಿಕೇಷನ್ ಕೊಡುತ್ತದೆ. ಇದ ರಿಂದ ಮೂಳೆಗಳು ಬಹಳ ಬೇಗನೆ ಹಾಳಾಗುವುದಿಲ್ಲ. ಜೊತೆಗೆ ಖನಿಜಾಂಶಗಳು ಹಾಗೂ ಎಲೆಕ್ಟ್ರೋಲೈಟ್ ಅಂಶಗಳನ್ನು ಸಹ ಇದು ಹೆಚ್ಚಾಗಿ ಹೊಂದಿದ್ದು, ತಜ್ಞರು ಕೂಡ ಆರ್ಥ್ರೈಟಿಸ್ ಸಮಸ್ಯೆಗೆ ನೀರು ಕುಡಿಯುವುದನ್ನು ಸೂಚಿಸುತ್ತಾರೆ.​

ವೈನ್!

What Is Beaujolais Wine? A Guide to the Basics

  • ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಕೇಳಿ ದ್ದೇವೆ. ಆದರೆ ಮೂಳೆಗಳ ವಿಚಾರಕ್ಕೆ ಬರುವುದಾದರೆ ವೈನ್ ಬಹಳ ಒಳ್ಳೆಯದು ಎಂದು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್ ಅಂಶಗಳು ರೆಸ್ವರೆಟ್ರಾಲ್ ರೂಪದಲ್ಲಿ ಲಭ್ಯವಿರುತ್ತವೆ.
  • ಇವುಗಳಿಂದ ನಮ್ಮ ದೇಹದ ಮೂಳೆಗಳು ಬಲಗೊಳ್ಳು ತ್ತವೆ. ಕೀಲು ನೋವು, ಮೂಳೆ ನೋವು, ಕೈಕಾಲುಗಳು ಹಿಡಿದು ಕೊಂಡಂತೆ ಆಗುವುದು, ಕೈಕಾಲುಗಳು ಊತ ಬರುವುದು ಇತ್ಯಾದಿ ಎಲ್ಲಾ ಸಮಸ್ಯೆಗಳು ಬಗೆಹರಿ ಯುತ್ತವೆ.
  • ಸಂಶೋಧನೆಗಳು ಹೇಳುವಂತೆ ಭುಜ, ಸೊಂಟ ಮತ್ತು ಮಂಡಿ ನೋವುಗಳು ಬಹಳ ಬೇಗನೆ ಪರಿಹಾರವಾಗುತ್ತದೆ. ಮಿತ ಪ್ರಮಾಣದಲ್ಲಿ ವೈನ್ ಸೇವಿಸುವುದರಿಂದ ಆರೋ ಗ್ಯಕ್ಕೆ ಯಾವುದೇ ತೊಂದರೆ ಇಲ್ಲ.

these are the suggested drinks for people suffering from arthritis.