ನಿಮಗೆ ಗೊತ್ತಿರಲಿ, ಈ 5 ಬಗೆಯ ಹಾಲುಗಳು, ದನದ ಹಾಲಿನಷ್ಟೇ ಆರೋಗ್ಯಕಾರಿ!

29-05-23 07:20 pm       Source: Vijayakarnataka   ಡಾಕ್ಟರ್ಸ್ ನೋಟ್

ಮನುಷ್ಯನ ಆರೋಗ್ಯಕ್ಕೆ ಹಾಲು ತುಂಬಾನೇ ಒಳ್ಳೆಯದು ಎಂದು ಈಗಾಗಲೇ ಹಲವಾರು ಬಾರಿ ಸಾಬೀತಾಗಿದೆ. ಇದೇ ಕಾರಣಕ್ಕೆ ಹಾಲನ್ನು ಪರಿಶುದ್ಧ ಅಮೃತ ಎಂದು ಕರೆಯುವುದು. ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದ ರಿಂದ ನಮ್ಮ ದೇಹಕ್ಕೆ ಬೇಕಾಗುವ ಪೌಷ್ಟಿಕ ಸತ್ವಗಳು ಸಿಗುವುದರ ಜೊತೆಗೆ ನಮ್ಮ ದೇಹದ ಮೂಳೆಗಳು ಗಟ್ಟಿಯಾ ಗುತ್ತವೆ ಎಂದು ಹೇಳಲಾಗುತ್ತದೆ.

ಹೀಗಾಗಿ ಆರೋಗ್ಯಕಾರಿ ಜೀವನ ಶೈಲಿಗೆ ಹಾಲು ಹಾಗೂ ಹಾಲಿನ ಉಪ ಉತ್ಪನ್ನಗಳನ್ನು ಪ್ರತಿದಿನ ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಳ್ಳಬೇಕು ಎಂದು ಆರೋಗ್ಯ ತಜ್ಞರು ಕೂಡ ಸಲಹೆ ನೀಡುತ್ತಾರೆ. ಬನ್ನಿ ಇಂದಿನ ಲೇಖನದಲ್ಲಿ ದನದ ಹಾಲಿನಷ್ಟೇ ಆರೋಗ್ಯಕಾರಿ ಆಗಿರುವ, ನೈಸರ್ಗಿಕ ಉತ್ಪನ್ನಗಳ ಹಾಲಿನ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ ಮುಂದೆ ಓದಿ..

ಸೋಯಾ ಹಾಲು!

What made Soy milk so popular once and why people are avoiding it now | The  Times of India

ದಿನಹಾಲು, ಎಮ್ಮೆ ಹಾಲಿನಷ್ಟೇ ಪೋಷಕಾಂಶಗಳನ್ನು ಒಳ ಗೊಂಡಿದೆ ಈ ಸೋಯಾ ಹಾಲು! ಪ್ರಮುಖವಾಗಿ ಸೋಯಾ ಹಾಲಿನಲ್ಲಿ ಆರೋಗ್ಯಕ್ಕೆ ಬೇಕಾಗುವ, ಪೌಷ್ಟಿಕ ಸತ್ವಗಳಾದ ವಿಟಮಿನ್ ಬಿ12, ಪ್ರೋಟೀನ್, ಫೈಬರ್, ಪೊಟ್ಯಾಶಿಯಮ್, ಆರೋಗ್ಯಕಾರಿ ಕೊಬ್ಬಿನಾಮ್ಲಗಳು, ಕಬ್ಬಿಣಾಂಶ, ಖನಿಜಾಂಶ ಗಳು ಆರೋಗ್ಯವನ್ನು ವೃದ್ಧಿಸುವುದು ಮಾತ್ರವಲ್ಲದೆ, ದೇಹದ ಮೂಳೆಗಳನ್ನು ಕೂಡ ಬಲಗೊಳ್ಳುತ್ತವೆ.

ಹಳದಿ ಹಾಲು!

Turmeric Milk Health Benefits & Recipes | Holland & Barrett

  • ಆಹಾರ ತಜ್ಞರ ಪ್ರಕಾರ ಬಿಳಿ ಹಾಲಿಗಿಂತ ಹಳದಿ ಹಾಲು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಂತೆ! ಇದೇ ಕಾರಣಕ್ಕೆ ಇದಕ್ಕೆ ಗೋಲ್ಡನ್ ಮಿಲ್ಕ್ ಎಂದು ಕರೆಯಲಾ ಗುವುದು.
  • ಹೆಚ್ಚು ಪೌಷ್ಟಿಕಾಂಶ ಭರಿತವಾಗಿರುವ ಈ ಹಾಲನ್ನು ರಾತ್ರಿಯ ಹೊತ್ತು ಮಲಗುವ ಮುನ್ನ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ.
  • ​ಉಗುರು ಬೆಚ್ಚಗಿನ ಹಾಲಿಗೆ, ಚಿಟಿಕೆಯಷ್ಟು ಅರಿಶಿನ ಪುಡಿ ಬೆರೆಸಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಇದ ರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಸುಲಭವಾಗಿ ಬಗೆಹರಿಯುತ್ತವೆ.

ಬಾದಾಮಿ ಹಾಲು

Almond Milk - SHARAN

  • ಬಾದಾಮಿ ಬೀಜಗಳಂತೆ, ಬಾದಾಮಿ ಹಾಲು ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರಮುಖವಾಗಿ ಈ ಬಾದಾಮಿ ಹಾಲು ರುಚಿಕರ ಮಾತ್ರವಲ್ಲದೆ, ಹಲವಾರು ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ದೇಹದ ತೂಕ ಇಳಿಸಲು, ಹೃದಯದ ಆರೋಗ್ಯವನ್ನು ಕಾಪಾಡಲು, ಮೂಳೆಗಳ ಆರೋಗ್ಯಕ್ಕೆ ಹಾಗೂ ಸ್ನಾಯು ಗಳನ್ನು ಬಲಪಡಿಸಲು, ಮುಖದ ಸೌಂದರ್ಯವನ್ನು ಹೆಚ್ಚಿಸಲು ಹಾಗೂ ರಕ್ತದಲ್ಲಿ ಸಕ್ಕರೆಮಟ್ಟವನ್ನು ನಿಯಂ ತ್ರಣ ಮಾಡಲು ತುಂಬಾ ಸಹಕಾರಿ ಆಗಿದೆ.
  • ಹೀಗಾಗಿ ಬಾದಾಮಿ ಹಾಲನ್ನು ದನದ ಹಾಲಿಗೆ ಪರ್ಯಾ ಯವಾಗಿ ಸೇವನೆ ಮಾಡುತ್ತಾ ಬರುವುದದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳು ಸಿಗುತ್ತವೆ.​​

ಖರ್ಜೂರದ ಹಾಲು!

ಖರ್ಜೂರದ ಹಾಲು!

  • ಹೌದು ಪ್ರತಿದಿನ ಬರೀ ಹಾಲನ್ನು ಕುಡಿಯುವ ಬದಲು, ಹಾಲಿನ ಜೊತೆಗೆ ತನ್ನಲ್ಲಿ ನೈಸರ್ಗಿಕ ಸಿಹಿ ಅಂಶವನ್ನು ಹೊಂದಿರುವ, ಎರಡು-ಮೂರು ಖರ್ಜೂರಗಳನ್ನು ಸೇರಿಸಿ, ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಹಲವಾರು ಆರೋಗ್ಯ ಸಮಸ್ಯೆಗಳು ದೂರವಾಗುವುದು.
  • ಪ್ರಮುಖವಾಗಿ ಮಾಂಸ - ಖಂಡಗಳ ಬಲವರ್ಧನೆಯಲ್ಲಿ, ಲೈಂಗಿಕ ಆರೋಗ್ಯದ ಸಮಸ್ಯೆಯನ್ನು ದೂರ ಮಾಡು ವಲ್ಲಿ, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸು ವಲ್ಲಿ, ರಕ್ತಹೀನತೆ ಸಮಸ್ಯೆಯನ್ನು ದೂರ ಮಾಡುವಲ್ಲಿ, ಈ ಖರ್ಜೂರ ಮಿಶ್ರಿತ ಹಾಲಿನ ಪಾತ್ರ ಮಹತ್ವದ್ದು ಎಂದು ಹೇಳಲಾಗುತ್ತದೆ.​

ತೆಂಗಿನ ಹಾಲು

What Does Coconut Milk Taste Like? Does It Taste Good? | Americas Restaurant

  • ಮನೆಯಲ್ಲಿ ಯಾವುದಾದರೂ ಶುಭ ಸಂದರ್ಭದಲ್ಲಿ ಪಾಯಸ ಮಾಡುವ ಸಂದರ್ಭದಲ್ಲಿ ಅಥವಾ ಬೇಳೆ ಒಬ್ಬಟ್ಟು ಮಾಡುವ ಸಂದರ್ಭದಲ್ಲಿ ನಮಗೆ ತೆಂಗಿನ ಕಾಯಿಯ ಹಾಲಿನ ಜ್ಞಾಪಕ ಬರುತ್ತದೆ!
  • ಏಕೆಂದರೆ ಇವೆರಡೂ ಒಂದು ಉತ್ತಮ ಕಾಂಬಿನೇಷನ್. ಆದರೆ ಇದರ ಪ್ರಯೋಜನಗಳು ಇಷ್ಟಕ್ಕೆ ಮಾತ್ರ ಸೀಮಿತ ವಾಗಿಲ್ಲ ಬದಲಿಗೆ ಈ ಹಾಲಿನಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಕೂಡ, ಕಂಡು ಬರುತ್ತವೆ.
  • ಹಸಿ ತೆಂಗಿನಕಾಯಿಯಿಂದ ಸಿಗುವ ತೆಂಗಿನ ಹಾಲಿನದಲ್ಲಿ, ವಿವಿಧ ಬಗೆಯ ಪೌಷ್ಟಿಕ ಸತ್ವಗಳು, ವಿಟಮಿನ್ಸ್ ಗಳು, ಖನಿಜಾಂಶಗಳು, ಕಂಡು ಬರುತ್ತವೆ.
  • ಹೀಗಾಗಿ ಇಂತಹ ಹಾಲನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ, ದೇಹದ ತೂಕ ಇಳಿಸಿಕೊಳ್ಳಲು,ಅಜೀರ್ಣತೆ ಮತ್ತು ಮಲಬದ್ಧತೆಯನ್ನು ದೂರವಾಗಿಸಲು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂ ತ್ರಣದಲ್ಲಿ ಇಟ್ಟುಕೊಳ್ಳಲು, ಹೃದಯದ ಆರೋಗ್ಯ ವನ್ನು ಕಾಪಾಡಲು ನೆರವಾಗುತ್ತದೆ.
  • ಹೀಗಾಗಿ ಹಾಲನ್ನು ಬಳಸಿ ತಯಾರು ಮಾಡುವ ಸಿಹಿ ತಿಂಡಿಗಳಿಗೆ ಪರ್ಯಾಯವಾಗಿ ತೆಂಗಿನ ಹಾಲನ್ನು ಬಳಕೆ ಮಾಡಬಹುದು. ಪ್ರಮುಖವಾಗಿ ಇದರಲ್ಲಿ ನೈಸರ್ಗಿಕ ವಾದ ಸಕ್ಕರೆಯಾಂಶ ಕಂಡು ಬರುವುದರಿಂದ, ಈ ಹಾಲನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳು ವುದರಿಂದ, ಆರೋಗ್ಯಕ್ಕೆ ಯಾವುದೇ ತೊಂದರೆ ಆಗು ವುದಿಲ್ಲ.

according to a dietitian,these are the healthiest milk besides then cow milk.