ಮಧುಮೇಹಿಗಳು ಪನೀರ್ ಸೇವಿಸಬಹುದೇ? ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?

30-05-23 06:35 pm       Source: Vijayakarnataka   ಡಾಕ್ಟರ್ಸ್ ನೋಟ್

ಮಧುಮೇಹಿಗಳಿಗೆ ಪನೀರ್‌ನ ಸೇವನೆಯು ಉತ್ತಮವಾಗಿದೆ. ಆದರೆ ಇದನ್ನು ಮಿತಿಯಾಗಿ ಸೇವಿಸಬೇಕು. ಅಧಿಕ ಸೇವಿಸಿದರೆ ಕೊಲೆಸ್ಟ್ರಾಲ್ ಹೆಚ್ಚಾಗಬಹುದು.

ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎನ್ನುವುದು ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆ. ಕೆಲವೊಮ್ಮೆ ಆನುವಂಶಿಕವಾಗಿಯೂ ಬರುತ್ತದೆ. ಹಾಗಿರುವಾಗ ಮಧುಮೇಹವನ್ನು ಕಂಟ್ರೋಲ್‌ ಮಾಡಲು ಔಷಧಿಯೊಂದೇ ಸಾಕಾಗುವುದಿಲ್ಲ, ಸೇವಿಸುವ ಆಹಾರದ ಕಡೆಗೆ ನಿಗಾವಹಿಸುವುದರ ಜೊತೆಗೆ ವ್ಯಾಯಾಮವೂ ಮುಖ್ಯವಾಗಿದೆ.

ಕಡಿಮೆ ಕಾರ್ಬೋಹೈಡ್ರೇಟ್‌ ಆಹಾರ

Gorge on palak paneer or palak paratha this winter for amazing health  benefits | Health - Hindustan Times

ಅದರಲ್ಲೂ ಡಯೆಟ್‌ ಫಾಲೋ ಮಾಡುವುದು ಅತ್ಯಗತ್ಯ. ಏಕೆಂದರೆ ಇದರಲ್ಲಿ ನೀವು ಸೇವಿಸುವ ಪ್ರತಿಯೊಂದೂ ರಕ್ತಕ್ಕೆ ಸಕ್ಕರೆಯನ್ನು ಸೇರಿಸುತ್ತದೆ ಮತ್ತು ಮಧುಮೇಹದ ಕಾಯಿಲೆಯನ್ನು ತ್ವರಿತವಾಗಿ ಹೆಚ್ಚಿಸುತ್ತದೆ.

ಈ ಪರಿಸ್ಥಿತಿಯಲ್ಲಿ, ನಿಮ್ಮ ಆಹಾರವನ್ನು ನಿಯಂತ್ರಿಸುವುದು ಮತ್ತು ಕಾರ್ಬೋಹೈಡ್ರೇಟ್‌ಗಳ ಪ್ರಮಾಣವು ಕಡಿಮೆ ಇರುವಂತಹ ಆಹಾರವನ್ನು ಸೇರಿಸುವುದು ಮುಖ್ಯ. ಅಂತಹ ಆಹಾರದಲ್ಲಿ ಒಂದು ಪನೀರ್. ಹಸಿ ಪನೀರ್ ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿದೆ, ಇದರ ಸೇವನೆಯು ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.

ಮಧುಮೇಹಿಗಳು ಪನೀರ್ ತಿನ್ನುವುದರಿಂದಾಗುವ ಪ್ರಯೋಜನಗಳು

Managing Diabetes - NIDDK

  • ಪನೀರ್‌ನಲ್ಲಿ ಕಡಿಮೆ ಗ್ಲೈಸೆಮಿಕ್ ಇಂಡಕ್ಸ್ ಇರುವುದರಿಂದ ಮಧುಮೇಹಿಗಳಿಗೆ ಆರೋಗ್ಯಕರ ಆಹಾರವಾಗಿದೆ.
  • ಪನೀರ್‌ನಲ್ಲಿ ಕಾರ್ಬೋಹೈಡ್ರೇಟ್‌ಗಳು ಕೂಡಾ ಕಡಿಮೆಯಾಗಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನುಒಮ್ಮೆಲೆ ಹೆಚ್ಚಿಸುವುದಿಲ್ಲ.
  • ಪನೀರ್ ಪ್ರೋಟೀನ್‌ಗಳು ಮತ್ತು ವಿವಿಧ ಸೂಕ್ಷ್ಮ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ, ಇದು ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತದೆ.
  • ಪನೀರ್ ಮೂಳೆಗಳು ಹಲ್ಲು ಮತ್ತು ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಇದು ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ.

​ಮಧುಮೇಹ ರೋಗಿಗಳು ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ಪನೀರ್ ತಿನ್ನಬೇಕು?

Beware! Eating too much paneer can leave you gassy | Diet

ಮಧುಮೇಹ ರೋಗಿಗಳು ದಿನದಲ್ಲಿ ಅಥವಾ ರಾತ್ರಿಯ ಊಟದಲ್ಲಿ ಪನೀರ್ ಸೇವಿಸಬಹುದು. ಟೋನ್ಡ್ ಹಾಲಿನಿಂದ ತಯಾರಿಸಿದ ಪನೀರ್ ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ. ಶುಗರ್ ರೋಗಿಗಳಿಗೆ ದಿನಕ್ಕೆ 80 ರಿಂದ 100 ಗ್ರಾಂ ಪನೀರ್ ಸೇವಿಸಿದರೆ ಸಾಕು.

ಅತಿಯಾಗಿ ಪನೀರ್ ತಿನ್ನೋದರ ಅಡ್ಡಪರಿಣಾಮಗಳು

ಕೊಲೆಸ್ಟ್ರಾಲ್‌ ಮಟ್ಟವನ್ನು ಹೆಚ್ಚಿಸುತ್ತದೆ

ತೂಕ ಹೆಚ್ಚಾಗಬಹುದು

ಪನೀರ್ ಅನ್ನು ಹೇಗೆ ತಿನ್ನಬೇಕು

Planning To Make Matar Paneer? This Time, Make It Restaurant-Style! Watch  Recipe Video Here - NDTV Food

ಸಕ್ಕರೆ ರೋಗಿಗಳಿಗೆ ಪನೀರ್ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಮಧುಮೇಹ ರೋಗಿಗಳು ಪನೀರ್ ಅನ್ನು ಹಸಿಯಾಗಿ ಮತ್ತು ಬೇಯಿಸಿದ ರೂಪದಲ್ಲಿ ಸೇವಿಸಬಹುದು. ಆದರೆ, ಹಸಿ ಪನೀರ್‌ನಲ್ಲಿ ಕೊಬ್ಬಿನ ಪ್ರಮಾಣ ಕಡಿಮೆ ಇರುವುದರಿಂದ ಶುಗರ್ ರೋಗಿಗಳಿಗೆ ಇದು ಹೆಚ್ಚು ಪ್ರಯೋಜನಕಾರಿ. ಇದಲ್ಲದೆ, ಪನೀರ್ ಅನ್ನು ಪ್ರತ್ಯೇಕ ಭಕ್ಷ್ಯವಾಗಿಯೂ ತಿನ್ನಬಹುದು. ಪನೀರ್ ಅನ್ನು ತರಕಾರಿಗಳು ಮತ್ತು ತಿಂಡಿಗಳ ರೂಪದಲ್ಲಿಯೂ ಸೇವಿಸಬಹುದು.

health benefits of paneer for diabetic patients.