ಒಂದು ವೇಳೆ ನಿಮಗೆ ಈ ಕಾಯಿಲೆಗಳು ಇದ್ರೆ ತಪ್ಪಿಯೂ ತುಪ್ಪ ತಿನ್ನಬೇಡಿ!!

14-07-23 07:31 pm       Source: Vijayakarnataka   ಡಾಕ್ಟರ್ಸ್ ನೋಟ್

ತುಪ್ಪ ತಿಂದರೆ ದಪ್ಪ ಆಗುತ್ತಾರೆ ಎಂದು ಕೇಳಿದ್ದೇವೆ. ಆದರೆ ಇದು ಎಲ್ಲರಿಗೂ ವರ್ಕ್ ಆಗುವುದಿಲ್ಲ. ಕೆಲವರಂತೂ ತುಪ್ಪದಿಂದ ದೂರವೇ ಉಳಿದರೆ ಒಳ್ಳೆಯದು.

ಹಸುವಿನ ಹಾಲಿನಿಂದ ತಯಾರಾಗುವ ಯಾವುದೇ ಉತ್ಪನ್ನಗಳು ಬಹಳ ಆರೋಗ್ಯಕರ. ಹುಟ್ಟುವ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಎಲ್ಲವನ್ನು ಒಂದಲ್ಲ ಒಂದು ರೀತಿಯಲ್ಲಿ ಸೇವನೆ ಮಾಡುತ್ತಾರೆ.

ಆದರೆ ಕೆಲವು ಆರೋಗ್ಯ ಸಮಸ್ಯೆ ಗಳನ್ನು ಹೊಂದಿರುವ ಜನರು ಡೈರಿ ಉತ್ಪನ್ನಗಳಿಂದ ಅದರಲ್ಲೂ ವಿಶೇಷವಾಗಿ ತುಪ್ಪ ತಿನ್ನುವುದರಿಂದ ದೂರ ಇದ್ದರೆ ಒಳ್ಳೆಯದಂತೆ! ಹೀಗೇಕೆ ಎಂಬ ಪ್ರಶ್ನೆ ನಿಮಗೆ ಮೂಡಬಹುದು. ಹೌದು, ಇದು ನಿಜ. ಕೆಲವರಿಗೆ ತುಪ್ಪ ಎಂದರೆ ಇರುವ ಆರೋಗ್ಯ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಯಾರಿಗೆಲ್ಲ ಹೀಗಾಗುತ್ತದೆ, ಯಾರು ತುಪ್ಪ ಸೇವನೆಯಿಂದ ದೂರ ಉಳಿಯಬೇಕು, ತಿಳಿಯೋಣ ಬನ್ನಿ.

ಹಾಲಿಗೆ ಅಲರ್ಜಿ ಎನ್ನುವವರು

Why are milk and milk products becoming costlier?, Retail News, ET Retail

  • ತುಪ್ಪ ಹೇಳಿಕೇಳಿ ಒಂದು ಡೈರಿ ಉತ್ಪನ್ನ. ಕೆಲವು ಜನರಿಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳು ಅಂದರೆ ಡೈರಿ ಉತ್ಪನ್ನಗಳು ಆಗಿ ಬರುವುದಿಲ್ಲ.
  • ಡೈರಿ ಪದಾರ್ಥಗಳ ಸೇವನೆಯಿಂದ ವಾಕರಿಕೆ, ವಾಂತಿ, ಭೇದಿ ಚರ್ಮದ ಮೇಲೆ ದದ್ದುಗಳು ಕಾಣಿಸಿ ಕೊಳ್ಳುತ್ತವೆ. ಅಂತ ಹವರು ಡೈರಿ ಉತ್ಪನ್ನಗಳಿಂದ ದೂರವೇ ಉಳಿದರೆ ಒಳ್ಳೆಯದು. ಹಾಲು ಹಾಗು ತುಪ್ಪ ಸೇವನೆ ಮಾಡುವ ಮುಂಚೆ ಡಾಕ್ಟರ್ ಭೇಟಿ ಮಾಡು ವುದು ಒಳ್ಳೆಯದು.

ಹೃದಯದ ಕಾಯಿಲೆ ಇರುವವರು

How Blood Vessel Damage Links Heart Disease and Eye Disease

  • ತುಪ್ಪದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಇರುತ್ತದೆ. ಹಾಗಾಗಿ ಇದು ಹೃದಯದ ಕಾಯಿಲೆಗಳಿಗೆ ಮತ್ತಷ್ಟು ಪುಷ್ಟಿಕೊಡುತ್ತದೆ ಎಂದು ಹೇಳುತ್ತಾರೆ.
  • ತುಪ್ಪದಲ್ಲಿ ಫ್ಯಾಟಿ ಆಮ್ಲಗಳು ಇರುವುದರಿಂದ ಹೃದಯ ಸ್ತಂಭನ ಸಮಸ್ಯೆ ಹೆಚ್ಚಾಗಬಹುದು. ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಹೇಳುವ ಪ್ರಕಾರ ಹೃದಯದ ಕಾಯಿಲೆ ಇರುವವರು ತುಪ್ಪ ಸೇವನೆಯಿಂದ ದೂರ ಉಳಿಯುವುದು ಉತ್ತಮ.

ಲಿವರ್‌ಗೆ ಸಂಬಂಧಪಟ್ಟ ಕಾಯಿಲೆಗಳು

ಲಿವರ್‌ಗೆ ಸಂಬಂಧಪಟ್ಟ ಕಾಯಿಲೆಗಳು

  • ತುಪ್ಪ ತಿಂದರೆ ಲಿವರ್ ಸಮಸ್ಯೆ ಆಗುತ್ತೆ ಎಂದೇನಿಲ್ಲ. ಆದರೆ ಮೊದಲೇ ಲಿವರ್ ಸಮಸ್ಯೆ ಇರುವವರಿಗೆ, ಜಾಂಡಿಸ್ ಆಗಿರುವ ಜನರಿಗೆ ತುಪ್ಪ ಸೇವನೆ ಒಳ್ಳೆಯದಲ್ಲ.
  • ಇದು ಒಳಭಾಗದಲ್ಲಿ ಅಂಗಾಂಗಗಳ ತೊಂದರೆ ಉಂಟಾಗುವಂತೆ ಮಾಡುತ್ತದೆ. ಹಾಗಾಗಿ ಸಾಧ್ಯವಾ ದಷ್ಟು ಮತ ಪ್ರಮಾಣದಲ್ಲಿ ತುಪ್ಪ ಸೇವನೆ ಮಾಡು ವುದು ಆರೋಗ್ಯಕ್ಕೆ ಒಳ್ಳೆಯದು.

ಬೊಜ್ಜು ಇರುವ ಜನರು

Weight loss: 5 negative things you didn't know losing weight could do | The  Times of India

  • ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವ ವರು ಬೊಜ್ಜಿನ ಸಮಸ್ಯೆಯಿಂದ ದೂರ ಉಳಿಯ ಬೇಕು.
  • ಹಾಗಾಗಿ ಒಂದು ದಿನಕ್ಕೆ ಎರಡು ಟೀ ಚಮಚ ತುಪ್ಪ ಸೇವನೆ ಒಳ್ಳೆಯದು. ಆದರೆ ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತುಪ್ಪ ಸೇವನೆ ಮಾಡಿದರೆ ದೇಹದ ತೂಕ ಮತ್ತಷ್ಟು ಹೆಚ್ಚಾ ಗುತ್ತದೆ ಮತ್ತು ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ.

ಅಜೀರ್ಣತೆ ತೊಂದರೆ ಇರುವ ಗರ್ಭಿಣಿ ಮಹಿಳೆಯರು

Important Tips for Pregnant Women For Healthy Pregnancy

  • ಗರ್ಭಿಣಿ ಮಹಿಳೆಯರಿಗೆ ತುಪ್ಪ ಒಳ್ಳೆಯದು ನಿಜ. ಆದರೆ ಇದು ಅಷ್ಟು ಬೇಗನೆ ದೇಹದಲ್ಲಿ ಜೀರ್ಣವಾಗುವುದಿಲ್ಲ.
  • ಒಂದು ವೇಳೆ ಮೊದಲೇ ಅಜೀರ್ಣತೆ, ಹೊಟ್ಟೆ ಉಬ್ಬರ, ಮಲಬದ್ಧತೆ ಸಮಸ್ಯೆ ಇರುವ ಗರ್ಭಿಣಿ ಮಹಿಳೆಯರು ತುಪ್ಪ ವನ್ನು ಸೇವನೆ ಮಾಡದೆ ಇರುವುದು ಒಳ್ಳೆಯದು. ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಯಿಂದ ತಪ್ಪಿಸಿಕೊಳ್ಳಬಹುದು. ​

These people better stay away from ghee if possible.