ಸಾಧಾರಣ ತರಕಾರಿಗಳಿಗಿಂತ ಈ ಬೇರು ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ!

20-07-23 09:13 pm       Source: Vijayakarnataka   ಡಾಕ್ಟರ್ಸ್ ನೋಟ್

ಕ್ಯಾರೆಟ್ ಮೂಲಂಗಿ ಬೀಟ್ರೂಟ್ ಇವೆಲ್ಲ ಭೂಮಿಯೊಳಗೆ ಬೇರಿನ ರೂಪದಲ್ಲಿ ಬಿಡುವ ತರಕಾರಿಗಳು. ಇವುಗಳಲ್ಲಿ ಅಪಾರವಾದ ಪೌಷ್ಟಿಕಾಂಶಗಳು ಲಭ್ಯವಿವೆ.

ನಾವು ದಿನ ನಿತ್ಯ ಹಲವು ಬಗೆಯ ತರಕಾರಿಗಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಬಳಸುತ್ತೇವೆ. ಅದರಲ್ಲಿ ಹಸಿರು ಸೊಪ್ಪು ಕೂಡ ಇರುತ್ತದೆ. ಸಾಧಾರಣ ತರಕಾರಿಗಳು ಕೂಡ ಇರುತ್ತವೆ. ಎಲ್ಲದ ರಲ್ಲಿಯೂ ತಮ್ಮದೇ ಆದ ಪೌಷ್ಟಿಕ ಸತ್ವಗಳು ಇರುತ್ತವೆ. ಬೇರು ಸಹಿತ ಹೊಂದಿರುವ ತರಕಾರಿಗಳು ನಮ್ಮ ಆರೋಗ್ಯಕ್ಕೆ ಅಪಾರವಾದ ಪ್ರಯೋಜನಗಳನ್ನು ಕೊಡುತ್ತವೆ ಎಂದು ನಂಬಲಾಗಿದೆ.

ಇವುಗಳಲ್ಲಿ ಸಿಗುವಂತಹ ವಿಶೇಷ ಪೌಷ್ಟಿಕಾಂಶಗಳು ಹಾಗೂ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಖನಿಜಾಂಶಗಳು ಇವುಗಳಲ್ಲಿ ಹೇರಳವಾಗಿ ಲಭ್ಯವಿರುವುದರಿಂದ ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡು ಸಮತೋಲನವಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಂತಹ ಬೇರು ಸಹಿತ ಇರುವ ತರಕಾರಿಗಳ ಬಗ್ಗೆ ಇಲ್ಲಿ ತಿಳಿಸಿಕೊಡುತ್ತಿದ್ದೇವೆ.

ಕ್ಯಾರೆಟ್

Carrot – KDD & Co

  • ನೋಡಲು ಕಿತ್ತಳೆ ಬಣ್ಣದಲ್ಲಿ ಕಂಡು ಬರುವ ಕ್ಯಾರೆಟ್ ತನ್ನಲ್ಲಿ ಬೀಟಾ ಕ್ಯಾರೋಟಿನ್ ಪ್ರಮಾಣವನ್ನು ಹೆಚ್ಚಾಗಿ ಒಳಗೊಂಡಿದೆ. ನಮ್ಮ ದೇಹ ಇದನ್ನು ವಿಟಮಿನ್ ಎ ಆಗಿ ಬದಲಿಸುತ್ತದೆ.
  • ಇದು ನಮ್ಮ ಕಣ್ಣಿನ ದೃಷ್ಟಿಗೆ ತುಂಬಾ ಒಳ್ಳೆಯದು ಮತ್ತು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಯನ್ನು ಬಲಪಡಿಸುತ್ತದೆ ಹಾಗೂ ಚರ್ಮದ ಸೌಂದ ರ್ಯವನ್ನು ವೃದ್ಧಿಸುತ್ತದೆ ಎಂದು ಬೆಂಗಳೂ ರಿನ ನಾಗರಬಾವಿಯ ಫೋರ್ಟಿಸ್ ಹಾಸ್ಪಿಟಲ್ ನಲ್ಲಿ ವೈದ್ಯರಾಗಿರುವ ಭಾರತಿ ಕುಮಾರ್ ಹೇಳುತ್ತಾರೆ.
  • ಅಷ್ಟೇ ಅಲ್ಲದೆ ಇದು ನಮ್ಮ ದೇಹಕ್ಕೆ ಸಮರ್ಪಕ ಪ್ರಮಾಣ ದಲ್ಲಿ ನಾರಿನ ಅಂಶ ಮತ್ತು ಆಂಟಿ ಆಕ್ಸಿ ಡೆಂಟ್ ಅಂಶ ಗಳನ್ನು ಸಹ ಒದಗಿಸುತ್ತದೆ. ಹೀಗಾಗಿ ನಾವು ತಿನ್ನುವ ಆಹಾರ ಪೌಷ್ಟಿಕಾಂಶಭರಿತ ವಾಗಿರುತ್ತದೆ.​

ಸಿಹಿ ಗೆಣಸು

Sweet potato plant: How to Grow and Maintenance Tips

  • ಸಿಹಿ ಗೆಣಸು ಅಥವಾ ಸಿಹಿ ಆಲೂಗಡ್ಡೆ ತನ್ನಲ್ಲಿ ಅಪಾರ ಪ್ರಮಾಣದ ನಾರಿನ ಅಂಶ ಮತ್ತು ವಿಟಮಿನ್ ಎ ಹಾಗೂ ವಿಟಮಿನ್ ಸಿ ಪ್ರಮಾಣವನ್ನು ಹೆಚ್ಚಾಗಿ ಒಳಗೊಂಡಿದೆ ಜೊತೆಗೆ ಪೋಟಾಸಿಯಂ ಪ್ರಮಾಣ ಕೂಡ ಇದರಲ್ಲಿ ಅಧಿಕವಾಗಿದೆ.
  • ಪೌಷ್ಟಿಕಾಂಶ ತಜ್ಞರು ಹೇಳುವ ಹಾಗೆ ಇದರಲ್ಲಿರುವ ಕಾರ್ಬೋ ಹೈಡ್ರೇಟ್ ಪ್ರಮಾಣ ನಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ಮಾಡುತ್ತದೆ ಗೊತ್ತು ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಾಗಿರುವ ಕಾರಣ ದಿಂದ ಉರಿಯುತ ನಿವಾರಣೆ ಮಾಡುತ್ತದೆ ಹಾಗೂ ಚರ್ಮದ ಆರೋಗ್ಯವನ್ನು ವೃದ್ಧಿ ಸುತ್ತದೆ. ಇದು ನಮ್ಮ ದೇಹದಲ್ಲಿ ಪೌಷ್ಟಿಕಾಂಶದ ಮಟ್ಟ ವನ್ನು ಹೆಚ್ಚು ಮಾಡುತ್ತದೆ.

ಪಾರ್ಸ್ನಿಪ್

Buy Parsnip Seeds Online In India - Etsy India

  • ನೋಡಲು ಕ್ಯಾರೆಟ್ ತರಹ ಕಂಡುಬರುವ ಪಾರ್ಸ್ನಿಪ್ ಬಿಳಿ ಬಣ್ಣದಲ್ಲಿ ಕಂಡು ಬರಲಿದ್ದು, ಸಿಹಿಯಾದ ರುಚಿಯನ್ನು ಒಳಗೊಂಡಿದೆ.
  • ಇದರಲ್ಲಿ ಸಾಕಷ್ಟು ಪೌಷ್ಟಿಕ ಸತ್ವಗಳು ಸಿಗುತ್ತವೆ ಮತ್ತು ಇದರಲ್ಲಿರುವ ನಾರಿನ ಅಂಶ, ವಿಟಮಿನ್ ಸಿ ನಮ್ಮ ಆಹಾರ ಪದ್ಧತಿಯಲ್ಲಿ ಚಮತ್ಕಾರ ಮಾಡು ತ್ತದೆ. ಪೊಟ್ಯಾಶಿಯಂ ಪ್ರಮಾಣ ಇದರಲ್ಲಿ ಹೇರಳ ವಾಗಿ ಇರುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೂ ಆಂಟಿ ಆಕ್ಸಿಡೆಂಟ್ ಪ್ರಮಾಣ ದೀರ್ಘಕಾಲದ ಕಾಯಿಲೆಗಳನ್ನು ಬರದಂತೆ ತಡೆಯುತ್ತದೆ.​

ಬೀಟ್ರೋಟ್

9 Impressive Health Benefits of Beets

  • ಬೀಟ್ರೂಟ್ ತನ್ನಲ್ಲಿ ಕಡಿಮೆ ಕ್ಯಾಲರಿಗಳನ್ನು ಹೊಂ ದಿದ್ದು ದೇಹಕ್ಕೆ ಅಗತ್ಯವಾಗಿ ಬೇಕಾದ ಬಹುತೇಕ ಪೌಷ್ಟಿಕ ಸತ್ವಗಳನ್ನು ಹೇರಳವಾಗಿ ಹೊಂದಿದೆ. ಇದರಲ್ಲಿ ನಾರಿನ ಅಂಶ, ಮ್ಯಾಂಗನೀಸ್ ಪೋಟಾ ಸಿಯಂ ಹೆಚ್ಚಾಗಿ ಕಂಡು ಬರುತ್ತದೆ.
  • ನಮ್ಮ ಹೃದಯ ರಕ್ತನಾಳದ ಆರೋಗ್ಯದ ಜೊತೆಗೆ ಹೃದಯ ವನ್ನು ಯಾವುದೇ ತೊಂದರೆಗೆ ಒಳಗಾಗ ದಂತೆ ಕಾಪಾಡುತ್ತದೆ. ರಕ್ತದ ಒತ್ತಡವನ್ನು ನಿಯಂ ತ್ರಣ ಮಾಡುವ ಜೊತೆಗೆ ತನ್ನಲ್ಲಿನ ಆಂಟಿ ಆಕ್ಸಿಡೆಂಟ್ ಪ್ರಮಾಣದಿಂದ ಲಿವರ್ ಆರೋಗ್ಯವನ್ನು ಬೆಂಬಲಿ ಸುತ್ತದೆ ಹಾಗೂ ಆಂಟಿ ಇಂಪ್ಲಮೆಟರಿ ಗುಣಲಕ್ಷಣ ಗಳನ್ನು ಹೆಚ್ಚಾಗಿ ಒಳಗೊಂಡಿದೆ.

ಮೂಲಂಗಿ

What is a good substitute for daikon radish? - Quora

  • ನೀವು ಸೇವಿಸುವ ಬಹುತೇಕ ಸಲಾಡ್ ಹಾಗೂ ಇನ್ನಿ ತರ ಅಡುಗೆಗಳಲ್ಲಿ ಮೂಲಂಗಿಯನ್ನು ಬಳಸ ಬಹುದು. ಇದು ನಿಮಗೆ ಆಂಟಿ ಆಕ್ಸಿಡೆಂಟ್, ನಾರಿನ ಅಂಶ ಮತ್ತು ವಿಟಮಿನ್ ಸಿ ಪ್ರಮಾಣವನ್ನು ಒದಗಿ ಸುತ್ತದೆ. ದೇಹದ ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗಲು ಅನುಕೂಲ ಮಾಡಿಕೊಡುತ್ತದೆ.
  • ಇದರಲ್ಲಿ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳು ಅಪಾರ ವಾಗಿದ್ದು ಲಿವರ್ ಆರೋಗ್ಯಕ್ಕೆ ತುಂಬಾ ಅನುಕೂಲಕರ ಎಂಬುದು ಈಗಾಗಲೇ ಸಾಬೀತಾಗಿದೆ.​

ನವಿಲುಕೋಸು

ನವಿಲುಕೋಸು.....ಎಳೆಯದಾಗಿದ್ದರೆ ಇನ್ನೂ ರುಚಿ

  • ಇದು ಸಹ ಅಮೋಘ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ತರಕಾರಿಯಾಗಿದ್ದು, ತನ್ನಲ್ಲಿ ನಾರಿನ ಅಂಶ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಹೆಚ್ಚಾಗಿ ಒಳಗೊಂಡಿದೆ.
  • ಜೊತೆಗೆ ಇದರಲ್ಲಿ ಪೊಟ್ಯಾಶಿಯಂ ಮತ್ತು ಮ್ಯಾಂಗ ನೀಸ್ ಎಂಬ ಖನಿಜಾಂಶಗಳು ಅಧಿಕವಾಗಿದ್ದು ಕಡಿಮೆ ಕ್ಯಾಲೋರಿ ಗಳನ್ನು ಮತ್ತು ಹೆಚ್ಚಿನ ನೀರಿನ ಅಂಶವನ್ನು ಒಳಗೊಂಡಿರುವ ಕಾರಣ ದೇಹದ ನಿರ್ಜಲೀಕರಣ ಸಮಸ್ಯೆಯನ್ನು ದೂರ ಮಾಡುತ್ತದೆ ಹಾಗೂ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಕ್ಯಾನ್ಸರ್ ನಿಯಂತ್ರಣದ ವಿಚಾರದಲ್ಲಿ ಕೂಡ ಅದ್ಭುತವಾಗಿ ಕೆಲಸ ಮಾಡುವ ತರಕಾರಿಯಾಗಿದೆ.​
  • Join our WhatsApp group
  • Follow us on Facebook 
  • Follow us on Twitter

these root vegetables are more powerful health care veggies.