ಸಕ್ಕರೆ ಕಾಯಿಲೆಯನ್ನು ಮಕಾಡೆ ಮಲಗಿಸಲು ಮಖಾನ ತಿನ್ನಿ!

02-08-23 09:05 pm       Source: Vijayakarnataka   ಡಾಕ್ಟರ್ಸ್ ನೋಟ್

Makhana benefits for diabetes: ಮಖಾನ ಬೀಜಗಳು ಅಥವಾ ಕಮಲದ ಹೂವಿನ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಸಕ್ಕರೆ ಕಾಯಿಲೆ.

ನಿಮ್ಮ ಸಕ್ಕರೆ ಕಾಯಿಲೆ ಸಮಸ್ಯೆಗೆ ಬೇರೆ ಬೇರೆ ಕಡೆಗಳಲ್ಲಿ ಪರಿಹಾರ ಸಿಗದೇ ಬೇಸತ್ತು ಹೋಗಿದ್ದರೆ ನಾವೊಂದು ಸಿಂಪಲ್ ಟಿಪ್ಸ್ ಕೊಡುತ್ತೇವೆ ಕೇಳಿ. ನೈಸರ್ಗಿಕವಾದ ಆಹಾರ ಪದ್ಧತಿಯಿಂದ ನಮ್ಮ ಯಾವುದೇ ಕಾಯಿಲೆಯನ್ನು ನಾವು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂಬ ಸತ್ಯ ನಮಗೆ ಅರ್ಥವಾದರೆ ಸಾಕು. ಬೇರೆ ಬೇರೆ ಕಾಯಿಲೆಗಳಿಗೆ ಇರುವಂತೆ ಸಕ್ಕರೆ ಕಾಯಿಲೆಗೂ ಕೂಡ ನಿಸರ್ಗದತ್ತವಾದ ಔಷಧಿ ಸಾಧ್ಯವಿದೆ. ಮಖಾನ ಬೀಜಗಳು ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾ ಒಳ್ಳೆಯದು ಎಂದು ತಜ್ಞರು ಕೂಡ ಹೇಳುತ್ತಾರೆ. ಇದಕ್ಕೆ ಕಾರಣಗಳೇನು ಎಂದು ತಿಳಿಯುವುದಾದರೆ...

ಇದರಲ್ಲಿ ಕಡಿಮೆ ಗ್ಲೈಸಿಮಿಕ್ ಸೂಚ್ಯಂಕ ಇದೆ

Easy ways to maintain your blood sugar level during the festive season |  Health News - The Indian Express

  • ಮಖಾನ ಬೀಜಗಳಲ್ಲಿ ಕಡಿಮೆ ಗ್ಲೈಸಿಮಿಕ್ ಸೂಚ್ಯಂಕ ಇರುವುದರಿಂದ ಯಾವುದಾದರೂ ಹೆಚ್ಚಿನ ಸಕ್ಕರೆ ಅಂಶ ಇರುವ ಆಹಾರಗಳನ್ನು ಸೇವನೆ ಮಾಡಿದಾಗ ಬ್ಲಡ್ ಶುಗರ್ ಲೆವೆಲ್ ನಿಧಾನವಾಗಿ ಏರಿಕೆಯಾಗುತ್ತದೆ.
  • ಇದರಿಂದ ಶುಗರ್ ಲೆವೆಲ್ ಕಂಟ್ರೋಲ್ ನಲ್ಲಿ ಉಳಿಯುತ್ತದೆ. ನೀವು ಇದನ್ನು ಹುರಿದು ಕೂಡ ತಿನ್ನಬಹುದು. ಸುಲಭವಾಗಿ ನಿಮ್ಮ ಮಧುಮೇಹವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಿಕೊಳ್ಳಬಹುದು.​

ನಾರಿನ ಅಂಶ ಅಧಿಕವಾಗಿದೆ

Is Makhana Good for Diabetes - Sugar.Fit

  • ಮಖಾನ ಬೀಜಗಳಲ್ಲಿ ನಾರಿನ ಅಂಶ ಹೆಚ್ಚಾಗಿದ್ದು, ನಿಮ್ಮ ಸಕ್ಕರೆ ಕಾಯಿಲೆಯ ನಿರ್ವಹಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
  • ನಾರಿನ ಅಂಶ ಯಾವುದೇ ಆಹಾರದಿಂದ ಸಕ್ಕರೆ ಪ್ರಮಾಣವನ್ನು ನಿಧಾನವಾಗಿ ಹೀರಿಕೊಳ್ಳುವಂತೆ ಮಾಡುತ್ತದೆ ಮತ್ತು ಬ್ಲಡ್ ಗ್ಲುಕೋಸ್ ಲೆವೆಲ್ ನಿಯಂತ್ರಣದಲ್ಲಿ ಉಳಿಯುತ್ತದೆ.
  • ಹೊಟ್ಟೆ ತುಂಬಿದ ಅನುಭವ ಉಂಟು ಮಾಡುವುದರ ಜೊತೆಗೆ ಬೇರೆ ಬೇರೆ ಅನಾರೋಗ್ಯಕರ ಆಹಾರಗಳನ್ನು ಸೇವನೆ ಮಾಡುವ ಸಾಧ್ಯತೆಯನ್ನು ತಪ್ಪಿಸುತ್ತದೆ. ಇದೊಂದು ಪೌಷ್ಟಿಕಾಂಶದಿಂದ ಕೂಡಿದ ಆಹಾರವಾಗಿದ್ದು, ಸಕ್ಕರೆ ಕಾಯಿಲೆ ಇರುವವರಿಗೆ ಸೂಕ್ತ ಎಂದು ಹೇಳಲಾಗಿದೆ.​

ಮೆಗ್ನೀಷಿಯಂ ಇದರಲ್ಲಿದೆ

New Diabetes Test More Accurate

  • ಮಖಾನ ಬೀಜಗಳಲ್ಲಿ ಮೆಗ್ನೀಷಿಯಂ ಸಹ ಇರುವುದರಿಂದ ದೇಹದ ಜೀವಕೋಶಗಳಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಅಭಿವೃದ್ಧಿಪಡಿಸುತ್ತದೆ.
  • ಇನ್ಸುಲಿನ್ ಸೂಕ್ಷ್ಮತೆ ಅಭಿವೃದ್ಧಿಯಾದರೆ ನಮ್ಮ ದೇಹದಲ್ಲಿ ಇದು ಅತ್ಯಂತ ಪರಿಣಾಮಕಾರಿಯಾಗಿ ಬಳಕೆಯಾಗುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧತೆ ಕಡಿಮೆಯಾಗುತ್ತದೆ. ಸಕ್ಕರೆ ಕಾಯಿಲೆ ಇರುವ ಜನರಿಗೆ ಸಾಕಷ್ಟು ಉಪಯೋಗವಾಗುತ್ತದೆ.​

ಆಂಟಿ ಆಕ್ಸಿಡೆಂಟ್ ಹೇರಳವಾಗಿದೆ

Phool Makhana: 10 Amazing Benefits Blood Sugar Management, Weight Loss

  • ಮಖಾನ ಬೀಜಗಳಲ್ಲಿ ಪಾಲಿಫಿನಾಲ್ ಮತ್ತು ಫ್ಲೇವ ನಾಯ್ಡ್ ಅಂಶಗಳು ಹೆಚ್ಚಾಗಿದ್ದು ಆಂಟಿ ಆಕ್ಸಿಡೆಂಟ್ ರೂಪದಲ್ಲಿ ಕೆಲಸ ಮಾಡುತ್ತವೆ.
  • ಇವು ನಮ್ಮ ದೇಹದಲ್ಲಿ ಫ್ರೀ ರಾಡಿಕಲ್ ಅಂಶಗಳನ್ನು ಮತ್ತು ಅವುಗಳ ಪ್ರಭಾವಗಳನ್ನು ಕಡಿಮೆ ಮಾಡುತ್ತವೆ.
  • ಇದರಿಂದ ನಮ್ಮ ಪ್ಯಾಂಕ್ರಿಯಾಸ್ ಗ್ರಂಥಿ ತನ್ನ ಕಾರ್ಯ ಚಟುವಟಿಕೆ ಹೆಚ್ಚಾಗಿಸಿಕೊಳ್ಳಲು ಸಹಾಯವಾಗುತ್ತದೆ ಮತ್ತು ಇನ್ಸುಲಿನ್ ಉತ್ಪತ್ತಿಯಲ್ಲಿ ನೆರವಾಗಿ ಮಧುಮೇಹ ನಿಯಂತ್ರಣದಲ್ಲಿ ಸಹಾಯವಾಗುತ್ತದೆ.​

ಕಡಿಮೆ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇದೆ

ಕಡಿಮೆ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇದೆ

  • ಸಕ್ಕರೆ ಕಾಯಿಲೆ ಇರುವವರಿಗೆ ಹೃದಯದ ಸಮಸ್ಯೆ ಯಾವುದೇ ಸಂದರ್ಭದಲ್ಲಿ ಬರಬಹುದು. ಹೀಗಾಗಿ ಹೃದಯದ ಆರೋಗ್ಯ ಬಹಳ ಮುಖ್ಯ.
  • ಮಖಾನ ಬೀಜಗಳು ಕಡಿಮೆ ಕೊಬ್ಬು ಮತ್ತು ಕೊಲೆ ಸ್ಟ್ರಾಲ್ ಹೊಂದಿರುವುದರಿಂದ ಸಕ್ಕರೆ ಕಾಯಿಲೆ ಇರುವವರಿಗೆ ಮತ್ತು ಇದರಿಂದ ಹೃದಯದ ಸಮಸ್ಯೆಬರುತ್ತದೆ ಎನ್ನುವವರಿಗೆ ತುಂಬಾ ಒಳ್ಳೆಯದು.
  • ಮಖಾನ ಬೀಜಗಳನ್ನು ಸೇವಿಸುವುದರಿಂದ ದೇಹದಲ್ಲಿ ಕೂಡ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ ಜೊತೆಗೆ ಹೃದಯ ರಕ್ತನಾಳದ ಸಮಸ್ಯೆಗಳು ದೂರವಾ ಗುತ್ತವೆ. ಒಟ್ಟಾರೆಯಾಗಿ ಸಮತೋಲನವಾದ ಆಹಾರ ಪದ್ಧತಿ ನಿಮ್ಮದಾಗುತ್ತದೆ.

diabetics can consume makhana seeds to control blood sugar level.