ನಿಮ್ ಏರಿಯಾ ಡಾಕ್ಟರ್ ಪ್ರಕಾರ ನೆನೆಸಿದ ಬಾದಾಮಿ ಬೀಜಗಳು ಸೋ ಪವರ್ಫುಲ್!

04-08-23 06:30 pm       Source: Vijayakarnataka   ಡಾಕ್ಟರ್ಸ್ ನೋಟ್

ಕಡಲೆ ಬೀಜ, ಉದ್ದಿನಬೇಳೆ, ಕಡಲೆ ಬೇಳೆ, ಹೆಸರು ಕಾಳು ಇವುಗಳನ್ನು ನೆನೆಸಿ ತಿನ್ನುವುದನ್ನು ನೋಡಿದ್ದೇವೆ. ಇವುಗಳಿಗಿಂತ ಫೇಮಸ್ ಆಗಿದೆ ಬಾದಾಮಿ ಬೀಜಗಳನ್ನು ನೆನೆಸಿ ತಿನ್ನುವ ಟೆಕ್ನಿಕ್!

ಬಾದಾಮಿ ಬೀಜಗಳನ್ನು ತಿಂದರೆ ಶಕ್ತಿ ಬರುತ್ತದೆ. ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ರಾತ್ರಿ ಸಮಯದಲ್ಲಿ ಬಾದಾಮಿ ಹಾಲು ಕುಡಿದು ಮಲಗಿದರೆ ಒಳ್ಳೆಯ ನಿದ್ರೆ ಬರುತ್ತದೆ ಎಂದಲ್ಲ ಕೇಳಿದ್ದೇವೆ. ಎಲ್ಲವೂ ನಿಜ. ಆದರೆ ಬೆಳಗಿನ ಸಮಯದಲ್ಲಿ ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಬಾದಾಮಿ ಬೀಜ ಗಳನ್ನು ನೆನೆಸಿಕೊಂಡು ತಿನ್ನಬೇಕಂತೆ. ಪ್ರತಿ ದಿನ ಈ ಅಭ್ಯಾಸ ಮಾಡಿಕೊಂಡವರಿಗೆ ಸಮಗ್ರ ಆರೋಗ್ಯದ ಗಿಫ್ಟ್ ಗ್ಯಾರಂಟಿ ಅನ್ನುತ್ತಾರೆ ವೈದ್ಯರು. ಬಾದಾಮಿ ಬೀಜಗಳು ನೆನೆಸಿದ ಮೇಲೆ ನಮಗೆ ದುಪ್ಪಟ್ಟು ಆರೋಗ್ಯ ಲಾಭಗಳನ್ನು ಕೊಡುತ್ತವೆ.

ನೆನೆಸಿದ ಬಾದಾಮಿ ಬೀಜಗಳನ್ನು ಏಕೆ ತಿನ್ನಬೇಕು?

6 Proven Benefits of Soaked Almonds | Organic Facts

  • ಅಪಾರವಾದ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿ ರುವ ಬಾದಾಮಿ ಬೀಜಗಳನ್ನು ನಿಮ್ಮ ನೆನಪಿನ ಶಕ್ತಿಯನ್ನು ವೃದ್ಧಿಸಲು ನೀವು ಸೇವಿಸಬಹುದು. ಇವುಗಳಲ್ಲಿ ಅಗತ್ಯ ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳು ಸಾಕಷ್ಟು ಕಂಡುಬರುತ್ತವೆ.
  • ಅಂದರೆ ವಿಟಮಿನ್ ಇ, ಜಿಂಕ್, ಕ್ಯಾಲ್ಸಿಯಂ, ಮೆಗ್ನೀಷಿ ಯಂ ಮತ್ತು ಒಮೇಗಾ 3 ಫ್ಯಾಟಿ ಆಮ್ಲಗಳು ಇವುಗಳಲ್ಲಿ ಹೇರಳವಾಗಿ ಸಿಗುತ್ತವೆ. ಆರೋಗ್ಯದ ವಿಚಾರದಲ್ಲಿ ಬಾದಾಮಿ ಬೀಜಗಳು ತಮ್ಮದೇ ಆದ ಪಾತ್ರವನ್ನು ಹೊಂದಿರುತ್ತವೆ.
  • ಇಡೀ ರಾತ್ರಿ ನೆನೆಸಿದ ಬಾದಾಮಿ ಬೀಜಗಳನ್ನು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡು ವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ನೆನೆಸಿದ ಬಾದಾಮಿ ಬೀಜ ಗಳನ್ನು ತಿನ್ನುವುದರ ಪ್ರಯೋಜ ನಗಳು. ​

ಹುಟ್ಟುವ ಮಗುವಿನ ಬೆಳವಣಿಗೆಗೆ ಹೆಲ್ಪ್ ಫುಲ್

When You Eat Almonds Every Day, This Is What Happens To Your Body

  • ನೆನೆಸಿದ ಬಾದಾಮಿ ಬೀಜಗಳಲ್ಲಿ ಫೋಲಿಕ್ ಆಮ್ಲ ಅದ್ಭುತವಾಗಿ ಕಂಡುಬರುತ್ತದೆ. ಇದು ಮಗುವಿನ ಮೆದುಳಿನ ಹಾಗೂ ನರ ಮಂಡಲ ವ್ಯವಸ್ಥೆಯ ಅಭಿ ವೃದ್ಧಿಯಲ್ಲಿ ಕೆಲಸ ಮಾಡುತ್ತದೆ.
  • ಅಷ್ಟೇ ಅಲ್ಲದೆ ನೆನೆಸಿದ ಬಾದಾಮಿ ಬೀಜಗಳು ಬಹಳ ಸುಲಭ ವಾಗಿ ದೇಹದಲ್ಲಿ ಜೀರ್ಣವಾಗುತ್ತವೆ. ಗರ್ಭಿಣಿ ಮಹಿಳೆಯರಿಗೆ ತಿನ್ನುವಂತಹ ಆಹಾರದಲ್ಲಿ ಸಿಗುವ ಎಲ್ಲಾ ಪೌಷ್ಟಿಕಾಂಶಗಳು ದೇಹದಲ್ಲಿ ಹೀರಿಕೊಳ್ಳಲು ಸಹಾಯವಾಗುತ್ತವೆ.​

ಜೀರ್ಣ ಶಕ್ತಿ ವೃದ್ಧಿಸುತ್ತದೆ

ಜೀರ್ಣ ಶಕ್ತಿ ವೃದ್ಧಿಸುತ್ತದೆ

  • ನೆನೆಸಿದ ಬಾದಾಮಿ ಬೀಜಗಳು ಒಬ್ಬ ವ್ಯಕ್ತಿಯ ಜೀರ್ಣಾಂಗ ವ್ಯವಸ್ಥೆಗೆ ಬಹಳ ಅನುಕೂಲಕರವಾಗಿ ಕೆಲಸ ಮಾಡುತ್ತವೆ.
  • ಹಸಿಯಾದ ನೆನೆಸಿದ ಬಾದಾಮಿ ಬೀಜಗಳನ್ನು ಖಾಲಿ ಹೊಟ್ಟೆ ಯಲ್ಲಿ ಸೇವನೆ ಮಾಡುವುದರಿಂದ ಆಹಾರದಲ್ಲಿ ಕಂಡುಬರುವ ಪ್ರೋಟೀನ್ ಅಂಶಗಳನ್ನು ಬಹಳ ಸುಲ ಭವಾಗಿ ಜೀರ್ಣ ಮಾಡುತ್ತವೆ. ಒಳ್ಳೆಯ ಕೊಬ್ಬಿನ ಅಂಶ ಸಹ ಜೀರ್ಣವಾಗಿ ಪೌಷ್ಟಿಕಾಂಶಗಳು ನಮ್ಮ ದೇಹಕ್ಕೆ ಉತ್ತಮವಾಗಿ ಸಿಗುತ್ತವೆ.​

ಅಧಿಕ ರಕ್ತದ ಒತ್ತಡ ನಿಯಂತ್ರಣ

High Blood Pressure (Hypertension): Symptoms and More

ನೆಸಿದ ಬಾದಾಮಿ ಬೀಜಗಳು ಬಿಪಿ ಇರುವವರಿಗೆ ಬಹಳ ಒಳ್ಳೆಯದು. ಸಂಶೋಧನೆಗಳು ಹೇಳುವ ಹಾಗೆ ನಿಮ್ಮ ಆಹಾರ ಪದ್ಧತಿಯಲ್ಲಿ ಬಾದಾಮಿ ಬೀಜಗಳನ್ನು ಸೇರಿಸಿ ಸೇವಿಸುವು ದರಿಂದ ನಮಗೆ ಆಲ್ಫಾ ಟೋಕೋಫ್ರಲ್ ಎಂಬ ಅಂಶ ಸಿಗುತ್ತದೆ ಇದು ರಕ್ತದ ಒತ್ತಡವನ್ನು ಸುಲಭವಾಗಿ ನಿರ್ವಹಣೆ ಮಾಡುತ್ತದೆ. ನಿಯಮಿತವಾದ ಸೇವನೆಯಿಂದ ಕ್ರಮೇಣವಾಗಿ ಹೆಚ್ಚಿನ ರಕ್ತದ ಒತ್ತಡ ನಿಯಂತ್ರಣದಲ್ಲಿ ಉಳಿಯುತ್ತದೆ.

ಹೃದಯದ ಆರೋಗ್ಯ ವೃದ್ಧಿಸುತ್ತದೆ

Silent heart attacks all too common, and often overlooked | American Heart  Association

  • ಜರ್ನಲ್ ಆಫ್ ನ್ಯೂಟ್ರಿಷನ್ ಸಂಶೋಧನೆ ಹೇಳುವ ಹಾಗೆ ಬಾದಾಮಿ ಬೀಜಗಳನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟ್ ಅಂಶಗಳು ಸಿಗಲಿದ್ದು, ಆಕ್ಸಿಡೇಶನ್ ಪ್ರಕ್ರಿಯೆಯಲ್ಲಿ ನೆರವಾಗುತ್ತದೆ.
  • ಇದು ನಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ವನ್ನು ತಗ್ಗಿಸಿ ಹೃದಯ ಹಾಗೂ ಹೃದಯ ರಕ್ತನಾಳದ ವ್ಯವಸ್ಥೆಯನ್ನು ಆರೋಗ್ಯಕರವಾಗಿ ಕಾಪಾಡುತ್ತದೆ. ಆಕ್ಸಿಡೆಟೀವ್ ಒತ್ತಡವನ್ನು ನಿಯಂತ್ರಣಕ್ಕೆ ತಂದು ಹೃದಯದ ಕಾಯಿಲೆಯಿಂದ ನಮ್ಮನ್ನು ಕಾಪಾಡುತ್ತವೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತೆ

Understanding the signs of heart attack

  • ಹೆಚ್ಚಿನ ಕೊಲೆಸ್ಟ್ರಾಲ್ ಪ್ರಮಾಣ ನಮ್ಮ ಹೃದಯದ ಆರೋಗ್ಯಕ್ಕೆ ಎಂದಿಗೂ ಡೇಂಜರ್! ಇದು ನಮ್ಮ ರಕ್ತನಾಳಗಳಿಗೆ ಅಂಟಿಕೊಳ್ಳುವುದರಿಂದ ಸರಾಗವಾದ ರಕ್ತ ಸಂಚಾರ ಆಗುವುದಿಲ್ಲ.
  • ಇದರ ಕಾರಣ ನಮ್ಮ ಹೃದಯ ಕೂಡ ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲ. ದೇಹದಲ್ಲಿ ಒಳ್ಳೆಯ ಕೊಲೆ ಸ್ಟ್ರಾಲ್ ಪ್ರಮಾಣವನ್ನು ಹೆಚ್ಚು ಮಾಡಿ ಕೆಟ್ಟ ಕೊಲೆ ಸ್ಟ್ರಾಲ್ ಪ್ರಮಾಣ ದಿಂದ ನಮ್ಮನ್ನು ನೆನೆಸಿದ ಬಾದಾಮಿ ಬೀಜಗಳು ರಕ್ಷಣೆ ಮಾಡುತ್ತವೆ.

ತೂಕ ನಿಯಂತ್ರಣದಲ್ಲಿ ಸಹಕಾರಿ

  • ನಿಮ್ಮ ಆಹಾರ ಪದ್ಧತಿಯಲ್ಲಿ ನಿಯಮಿತವಾಗಿ ಆಗಾಗ ನೆನೆಸಿದ ಬಾದಾಮಿ ಬೀಜಗಳನ್ನು ಸೇರಿಸಿ ತಿನ್ನುವುದ ರಿಂದ ನಿಮ್ಮ ದೇಹದ ತೂಕ ಹೆಚ್ಚಾಗುವುದಿಲ್ಲ. ಬದಲಿಗೆ ನಿಯಂತ್ರಣದಲ್ಲಿ ಉಳಿಯುತ್ತದೆ.
  • ಏಕೆಂದರೆ ಬಾದಾಮಿ ಬೀಜಗಳು ಕಡಿಮೆ ಕ್ಯಾಲೋರಿ ಇರುವ ಆಹಾರವಾಗಿದ್ದು, ತೂಕವನ್ನು ನಿಯಂತ್ರಣ ಮಾಡುವಲ್ಲಿ ತಮ್ಮದೇ ಆದ ಮಹತ್ತರ ಪಾತ್ರವನ್ನು ಹೊಂದಿರುತ್ತವೆ.
  • ನೀವು ಇವುಗಳನ್ನು ನೆನೆಸಿ ತಿನ್ನುವುದರಿಂದ ನಿಮ್ಮ ಜೀರ್ಣಶಕ್ತಿ ಹೆಚ್ಚಾಗುತ್ತದೆ ಮತ್ತು ಮೆಟಬಾಲಿಸಂ ಪ್ರಕ್ರಿಯೆ ಉತ್ತಮ ಗೊಳ್ಳುತ್ತದೆ. ಇದರ ಜೊತೆಗೆ ಅನಾ ರೋಗ್ಯಕರ ಆಹಾರಗಳನ್ನು ಸೇವಿಸುವ ಸಾಧ್ಯತೆ ಕೂಡ ತಪ್ಪುತ್ತದೆ ಮತ್ತು ದೇಹದಲ್ಲಿ ಬೊಜ್ಜಿನ ಪ್ರಮಾಣ ಸಾಕಷ್ಟು ಕಡಿಮೆಯಾಗುತ್ತದೆ.

soaked almonds have double health benefits than normal nuts.