ನೀವು ಇಷ್ಟಪಟ್ಟು ಸೇವಿಸುವ ಈ ಆಹಾರಗಳು ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ..!

09-08-23 07:31 pm       Source: Vijayakarnataka   ಡಾಕ್ಟರ್ಸ್ ನೋಟ್

Foods to avoid for heart health: ನಿಮ್ಮ ಹೃದಯಕ್ಕೆ ಅಪಾಯವನ್ನು ತಂದೊಡ್ಡುವ ಈ ಆಹಾರಗಳನ್ನು ಏಕೆ ತಿನ್ನುತ್ತೀರಿ? ಅಷ್ಟಕ್ಕೂ ಆ ಆಹಾರಗಳು ಯಾವುವು ಇಲ್ಲಿದೆ ಮಾಹಿತಿ.

40 ವರ್ಷದ ಒಳಗಿರುವವರಿಗೆ ಹೃದಯಾಘಾತ, ಹೃದಯಸ್ತಂಭನಗಳಂತಹ ಭಯಾನಕ ಕಾಯಿಲೆಗಳು ಅಟ್ಯಾಕ್‌ ಮಾಡುತ್ತಿವೆ. ಇದಕ್ಕೆ ನಾವು ಅನುಸರಿಸುವ ಜೀವನಶೈಲಿಯನ್ನು ನೇರವಾಗಿ ದೂರಬಹುದು. ಹೌದು, ನಾವು ಪ್ರತಿನಿತ್ಯ ಮಾಡುವ ಹಾಗು ಅನುಸರಿಸುವ ಆಹಾರ ಪದ್ಧತಿಗಳು ನಮ್ಮ ಆರೋಗ್ಯಕ್ಕೆ ಸಂಬಂಧಿಸಿವೆ.

ಹೃದಯಾಘಾತ ಹಠಾತ್ತಾಗಿ ಆಗುವ ಕಾರಣ, ಯಾವಾಗ? ಯಾರಿಗೆ? ಎಲ್ಲಿ? ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಇನ್ನು, ನಮ್ಮ ಹೃದಯದ ಆರೋಗ್ಯವನ್ನು ಹದಗೆಡಿಸುವ ಕೆಲವು ಆಹಾರಗಳಿವೆ. ಅವುಗಳು ನಿಧಾನವಾಗಿ ಸಾವನ್ನು ಸ್ವಾಗತಿಸಬಹುದು. ಹಾಗಾದರೆ ಹೃದಯಕ್ಕೆ ಹಾನಿಯನ್ನು ತಂದೊಡ್ಡುವ ಆ ಆಹಾರಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯಿರಿ.

ಎಣ್ಣೆಯಲ್ಲಿ ಕರಿದ ಚಿಕನ್‌

Fried Chicken Is Hazardous for Heart Health

ವಾರಾಂತ್ಯ ಬಂತೆಂದರೆ ಸಾಕು ಮಾಲ್‌ಗಳಿಗೆ ಹೋಗಿ ಚಿಕನ್‌ ಬರ್ಗರ್‌. ಚಿಕನ್‌ ಲಾಲಿಪಾಪ್‌ ಎಂದೆಲ್ಲ ತಿಂದು ಏಂಜಾಯ್ ಮಾಡುತ್ತೇವೆ. ವಾಸ್ತವವಾಗಿ, ಡೀಪ್-ಫ್ರೈಯಿಂಗ್ ಮಾಡಿರುವ ಚಿಕನ್ಗಳು ಸಖತ್‌ ಕ್ಯಾಲೋರಿಗಳನ್ನು ಹೊಂದಿರುತ್ತದೆ.

ಅಧ್ಯಯನಗಳ ಪ್ರಕಾರ, ಎಣ್ಣೆಯಲ್ಲಿ ಕರಿದ ಆಹಾರಗಳು ಟೈಪ್ 2 ಮಧುಮೇಹ, ಸ್ಥೂಲಕಾಯತೆ ಮತ್ತು ಅಧಿಕ ರಕ್ತದೊತ್ತಡದೊಂದಿಗೆ ಸಂಬಂಧಿಸಿವೆ. ಇವೆಲ್ಲವೂ ನಿಮ್ಮ ಹೃದಯ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.

ಐಸ್ ಕ್ರೀಮ್

Best Ice Cream Shops near your Mizzou Apartment - University Place

ಐಸ್‌ ಕ್ರೀಮ್‌ ನಿಸ್ಸಂದೇಹವಾಗಿ ಬಹಳಷ್ಟು ಜನರ ಫೇವರೆಟ್. ಯಾವುದೇ ಋತುಮಾನವಿರಲಿ ಐಸ್‌ ಕ್ರೀಮ್‌ ತಿನ್ನುವವರು ಮಾತ್ರ ಕಡಿಮೆಯಾಗುವುದಿಲ್ಲ.

ಐಸ್ ಕ್ರೀಂನಲ್ಲಿ ಸಕ್ಕರೆ, ಕ್ಯಾಲೋರಿಗಳು ಮತ್ತು ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಿರುತ್ತದೆ. ಕೊಬ್ಬು ಮತ್ತು ಸಕ್ಕರೆಯಿಂದ ತುಂಬಿದ ಐಸ್‌ಕ್ರೀಮ್‌ಗಳು ದೇಹದ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇಂತಹ ತಂಪಾದ ಐಸ್‌ ಕ್ರೀಮ್‌ ಕೂಡ ಹೃದಯಾಘಾತಕ್ಕೆ ಕಾರಣವಾಗಬಹುದು.

ಆಲೂಗಡ್ಡೆ ಚಿಪ್ಸ್

Ugly Side Effects of Eating Potato Chips, According to Science — Eat This  Not That

ಆಲೂಗಡ್ಡೆ ಚಿಪ್ಸ್ ಅಥವಾ ಫ್ರೆಂಚ್‌ ಪ್ರೈಸ್ ಇವೆರೆಡು ಕೂಡ ಒಂದೇ ನಾಣ್ಯದ ಎರಡು ಮುಖಗಳು. ಇವು ದೇಹದ ತೂಕ ಹೆಚ್ಚಿಸಲು ತನ್ನದೇ ಆದ ಕೊಡುಗೆ ನೀಡುವ ಆಹಾರಗಳಾಗಿವೆ. ಇವುಗಳು ಸ್ಯಾಚುರೇಟೆಡ್ ಕೊಬ್ಬಿನಿಂದ ತುಂಬಿದ್ದು, ಹೆಚ್ಚಿನ ಉಪ್ಪನ್ನು ಒಳಗೊಂಡಿರುತ್ತದೆ. ಯಾರೆಲ್ಲಾ ಹೃದಯದ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬಯಸುತ್ತಾರೆಯೋ ಅಂತವರು ಆಲೂಗಡ್ಡೆ ಚಿಪ್ಸ್ ಮತ್ತು ಫ್ರೆಂಚ್‌ ಪ್ರೈಸ್‌ ಅನ್ನು ಬಿಟ್ಟು ಬಿಡಿ.

ಬೆಣ್ಣೆ

Butter – Salted or UnSalted – 1lb packs – Blooms Imports

ಮಿತವಾಗಿ ತಿನ್ನಬೇಕಾದ ಬೆಣ್ಣೆಯನ್ನು ಯಥೇಚ್ಚವಾಗಿ ತಿನ್ನುವುದರಿಂದ ಹೃದಯಕ್ಕೆ ತೊಂದರೆಯನ್ನು ಉಂಟು ಮಾಡುತ್ತದೆ. ವಾಸ್ತವವಾಗಿ, ಬೆಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಿರುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಮೂಲಕ ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು. ಹಾಗಾಗಿ ಬೆಣ್ಣೆಯನ್ನು ಮಿತವಾಗಿ ತಿನ್ನಲು ಸಲಹೆ ನೀಡುತ್ತೇವೆ.

ಬೇಕರಿ ಫುಡ್

ಬೇಕರಿ ಫುಡ್

ಸುಲಭವಾಗಿ ದೊರೆಯುವ ಸ್ವಾದಿಷ್ಟ ಆಹಾರಗಳಲ್ಲಿ ಬೇಕರಿ ಫುಡ್‌ಗಳು ಕೂಡ ಸೇರಿವೆ. ಅದರಲ್ಲೂ ಕುಕೀಸ್, ಕೇಕ್ಗಳು ಮತ್ತು ಮಫಿನ್ಗಳು ಬಹುತೇಕರ ಅಚ್ಚುಮೆಚ್ಚು.

ಇಂತಹ ಅಹಾರಗಳು ತೂಕ ಹೆಚ್ಚಾಗಲು ಕಾರಣವಾಗುವುದಲ್ಲದೆ, ಹೆಚ್ಚಿನ ಟ್ರೈಗ್ಲಿಸರೈಡ್ ಮಟ್ಟಗಳಿಗೆ ಸಂಬಂಧಿಸಿವೆ. ಇದು ಹೃದಯದ ತೊಂದರೆಗಳನ್ನು ಹುಟ್ಟು ಹಾಕುತ್ತದೆ. ಸಾಮಾನ್ಯವಾಗಿ ಬಿಳಿ ಹಿಟ್ಟು, ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸಬಹುದು. ಅಲ್ಲದೆ, ಪಿಜ್ಜಾ, ಬರ್ಗರ್‌ಗಳನ್ನು ಮಿತವಾಗಿ ತಿನ್ನಲು ಸಲಹೆ ನೀಡುತ್ತೇವೆ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ದಾಳಿಂಬೆ ತಿನ್ನುವುದರಿಂದ.. ಎಷ್ಟೆಲ್ಲ ಪ್ರಯೋಜನ ಪಡೆಯಬಹುದು ಗೊತ್ತಾ?

ಈ ಆಹಾರಗಳು ಹೃದಯಕ್ಕೆ ಅಪಾಯಕಾರಿ

Spiced Beef - A Traditional Irish Festive Treat - Good Food Ireland

ಸೋಡಾ: ಸೋಡಾ ಕುಡಿಯುವವರು ಹೆಚ್ಚಿನ ತೂಕವನ್ನು ಹೊಂದುತ್ತಾರೆ. ಅಲ್ಲದೆ ಬೊಜ್ಜು ಮತ್ತು ಟೈಪ್ 2 ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗವನ್ನು ಹೊಂದಿರುತ್ತಾರೆ.  ಕೆಂಪು ಮಾಂಸ: ಹೆಚ್ಚು ಗೋಮಾಂಸ, ಕುರಿಮರಿ ಮತ್ತು ಹಂದಿಮಾಂಸವನ್ನು ತಿನ್ನುವುದು ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸಬಹುದು.  

ಮದ್ಯಪಾನ: ಅತಿಯಾದ ಮದ್ಯಪಾನವು ಅಧಿಕ ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.  

6 Worst Foods For Heart .