ಇದೇ ಕಾರಣಕ್ಕೆ ತೊಂಡೆಕಾಯಿ ಪಲ್ಯ, ಗ್ರೇವಿ ಆಗಾಗ ತಿನ್ನೋದಕ್ಕೆ ಹೇಳುವುದು!

11-08-23 06:38 pm       Source: Vijayakarnataka   ಡಾಕ್ಟರ್ಸ್ ನೋಟ್

ತೊಂಡೆಕಾಯಿಯನ್ನು ಇಷ್ಟಪಟ್ಟು ತಿನ್ನುವವರೂ ಇದ್ದಾರೆ, ಅದು ಬೇಡಪ್ಪ ಎನ್ನುವವರೂ ಇದ್ದಾರೆ. ಆದರೆ ಬಿಪಿ, ಸಕ್ಕರೆ ಕಾಯಿಲೆ ಇರುವವರಿಗೆ ತೊಂಡೆಕಾಯಿ.

ತೊಂಡೆಕಾಯಿಯನ್ನು ಇಷ್ಟಪಟ್ಟು ತಿನ್ನುವವರೂ ಇದ್ದಾರೆ, ಅದು ಬೇಡಪ್ಪ ಎನ್ನುವವರೂ ಇದ್ದಾರೆ. ಆದರೆ ಬಿಪಿ, ಸಕ್ಕರೆ ಕಾಯಿಲೆ ಇರುವವರಿಗೆ ತೊಂಡೆಕಾಯಿ ತುಂಬಾ ಒಳ್ಳೆಯದು. ರುಚಿಕರ ವಾಗಿದ್ದು ಯಾವುದಾದರೂ ಸರಿ ಮೊದಲು ತಿನ್ನೋಣ ಎನ್ನುವ ಈ ಕಾಲದಲ್ಲಿ ತೊಂಡೆಕಾಯಿ ಮೂಲೆ ಗುಂಪಾಗಿದೆ ಎಂದು ತರಕಾರಿ ಅಂಗಡಿ ಯವರೇ ಹೇಳುತ್ತಾರೆ.

ಬೇರೆ ತರಕಾರಿಗಳಂತೆ ಇದು ಹೆಚ್ಚು ಸೇಲ್ ಆಗುವುದಿಲ್ಲ ಎನ್ನುವ ಕಂಪ್ಲೇಂಟ್ ಅವರದ್ದು. ಆದರೆ ಎಲೆ ಮರೆಕಾಯಿ ಯಂತೆ ತೊಂಡೆಕಾಯಿ ಹೊಂದಿರುವ ಆರೋಗ್ಯ ಲಾಭಗಳು ತುಂಬಾ ಜನರಿಗೆ ಗೊತ್ತೇ ಇಲ್ಲ. ಸಕ್ಕರೆ ಕಾಯಿಲೆ ಮತ್ತು ರಕ್ತದ ಒತ್ತಡ ಇರುವವರಿಗೆ ತೊಂಡೆಕಾಯಿಯ ಪ್ರಯೋಜನಗಳು ಹೆಚ್ಚಾಗಿ ಸಿಗುತ್ತವೆ.

ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಇದರಿಂದ ತಯಾರಿಸಿ ತಿನ್ನಬಹುದು. ಎಲ್ಲವೂ ಸಹ ಒಂದಲ್ಲ ಒಂದು ರೂಪದಲ್ಲಿ ಅನುಕೂಲಕರವಾಗಿರುತ್ತವೆ. ಈ ಲೇಖನದಲ್ಲಿ ತೊಂಡೆಕಾಯಿ ತಿನ್ನುವುದರ ಆರೋಗ್ಯ ಲಾಭಗಳನ್ನು ತಿಳಿದುಕೊಳ್ಳೋಣ....

ಗ್ಲೈಸಿಮಿಕ್ ಸೂಚ್ಯಂಕ ಕಡಿಮೆ ಇದೆ

How Baking Soda Affects People with Type 2 Diabetes

ಆರೋಗ್ಯ ತಜ್ಞರಾದ ಡಾ. ವಿಧಿ ಚಾವ್ಲಾ ಹೇಳುವ ಹಾಗೆ ತೊಂಡೆ ಕಾಯಿ ತನ್ನಲ್ಲಿ ಕಡಿಮೆ ಪ್ರಮಾಣದ ಗ್ಲೈಸಿಮಿಕ್ ಸೂಚ್ಯಂಕ ಹೊಂದಿದ್ದು, ನೀವು ಸೇವಿಸುವ ಆಹಾರದ ಜೊತೆ ತೊಂಡೆಕಾಯಿ ತಿನ್ನುವುದರಿಂದ ನಿಮ್ಮ ಬ್ಲಡ್ ಶುಗರ್ ಲೆವೆಲ್ ವೇಗವಾಗಿ ಏರಿಕೆಯಾಗುವುದಿಲ್ಲ. ಇದು ಮಧುಮೇಹ ನಿರ್ವಹಣೆಗೆ ಬಹಳ ಸಹಕಾರಿಯಾಗಿ ಕೆಲಸ ಮಾಡುತ್ತದೆ.

ನಾರಿನ ಅಂಶ ಅಪಾರವಾಗಿದೆ

Ivy Gourd

  • ಯಾವುದೇ ಆಹಾರದಲ್ಲಿ ನಾರಿನ ಪ್ರಮಾಣ ಹೆಚ್ಚಾಗಿದ್ದರೆ ಅದರಿಂದ ನಾವು ಸೇವಿಸುವ ಆಹಾರದಲ್ಲಿ ಸಿಗುವ ಸಕ್ಕರೆ ಪ್ರಮಾಣವನ್ನು ನಮ್ಮ ದೇಹ ನಿಧಾನವಾಗಿ ಹೀರಿ ಕೊಳ್ಳಲು ಸಹಾಯವಾಗುತ್ತದೆ.
  • ತೊಂಡೆಕಾಯಿ ತಿನ್ನುವುದರಿಂದ ಕೂಡ ಇದೇ ಅನುಕೂಲ ವಾಗುತ್ತದೆ. ಉತ್ತಮ ಜೀರ್ಣ ಶಕ್ತಿ ಮತ್ತು ನಮ್ಮ ಹೊಟ್ಟೆ ಹಸಿವಿನ ನಿಯಂತ್ರಣದಲ್ಲಿ ಇದು ಸಹಾಯ ಮಾಡುತ್ತದೆ. ಇದರಿಂದ ತೂಕ ನಿರ್ವಹ ಣೆಯಲ್ಲಿ ತೊಂಡೆಕಾಯಿ ನಮಗೆ ಹೆಚ್ಚು ಲಾಭಕಾರಿ ಯಾಗಿರುತ್ತದೆ.

ಅಗಾಧವಾದ ಪೌಷ್ಟಿಕಾಂಶಗಳು

ಅಗಾಧವಾದ ಪೌಷ್ಟಿಕಾಂಶಗಳು

  • ವಿಟಮಿನ್ ಮತ್ತು ಖನಿಜಾಂಶಗಳು ಹೆಚ್ಚಾಗಿರುವ ತೊಂಡೆಕಾಯಿ ತನ್ನಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವ ಬಹುತೇಕ ಪೌಷ್ಟಿಕಾಂಶಗಳನ್ನು ಹೊಂದಿದೆ.
  • ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಜೊತೆಗೆ ಪೋಟಾಸಿಯಂ ಪ್ರಮಾಣ ಕೂಡ ಇದೆ. ಇದು ನಮ್ಮ ಸಂಪೂರ್ಣ ಆರೋಗ್ಯ ವನ್ನು ಉತ್ತೇಜಿಸುವುದು ಮಾತ್ರವಲ್ಲದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಇದರಿಂದ ಸಕ್ಕರೆ ಕಾಯಿಲೆ ಇರುವವರಿಗೆ ಆರೋಗ್ಯಕರವಾದ ಜೀವನಶೈಲಿಯನ್ನು ಹೊಂದಲು ಅನುಕೂಲ ವಾಗುತ್ತದೆ.​

ಆಂಟಿ ಆಕ್ಸಿಡೆಂಟ್ ಲಕ್ಷಣಗಳು ಹೇರಳವಾಗಿವೆ

Why blood sugar level matters and how to keep yours under control

  • ತೊಂಡೆಕಾಯಿ ತನ್ನಲ್ಲಿ ಹೆಚ್ಚಿನ ಪ್ರಮಾಣದ ಶಕ್ತಿಯುತ ವಾದ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಹೊಂದಿದ್ದು, ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುತ್ತದೆ ಮತ್ತು ದೇಹದಲ್ಲಿ ಆಕ್ಸಿಡೆಟೀವ್ ಒತ್ತಡವನ್ನು ಕಡಿಮೆ ಮಾಡುತ್ತದೆ.
  • ಸಕ್ಕರೆ ಕಾಯಿಲೆ ಹೊಂದಿದವರಿಗೆ ಇದು ಅನಿವಾರ್ಯ ಎಂದು ವೈದ್ಯರಾದ ಡಾ. ವಿಧಿ ಚಾವ್ಲಾ ಹೇಳುತ್ತಾರೆ. ಹೀಗಾಗಿ ಆಂಟಿ ಆಕ್ಸಿಡೆಂಟ್ ಬಹಳ ಅವಶ್ಯಕವಾಗಿದೆ.​

ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್ ಕಡಿಮೆ ಇದೆ

Weight Loss Plateaus & Strategies to Overcome Them - NASM

  • ಕಾರ್ಬೋಹೈಡ್ರೇಟ್ ಕಡಿಮೆ ಸೇವಿಸಿ ದೇಹದ ತೂಕವನ್ನು ನಿಯಂತ್ರಣ ಮಾಡಿಕೊಳ್ಳಬೇಕು ಎನ್ನುವವರಿಗೆ ತೊಂಡೆಕಾಯಿ ಬೆಸ್ಟ್ ಆಪ್ಷನ್.
  • ಏಕೆಂದರೆ ಇದರಲ್ಲಿ ಕ್ಯಾಲೋರಿಗಳು ಮತ್ತು ಕಾರ್ಬೋ ಹೈಡ್ರೇಡ್ ಪ್ರಮಾಣ ತುಂಬಾ ಕಡಿಮೆ ಇದೆ. ಸಾಂಬಾರ್ ನಿಂದ ಹಿಡಿದು ಬೇರೆ ಬೇರೆ ಬಗೆಯ ಅಡುಗೆಗಳನ್ನು ತೊಂ ಡೆಕಾಯಿಯಿಂದ ಮಾಡಿ ಸವಿಯಬಹುದು.

ಈಗ ತೊಂಡೆಕಾಯಿ ಬಳಸಿ ತಯಾರು ಮಾಡಬಹುದಾದ ಬೇರೆ ಬೇರೆ ಬಗೆಯ ಅಡುಗೆ ಪದಾರ್ಥ ಗಳನ್ನು ನೋಡೋಣ

Ivy Gourd (tindora) Dry Curry | Mudita's Kitchen

  • ಹಾಗೆ ಫ್ರೈ ಮಾಡಿ ತಿನ್ನಬಹುದು: ತೊಂಡೆಕಾಯಿ ಹಾಗೂ ದಪ್ಪ ಮೆಣಸಿನಕಾಯಿ ಕಾಂಬಿನೇಷನ್ ನಲ್ಲಿ ಈರುಳ್ಳಿ ಹಾಗೂ ಒಗ್ಗರಣೆ ಪದಾರ್ಥಗಳನ್ನು ಗಿಡಮೂಲಿ ಕೆಗಳು ಮತ್ತು ಮಸಾಲೆ ಪದಾರ್ಥಗಳ ಜೊತೆ ಸೇರಿಸಿ ಫ್ರೈ ಮಾಡಿ ಸವಿಯಬಹುದು.
  • ತೊಂಡೆಕಾಯಿ ಸಾಗು: ಟೊಮೆಟೊ ಮತ್ತು ಇನ್ನಿತರ ಮಸಾಲೆ ಪದಾರ್ಥಗಳನ್ನು ಸೇರಿಸಿ ತೊಂಡೆಕಾಯಿ ಸಾಗು ತಯಾರು ಮಾಡಿಕೊಂಡು ಅನ್ನ ಹಾಗೂ ಚಪಾತಿಯ ಜೊತೆ ಸವಿಯ ಬಹುದು.
  • ತೊಂಡೆಕಾಯಿ ಸಲಾಡ್: ಸಣ್ಣದಾಗಿ ತೊಂಡೆಕಾಯಿ ಸ್ಲೈಸ್ ಮಾಡಿಕೊಂಡು ಅದಕ್ಕೆ ಸೌತೆಕಾಯಿ, ಚೆರ್ರಿ ಟೊಮೆಟೊ ಇತ್ಯಾದಿಗಳನ್ನು ಸೇರಿಸಿ ತೊಂಡೆಕಾಯಿ ಸಲಾಡ್ ತಯಾರು ಮಾಡಿ ಸವಿಯಿರಿ. ಇದು ಆರೋ ಗ್ಯಕ್ಕೂ ಒಳ್ಳೆಯದು ಮತ್ತು ತಿನ್ನಲು ರುಚಿಕರ.

The Amazing Health Benefits Of Ivy Gourd Are Still Unknown To Many Of Us.