ತಜ್ಞರ ಪ್ರಕಾರ ಸಂಜೆ ಅಥವಾ ರಾತ್ರಿ ಸಮಯದಲ್ಲಿ ಲೆಮನ್ ಟೀ ಕುಡಿಯಬಾರದಂತೆ! ಯಾಕೆ ಗೊತ್ತಾ?

14-08-23 08:49 pm       Source: Vijayakarnataka   ಡಾಕ್ಟರ್ಸ್ ನೋಟ್

ನಿಂಬೆಹಣ್ಣಿನ ಚಹಾ ಆರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ ಅತಿಯಾದ ಸೇವನೆ ದುಪ್ಪಟ್ಟು ಪ್ರಮಾಣದಲ್ಲಿ ಕೆಟ್ಟದಾಗುತ್ತದೆ.

ನಿಂಬೆಹಣ್ಣು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿದೆ. ನಮ್ಮ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ನಾವು ನಿಂಬೆಹಣ್ಣನ್ನು ವಿವಿಧ ರೂಪದಲ್ಲಿ ಸೇವಿಸುತ್ತೇವೆ. ಬೆಳಗಿನ ಸಮಯದಲ್ಲಿ ನಿಂಬೆ ಹಣ್ಣಿನ ಚಹಾ ಕುಡಿಯುವ ಅಭ್ಯಾಸವನ್ನು ಸಹ ಕೆಲವರು ಮಾಡಿಕೊಂಡಿರುತ್ತಾರೆ.

ಆದರೆ ಒಂದು ದಿನಕ್ಕೆ ಎಷ್ಟು ಕಪ್ ನಿಂಬೆಹಣ್ಣಿನ ಚಹಾ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು, ಒಂದು ವೇಳೆ ಹೆಚ್ಚಾಗಿ ಲೆಮನ್ ಟೀ ಸೇವಿಸಿದರೆ ಏನಾಗುತ್ತದೆ ಎಂಬ ಹಲವಾರು ಉಪಯುಕ್ತ ಮಾಹಿತಿಗಳನ್ನು ಈ ಲೇಖನದಲ್ಲಿ ನಾವೆಲ್ಲರೂ ತಿಳಿದುಕೊಳ್ಳೋಣ.

ನಿಂಬೆಹಣ್ಣಿನ ಚಹಾ ಆರೋಗ್ಯಕ್ಕೆ ಒಳ್ಳೆಯದಾ?

What are the advantages of having lemon tea twice a day? - Quora

  • ಸಾಮಾನ್ಯವಾಗಿ ನಿಂಬೆಹಣ್ಣು ಆಮ್ಲೀಯ ಆಹಾರ ವಾಗಿದೆ. ಹಾಗಾಗಿ ಇದರಿಂದ ತಯಾರಿಸುವ ಚಹಾ ಕೂಡ ಆಮ್ಲಿಯ ಗುಣವನ್ನು ಹೊಂದಿದೆ. ನಿಂಬೆಹಣ್ಣಿನ ಚಹಾ ಕುಡಿಯುವುದ ರಿಂದ ನಮ್ಮ ದೇಹಕ್ಕೆ ಆಮ್ಲಿಯ ಪ್ರಮಾಣ ಸೇರುತ್ತದೆ ಮತ್ತು ಆರೋಗ್ಯದ ಮೇಲೆ ವ್ಯೆತರಿಕ್ತ ಪರಿಣಾಮ ಬೀರುತ್ತದೆ.
  • ಇದರಿಂದ ಪ್ರಮುಖವಾಗಿ ಹಲ್ಲುಗಳ ಮೇಲ್ಭಾಗ ಎನಾಮೆಲ್ ಹಾಳಾಗುತ್ತದೆ ಮತ್ತು ಸೂಕ್ಷ್ಮ ಹಲ್ಲುಗಳನ್ನು ಮತ್ತು ವಸಡು ಗಳನ್ನು ಹೊಂದಿರುವವರಿಗೆ ತೊಂದರೆ ಹೆಚ್ಚಾಗುತ್ತದೆ.
  • ಪ್ರಮುಖವಾಗಿ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪ್ರಭಾವ ಬೀರಿ ಆರೋಗ್ಯದ ಅಸ್ವಸ್ಥತೆ ಎದುರಾಗುತ್ತದೆ. ಇದರಿಂದ ಎದೆಯುರಿ ಮತ್ತು ಅಜೀರ್ಣತೆ ಉಂಟಾಗುತ್ತದೆ. ನಿಂಬೆ ಹಣ್ಣಿನ ಚಹಾ ಕುಡಿಯುವುದರ ಮೊದಲು ಜನರು ಇದನ್ನು ತಿಳಿದು ಕೊಳ್ಳಬೇಕು.​

ಆರೋಗ್ಯ ತಜ್ಞರು ಏನು ಹೇಳುತ್ತಾರೆ?

Researchers find proteins which could prevent heart failure after heart  attack - BHF

  • ಆರೋಗ್ಯ ತಜ್ಞರಾದ ಶ್ರುತಿ ನಾಯ್ಡು ಹೇಳುವ ಪ್ರಕಾರ ನಿಂಬೆ ಹಣ್ಣಿನಲ್ಲಿರುವ ಆಕ್ಸಲೆಟ್ ಕಿಡ್ನಿ ಕಲ್ಲುಗಳನ್ನು ಉಂಟು ಮಾಡುತ್ತದೆ ಮತ್ತು ಕೆಫಿನ್ ಅಂಶ ನಿದ್ರಾಹೀನತೆ ಸಮಸ್ಯೆ ಕಂಡುಬರುವಂತೆ ಮಾಡುತ್ತದೆ.
  • ಇದರ ಜೊತೆಗೆ ಹೃದಯ ಬಡಿತ ಹೆಚ್ಚಾಗುತ್ತದೆ ಮತ್ತು ಮಾನಸಿಕ ಖಿನ್ನತೆ ಎದುರಾಗುತ್ತದೆ. ಇದರಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿರುವುದರಿಂದ ಕ್ಯಾಲ್ಸಿಯಂ ಹೀರಿ ಕೊಳ್ಳುವ ಸಾಧ್ಯತೆ ನಮ್ಮ ದೇಹಕ್ಕೆ ಕಡಿಮೆಯಾಗಿ ಮೂಳೆಗಳ ಆರೋಗ್ಯದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ.
  • ಹೀಗಾಗಿ ಸಮತೋಲನವಾದ ಆಹಾರ ಪದ್ಧತಿಯಲ್ಲಿ ಲೆಮನ್ ಟೀ ಅನ್ನು ಮಿತವಾಗಿ ಹೊಂದುವುದು ಅವಶ್ಯ ಕವಾಗಿದೆ. ಒಂದು ವೇಳೆ ಆರೋಗ್ಯದ ಸಮಸ್ಯೆಗಳು ಮೊದಲೇ ಇದ್ದರೆ ವೈದ್ಯರಿಂದ ಸಲಹೆ ಪಡೆದು ಕೊಳ್ಳುವುದು ಉತ್ತಮ.

ಜೀರ್ಣಾಂಗ ತೊಂದರೆ ಹೆಚ್ಚಿಸುತ್ತದೆ

Stomach Bloating: ಹೊಟ್ಟೆ ಉಬ್ಬುವ ಸಮಸ್ಯೆಗೆ ಕಾರಣ ಏನು? ಈ ಸಮಸ್ಯೆಗೆ  ಮನೆಮದ್ದಿನಲ್ಲಿಯೇ ಇದೆ ಪರಿಹಾರ - Kannada News | Try these home remedies to  overcome Stomach Bloating problem | TV9 Kannada

ನೀವು ಕುಡಿಯುವ ಸಾಧಾರಣ ಚಹಾಗೆ ನಿಂಬೆಹಣ್ಣಿನ ರಸ ಸೇರಿಸಿ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದ ರಿಂದ ಮತ್ತು ನಿರಂತರವಾಗಿ ಇದನ್ನು ಪ್ರತಿದಿನ ಮುಂದುವ ರಿಸುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯ ತೊಂದರೆ ಅಧಿಕವಾಗುತ್ತದೆ. ಇದರಿಂದ ಎದೆಯುರಿ, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ, ಮಲಬದ್ಧತೆ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.

ನಿರ್ಜಲೀಕರಣ ಎದುರಾಗುತ್ತದೆ

Dehydration: These 6 symptoms show that there is a lack of water in the  body | Dehydration: ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತಿದೆ ಎನ್ನುವುದನ್ನು  ಹೇಳುತ್ತದೆ ಈ ಆರು ಲಕ್ಷಣ Health News in Kannada

  • ನಿಂಬೆಹಣ್ಣಿನ ಚಹಾ ಕುಡಿಯುವುದರಿಂದ ನಮ್ಮ ದೇಹ ದಲ್ಲಿ ಆಮ್ಲಿಯ ಪ್ರಮಾಣ ಹೆಚ್ಚಾಗುತ್ತದೆ. ಇದ ರಿಂದ ಮೆಟಬಾಲಿಸಂ ಪ್ರಕ್ರಿಯೆಯ ಮೇಲೆ ಪ್ರಭಾವ ಉಂಟಾ ಗುತ್ತದೆ ಮತ್ತು ನಮ್ಮ ದೇಹದಿಂದ ಹೆಚ್ಚಿನ ಪ್ರಮಾಣ ದಲ್ಲಿ ನೀರಿನ ಅಂಶ ನಷ್ಟವಾಗುತ್ತದೆ.
  • ಸಾಮಾನ್ಯವಾಗಿ ಇದರಿಂದ ನಮ್ಮ ದೇಹದ ವಾಟರ್ ಲೆವೆಲ್ ಬ್ಯಾಲೆನ್ಸ್ ತಪ್ಪುತ್ತದೆ. ಬೇರೆ ಬೇರೆ ಬಗೆಯ ಆರೋಗ್ಯ ಸಮಸ್ಯೆ ಗಳು ಇದರಿಂದ ಕಂಡುಬರುತ್ತವೆ. ನಿಂಬೆಹಣ್ಣಿನ ಚಹಾ ಹೆಚ್ಚಾಗಿ ಕುಡಿದರೆ ತಲೆನೋವು ಮತ್ತು ದೈಹಿಕ ಅಸ್ವಸ್ಥತೆ ಕಂಡುಬರುತ್ತದೆ.​

ಬಾಯಿಯ ಆರೋಗ್ಯದ ಮೇಲೆ ಪ್ರಭಾವ

ಬಾಯಿಯ ಆರೋಗ್ಯದ ಮೇಲೆ ಪ್ರಭಾವ

  • ಮೊದಲೇ ಹೇಳಿದಂತೆ ನಿಂಬೆಹಣ್ಣಿನಲ್ಲಿರುವ ಆಮ್ಲಿಯ ಅಂಶ ನಮ್ಮ ಹಲ್ಲುಗಳ ಎನಮಲ್ ಭಾಗದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಇದರಿಂದ ನಮ್ಮ ಹಲ್ಲುಗಳು ಹಾಳಾ ಗುತ್ತವೆ.
  • ಆಮ್ಲೀಯತೆ ಹೆಚ್ಚಾದಂತೆ ಹಲ್ಲುಗಳ ಅತಿಯಾದ ನೋವು ಮತ್ತು ಸೂಕ್ಷ್ಮತೆ ಹೆಚ್ಚಾಗುತ್ತದೆ. ಇದರಿಂದ ವಸಡುಗಳ ಭಾಗಕ್ಕೂ ಕೂಡ ಹಾನಿ ಉಂಟಾಗುತ್ತದೆ.​

ಮೂಳೆಗಳು ದುರ್ಬಲಗೊಳ್ಳುತ್ತವೆ

ಮೂಳೆಗಳು ದುರ್ಬಲಗೊಳ್ಳುತ್ತವೆ

  • ನಿಂಬೆಹಣ್ಣು ಒಂದು ಮೂತ್ರವರ್ಧಕವಾಗಿ ಕೆಲಸ ಮಾಡುತ್ತದೆ. ಹೀಗಾಗಿ ಇದು ಇತರ ವಿಷಕಾರಿ ಅಂಶಗಳ ಜೊತೆಗೆ ನಮ್ಮ ದೇಹದಿಂದ ಕ್ಯಾಲ್ಸಿಯಂ ಪ್ರಮಾಣ ವನ್ನು ಸಹ ಮೂತ್ರದ ಮೂಲಕ ಹೊರಹಾಕುತ್ತದೆ.
  • ನಿಂಬೆಹಣ್ಣಿನ ಚಹಾ ಕುಡಿಯುವುದರಿಂದ ಅದರಲ್ಲಿರುವ ಅಲ್ಯುಮಿನಿಯಂ ನಮ್ಮ ದೇಹಕ್ಕೆ ಸಾಕಷ್ಟು ಹೀರಿ ಕೊಳ್ಳಲ್ಪಡುತ್ತದೆ. ಇದು ನಮ್ಮ ದೇಹದಲ್ಲಿ ಆಮ್ಲಿಯ ಪ್ರಭಾವವನ್ನು ಹೆಚ್ಚಿಸಿ ಮೂಳೆಗಳ ಮೇಲೆ ನಕಾರಾತ್ಮಕ ಪ್ರಭಾವವನ್ನು ಹೆಚ್ಚಿಸುತ್ತದೆ.​

ಹಾಗಾದರೆ ಎಷ್ಟು ಕಪ್ಪು ಲೆಮನ್ ಟೀ ಒಳ್ಳೆಯದು?

Masala Chai (Tea) Recipe - Spiced Chai - Tea for Turmeric

  • ಆರೋಗ್ಯ ತಜ್ಞರಾದ ಶ್ರುತಿ ನಾಯ್ಡು ಹೇಳುವ ಹಾಗೆ ನೀವು ಒಂದು ದಿನಕ್ಕೆ ನಿಂಬೆಹಣ್ಣಿನ ಚಹಾ ಕುಡಿಯುವುದಾದರೆ ಒಂದು ಅಥವಾ ಎರಡು ಕಪ್ ಮಾತ್ರ ಕುಡಿಯಿರಿ.
  • ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಬೇಡ. ಏಕೆಂದರೆ ಮೇಲಿನ ಸಮಸ್ಯೆಗಳು ಶುರುವಾಗಬಹುದು. ಆದರೆ ಯಾವುದೇ ಕಾರಣಕ್ಕೂ ಸಂಜೆ ಅಥವಾ ರಾತ್ರಿ ಸಮಯದಲ್ಲಿ ಲೆಮನ್ ಟೀ ಕುಡಿಯಬೇಡಿ. ಇದರಿಂದ ಪಿತ್ತದೋಷ ಉಂಟಾಗುತ್ತದೆ. ರಾತ್ರಿಯ ಸಮಯದಲ್ಲಿ ಸರಿಯಾಗಿ ನಿದ್ರೆ ಬರುವುದಿಲ್ಲ.

Daily One Or Two Cup Lemon Tea Is Good For Health But Not More Than That.