ಬ್ರೇಕಿಂಗ್ ನ್ಯೂಸ್
10-04-21 07:10 pm source: BOLDSKY ಡಾಕ್ಟರ್ಸ್ ನೋಟ್
ತೂಕ ಇಳಿಸಿಕೊಳ್ಳುವ ವಿಚಾರಕ್ಕೆ ಬಂದಾಗ, ನಿರ್ಬಂಧಿತ ಆಹಾರಕ್ರಮಗಳು ಮತ್ತು ನಿಯಮಿತವಾದ ವ್ಯಾಯಾಮ ಪ್ರಮುಖ ಪಾತ್ರವಹಿಸುತ್ತದೆ. ಆದರೆ, ಕಾರ್ಯನಿರತ ವೇಳಾಪಟ್ಟಿ ಮತ್ತು ದೈನಂದಿನ ಚಟುವಟಿಕೆಗಳೊಂದಿಗೆ, ಅದೇ ರೀತಿ ಇರುವುದು ಕಷ್ಟವಾಗಬಹುದು. ಹಾಗಾದರೆ ವ್ಯಾಯಾಮವಿಲ್ಲದೇ ತೂಕ ಕಳೆದುಕೊಳ್ಳಲು ಸಾಧ್ಯವಿಲ್ಲವೇ? ಖಂಡಿತಾ ಇದೆ. ಅದಕ್ಕಾಗಿ ನಾವಿಂದು ಯಾವುದೇ ವ್ಯಾಯಾಮವಿಲ್ಲದೆ ತೂಕವನ್ನು ಕಳೆದುಕೊಳ್ಳುವ ಕೆಲವು ಸಲಹೆಗಳನ್ನು ಈ ಲೇಖನದಲ್ಲಿ ನೀಡಲಾಗಿದೆ..
ಯಾವುದೇ ವ್ಯಾಯಾಮವಿಲ್ಲದೆ ತೂಕವನ್ನು ಕಳೆದುಕೊಳ್ಳುವ ಕೆಲವು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಊಟದ ಭಾಗ ನಿಯಂತ್ರಣ:
ಸ್ಥೂಲಕಾಯತೆಯ ಹಿಂದಿನ ಮುಖ್ಯ ಕಾರಣ ಅತಿಯಾಗಿ ತಿನ್ನುವುದು. ಕೆಲವೊಮ್ಮೆ ನಮ್ಮ ಹೊಟ್ಟೆ ತುಂಬಿರುವಾಗಲೂ, ತಿನ್ನಲು ಆರಿಸಿಕೊಳ್ಳುತ್ತೇವೆ, ಅದು ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಮ್ಮ ತೂಕವನ್ನು ಸಾಧಿಸಲು ನಿಮ್ಮ ದೇಹಕ್ಕೆ ಅಗತ್ಯವಾದ ಆಹಾರ ಭಾಗಗಳನ್ನು ತೆಗದುಕೊಳ್ಳುವುದು ಮುಖ್ಯವಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಪೋಷಕಾಂಶಯುಕ್ತ ಆಹಾರ ಸೇವಿಸಿ.

ಅತಿಯಾಗಿ ತಿನ್ನಬೇಡಿ:
ಯಾವುದೇ ಸಮಯದಲ್ಲಿ ನಮಗೆ ಹಸಿವಾಗಬಹುದು. ಹಾಗಂತ ಒಂದೇ ಸಮನೆ ತಿನ್ನುವುದಲ್ಲ. ನಿಮ್ಮ ಹಠಾತ್ ಕಡುಬಯಕೆಗಳನ್ನು ನಿಯಂತ್ರಿಸುವುದು ಮುಖ್ಯ. ದು ಸವಾಲಿನದ್ದಾಗಿದ್ದರೆ, ನೀವು ಯಾವಾಗಲೂ ಸ್ವಲ್ಪ ನೀರು ಕುಡಿಯಬಹುದು ಅಥವಾ ಕೆಲವು ಹಣ್ಣುಗಳು ಅಥವಾ ಒಣ ಹಣ್ಣುಗಳನ್ನು ಆಗಾಗ ತಿನ್ನಬಹುದು.

ಫೈಬರ್ ಭರಿತ ಆಹಾರಗಳಿಗೆ ಬದಲಿಸಿ:
ಅನಾರೋಗ್ಯಕರ ಆಹಾರವನ್ನು ತಿನ್ನುವ ಬದಲು, ನೀವು ಫೈಬರ್ ಭರಿತ ಆಹಾರಗಳಿಗೆ ಬದಲಾಗಬೇಕು, ವಿಶೇಷವಾಗಿ ನೀವು ತೂಕ ಕಳೆದುಕೊಳ್ಳು ಬಯಸಿದರೆ. ಫೈಬರ್ ಸಮೃದ್ಧವಾಗಿರುವ ಆಹಾರಗಳು ನಿಮ್ಮ ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುವುದಲ್ಲದೆ, ದೀರ್ಘಕಾಲದವರೆಗೆ ನಿಮ್ಮನ್ನು ಸಂತೃಪ್ತಿಗೊಳಿಸಬಹುದು.

ಹೆಚ್ಚು ನೀರು ಕುಡಿಯಿರಿ:
ಸಾಕಷ್ಟು ನೀರು ಕುಡಿಯುವುದು ಮತ್ತು ಹೈಡ್ರೀಕರಿಸಿದಂತೆ ಇರುವುದು ನಿಮ್ಮ ತೂಕ ಇಳಿಸುವ ಕಾರ್ಯಕ್ಕೆ ಅದ್ಭುತಗಳನ್ನು ಮಾಡುತ್ತದೆ. ಇದು ನಿಮ್ಮನ್ನು ಶಕ್ತಿಯುತವಾಗಿ ಮತ್ತು ಉಲ್ಲಾಸದಿಂದ ಇರಿಸಲು ಮಾತ್ರವಲ್ಲ, ದೀರ್ಘಕಾಲದವರೆಗೆ ನಿಮ್ಮನ್ನು ಪೂರ್ಣವಾಗಿರಿಸಿಕೊಳ್ಳುತ್ತದೆ.

ನಿಮ್ಮ ಆಹಾರದಲ್ಲಿ ಹೆಚ್ಚಿನ ಪ್ರೋಟೀನ್ ಸೇರಿಸಿ:
ತಜ್ಞರು ಹೇಳುವಂತೆ, ತೂಕ ಇಳಿಸಿಕೊಳ್ಳಲು ತಮ್ಮ ಕಾರ್ಬ್ಸ್, ಕೊಬ್ಬು ಮತ್ತು ಪ್ರೋಟೀನ್ಗಳನ್ನು ಕಡಿತಗೊಳಿಸಬೇಕು ಎಂದು ಹಲವರು ನಂಬುತ್ತಾರೆ, ಆದರೆ ಇದು ತಪ್ಪು. ನಿಮ್ಮ ಆಹಾರದಲ್ಲಿ ವಿವಿಧ ಪೋಷಕಾಂಶಗಳ ಸಂಯೋಜನೆಯ ಅಗತ್ಯವಿರುತ್ತದೆ. ವಿಶೇಷವಾಗಿ ಪ್ರೋಟೀನ್ ಭರಿತ ಆಹಾರಗಳು ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುವ ಶಕ್ತಿಯನ್ನು ನೀಡುತ್ತದೆ ಮತ್ತು ನಿಮ್ಮ ದೇಹವನ್ನು ಹೆಚ್ಚು ಸಮಯದವರೆಗೆ ಚಟುವಟಿಕೆಯಿಂದ ಕೂಡಿರುವವಂತೆ ಮಾಡುತ್ತದೆ.

ಸಾಕಷ್ಟು ನಿದ್ರೆ ಕಡ್ಡಾಯ:
ನೀವು ಯಾವುದೇ ರೀತಿಯಲ್ಲಿ ಯೋಚಿಸಿದರೂ ಸಹ ತೂಕ ನಷ್ಟಕ್ಕೆ ನಿದ್ರೆಗೆ ಬಹಳಷ್ಟು ಸಂಬಂಧವಿದೆ. ಕಾಲಕಾಲಕ್ಕೆ ಹಸಿವು ಮತ್ತು ಕಡುಬಯಕೆಗಳನ್ನು ಉಂಟುಮಾಡುವ ನಿಮ್ಮ ಒತ್ತಡದ ಹಾರ್ಮೋನುಗಳನ್ನು ನಿರ್ವಹಿಸಲು ಸಾಕಷ್ಟು ನಿದ್ರೆ ಮಾಡುವುದು ಮುಖ್ಯವಾಗಿದೆ. ನೀವು ನಿದ್ರೆಯಿಂದ ವಂಚಿತರಾದಾಗ, ನಿಮ್ಮ ದೇಹವು ಕಾರ್ಟಿಸೋಲ್ ಅನ್ನು ಉತ್ಪಾದಿಸುತ್ತದೆ, ಇದು ಒತ್ತಡ-ಸಂಬಂಧಿತ ಹಾರ್ಮೋನ್, ಇದು ನಿಮ್ಮ ದೇಹವನ್ನು ಕೊಬ್ಬನ್ನು ಹಿಡಿದಿಡಲು ಪ್ರಚೋದಿಸುತ್ತದೆ. ಅದಕ್ಕಾಗಿಯೇ, ರಾತ್ರಿ ಉತ್ತಮವಾಗಿ ನಿದ್ರೆ ಮಾಡುವುದು ತುಂಬಾ ಮುಖ್ಯ.
This News Article Is A Copy Of BOLDSKY
24-10-26 05:35 pm
HK News Desk
Parvez dharwad: 40 ದಿನಗಳ ನಿಗೂಢತೆ ಅಂತ್ಯ ; ಡೆತ್...
24-10-26 12:22 pm
ಸ್ಟಿಂಗ್ ಆಪರೇಶನ್ ಹಿಂದಿರುವವರು ಯಾರೆಂಬ ಸತ್ಯ ಗೊತ್...
23-10-26 08:34 pm
ಮಾಧ್ಯಮದ ಮುಖ್ಯಸ್ಥನ ಜೊತೆಗಿದ್ದ ವಿಕ್ಕಿ ಎಂಬ ವ್ಯಕ್ತ...
23-10-26 05:47 pm
ಬ್ಲ್ಯಾಕ್ಮೇಲ್ ಉದ್ದೇಶದಿಂದ ಸ್ಟಿಂಗ್ ಮಾಡಿದ್ದಾರೆ...
23-10-26 03:56 pm
21-10-26 04:21 pm
HK News Desk
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
24-10-26 10:59 pm
HK News Staffer
ಕದ್ರಿಯ 'ಕುಡ್ಪೀಸ್ ಫುಡ್ಸ್' ಬೇಕರಿ ಮಳಿಗೆಗೆ ಆಹಾರ...
24-10-26 10:54 pm
ಸ್ಟಿಂಗ್ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆ...
24-10-26 08:06 pm
ಪೊಳಲಿ ಕ್ಷೇತ್ರದಲ್ಲಿ ₹1.50 ಕೋಟಿ ವೆಚ್ಚದ ಗೋಶಾಲೆ ನ...
24-10-26 01:59 pm
Subbanna Pandit, Folk Academy Award: 45 ವರ್ಷಗ...
24-10-26 12:19 pm
24-10-26 10:21 pm
HK News Desk
ಸ್ಟಿಂಗ್ ಆಪರೇಶನ್ ; ಕೇರಳದಲ್ಲಿ ಸಂತ್ರಸ್ತ ಮಹಿಳೆಯ ಹ...
24-10-26 05:17 pm
ಉದ್ಯಮಿಗಳಿಗೆ ಕೊಲೆ ಬೆದರಿಕೆ ಪ್ರಕರಣ ; ಭೂಗತ ಪಾತಕಿ...
24-10-26 05:00 pm
Bantwal Crime: ದಾಂಪತ್ಯ ಕಲಹ ; ಹೆರಿಗೆ ತೆರಳಿದ್ದ...
24-10-26 12:51 pm
ಪುಲಿಕೇಶಿ ನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಫೋಟ ;...
23-10-26 05:48 pm