ಬ್ರೇಕಿಂಗ್ ನ್ಯೂಸ್
05-05-21 09:54 pm Shreeraksha, Boldsky Kannada ಡಾಕ್ಟರ್ಸ್ ನೋಟ್
ಕೊರೋನಾ ವೈರಸ್ ನಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುವುದಲ್ಲದೇ, ತೂಕ ನಷ್ಟ ಮತ್ತು ದೌರ್ಬಲ್ಯಕ್ಕೂ ಕಾರಣವಾಗುತ್ತದೆ ಎಂಬುದು ನಮಗೆಲ್ಲ ತಿಳಿದಿದೆ. ಇಂತಹ ಸಂದರ್ಭಗಳಲ್ಲಿ, ಔಷಧಿಗಳ ಹೊರತಾಗಿ, ವ್ಯಕ್ತಿಯೋರ್ವ ತನ್ನ ದೈನಂದಿನ ಆಹಾರವನ್ನು ನೋಡಿಕೊಳ್ಳಬೇಕು.
ಆಹಾರ ತಜ್ಞರ ಪ್ರಕಾರ, ವಿಟಮಿನ್ ಡಿ, ಸಿ ಮತ್ತು ಸತುಗಳಂತಹ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿರುವ ಆಹಾರಗಳು ಕೊರೋನಾದಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತವೆ. ಆದ್ದರಿಂದ ಸೋಂಕಿತರು ಅಥವಾ ಚೇತರಿಕೆ ಕಾಣುತ್ತಿರುವವರು ಅಂತಹ ಆಹಾರಗಳನ್ನು ಸೇವಿಸುವುದು ಉತ್ತಮ. ಹಾಗೇಯೇ ಈ ಹಂತದಲ್ಲಿ ನಿಮ್ಮ ದೇಹಕ್ಕೆ ಹಾನಿಮಾಡುವ ಕೆಲವೊಂದು ಆಹಾರಗಳನ್ನು ತ್ಯಜಿಸಬೇಕು. ಅಂತಹ ಆಹಾರಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಕೊರೋನಾ ಸೋಂಕಿತರು ಹಾಗೂ ಚೇತರಿಸಿಕೊಳ್ಳುತ್ತಿರುವವರು ತ್ಯಜಿಸಬೇಕಾದ ಆಹಾರಗಳನ್ನು ಈ ಕೆಳಗೆ ನೀಡಲಾಗಿದೆ:
ಪ್ಯಾಕ್ ಮಾಡಿದ ಆಹಾರಗಳು:
ಪ್ಯಾಕ್ ಮಾಡಿದ ಆಹಾರಗಳು ಹಸಿವನ್ನು ನೀಗಿಸಲು ಸುಲಭವಾದ ಆಯ್ಕೆಯಾದರೂ ಸಹ, ಕೊರೋನಾ ಸಂದರ್ಭದಲ್ಲಿ, ಅಂತಹ ಆಹಾರಗಳು ಹೆಚ್ಚು ಹಾನಿಯನ್ನುಂಟುಮಾಡುತ್ತವೆ. ಏಕೆಂದರೆ ಈ ಆಹಾರಗಳಲ್ಲಿ ಸೋಡಿಯಂನಲ್ಲಿ ಹೆಚ್ಚಾಗಿದ್ದು, ಅದಕ್ಕೆ ಬಳಕೆ ಮಾಡಿರುವ ಸಂರಕ್ಷಕಗಳು ಉರಿಯೂತಕ್ಕೆ ಕಾರಣವಾಗುತ್ತವೆ. ಇದರಿಂದ ನಿಮ್ಮ ಚೇತರಿಕೆಗೆ ವಿಳಂಬವಾಗಬಹುದು ಮತ್ತು ರೋಗ ನಿರೋಧಕ ಶಕ್ತಿಯನ್ನು ಕುಠಿತವಾಗಬಹುದು.
ಮಸಾಲೆಯುಕ್ತ ಆಹಾರಗಳು:
ತಜ್ಞರ ಪ್ರಕಾರ, ಕೊರೋನಾಗೆ ತುತ್ತಾಗಿದ್ದಾಗ ಮಸಾಲೆಯುಕ್ತ ಆಹಾರ ಸೇವನೆಯನ್ನು ತಪ್ಪಿಸಿ, ಏಕೆಂದರೆ ಅಂತಹ ಆಹಾರ ಪದಾರ್ಥಗಳು ಗಂಟಲಿಗೆ ಕಿರಿಕಿರಿಯನ್ನುಂಟುಮಾಡುತ್ತವೆ ಮತ್ತು ನಿಮಗೆ ಹೆಚ್ಚು ಕೆಮ್ಮನ್ನು ನೀಡುತ್ತದೆ. ನಿಮ್ಮ ಆಹಾರದಲ್ಲಿ ಕೆಂಪು ಮೆಣಸಿನ ಪುಡಿಯನ್ನು ತಪ್ಪಿಸಿ, ಅದರ ಬದಲಿಗೆ ಆಂಟಿಮೈಕ್ರೊಬಿಯಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವ ಕರಿಮೆಣಸಿನ ಹುಡಿಯನ್ನು ಬಳಸಿ.
ಹುರಿದ ಆಹಾರಗಳು:
ಕೊರೋನಾದಿಂದ ಚೇತರಿಸಿಕೊಳ್ಳುವ ಹಂತದಲ್ಲಿ, ನಿಮ್ಮ ನಾಲಗೆಯ ರುಚಿ ಸರಿಯಾಗತೊಡಗಲು ಪ್ರಾರಂಭಿಸುವಾಗ ನಿಮಗೆ ಕರಿದ ಆಹಾರಗಳನ್ನು ತಿನ್ನಬೇಕು ಎಂಬ ಆಸೆ ಮೂಡಬಹುದು. ತಜ್ಞರ ಪ್ರಕಾರ, ಇಂತಹ ಬಯಕೆಗಳನ್ನು ಸ್ವಲ್ಪ ಸಮಯದವರೆಗೆ ಹಿಡಿದುಕೊಳ್ಳಿ, ಏಕೆಂದರೆ ಈ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಇರುತ್ತದೆ ಮತ್ತು ಹೆಚ್ಚೆಚ್ಚು ತಿನ್ನಲು ಪ್ರೇರೇಪಿಸುತ್ತದೆ. ಆಗ ಅವುಗಳನ್ನು ಜೀರ್ಣಿಸಿಕೊಳ್ಳಲು ಕಷ್ಟ ಮತ್ತು ಕರುಳಿನ ಮೇಲೆ ಹೆಚ್ಚಿನ ಹೊರೆ ಬೀಳಬಹುದು. ಹುರಿದ ಆಹಾರಗಳು ಕರುಳಿನ ಸೂಕ್ಷ್ಮಜೀವಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.)
ಕೋಲ್ಡ್ ಡ್ರಿಂಕ್ಸ್ :
ಸೋಂಕು ಮತ್ತು ಚೇತರಿಕೆಯ ಅವಧಿಯಲ್ಲಿ ಏರೇಟೆಡ್ ಪಾನೀಯಗಳನ್ನು ತಪ್ಪಿಸಿ. ಈ ಎಲ್ಲಾ ಪಾನೀಯಗಳು ಉರಿಯೂತವನ್ನು ಉಂಟುಮಾಡುತ್ತವೆ ಮತ್ತು ಚೇತರಿಕೆ ಪ್ರಕ್ರಿಯೆಗೆ ಅಡ್ಡಿಯಾಗುತ್ತವೆ. ನೀವು ನಿಂಬು ಶರಬತ್ತನ್ನು ಕುಡಿಯಬಹುದು. ಆದರೆ ಅಕ್ಕೆ ಸೋಡಾ ಸೇರಿಸಬೇಡಿ
Copy of BoldSky Kannada
What are the foods to avoid during COVID 19 infection and recovery period. We all are aware of the fact that COVID19 virus impacts the overall immune system and causes weight loss and weakness as well. In such cases, apart from medicines, one needs to take care of his/her daily diet.
22-11-24 05:16 pm
HK News Desk
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
Dinesh Gundu Rao, Bangalore: ಸರ್ಕಾರಿ ಆಸ್ಪತ್ರೆ...
21-11-24 09:32 pm
Bangalore Fire showroom: ಇಲೆಕ್ಟ್ರಿಕ್ ವಾಹನ ಶೋರ...
20-11-24 09:57 pm
Liquor Bandh, Mangalore: ನ.20ರ ಮದ್ಯ ವ್ಯಾಪಾರ ಬ...
19-11-24 11:05 pm
18-11-24 03:54 pm
HK News Desk
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ...
14-11-24 11:11 pm
ಅಮೆರಿಕದ ಗುಪ್ತಚರ ಸಂಸ್ಥೆ ಮುಖ್ಯಸ್ಥರಾಗಿ ಹಿಂದು ಮಹಿ...
14-11-24 05:58 pm
ಸುದೀರ್ಘ 18 ವರ್ಷಗಳ ಹಿಂದೆ ಕೊಲೆಯಾದ ಕೊಡಗಿನ ಸಫಿಯಾಗ...
12-11-24 09:00 pm
22-11-24 10:33 pm
Mangalore Correspondent
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
BJP Vijay Kumar shetty, Mangalore video: ಬಿಜೆ...
22-11-24 08:21 pm
Ullal news, Mangalore, Batapady; ಭ್ರಷ್ಟ ಅಧಿಕಾ...
22-11-24 11:55 am
22-11-24 10:47 pm
Mangalore Correspondent
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm
Mangalore court, crime, Rape: ಅಜ್ಜಿ ಮನೆಯಲ್ಲಿ...
22-11-24 01:33 pm