ಬ್ಲ್ಯಾಕ್‌ ಫಂಗಸ್‌ಗಿಂತ ವೈಟ್‌ಫಂಗಸ್ ಅಪಾಯಕಾರಿ: ತಡೆಗಟ್ಟುವುದು ಹೇಗೆ?

21-05-21 04:04 pm       Reena TK, BoldSky Kannada   ಡಾಕ್ಟರ್ಸ್ ನೋಟ್

ಬ್ಲ್ಯಾಕ್ ಫಂಗಸ್‌ ಆತಂಕ ದೇಶವನ್ನು ಕಾಡುತ್ತಿರುವಾಗಲೇ ಇದೀಗ ವೈಟ್‌ ಫಂಗಸ್‌ ರೋಗದ ಹೆಸರು ಕೇಳಿ ಬರುತ್ತದೆ.

ಬಹುಶಃ ಜನಸಾಮಾನ್ಯರು ಕೆಲವು ತಿಂಗಳ ಹಿಂದೆ ಬ್ಲ್ಯಾಕ್‌ ಫಂಗಸ್‌ ಎಂಬ ರೋಗದ ಬಗ್ಗೆ ಕೇಳಿರಲಿಕ್ಕಿಲ್ಲ. ಈ ರೋಗ ಕೊರೊನಾ ಬರುವುದಕ್ಕೆ ಮೊದಲೇ ಇದ್ದರೂ ಇದೀಗ ಈ ರೋಗದ ಬಗ್ಗೆ ಹೆಚ್ಚಾಗಿ ಕೇಳಿ ಬರುತ್ತಿದೆ. ಕೋವಿಡ್‌ 19 ಗಂಭೀರ ಸೋಂಕು ತಗುಲಿದವರು, ಸೋಂಕಿನಿಂದ ಚೇತರಿಸಿಕೊಂಡವರು ಬ್ಲ್ಯಾಕ್‌ ಫಂಗಸ್‌ ತಗುಲಿ ಸಾವನ್ನಪ್ಪಿದ್ದಾರೆ.

ಬ್ಲ್ಯಾಕ್ ಫಂಗಸ್‌ ಆತಂಕ ದೇಶವನ್ನು ಕಾಡುತ್ತಿರುವಾಗಲೇ ಇದೀಗ ವೈಟ್‌ ಫಂಗಸ್‌ ರೋಗದ ಹೆಸರು ಕೇಳಿ ಬರುತ್ತದೆ. ಇದು ಕೂಡ ತುಂಬಾ ಅಪಾಯಕಾರಿಯಾಗಿದ್ದು ಇದರ ಕುರಿತಂತೆ ಹೆಚ್ಚಿನ ಮಾಹಿತಿ ಇಲ್ಲಿದೆ:ಬಹುಶಃ ಜನಸಾಮಾನ್ಯರು ಕೆಲವು ತಿಂಗಳ ಹಿಂದೆ ಬ್ಲ್ಯಾಕ್‌ ಫಂಗಸ್‌ ಎಂಬ ರೋಗದ ಬಗ್ಗೆ ಕೇಳಿರಲಿಕ್ಕಿಲ್ಲ. ಈ ರೋಗ ಕೊರೊನಾ ಬರುವುದಕ್ಕೆ ಮೊದಲೇ ಇದ್ದರೂ ಇದೀಗ ಈ ರೋಗದ ಬಗ್ಗೆ ಹೆಚ್ಚಾಗಿ ಕೇಳಿ ಬರುತ್ತಿದೆ. ಕೋವಿಡ್‌ 19 ಗಂಭೀರ ಸೋಂಕು ತಗುಲಿದವರು, ಸೋಂಕಿನಿಂದ ಚೇತರಿಸಿಕೊಂಡವರು ಬ್ಲ್ಯಾಕ್‌ ಫಂಗಸ್‌ ತಗುಲಿ ಸಾವನ್ನಪ್ಪಿದ್ದಾರೆ.

ಬ್ಲ್ಯಾಕ್ ಫಂಗಸ್‌ ಆತಂಕ ದೇಶವನ್ನು ಕಾಡುತ್ತಿರುವಾಗಲೇ ಇದೀಗ ವೈಟ್‌ ಫಂಗಸ್‌ ರೋಗದ ಹೆಸರು ಕೇಳಿ ಬರುತ್ತದೆ. ಇದು ಕೂಡ ತುಂಬಾ ಅಪಾಯಕಾರಿಯಾಗಿದ್ದು ಇದರ ಕುರಿತಂತೆ ಹೆಚ್ಚಿನ ಮಾಹಿತಿ ಇಲ್ಲಿದೆ



ಬ್ಲ್ಯಾಕ್‌ ಫಂಗಸ್‌ಗಿಂತ ಅಪಾಯಕಾರಿಯಾಗಿರುವ ವೈಟ್‌ ಫಂಗಸ್

ವೈಟ್‌ ಫಂಗಸ್ ಬ್ಲ್ಯಾಕ್‌ ಫಂಗಸ್‌ಗಿಂತ ತುಂಬಾನೇ ಅಪಾಯಕಾರಿಯಾಗಿದ್ದು ಇದು ಶ್ವಾಸಕೋಶಕ್ಕೆ ಹಾನಿಯುಂಟು ಮಾಡುವುದಷ್ಟೇ ಅಲ್ಲದೆ ಉಗುರು, ತ್ವಚೆ, ಕಿಡ್ನಿ, ಮೆದುಳು, ಗುಪ್ತಾಂಗ ಹಾಗೂ ಬಾಯಿಗೆ ಹಾನಿಯುಂಟು ಮಾಡುತ್ತಿದೆ.



ವೈಟ್‌ ಫಂಗಸ್‌ ಲಕ್ಷಣ ಕಂಡು ಬಂದವರಲ್ಲಿ ಕೋವಿಡ್ 19 ಸೋಂಕು ಇರಲಿಲ್ಲ

PMCH ಮೈಕ್ರೋಬಯೋಲಾಜಿ ಮುಖ್ಯಸ್ಥ ಡಾ. ಎಸ್ ಎನ್ ಸಿಂಗ್ ಅವರು ' ವೈಟ್‌ ಫಂಗಸ್‌ ಕಂಡು ಬಂದ ನಾಲ್ವರಲ್ಲಿಯೂ ಕೊರೊನಾ ವೈರಸ್‌ ಲಕ್ಷಣಗಳಿದ್ದರೂ, ಅವರು ಕೋವಿಡ್‌ 19 ಪಾಸಿಟಿವ್‌ ಆಗಿರಲಿಲ್ಲ' ಎಂದಿದ್ದಾರೆ. ಅವರ ಶ್ವಾಸಕೋಶದಲ್ಲಿ ಸೋಂಕು ಇತ್ತು, ಅವರಿಗೆಲ್ಲಾ anti-fungal ಔಷಧ ನೀಡಿದ ಬಳಿಕ ಗುಣಮುಖರಾದರು.



ರೋಗ ನಿರೋಶಕ ಶಕ್ತಿ ಕಡಿಮೆ ಇರುವವರಿಗೆ ತುಂಬಾನೇ ಅಪಾಯಕಾರಿ

ಡಾ. ಸಿಂಗ್ ಹೇಳಿರುವ ಪ್ರಕಾರ ವೈಟ್‌ ಫಂಗಸ್‌, ಬ್ಲ್ಯಾಕ್‌ ಫಂಗಸ್‌ನಂತೆಯೇ ಅಪಾಯಕಾರಿ, ಆದರೆ ಯಾರಿಗೆ ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇರುತ್ತದೋ, ಸ್ಟಿರಾಯ್ಡ್ ತೆಗೆದುಕೊಳ್ಳುತ್ತಿರುವ ಮಧುಮೇಹಿಗಳಿಗೆ ಹೆಚ್ಚು ಅಪಾಯಕಾರಿಯಾಗಿದೆ.


ಆಕ್ಸಿಜನ್ ಸಪೋರ್ಟ್‌ನಲ್ಲಿರುವ ಸೋಂಕಿತರಿಗೆ ತಗುಲುತ್ತಿರುವ ವೈಟ್‌ ಫಂಗಸ್

ಆಕ್ಸಿಜನ್‌ ಸಪೋರ್ಟ್‌ನಲ್ಲಿರುವ ಸೋಂಕಿತರಿಗೆ ವೈಟ್‌ ಫಂಗಸ್‌ ತಗುಲಿದರೆ ಅದು ನೇರವಾಗಿ ಶ್ವಾಸಕೋಶಕ್ಕೆ ಹಾನಿಯುಂಟು ಮಾಡುವುದು. ತಜ್ಞರು ಕ್ಯಾನ್ಸರ್‌ ರೋಗಿಗಳು ಎಚ್ಚರವಾಗಿರುವಂತೆ ಸೂಚಿಸಿದ್ದಾರೆ. ಅಲ್ಲದೆ ಈ ವೈಟ್‌ ಫಂಗಸ್‌ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಹಿಳೆಯರು ಹಾಗೂ ಮಕ್ಕಳಿಗೂ ತಗುಲುವುದು ಎಂದು ಎಚ್ಚರಿಸಿದ್ದಾರೆ.

ವೈಟ್‌ ಫಂಗಸ್‌ ತಡೆಗಟ್ಟುವುದು ಹೇಗೆ?

ಆಕ್ಸಿಜನ್ ಸಪೋರ್ಟರ್ ಅಥವಾ ವೆಂಟಿಲೇಟರ್‌ ಅನ್ನು ಸರಿಯಾಗಿ ಸ್ಯಾನಿಟೈಸ್‌ ಮಾಡುವ ಮೂಲಕ ಈ ಸೋಂಕು ತಡೆಗಟ್ಟಬಹುದು

(Kannada Copy of Boldsky Kannada)