ಬ್ರೇಕಿಂಗ್ ನ್ಯೂಸ್
08-06-21 11:51 am Reena TK, BoldSky Kannada ಡಾಕ್ಟರ್ಸ್ ನೋಟ್
ಭಾರತದಲ್ಲಿ ಕೊರೊನಾ 2ನೇ ಅಲೆ ನಿಧಾನಕ್ಕೆ ಕಡಿಮೆಯಾಗುತ್ತಿದೆ. ಲಸಿಕೆ ಪ್ರಕ್ರಿಯೆ ಮುಂದುವರೆದಿದ್ದು 45 ವರ್ಷ ಮೇಲ್ಪಟ್ಟ ಬಹುತೇಕ ಜನ ಕೊರೊನಾ ಲಸಿಕೆ ಪಡೆದಿದ್ದಾರೆ, ಅಲ್ಲದೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ದೊರೆಯುತ್ತಿರುವುದರಿಂದ ಎಲ್ಲರಿಗೆ ಲಸಿಕೆ ದೊರೆತರೆ ದೇಶದ ಬಹುಪಾಲು ಜನರಿಗೆ ಲಸಿಕೆ ದೊರೆದಂತಾಗಿ ಒಂದು ವೇಳೆ 3ನೇ ಅಲೆ ಅಂತ ಬಂದ್ರೆ 2ನೇ ಅಲೆಯಂತೆ ದೊಡ್ಡ ನಷ್ಟವಾಗುವುದು ತಪ್ಪುವುದು.
ಭಾರತದಲ್ಲಿ ಕೊವಿಶೀಲ್ಡ್, ಕೊವಾಕ್ಸಿನ್ ಲಸಿಕೆ ದೊರೆಯುತ್ತಿದ್ದು ಸ್ಪುಟ್ನಿಕ್ ಕೂಡ ಸಿಗಲಿದೆ, ಇದರ ಜೊತೆಗೆ ನಾಸಲ್ ಸ್ಪ್ರೇ ದೊರೆಯಲಿದೆ. ಜೂನ್ 7ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ನಾಸಲ್ ಸ್ಪ್ರೇ ಬಗ್ಗೆ ಸಂಶೋಧನೆ ನಡೆಯುತ್ತಿದೆ, ಇದು ಯಶಸ್ವಿಯಾದರೆ ದೇಶದಲ್ಲಿ ಬಹುತೇಕ ಜನರಿಗೆ ಲಸಿಕೆ ಸಿಗುವಂತಾಗುವುದು ಎಂದು ಹೇಳಿದ್ದಾರೆ.
ನಾಸಲ್ ವ್ಯಾಕ್ಸಿನ್ ಎಂದರೇನು?
ನಾಸಲ್ ವ್ಯಾಕ್ಸಿನ್ ಎನ್ನುವುದು ಸೂಜಿ ಚುಚ್ಚುವ ಬದಲಿಗೆ ಮೂಗಿಗೆ ಹಾಕುವ ಡ್ರಾಪ್ ಆಗಿದೆ. ಇದರಲ್ಲಿ ನೇರವಾಗಿ ಉಸಿರಾಟದ ನಾಳಗಳ ಮೂಲಕ ದೇಹವನ್ನು ಸೇರುವುದು, ನಾವು ನಾಸಲ್ ಸ್ಪ್ರೇ ಬಳಸಿದಾಗ ಅದು ಗಂಟಲಿನ ಮೂಲಕ ಹೋಗುವ ಅನುಭವವಾಗುವಂತೆ ಈ ಲಸಿಕೆ ಕೂಡ ದೇಹವನ್ನು ಸೇರುವುದು. ವಿಶ್ವ ಆರೋಗ್ಯ ಸಂಸ್ಥೆ (WHO)ಯ ಚೀಫ್ ಸೈಂಟಿಸ್ಟ್ ಆಗಿರುವ ಸೌಮ್ಯ ಸ್ವಾಮಿನಾಥನ್ ಭಾರತದಲ್ಲಿ ನಾಸಲ್ ವ್ಯಾಕ್ಸಿನ್ ಕುರಿತು ಸಂಶೋಧನೆ ನಡೆಯುತ್ತಿದೆ, ಈ ಲಸಿಕೆ ಯಶಸ್ವಿಯಾದರೆ ಮಕ್ಕಳ ವಿಷಯದಲ್ಲಿ ಗೇಮ್ ಚೇಂಜರ್ ಆಗಬಹುದು ಎಂದಿದ್ದಾರೆ. ಇದನ್ನು ಭಾರತ್ ಬಯೋಟೆಕ್ ಸಿದ್ಧಪಡಿಸುತ್ತಿದ್ದು ಇದು ಕ್ಲಿನಿಕಲ್ ಟ್ರಯಲ್‌ನ ಮೊದಲ ಹಂತದಲ್ಲಿದೆ.
ನಾಸಲ್ ವ್ಯಾಕ್ಸಿನ್‌ನ ಪ್ರಯೋಜನಗಳು
ನಾಸಲ್ ವ್ಯಾಕ್ಸಿನ್ ಬಂದ್ರೆ ಸೂಜಿ ಚುಚ್ಚುವ ಅಗ್ಯತವಿಲ್ಲ, ಅಲ್ಲದೆ ಮಕ್ಕಳಿಗೆ ಕೂಡ ಇದು ನೀಡಬಹುದು.
ನಾಸಲ್ ವ್ಯಾಕ್ಸಿನ್ ಹೇಗೆ ಕಾರ್ಯ ನಿರ್ವಹಿಸುತ್ತೆ?
ಈ ಲಸಿಕೆ ವೈರಸ್ ಮೂಗಿನ ಮೂಲಕ ದೇಹದೊಳಗೆ ಪ್ರವೇಶಿಸುವುದನ್ನು ತಡೆಗಟ್ಟುತ್ತದೆ ಅಲ್ಲದೆ ಹರಡುವುದನ್ನು ತಡೆಗಟ್ಟುವುದು. ವೈರಸ್ ಮೂಗಿನ ಒಳಗಡೆ ಪ್ರವೇಶಿಸಿದಾಗ ಅದನ್ನು ನಾಶಪಡಿಸಿದರೆ ಅದು ದೇಹದೊಳಗೆ ಪ್ರವೇಶಿಸುವುದಿಲ್ಲ, ಇದರಿಂದಾಗಿ ಶ್ವಾಸಕೋಶಕ್ಕೆ ಹಾನಿಯುಂಟಾಗುವುದಿಲ್ಲ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವುದು, ಇದರಿಂದಾಗಿ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಬಹುದಾಗಿದೆ.
ಭಾರತ್ ಬಯೋಟೆಕ್‌ನ ನಾಸಲ್ ವ್ಯಾಕ್ಸಿನ್
ನಾಸಲ್ ವ್ಯಾಕ್ಸಿನ್ ಮೊದಲ ಹಂತದ ಟ್ರಯಲ್‌ನಲ್ಲಿದೆ. ಭಾರತ್ ಬಯೋಟೆಕ್ ವರದಿ ಪ್ರಕಾರ BBV154 ನಾಸಲ್ ಲಸಿಕೆ ರೋಗ ನಿರೋಧಕ ಶಕ್ತಿ ವೃದ್ಧಿಸುವುದು. ಇದು ಸೋಂಕು ತಗುಲುವುದು ಹಾಗೂ ಹರಡುವುದನ್ನು ತಡೆಗಟ್ಟುವುದು. ಈಗ ನೀಡುತ್ತಿರುವ ಕೊವಾಕ್ಸಿನ್ ಲಸಿಕೆ ಕೂಡ ಭಾರತ್ ಬಯೋಟೆಕ್ ತಯಾರಿಸಿದ್ದಾಗಿದೆ.
ಕೋವಿಡ್ ಲಸಿಕೆಗಿಂತ ನಾಸಲ್ ಲಸಿಕೆ ಹೇಗೆ ಭಿನ್ನವಾಗಿದೆ?
ಅಧ್ಯಯನಗಳ ಪ್ರಕರ ಕೊರೊನಾ ಲಸಿಕೆ ಹಾಗೂ ನಾಸಲ್ ಲಸಿಕೆ ಕೊರೊನಾ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. ನಾಸಲ್ ಸ್ಪ್ರೇ ಮಕ್ಕಳಿಗೋಸ್ಕರ ತಯಾರಿಸುತ್ತಿರುವ ಲಸಿಕೆಯಾಗಿದೆ. ಈ ನಾಸಲ್ ಸಿಕೆ ಫ್ಲೂ ಶಾಟ್‌ನಷ್ಟೇ ಪರಿಣಾಮಕಾರಿಯಾಗಿದೆ.
(Kannada Copy of Boldsky Kannada)
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm