ಬ್ರೇಕಿಂಗ್ ನ್ಯೂಸ್
22-06-21 02:39 pm Shreeraksha, BoldSky Kannada ಡಾಕ್ಟರ್ಸ್ ನೋಟ್
ಮಳೆಗಾಲದಲ್ಲಿ ಮಾವಿನಹಣ್ಣುಗಳು ಫೇಮಸ್. ರುಚಿಯಾಗಿದೆ ಎಂದು ಸಿಕ್ಕಾಪಟ್ಟೆ ತಿಂದರೆ ವಿವಿಧ ಆರೋಗ್ಯ ಸಮಸ್ಯೆಗಳು ಜೊತೆಗೆ ಮೊಡವೆ ಸಮಸ್ಯೆಯೂ ಉಂಟಾಗುತ್ತವೆ. ಇದಕ್ಕೆ ಕಾರಣ, ಮಾವಿನೊಳಗಿರುವ ನೈಸರ್ಗಿಕ ಶಾಖ. ಆದರೆ ಇದೇ ಮಾವಿನಹಣ್ಣನ್ನು ಸ್ವಲ್ಪ ಸಮಯ ನೀರಿನಲ್ಲಿ ಅದ್ದಿ ಇಟ್ಟು ತಿಂದರೆ ಅಥವಾ ಮುಖಕ್ಕೆ ಹಚ್ಚಿದರೆ ನಿಮಗೆ ಎಂತಹ ಸೌಂದರ್ಯ ಪ್ರಯೋಜನಗಳು ಸಿಗುತ್ತವೆ ಗೊತ್ತಾ? ನೀರಿನಲ್ಲಿ ಅದ್ದಿಟ್ಟ ಮಾವು ತ್ವಚೆಗೆ ಎಂತಹ ಮ್ಯಾಜಿಕ್ ಮಾಡುವುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಮಾವಿನಹಣ್ಣನ್ನು ನೀರಿನಲ್ಲಿ ಅದ್ದಿಡುವುದು ಯಾಕೆ?: ಮಾವಿನಹಣ್ಣು ಒಳಗಿನಿಂದ ಬಿಸಿಯಾಗಿದ್ದು, ನೈಸರ್ಗಿಕ ಶಾಖವನ್ನು ಹೊಂದಿರುತ್ತವೆ, ಇದು ವ್ಯಕ್ತಿಯ ಆಂತರಿಕ ವ್ಯವಸ್ಥೆಗೆ ತೊಂದರೆಯಾಗಬಹುದು ಅಥವಾ ಈಗಾಗಲೇ ಮೊಡವೆಗಳಿಂದ ಬಳಲುತ್ತಿದ್ದರ ಸಮಸ್ಯೆ ಹೆಚ್ಚಾಗಬಹುದು. ಮಾವಿನಹಣ್ಣಿನಲ್ಲಿ ಫೈಟಿಕ್ ಆಮ್ಲವೂ ಸಮೃದ್ಧವಾಗಿದ್ದು, ಕಬ್ಬಿಣ, ಸತು ಮತ್ತು ಕ್ಯಾಲ್ಸಿಯಂ ಅನ್ನು ದುರ್ಬಲಗೊಳಿಸುತ್ತದೆ ಮತ್ತು ಖನಿಜ ಕೊರತೆಯನ್ನು ಉತ್ತೇಜಿಸುತ್ತದೆ. ಹೆಚ್ಚುವರಿ ಶಾಖವನ್ನು ಕಡಿಮೆ ಮಾಡಲು ಮತ್ತು ಫೈಟಿಕ್ ಆಮ್ಲವನ್ನು ತೆಗದುಹಾಕುವ ಪರಿಹಾರವೆಂದರೆ ಮಾವಿನಹಣ್ಣನ್ನು ಅರ್ಧ ಘಂಟೆಯವರೆಗೆ ನೀರಿನಲ್ಲಿ ಅದ್ದಿ ಇಡುವುದು. ಇದು ಮೊಡವೆ ಮುಕ್ತ ಮುಖಕ್ಕೆ ಸೂಕ್ತವಾದ ಸುಲಭ ಪರಿಹಾರವಾಗಿದೆ. ಈ ಹಣ್ಣನ್ನು ತಿನ್ನುವುದರಿಂದ ಅಥವಾ ಮುಖಕ್ಕೆ ಹಚ್ಚುವುದರಿಂದ ಏನೆಲ್ಲಾ ಲಾಭವಿದೆ ಎನ್ನುವುದನ್ನು ಕೆಳಗೆ ನೋಡೋಣ.
ಮಾವಿನಲ್ಲಿರುವ ಸೌಂದರ್ಯ ವೃದ್ಧಿ ಪೋಷಕಾಂಶಗಳು:
ವಿಟಮಿನ್ ಎ - ಸೂಕ್ಷ್ಮ ರೇಖೆಗಳನ್ನು ಕಡಿಮೆಗೊಳಿಸುವುದು
ವಿಟಮಿನ್ ಸಿ - ನಿಮ್ಮ ಮುಖವನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸಿ ಮತ್ತು ಹೊಳೆಯುವ ಚರ್ಮಕ್ಕೆ ಆಹ್ವಾನ ನೀಡುವುದು.
ವಿಟಮಿನ್ ಬಿ 6 - ಎಣ್ಣೆಯುಕ್ತ ಚರ್ಮ ಕಡಿಮೆ ಮಾಡುವುದು
ಮೆಗ್ನೀಸಿಯಮ್ - ಮೊಡವೆ ನಿವಾರಣೆ
ತಾಮ್ರ - ಹೆಚ್ಚು ಸುಕ್ಕುಗಳು, ವಯಸ್ಸಾದ ರೇಖೆಗಳನ್ನು ಕಡಿಮೆ ಮಾಡುವುದು
ಆರೋಗ್ಯಕರ ಚರ್ಮಕ್ಕಾಗಿ ನೈಸರ್ಗಿಕ ಮಾವಿನ ಮನೆಮದ್ದುಗಳು:
1. ಮೊಡವೆ ಮುಕ್ತ ಚರ್ಮಕ್ಕಾಗಿ: -
ಮಾವಿನ ತಿರುಳು ತೆಗೆದು, ಮೊಡವೆಗಳಿಗೆ 15-20 ನಿಮಿಷಗಳ ಕಾಲ ಹಚ್ಚಿ, ತದನಂತರ ಅದನ್ನು ತೊಳೆಯಲು ಬೆಚ್ಚಗಿನ ನೀರನ್ನು ಬಳಸಿ.
2. ಚರ್ಮವನ್ನು ಆರ್ಧ್ರಕಗೊಳಿಸಲು: -
ಚರ್ಮವನ್ನು ಹೈಡ್ರೇಟ್ ಮಾಡಲು ಈ ಪರಿಣಾಮಕಾರಿ ಸ್ಕ್ರಬ್ ಮಾಡಲು ಮಾವಿನ ತಿರುಳು, 1 ಟೀಸ್ಪೂನ್ ಜೇನುತುಪ್ಪ ಮತ್ತು 2 ಟೀಸ್ಪೂನ್ ಗೋಧಿ ಹಿಟ್ಟನ್ನು ಚೆನ್ನಾಗಿ ಬೆರೆಸಿ, ಈ ಸ್ಕ್ರಬ್ ಅನ್ನು ನಿಮ್ಮ ಮುಖದ ಮೇಲೆ 20 ನಿಮಿಷಗಳ ಕಾಲ ವೃತ್ತಾಕಾರದ ಚಲನೆಯಲ್ಲಿ ಹಚ್ಚಿ ಮತ್ತು ಐಸ್-ತಣ್ಣೀರಿನಿಂದ ತೊಳೆಯಿರಿ.
3. ಕಲೆ ರಹಿತ ಚರ್ಮ:
3 ಟೀ ಚಮಚ ಅಲೋವೆರಾ ಜೆಲ್, 2 ಚಮಚ ಹಾಲಿನ ಪುಡಿ, ಕಾಲು ಕಪ್ ಒಣಗಿದ ಮಾವಿನ ಸಿಪ್ಪೆ ಪುಡಿ, ಮತ್ತು ಕೆಲವು ಹನಿ ನಿಂಬೆ ರಸದ ಫೇಸ್ ಪ್ಯಾಕ್ ತಯಾರಿಸಿ, 10 ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ತಣ್ಣನೆಯ ತೊಳೆಯುವ ಬಟ್ಟೆಯನ್ನು ಬಳಸಿ ನಿಧಾನವಾಗಿ ಒರೆಸಿ.
4. ಟ್ಯಾನಿಂಗ್ ತೆಗೆದುಹಾಕಲು: ನಿಮ್ಮ ಸ್ವಂತ ಸನ್‌ಸ್ಕ್ರೀನ್ ತಯಾರಿಸಲು 2 ಟೀಸ್ಪೂನ್ ಮಾವಿನ ತಿರುಳು, 1 ಟೀಸ್ಪೂನ್, ಮೊಸರು, 2 ಟೀಸ್ಪೂನ್ ಅಲೋವೆರಾ ಜೆಲ್ ಮತ್ತು 1 ಟೀಸ್ಪೂನ್ ಜೇನುತುಪ್ಪವನ್ನು ಮಿಶ್ರಣ ಮಾಡಿ. ಇದನ್ನು ಗಾಳಿಯಾಡದ ಪಾತ್ರೆಯಲ್ಲಿ, ರೆಫ್ರಿಜರೇಟರ್ ಒಳಗೆ ಇಟ್ಟು ಆಗಾಗ ಬಳಸಿ.
(Kannada Copy of Boldsky Kannada)
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
04-09-25 11:07 pm
Mangalore Correspondent
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm