ಬ್ರೇಕಿಂಗ್ ನ್ಯೂಸ್
06-12-21 11:22 am Source: Boldsky Kannada ಡಾಕ್ಟರ್ಸ್ ನೋಟ್
ಚಳಿಗಾಲದಲ್ಲಿ ತ್ವಚೆ ಸ್ವಲ್ಪ ಮಂಕಾಗುವುದು. ಚಳಿ, ಒಣ ಗಾಳಿಗೆ ತ್ವಚೆ ಬಿಳಿ-ಬಿಳಿಯಾಗುವುದು, ಇನ್ನು ಒಣ ತ್ವಚೆ ಇರುವವರಿಗೆ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ತ್ವಚೆ ಒಣಗಿ ಬಿರುಕು ಬಿಡಲಾರಂಭಿಸುತ್ತದೆ. ಕೆಲವರಿಗೆ ಪಾದಗಳಲ್ಲಿ ಬಿರುಕು ಕಂಡು ಬಂದು ರಕ್ತ ಕೂಡ ಬರುವುದು. ಚಳಿಗಾಲಕ್ಕೆ ತಕ್ಕ ಮಾಯಿಶ್ಚರೈಸರ್, ಕ್ರೀಮ್ ಬಳಸಬೇಕು, ಚಳಿಗಾಲದಲ್ಲಿ ತ್ವಚೆ ಆರೈಕೆಗೆ ಬೆಸ್ಟ್ ವಿಧಾನವೆಂದರೆ ಎಣ್ಣೆ ಮಸಾಜ್ ಮಾಡುವುದು.
ಅದರಲ್ಲೂ ಈ ಕೆಳಗಿನ ಎಣ್ಣೆಯಿಂದ ನೀವು ಮಸಾಜ್ ಮಾಡುತ್ತಿದ್ದರೆ ನಿಮ್ಮ ತ್ವಚೆಯಲ್ಲಿ ಬಿಳಿ-ಬಿಳಿ ಇರುವುದಿಲ್ಲ, ತ್ವಚೆ ತುಂಬಾ ಮೃದುವಾಗಿ ಹೊಳಪಿನಿಂದ ಕೂಡಿರುತ್ತದೆ:
ಬಾದಾಮಿ ಎಣ್ಣೆ
ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿದರೆ ಅದು ತ್ವಚೆಯನ್ನು ಆಳದಿಂದ ಆರೈಕೆ ಮಾಡುತ್ತದೆ. ಇದರಿಂದ ಯಾವುದೇ ರೀತಿಯ ಅಲರ್ಜಿ ಸಮಸ್ಯೆ ಉಂಟಾಗುವುದಿಲ್ಲ. ಒಂದು ವೇಳೆ ನಿಮಗೆ ನಟ್ಸ್ ಅಲರ್ಜಿಯಿದ್ದರೆ ಬಳಸಬೇಡಿ. ನಟ್ಸ್ ಅಲರ್ಜಿ ತುಂಬಾ ಕಡಿಮೆ ಜನರಿಗಷ್ಟೇ ಇರುತ್ತದೆ, ಈ ಎಣ್ಣೆ ಸಾಮಾನ್ಯವಾಗಿ ಎಲ್ಲಾ ಬಗೆಯ ತ್ವಚೆಯವರು ಬಳಸಬಹುದು. ಚಳಿಗಾಲದಲ್ಲಿ ತ್ವಚೆ ಒಣಗುವುದು, ತುರಿಕೆ, ತ್ವಚೆ ಬಿಗಿಯಾದ ಅನುಭವ ಈ ರೀತಿಯ ಸಮಸ್ಯೆಯಿದ್ದರೆ ಬಾದಾಮಿ ಎಣ್ಣೆ ಬೆಸ್ಟ್. ಇದು ಚಳಿಗಾಲದ ತ್ವಚೆ ಸಮಸ್ಯೆಯನ್ನು ಬಗೆ ಹರಿಸುವುದು. ಎಣ್ಣೆಯನ್ನು ಉಗುರು ಬೆಚ್ಚಗೆ ಬಿಸಿ ಮಾಡಿ ಮೈಗೆ ಹಚ್ಚಿ ಮಸಾಜ್ ಮಾಡಿ.
ತೆಂಗಿನೆಣ್ಣೆ
ಆಯುರ್ವೇದದಲ್ಲಿ ಬಾಡಿ ಮಸಾಜ್‌ಗೆ ತೆಂಗಿನೆಣ್ಣೆಯನ್ನು ಹೆಚ್ಚಾಗಿ ಬಳಸುತ್ತಾರೆ. ಒಣ ತ್ವಚೆ ಇರುವವರು ಇದನ್ನು ಪ್ರತಿನಿತ್ಯ ಹಚ್ಚಿದರೆ ತ್ವಚೆ ಒಡೆಯುವ ಸಮಸ್ಯೆ ಇರಲ್ಲ. ಇದನ್ನು 20 ಡಿಗ್ರಿ Cಗೆ ಬಿಸಿ ಮಾಡಿ ಮಸಾಜ್ ಮಾಡಿ.
ಜೊಜೊಬೊ ಎಣ್ಣೆ
ತ್ವಚೆ ಆರೈಕೆಗೆ ಜೊಜೊಬೊ ಎಣ್ಣೆಯನ್ನು ವಿಶ್ವದೆಲ್ಲಡೆ ಬಳಸುತ್ತಾರೆ. ಇದು ತ್ವಚೆಯನ್ನು ಮಾಯಿಶ್ಚರೈಸರ್ ಆಗಿಡುತ್ತದೆ. ಇದರ ಸುವಾಸನೆ ನಿಮಗೆ ರಿಲ್ಯಾಕ್ಸ್ ಅನುಭವ ನೀಡುವುದು. ಇದನ್ನು ನೀವು ಬೇಕಾದರೆ ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆ ಜೊತೆ ಮಿಕ್ಸ್ ಮಾಡಿ ಬಳಸಬಹುದು.
ಆಲೀವ್ ಎಣ್ಣೆ
ಆಲೀವ್ ಎಣ್ಣೆ ಕೂಡ ತ್ವಚೆಗೆ ತುಂಬಾನೇ ಒಳ್ಳೆಯದು, ಇದು ನಿಮ್ಮ ತ್ವಚೆಯನ್ನು ತುಂಬಾ ಮೃದುವಾಗಿಸುವುದು, ಇದನ್ನು ನೀವು ಬೇರೆ ಎಣ್ಣೆ ಜೊತೆ ಮಿಕ್ಸ್ ಮಾಡಿ ಹಚ್ಚಬಹುದು. ನಿಮ್ಮದು ಎಣ್ಣೆ ತ್ವಚೆಯಾಗಿರಲಿ, ಒಣ ತ್ವಚೆಯಾಗಿರಲಿ ಅಥವಾ ಸಾಧಾರಣ ತ್ವಚೆಯಾಗಿರಲಿ ತುಂಬಾ ಚೆನ್ನಾಗಿ ನಿಮ್ಮ ತ್ವಚೆಯನ್ನು ಆರೈಕೆ ಮಾಡುವುದು.
ಏಪ್ರಿಕಾಟ್ ಎಣ್ಣೆ
ಎಣ್ಣೆ ಮಸಾಜ್‌ಗೆ ಈ ಎಣ್ಣೆ ತುಂಬಾನೇ ಒಳ್ಖೆಯದು. ಈ ಎಣ್ಣೆಯಲ್ಲಿ ವಿಟಮಿನ್ ಇ ಇರುವುದರಿಂದ ಇದು ತ್ವಚೆಯನ್ನು ಆಳದಿಂದ ಮಾಯಿಶ್ಚರೈರಸ್ ಮಾಡುತ್ತದೆ. ಇದು ಸೆನ್ಸಿಟಿವ್ ತ್ವಚೆಯವರಿಗೆ ಬೆಸ್ಟ್ ಆಯ್ಕೆ.
ಫ್ಲ್ಯಾಕ್ಸ್ ಆಯಿಲ್
ಈ ಎಣ್ಣೆಯಲ್ಲಿ ಒಮೆಗಾ 6, ಒಮೆಗಾ 3 ಕೊಬ್ಬಿನಂಶವಿದ್ದು ತ್ವಚೆ ಒಳ್ಳೆಯದು. ಇದು ತ್ವಚೆಯ ಹೊಳಪನ್ನು ಹೆಚ್ಚಿಸುವುದು, ಇದನ್ನು ಚಳಿಗಾಲ ಮಾತ್ರವಲ್ಲ ಎಲ್ಲಾ ಕಾಲದಲ್ಲೂ ಬಳಸಬಹುದು. ಇದನ್ನು ಹಚ್ಚುವುದರಿಂದ ತುರಿಕೆ, ಕಜ್ಜಿ ಮುಂತಾದ ಸಮಸ್ಯೆ ಇರಲ್ಲ. ಇದನ್ನು ಅಡುಗೆಯಲ್ಲೂ ಬಳಸಬಹುದು.
ಸಾಸಿವೆಯೆಣ್ಣೆ ಸಾಸಿವೆ
ಎಣ್ಣೆಯನ್ನು ಮಸಾಜ್‌ಗೆ ಬಳಸಲಾಗುವುದು. ಮಗುವನ್ನು ಮಸಾಜ್ ಮಾಡಲು ಈ ಎಣ್ಣೆಯನ್ನು ಹೆಚ್ಚಾಗಿ ಬಳಸುತ್ತಾರೆ. ಸಾಸಿವೆಯೆಣ್ಣೆ ಮೈಯನ್ನು ಕೂಡ ಬೆಚ್ಚಗೆ ಮಾಡುವುದು. ತ್ವಚೆ ಆರೈಕೆ ಮಾಡುವಲ್ಲಿ ಈ ಎಣ್ಣೆಯೂ ಪರಿಣಾಮಕಾರಿ.
ಎಳ್ಳೆಣ್ಣೆ
ಬಾಡಿ ಮಸಾಜ್‌ಗೆ ಎಳ್ಳೆಣ್ಣೆಯನ್ನೂ ಬಳಸಲಾಗುವುದು. ಇದನ್ನು ತೆಂಗಿನೆಣ್ಣೆ ಜೊತೆ ಮಿಶ್ರ ಮಾಡಿ ಬಳಸಲಾಗುವುದು. ಚಳಿಗಾಲದ ಮಸಾಜ್‌ಗೆ ಈ ಎಣ್ಣೆಯನ್ನು ಬಳಸಬಹುದು.
Because these essential oils are warming and stimulating, it also makes them highly effective at easing those every-day aches and pains, stiff backs and similar conditions which always feel much worse during the winter months. In addition to using them in a massage, these oils can be added to a warm bath which I feel is one of the nicest (and laziest!) ways to enjoy aromatherapy during the cold winter months.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 11:01 am
Bangalore Correspondent
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm