ಬ್ರೇಕಿಂಗ್ ನ್ಯೂಸ್
07-12-21 11:07 am Source: Boldsky Kannada ಡಾಕ್ಟರ್ಸ್ ನೋಟ್
ನಮ್ಮ ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿಗಳಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ರಕ್ತದೊತ್ತಡದಂತಹ ಸಮಸ್ಯೆ ಸಾಮಾನ್ಯವಾಗಿದೆ. ಇಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ದೇಹದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು, ಜೊತೆಗೆ ಮಾರಕವೂ ಹೌದು. ಆದ್ದರಿಂದ ಇದನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ.
ಈಗ ಚಳಿಗಾಲವಾಗಿರುವುದರಿಂದ ಚಳಿಗಾಲದಲ್ಲಿ ಅಧಿಕ ರಕ್ತದೊತ್ತಡ ಇರುವ ರೋಗಿಗಳು ಬಿಪಿ ನಿಯಂತ್ರಣಕ್ಕೆ ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಇದಕ್ಕೆ ಕರಿಬೇವಿನ ಎಲೆಗಳು ತುಂಬಾ ಉಪಯುಕ್ತವಾಗಿವೆ. ಹಾಗಾದರೆ, ಅದನ್ನು ಹೇಗೆ ಸೇವಿಸಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ರಕ್ತದೊತ್ತಡ ನಿಯಂತ್ರಣಕ್ಕೆ ಕರಿಬೇವಿನ ಎಲೆಗಳನ್ನು ಸೇವಿಸಬೇಕಾದ ವಿಧಾನವನ್ನು ಈ ಕೆಳಗೆ ನೀಡಲಾಗಿದೆ:
ರಕ್ತದೊತ್ತಡ ಅಥವಾ ಬಿಪಿ ಎಂದರೇನು?:
ರಕ್ತದೊತ್ತಡದ ಕಾಯಿಲೆಯು ಸೈಲೆಂಟ್ ಕಿಲ್ಲರ್‌ಆಗಿದ್ದು, ಅಧಿಕ ಮತ್ತು ಕಡಿಮೆ ರಕ್ತದೊತ್ತಡಗಳೆರಡೂ ಜೀವಕ್ಕೆ ಅಪಾಯಕಾರಿ. ದೇಶದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಅಧಿಕ ರಕ್ತದೊತ್ತಡಕ್ಕೆ ಬಲಿಯಾಗಿದ್ದಾರೆ. ಈ ಕಾರಣದಿಂದಾಗಿ ಪ್ರತಿ ವರ್ಷ ಸುಮಾರು 3 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಅಧಿಕ ರಕ್ತದೊತ್ತಡವು ಅಪಧಮನಿಗಳಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುವ ಸ್ಥಿತಿಯಾಗಿದ್ದು, ಹೃದಯವು ಸಾಮಾನ್ಯಕ್ಕಿಂತ ಹೆಚ್ಚು ಕೆಲಸ ಮಾಡುವುದಾಗಿದೆ. ಸಾಮಾನ್ಯ ರಕ್ತದೊತ್ತಡದ ಮಟ್ಟವು 120/80 ಆಗಿದ್ದು, ಬಿಪಿ ಮಟ್ಟವು ಇದಕ್ಕಿಂತ ಹೆಚ್ಚಾದಾಗ, ಈ ಸ್ಥಿತಿಯನ್ನು ಅಧಿಕ ರಕ್ತದೊತ್ತಡ ಎಂದು ಕರೆಯಲಾಗುತ್ತದೆ. ಅದಕ್ಕಿಂತ ಕಡಿಮೆಯಾದಾಗ ಕಡಿಮೆ ಅಥವಾ ಲೋ ಬಿಪಿ ಎಂದು ಕರೆಯುತ್ತಾರೆ.
ಕರಿಬೇವಿನ ಎಲೆಯು ರಕ್ತದೊತ್ತಡ ನಿಯಂತ್ರಣಕ್ಕೆ ಹೇಗೆ ಸಹಕಾರಿ?:
ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಗಳು, ಖನಿಜಾಂಶಗಳು, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್, ಕಬ್ಬಿಣ ಮತ್ತು ತಾಮ್ರ ಸಮೃದ್ಧವಾಗಿದೆ. ಇದರೊಂದಿಗೆ, ಕರಿಬೇವಿನ ಎಲೆಗಳಲ್ಲಿ ಕಂಡುಬರುವ ಕಾರ್ಬಜೋಲ್ ಆಲ್ಕಲಾಯ್ಡ್ಗಳು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವುದಲ್ಲದೇ, ಹೃದಯವನ್ನು ರಕ್ಷಿಸುತ್ತದೆ. ಜೊತೆಗೆ ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಇವಲ್ಲದೇ, ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ತ್ವಚೆಯು ಕಾಂತಿಯುತವಾಗುವುದರ ಜೊತೆಗೆ ದೃಷ್ಟಿ ಸುಧಾರಣೆಯೂ ಆಗುವುದು.
ರಕ್ತದೊತ್ತಡವನ್ನು ನಿಯಂತ್ರಿಸಲು, ಬಿಪಿ ರೋಗಿಗಳು ಈ 3 ವಿಧಾನಗಳಲ್ಲಿ ಕರಿಬೇವಿನ ಎಲೆಗಳನ್ನು ಸೇವಿಸಬೇಕು. ಅವುಗಳೆಂದರೆ: ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ:
ರಕ್ತದೊತ್ತಡವನ್ನು ನಿಯಂತ್ರಿಸಲು, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 4-5 ಕರಿಬೇವಿನ ಎಲೆಗಳನ್ನು ತೊಳೆದು ಅಗಿಯಬೇಕು. ಹೀಗೆ ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
ಸೂಪ್‌ಗೆ ಸೇರಿಸುವ ಮೂಲಕ:
ಹಾಗೆಯೇ ತಿನ್ನಲು ಇಷ್ಟವಾಗದವರು, ಕೆಲವು ಎಲೆಗಳನ್ನು ಸೂಪ್‌ಗೆ ಸೇರಿಸುವ ಮೂಲಕ ಸೇವಿಸಬಹುದು. ಈ ಮೂಲಕವೂ ರಕ್ತದೊತ್ತಡವನ್ನು ನಿಯಂತ್ರಿಸಲು ಕರಿಬೇವಿನ ಎಲೆಗಳನ್ನು ಸಹ ಬಳಸಬಹುದು.
ಕರಿಬೇವಿನ ಎಲೆಯ ನೀರು ಸೇವನೆ:
ಕರಿಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಕೂಡ ಬಳಸಬಹುದು. ಕರಿಬೇವಿನ ಎಲೆಯ ನೀರು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದನ್ನು ಮಾಡಲು, ಬಾಣಲೆಯಲ್ಲಿ ಒಂದು ಕಪ್ ನೀರನ್ನು ತೆಗೆದುಕೊಂಡು ಅದರಲ್ಲಿ ಕೆಲವು ಕರಿಬೇವಿನ ಎಲೆಗಳನ್ನು ಕುದಿಸಿ. ನಂತರ, ಅದನ್ನು ಫಿಲ್ಟರ್ ಮಾಡಿ ಮತ್ತು ಸ್ವಲ್ಪ ತಣ್ಣಗಾದ ನಂತರ ಅದನ್ನು ಸೇವಿಸಿ. ಹೀಗೆ ಪ್ರತಿನಿತ್ಯ ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ, ಜೊತೆಗೆ ಅನೇಕ ರೋಗಗಳಿಂದ ಮುಕ್ತಿ ದೊರೆಯುತ್ತದೆ.
Ways to eat Curry Leaves to Control Blood Pressure. Curry leaves are rich in vitamins, minerals, calcium, phosphorus, magnesium, iron and copper. Along with this, the carbazole alkaloids found in curry leaves help in controlling the level of cholesterol, which protects the heart. Carbazole also helps to lower blood pressure. Curry leaves protect against many diseases. By consuming it, the skin gets glowing, as well as the eyesight also increases.
23-11-24 02:15 pm
Bangalore Correspondent
Karnataka Bypolls Live Updates Congress: ಉಪ ಚ...
23-11-24 11:35 am
ಲಾರಿ ಡ್ರೈವರ್ ಎಡವಟ್ಟಿಗೆ ಫಾರ್ಚುನರ್ ಕಾರು ಡಿಕ್ಕ...
22-11-24 05:16 pm
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
Dinesh Gundu Rao, Bangalore: ಸರ್ಕಾರಿ ಆಸ್ಪತ್ರೆ...
21-11-24 09:32 pm
23-11-24 05:34 pm
HK News Desk
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ...
14-11-24 11:11 pm
23-11-24 12:20 pm
Mangalore Correspondent
Ut Khader, Mangalore: ನೇತ್ರಾವತಿ ತೀರದಲ್ಲಿ ತಡೆಗ...
22-11-24 10:33 pm
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
BJP Vijay Kumar shetty, Mangalore video: ಬಿಜೆ...
22-11-24 08:21 pm
23-11-24 10:49 am
Mangaluru Correspondent
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm