ಬ್ರೇಕಿಂಗ್ ನ್ಯೂಸ್
01-03-22 08:53 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರ ಮನೆಯ ಫ್ರಿಡ್ಜ್ ನಲ್ಲಿ ಹಣ್ಣು-ತರಕಾರಿಗಳ ಸ್ಟಾಕ್ ಇರುತ್ತವೋ ಇಲ್ಲವೋ ಗೊತ್ತಿಲ್ಲ. ಆದರೆ ಒಂದೆರಡು ಬಾಟಲ್ ಕೂಲ್ ಡ್ರಿಂಕ್ಸ್ ಅಂತೂ ಇದ್ದೇ ಇರುತ್ತದೆ!! ಸುಮ್ಮನೆ ಹಾಗೆ ವಾಕ್ ಮಾಡಲು ಎಂದು ಹೊರಗಡೆ ಹೋದಾಗ, ಇಲ್ಲಾಂದರೆ ಬೇಕರಿ ಕಡೆ ಹೋದಾಗ, ಮಾರ್ಕೆಟ್‌ಗೆ ತರಕಾರಿಗಳನ್ನು ತರಲು ಹೋದಾಗಲೋ, ಅಥವಾ ಸೂಪರ್ ಮಾರ್ಕೆಟ್‌ಗೆ ಹೋದಾಗ ಕಣ್ಣಿಗೆ ಕಾಣುವ ವಿವಿಧ ಬಣ್ಣ ಬಣ್ಣಗಳ ಕೂಲ್ ಡ್ರಿಂಕ್ಸ್ ಬಾಟಲ್‌ಗಳನ್ನು ಮನೆಗೆ ತರುವುದು ವಾಡಿಕೆ ಆಗಿಬಿಟ್ಟಿದೆ.
ಇನ್ನು ಫ್ರೆಂಡ್ಸ್ ಜೊತೆಗೆ ಪಾರ್ಟಿ ಮಾಡುವಾಗ ಅಥವಾ ಮನೆಯಲ್ಲಿ ಏನಾದರೂ ಫಂಕ್ಷನ್ ಇದ್ದಾಗ ಈ ಕಾರ್ಬೊನೇಟೆಡ್ ಡ್ರಿಂಕ್ಸ್ ಅಂದರೆ ತಂಪು ಪಾನೀಯಗಳದ್ದೇ ಕಾರುಬಾರು! ಮನೆಯಲ್ಲಿ ಯಾವುದೇ ವಯಸ್ಸಿನ ಅಂತರವಿಲ್ಲದೆ ಪುಟ್ಟ ಮಕ್ಕಳು ದೊಡ್ಡವರು ಮತ್ತು ವಯಸ್ಸಾದವರು ಇವುಗಳ ಸೇವನೆ ಮಾಡುತ್ತಾರೆ.
ಆದರೆ ನೆನಪಿರಲಿ ಈ ಪಾನೀಯದಲ್ಲಿ ಕೃತಕ ಸಿಹಿ ಅಂಶದ ಪ್ರಮಾಣ ಅಧಿಕವಾಗಿರುತ್ತದೆ. ಇದರಿಂದಾಗಿ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಈಗಾಗಲೇ ಆರೋಗ್ಯ ತಜ್ಞರು ಕೂಡ ಈ ಕಾರ್ಬೊನೇಟೆಡ್ ಪಾನೀಯಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ಅಭಿಪ್ರಾಯವನ್ನೇ ನೀಡಿದ್ದಾರೆ. ಅಷ್ಟೇ ಅಲ್ಲದೇ ಇವುಗಳಲ್ಲಿ ಅಪಾರ ಪ್ರಮಾಣದ ಸಕ್ಕರೆ ಅಂಶ ಇರುವುದರಿಂದ ಮುಂದಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಬರುವ ಸಾಧ್ಯತೆಯನ್ನು ಕೂಡ ಅಲ್ಲಗಳೆಯುವ ಹಾಗಿಲ್ಲ!! ಬನ್ನಿ ಈ ಅತಿಯಾಗಿ ಈ ಪಾನೀಯ ಸೇವನೆಯಿಂದ ಮತ್ತೇನು ಆರೋಗ್ಯ ಸಮಸ್ಯೆಗಳು ಕಾಡಬಹುದು ಎಂಬುದನ್ನು ನೋಡೋಣ...
ಬೊಜ್ಜಿನ ಸಮಸ್ಯೆ
ಕಾರ್ಬೊನೇಟೆಡ್ ಪಾನೀಯಗಳು ಅಥವಾ ಸೋಡಾಯುಕ್ತ ಪಾನೀಯಗಳ ಅಧಿಕ ಪ್ರಮಾಣದಲ್ಲಿ ಕ್ಯಾಲೋರಿಗಳು ಇರುವುದರಿಂದ, ಸೊಂಟದ ಭಾಗದಲ್ಲಿ ಬೊಜ್ಜಿನ ಸಮಸ್ಯೆ ಉಂಟಾಗಬಹುದು. ಒಂದು ವೇಳೆ ಬೊಜ್ಜಿನ ಸಮಸ್ಯೆ ಜಾಸ್ತಿಯಾಗಿ ಬಿಟ್ಟರೆ, ಇದನ್ನು ನಿಯಂತ್ರಣಕ್ಕೆ ತರುವುದು ಅಷ್ಟು ಸುಲಭದ ಮಾತಲ್ಲ! ಅಲ್ಲದೇ ಮುಂದೆ ಹೃದಯಕ್ಕೂ ಅಪಾಯ ಬರುವ ಸಂಭವ ಇರುತ್ತದೆ. ಹೀಗಾಗಿ ಆದಷ್ಟು ನೈಸರ್ಗಿಕವಾಗಿ ಸಿಗುವ ಪಾನೀಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ.
ಮಧುಮೇಹ ಬರುವ ಅಪಾಯ ಇರುತ್ತದೆ
ಬೇಗನೇ ವಯಸ್ಸಾದವರ ಹಾಗೆ ಕಾಣುವಿರಿ!!
ಮಿತಿಯಿಲ್ಲದೆ ಈ ತಂಪು ಪಾನೀಯ ಅಥವಾ ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವು ದರಿಂದ ಸಣ್ಣ ವಯಸ್ಸಿನಲ್ಲಿಯೇ, ವಯಸ್ಸಾದವರಂತೆ ಕಾಣುವಿರಿ. ಇದರಲ್ಲಿರುವ ಅತಿಯಾದ ಸಕ್ಕರೆ ಅಂಶ ಹಾಗೂ ಬರುಗು ಬರಿಸುವ ಸೋಡಾದ ಅಂಶ ದೇಹ ಸೇರಿ ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ಹೆಚ್ಚು ಮಾಡುತ್ತದೆ ಎಂದು ಅಧ್ಯಾಯನ ವರದಿ ತಿಳಿಸಿದೆ. ಹಾಗಾಗಿ ಯೌವನವನ್ನು ಕಾಪಾಡಿಕೊಳ್ಳಬೇಕು ಎಂದರೆ ಈ ಪಾನೀಯಗಳ ಸೇವನೆಯನ್ನು ಮಿತಿಯಲ್ಲಿ ಇಟ್ಟುಕೊಳ್ಳಬೇಕು.
ಕಿಡ್ನಿಗೆ ಸಮಸ್ಯೆ ಬರಬಹುದು!
ಮಿತಿಯಿಲ್ಲದೇ, ಸಾಫ್ಟ್ ಡ್ರಿಂಕ್ಸ್ ಕುಡಿದರೆ ಮೂತ್ರದಲ್ಲಿ ಪ್ರೊಟೀನ್ ಅಂಶ ಹೆಚ್ಚಾಗುತ್ತದೆ. ಇದರಿಂದ ಮೂತ್ರಪಿಂಡಗಳಿಗೆ ಹಾನಿ ಉಂಟಾಗುತ್ತದೆ. ಕೆಲವರು ಊಟ-ತಿಂಡಿ ಜೊತೆಗೆ ಕೂಡ ಸಾಫ್ಟ್ ಡ್ರಿಂಕ್ಸ್ ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ, ಆದರೆ ಇಂತಹ ಅಭ್ಯಾಸವನ್ನು ಕೂಡಲೇ ನಿಲ್ಲಿಸಬೇಕು, ಇಲ್ಲಾಂದರೆ ಮುಂದಿನ ದಿನಗಳಲ್ಲಿ ಕಿಡ್ನಿಗಳಿಗೆ ಸಮಸ್ಯೆ ಬರುವ ಸಂಭವ ಜಾಸ್ತಿ ಇರುತ್ತದೆ.
ಹಲ್ಲುಗಳ ಮತ್ತು ವಸಡುಗಳ ಆರೋಗ್ಯಕ್ಕೆ ಒಳ್ಳೆಯದಲ್ಲ
ನಿಮಗೆ ಗೊತ್ತಿರಲಿ, ಈ ಪಾನೀಯಗಳಲ್ಲಿ ಅತಿಯಾದ ಕಾರ್ಬೋನಿಕ್ ಆಮ್ಲ, ಫಾಸ್ಫಾರಿಕ್ ಆಮ್ಲ, ಸಿಟ್ರಿಕ್ ಆಮ್ಲ ಅಧಿಕವಾಗಿ ಕಂಡುಬರುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಅಂಶದ ಪ್ರಮಾಣ ಕಡಿಮೆ ಆಗುತ್ತಾ ಹೋಗುತ್ತದೆ. ಕೊನೆಗೆ ಇದೆಲ್ಲಾ ಕಾರಣಗಳಿಂದಾಗಿ ಮುಂದಿನ ದಿನಗಳಲ್ಲಿ ಹಲ್ಲುಗಳ ಮತ್ತು ವಸಡುಗಳ ಆರೋಗ್ಯ ಕೂಡ ಹದಗೆಡುತ್ತವೆ.
What Happens To Your Body If You Drink Sugar Content Drinks Everyday.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm