ಗುಡಿಸಲ ನಡುವೆ ಅರಳಿದ ಜ್ಞಾನ ; ಎಸ್ಸೆಸ್ಸೆಲ್ಸಿ ಸಾಧಕನ ಗುಡಿಸಲಿಗೆ ಬಂದು ಸಚಿವರ ಸನ್ಮಾನ 

11-08-20 05:03 pm       Headline Karnataka News Network   ಲೀಡರ್ಸ್ ರಿಪೋರ್ಟ್

ಶಿಕ್ಷಣ ಸಚಿವ ಸುರೇಶ್ ಕುಮಾರ್ ಮತ್ತೊಮ್ಮೆ ತಮ್ಮ ಮಾದರಿ ನಡೆ ತೋರಿದ್ದಾರೆ. ಕೊರೊನಾ ಆತಂಕದ ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಬಡ ವಿದ್ಯಾರ್ಥಿಯೊಬ್ಬ ರಾಜ್ಯದಲ್ಲಿ ಗರಿಷ್ಠ ಅಂಕದ ಸಾಧನೆ ಮಾಡಿರುವುದನ್ನು ಗಮನಿಸಿದ ಸುರೇಶ್ ಕುಮಾರ್, ಆತನ ಪುಟ್ಟ ಗುಡಿಸಲಿದ್ದಲ್ಲಿಗೇ ತೆರಳಿ ಸನ್ಮಾನಿಸಿದ್ದಾರೆ. 

ಬೆಂಗಳೂರು, ಆಗಸ್ಟ್ 11: ಸರಳ ರಾಜಕಾರಣಿ ಎಂದೇ ಹೆಸರು ಮಾಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮತ್ತೊಮ್ಮೆ ತಮ್ಮ ಮಾದರಿ ನಡೆ ತೋರಿದ್ದಾರೆ. ಕೊರೊನಾ ಆತಂಕದ ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಬಡ ವಿದ್ಯಾರ್ಥಿಯೊಬ್ಬ ರಾಜ್ಯದಲ್ಲಿ ಗರಿಷ್ಠ ಅಂಕದ ಸಾಧನೆ ಮಾಡಿರುವುದನ್ನು ಗಮನಿಸಿದ ಸುರೇಶ್ ಕುಮಾರ್, ಆತನ ಪುಟ್ಟ ಗುಡಿಸಲಿದ್ದಲ್ಲಿಗೇ ತೆರಳಿ ಸನ್ಮಾನಿಸಿದ್ದಾರೆ. 

ಯಾದಗಿರಿ ಮೂಲದ ಮಲ್ಲವ್ವ ಕುಟುಂಬ ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದು ಈಕೆಯ ಮಗ ಚಿರಾಯು ಈಗ 625ರಲ್ಲಿ 616 ಅಂಕ ಪಡೆದು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾನೆ. ಬೆಂಗಳೂರಿನ ಇಂದಿರಾನಗರದ ಚಿಕ್ಕಬಿದರಕಲ್ಲು ಎಂಬಲ್ಲಿ ಗುಡಿಸಲಿನಲ್ಲಿ ಚಿರಾಯು ಕುಟುಂಬ ವಾಸ ಇದೆ. ಇಂದಿರಾ ನಗರದ ಜೀವನ್ ಭೀಮಾ ನಗರದಲ್ಲಿರುವ ಕರ್ನಾಟಕ ಸರಕಾರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾನೆ.

ಕಡು ಬಡತನದ ಮಧ್ಯೆ ಶ್ರೇಷ್ಠ ಸಾಧನೆ ಮಾಡಿದ ಚಿರಾಯುವನ್ನು ಸನ್ಮಾನಿಸಿದ ಸುರೇಶ್ ಕುಮಾರ್, ಚಿರಾಯು ಸಮಾಜದಲ್ಲಿ ಒಳ್ಳೆಯ ಆದರ್ಶ ವ್ಯಕ್ತಿಯಾಗಲಿ ಎಂದು ಹಾರೈಸಿದರು. ತಾಯಿ ಮಲ್ಲವ್ವ ಮನೆ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದು ಮಗನ ಸಾಧನೆ ಕಂಡು ಹೆಮ್ಮೆ ಪಟ್ಟಿದ್ದಾರೆ. ಪಿಯುಸಿ ತರಗತಿಯಲ್ಲಿ ಚಿರಾಯು ವಿಜ್ಞಾನ ವಿಷಯ ಓದಬೇಕೆಂಬ ಬಯಕೆ ಹೊಂದಿದ್ದಾನೆ.