ಬ್ರೇಕಿಂಗ್ ನ್ಯೂಸ್
03-03-21 07:04 pm Mangaluru correspondent ಲೀಡರ್ಸ್ ರಿಪೋರ್ಟ್
ಉಳ್ಳಾಲ, ಮಾ.3: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರ ವ್ಯಾಪ್ತಿಯ ಉಳ್ಳಾಲ ನೇತ್ರಾವತಿ ನದಿಯ ಉಭಯ ಸೇತುವೆಗಳಿಗೆ 63 ಲಕ್ಷ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾದ ಫೆನ್ಸಿಂಗ್ (ತಡೆ ಬೇಲಿ) ಹಾಗೂ ಸಿಸಿ ಕ್ಯಾಮರಾವನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಲೋಕಾರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ಕಾಮತ್, ನೇತ್ರಾವತಿ ಸೇತುವೆಯಲ್ಲಿ ಕಾಫಿ ಡೇ ಮಾಲಕ ಸಿದ್ಧಾರ್ಥ ಸೇರಿದಂತೆ ಅನೇಕ ಸರಣಿ ಆತ್ಮಹತ್ಯೆಗಳು ನಡೆದು ಹೋದವು. ಸಿದ್ಧಾರ್ಥ್ ಆತ್ಮಹತ್ಯೆ ನಡೆದ ಸಂದರ್ಭ ಮೃತದೇಹದ ಶೋಧ ಕಾರ್ಯಕ್ಕೆ ಜಿಲ್ಲಾಡಳಿತವು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿತ್ತು. ಪ್ರತಿ ಆತ್ಮಹತ್ಯೆ ನಡೆದಾಗಲೂ ಮೃತದೇಹ ಶೋಧಕ್ಕಾಗಿ ಜಿಲ್ಲಾಡಳಿತಕ್ಕೆ ಖರ್ಚು ತಗಲುತ್ತದೆ. ಇದನ್ನೆಲ್ಲ ತಡೆಗಟ್ಟುವ ನಿಟ್ಟಿನಲ್ಲಿ 58 ಲಕ್ಷ ರೂ. ವೆಚ್ಚದಲ್ಲಿ ಎರಡು ಸೇತುವೆಯ ನಾಲ್ಕು ಅಂಚಿಗೂ ಕಬ್ಬಿಣದ ತಡೆಬೇಲಿ ಮತ್ತು ಸೇತುವೆಗೆ ತ್ಯಾಜ್ಯ ಎಸೆಯುವವರ ಮೇಲೆ ನಿಗಾ ಮತ್ತು ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು 5 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರು ಅವರ ಕಾಳಜಿಯಿಂದ ಈ ಕಾಮಗಾರಿ ನಡೆದಿದ್ದು ಅನೇಕ ಆತ್ಮಹತ್ಯೆಗಳನ್ನು ತಡೆಯುವ ಉತ್ತಮ ಕಾರ್ಯವಾಗಿದೆ ಎಂದರು. ಸಿಸಿ ಕ್ಯಾಮೆರಾದ ನಿರ್ವಹಣೆಯ ಜವಬ್ದಾರಿಯನ್ನು ಕಂಕನಾಡಿ ನಗರ ಠಾಣೆಗೆ ವಹಿಸಲಾಗಿದೆ ಎಂದರು.
ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರು ಮಾತನಾಡಿ ದುರ್ಘಟನೆಗಳು ನಡೆಯಬಾರದೆಂಬ ಉದ್ದೇಶದಿಂದ ಈ ಕಾಮಗಾರಿ ನಡೆಸಲಾಗಿದೆ. ನೇತ್ರಾವತಿ ಸೇತುವೆ ಆತ್ಮಹತ್ಯೆಯ ಸ್ಪಾಟ್ ಆಗಿತ್ತು. ಶಾಸಕರ ವಿಶೇಷ ಮುತುವರ್ಜಿಯಿಂದ ಈ ಕಾಮಗಾರಿ ನಡೆಸಲಾಗಿದೆ ಎಂದರು.
ಮೂಡಾ ಕಮಿಷನರ್ ದಿನೇಶ್ ಕುಮಾರ್, ಕಾರ್ಪೊರೇಟರ್ ಗಳಾದ ಭಾಸ್ಕರ್ ಚಂದ್ರ ಶೆಟ್ಟಿ,ವೀಣಾ ಮಂಗಳ, ಭಾನುಮತಿ, ರೇವತಿ ಶ್ಯಾಂ ಸುಂದರ್ , ಮೂಡದ ಜೂನಿಯರ್ ಇಂಜಿನಿಯರ್ ಆರತಿ ಶೇಟ್,ಬಿಜೆಪಿ ಕ್ಷೇತ್ರ ಉಪಾಧ್ಯಕ್ಷ ಕಿರಣ್ ರೈ, ಪ್ರಮುಖರಾದ ದೀಪಕ್ ,ಪುಷ್ಪರಾಜ್, ರಾಂ ಪ್ರಸಾದ್, ಪ್ರಸಾದ್ ಬೋಳಾರ್, ಲೋಹಿತ್ ಶೆಟ್ಟಿ ,ಸಿಪ್ರಿಯಮ್, ಉದಯ್ ಕುದ್ರು, ಸುಜಾತ ಕೊಟ್ಟಾರಿ, ಜಗದೀಶ್ ಶೆಟ್ಟಿ, ಶ್ಯಾಂ ಪ್ರಸಾದ್ ,ಪ್ರಾಣೇಶ್, ಹರೀಶ್ ಕಡೆಕಾರ್ ಉಪಸ್ಥಿತರಿದ್ದರು.
In Ullal a 63 lakhs worth camera was installed and the fencing was inaugurated by MLA, Vedavyas Kamath.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm